ಬಿಗ್​ಬಾಸ್​ 11ರ ವಿನ್ನರ್​ ಘೋಷಿಸಿದ ಗೋಲ್ಡ್​ ಸುರೇಶ್​: ಅವನಲ್ದೇ ಬೇರೆ ಯಾರೂ ಆಗಲ್ಲ ಎಂದ ಚಿನ್ನದ ಮನುಷ್ಯ!

By Suchethana D  |  First Published Dec 19, 2024, 7:03 PM IST

ಗೋಲ್ಡ್​ ಸುರೇಶ್​ ಅವರ ದೃಷ್ಟಿಯಲ್ಲಿ ಬಿಗ್​ಬಾಸ್​ 11ರ ವಿನ್ನರ್​ ಯಾರು? ದೊಡ್ಮನೆಯಿಂದ ಹೊರಕ್ಕೆ ಬಂದ ಸುರೇಶ್​ ಹೇಳಿದ್ದೇನು?
 


ಅಡಿಯಿಂದ ಮುಡಿಯವರೆಗೆ ಕೆಜಿಗಟ್ಟಲೆ ಚಿನ್ನವನ್ನು ಧರಿಸಿಕೊಂಡು ಗೋಲ್ಡ್​ ಸುರೇಶ್​ ಎಂದೇ ಖ್ಯಾತಿ ಪಡೆದಿರುವ ಸುರೇಶ್​ ಅವರು ಈಗ ವೈಯಕ್ತಿಕ ಕಾರಣಗಳಿಂದ ಬಿಗ್​ಬಾಸ್​  ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಮನೆಯಿಂದ ಹೊರಕ್ಕೆ ಬಂದಿರುವ ಬಗ್ಗೆ ಹಲವಾರು ರೀತಿಯ ಚರ್ಚೆ ನಡೆಯುತ್ತಿದ್ದ ನಡುವೆಯೇ, ನೇರಪ್ರಸಾರದಲ್ಲಿ ಕಾಣಿಸಿಕೊಂಡಿದ್ದ ಸುರೇಶ್​ ಅವರು, ಅದಕ್ಕೆ ನಿಜವಾದ ಕಾರಣ ಕೊಟ್ಟಿದ್ದಾರೆ. ತಾವು ದೊಡ್ಡ ಉದ್ಯಮಿ ಆಗಿರುವ ಹಿನ್ನೆಲೆಯಲ್ಲಿ  ಅದನ್ನು ನಂಬಿಕೊಂಡು ಸುಮಾರು ಕುಟುಂಬಗಳಿವೆ. ನಾನು ಬಿಗ್​ಬಾಸ್​ ಮನೆಗೆ ಹೋದಾಗ ಬಿಜಿನೆಸ್​ ಅನ್ನು ಪತ್ನಿಗೆ ವಹಿಸಿ ಹೋಗಿದ್ದೆ. ಆದರೆ ಆಕೆಗೆ ಅದರ ಬಗ್ಗೆ ಹೆಚ್ಚಿನ ಅರಿವು ಇಲ್ಲ. ಅವಳಿಗೆ ಮ್ಯಾನೇಜ್ ಮಾಡಲು ಆಗುತ್ತಿರಲಿಲ್ಲ. ಅದಕ್ಕಾಗಿ ಅನಿವಾರ್ಯವಾಗಿ ಹೊರಕ್ಕೆ ಬರಬೇಕಾಯಿತು ಎಂದು ತಿಳಿಸಿದ್ದಾರೆ.  ಬಿಗ್ ಬಾಸ್ ಆಫರ್ ಬಂದಾಗಲೂ ಬಿಜಿನೆಸ್​ ಯಾರು ನೋಡಿಕೊಳ್ತಾರೆ ಎನ್ನುವ ಕೊರಗೇ ಇತ್ತು. ನನ್ನ ಪತ್ನಿಗೆ ಇದನ್ನು ಹ್ಯಾಂಡಲ್​ ಮಾಡಲು ಆಗದೇ ಒತ್ತಡ ಅನುಭವಿಸುತ್ತಿದ್ದಳು.  ಆಕೆಗೆ ಮ್ಯಾನೇಜ್ ಮಾಡಲು ಆಗುತ್ತಿರಲಿಲ್ಲ. ನಾನು ತೆಗೆದುಕೊಳ್ಳುವ ಖಡಕ್ ನಿರ್ಧಾರಗಳನ್ನು ಆಕೆ ತೆಗೆದುಕೊಳ್ಳಲು ಆಗಲ್ಲ. ಆ ತರ ಗೊಂದಲ ಎದುರಾದಾಗ ತುಂಬಾ ಕುಗ್ಗಿಬಿಟ್ಟಳು. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಹೊರಕ್ಕೆ ಬರಬೇಕಾಯಿತೇ ವಿನಾ ಬೇರೆ ಕಾರಣ ಏನಿಲ್ಲ ಎಂದಿದ್ದಾರೆ.

ಇವರು ಹೊರ ಬರುತ್ತಿದ್ದಂತೆಯೇ, ಹಲವಾರು ಕಡೆಗಳಲ್ಲಿ ಸಂದರ್ಶನ ನೀಡಿದ್ದಾರೆ. ಈ ಬಾರಿಯ ವಿನ್ನರ್​ ಬಗ್ಗೆಯೂ ಘೋಷಿಸಿದ್ದಾರೆ. ಅಷ್ಟಕ್ಕೂ ಬಿಗ್​ಬಾಸ್​ ಮನೆಯಲ್ಲಿ ಇರುವಾಗಲೇ ಸುರೇಶ್​ ಅವರ ಬಾಂಡಿಂಗ್​ ಚೆನ್ನಾಗಿ ಇದ್ದುದು ಲಾಯರ್​ ಜಗದೀಶ್​, ಧನರಾಜ್​ ಮತ್ತು ಹನುಮಂತು ಅವರ ಜೊತೆ. ಈಗ ಅಲ್ಲಿ ಉಳಿದುಕೊಂಡಿರುವ ಹನುಮಂತು ಅವರೇ ಬಿಗ್​ಬಾಸ್​ ಗೆಲ್ಲೋದು. ಆತ ನನ್ನ ಅಳಿಯ. ಅವನ ಮದುವೆಯನ್ನೂ ನಾನೇ ಮಾಡ್ತೀನಿ. ಅವನೇ ನನ್ನ ಆಲ್​  ಟೈಮ್​  ಫೆವರೆಟ್​. ಅವನೇ ಬಿಗ್​ಬಾಸ್ ಗೆಲ್ಲೋದು ಎಂದಿದ್ದಾರೆ ಗೋಲ್ಡ್​ ಸುರೇಶ್​.  ಬಿಗ್‌ಬಾಸ್‌ ಮನೆಯಲ್ಲಿ ದಿನಪೂರ್ತಿ ಇದ್ದು, ಎಲ್ಲರನ್ನೂ  ಹತ್ತಿರದಿಂದ ನೋಡ್ತಾ ಇರ್ತೇವೆ. ಆದರೆ ನೀವೆಲ್ಲಾ ಅಂದ್ರೆ ವೀಕ್ಷಕರು ನೋಡೋದು ಕೇವಲ ಒಂದು ಗಂಟೆ. ಆದ್ದರಿಂದ ನನಗೆ ತಿಳಿದಿರುವಂತೆ ಎಲ್ಲರ ಒಲವೂ ಹನುಮಂತು ಮೇಲೆ ಇದೆ ಎಂದಿದ್ದಾರೆ.

Tap to resize

Latest Videos

undefined

ಚಿನ್ನಾಭರಣ ಧರಿಸುವ ವಿಷ್ಯದಲ್ಲಿ ಯಾರೂ ಊಹಿಸದ ಬಹು ದೊಡ್ಡ ನಿರ್ಧಾರ ಪ್ರಕಟಿಸಿದ ಬಿಗ್​ಬಾಸ್​ ಗೋಲ್ಡ್​ ಸುರೇಶ್​
 
ಆತ ನನ್ನನ್ನು ಮಾವ.. ಮಾವ.. ಅಂತಾನೇ ಹೇಳೋದು. ಅವನ ಮದುವೆಯನ್ನೂ ನಾನೇ ಮಾಡಿದೋದು.  ಆತ  ತುಂಬಾ ಒಳ್ಳೆಯ ಹುಡುಗ. ಇವತ್ತಿನವರೆಗೂ ಅವನ ಮೇಲೆ ನಾನು ಕೂಗಾಡಿದ್ದೇ ಇಲ್ಲ. ಒಮ್ಮೊಮ್ಮೆ ಕೋಪ ಬರ್ತಿತ್ತು. ಆದ್ರೂ  ಏನೋ ತರ್ಲೆ ಮಾಡಿ ಕೋಪ ಮರೆಸ್ತಿದ್ದ. ಅವನನ್ನು ಕಂಡರೆ ನನಗೆ ಯಾಕೋ ಗೊತ್ತಿಲ್ಲ, ಸಿಕ್ಕಾಪಟ್ಟೆ ಪ್ರೀತಿ ಎಂದಿದ್ದಾರೆ ಗೋಲ್ಡ್ ಸುರೇಶ್​.

ಲಾಯರ್​ ಜಗದೀಶ್​ ಮತ್ತು ಧನರಾಜ್​ ಮೇಲೂ ನನಗೆ ಅಪಾರ ಪ್ರೀತಿ ಇತ್ತು. ತುಂಬಾ ಅಟ್ಯಾಚ್​ಮೆಂಟ್ ಇತ್ತು. ಅದನ್ನು ಬಿಟ್ಟರೆ ಬೇರೆಯವರ ಮೇಲೆ ಅಷ್ಟೊಂದು ಅಟ್ಯಾಚ್​ಮೆಂಟ್​ ಇರಲಿಲ್ಲ ಎಂದಿರುವ ಗೋಲ್ಡ್​ ಸುರೇಶ್, ಹನುಮಂತು ಸದ್ಯ ಒಳಗೇ ಇದ್ದಾನೆ. ಆದರೆ  ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ ಮೊದಲು ಜಗದೀಶ್​ ಅವರಿಗೆ ಕಾಲ್​ ಮಾಡಿದೆ. ಅವರನ್ನು ಬಿಗ್​ಬಾಸ್​​  ಮನೆಯಲ್ಲಿ ತುಂಬಾ ಮಿಸ್​ ಮಾಡಿಕೊಳ್ತಿದ್ದೆ.  ಅದಕ್ಕಾಗಿ ಅವರಿಗೆ ಕಾಲ್​ ಮಾಡಿದೆ. ಅವರು ಯಾವಾಗಲೂ ನನ್ನನ್ನು ಏಯ್ ಗೋಲ್ಡು ಎಂದೇ ರೇಗಿಸೋರು. ಆರಂಭದಲ್ಲಿ ನಮ್ಮಿಬ್ಬರ ನಡುವೆ ಸ್ವಲ್ಪ ಕೋಪ ತಾಪ ಇತ್ತು. ಅದರೆ ಅವರು ತುಂಬಾ ಒಳ್ಳೆಯ ವ್ಯಕ್ತಿ ಎಂದಿದ್ದಾರೆ. 

ಡಾಕ್ಟರ್​ಗೆ ಫ್ರೆಂಡ್​ ರಿಕ್ವೆಸ್ಟ್​ ಕಳಿಸಿದ್ಲು, ವಿಡಿಯೋ ಕಾಲ್​ ಮಾಡಿ ಬಟ್ಟೆ ಬಿಚ್ಚಿದ್ಲು... ಆಮೇಲೆ... ಘಟನೆ ವಿವರಿಸಿದ ಪೊಲೀಸ್

click me!