ಚಿನ್ನಾಭರಣ ಧರಿಸುವ ವಿಷ್ಯದಲ್ಲಿ ಯಾರೂ ಊಹಿಸದ ಬಹು ದೊಡ್ಡ ನಿರ್ಧಾರ ಪ್ರಕಟಿಸಿದ ಬಿಗ್​ಬಾಸ್​ ಗೋಲ್ಡ್​ ಸುರೇಶ್​

By Suchethana D  |  First Published Dec 19, 2024, 6:33 PM IST

ಗೋಲ್ಡ್​ ಸುರೇಶ್​ ಎಂದೇ ಫೇಮಸ್​ ಆಗಿದ್ದ ಬಿಗ್​ಬಾಸ್​ ಸುರೇಶ್​ ದೊಡ್ಮನೆಯಿಂದ ಹೊರಕ್ಕೆ ಬರುತ್ತಿದ್ದಂತೆಯೇ ಚಿನ್ನದ ವಿಷಯದಲ್ಲಿ ಬಹುದೊಡ್ಡ  ನಿರ್ಧಾರ ಪ್ರಕಟಿಸಿದ್ದಾರೆ. ಏನದು?
 


ಅಡಿಯಿಂದ ಮುಡಿಯವರೆಗೆ ಕೆಜಿಗಟ್ಟಲೆ ಚಿನ್ನವನ್ನು ಧರಿಸಿಕೊಂಡು ಗೋಲ್ಡ್​ ಸುರೇಶ್​ ಎಂದೇ ಖ್ಯಾತಿ ಪಡೆದಿರುವ ಸುರೇಶ್​ ಅವರು ಈಗ ವೈಯಕ್ತಿಕ ಕಾರಣಗಳಿಂದ ಬಿಗ್​ಬಾಸ್​  ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಮನೆಯಿಂದ ಹೊರಕ್ಕೆ ಬಂದಿರುವ ಬಗ್ಗೆ ಹಲವಾರು ರೀತಿಯ ಚರ್ಚೆ ನಡೆಯುತ್ತಿದ್ದ ನಡುವೆಯೇ, ನೇರಪ್ರಸಾರದಲ್ಲಿ ಕಾಣಿಸಿಕೊಂಡಿದ್ದ ಸುರೇಶ್​ ಅವರು, ಅದಕ್ಕೆ ನಿಜವಾದ ಕಾರಣ ಕೊಟ್ಟಿದ್ದಾರೆ. ತಾವು ದೊಡ್ಡ ಉದ್ಯಮಿ ಆಗಿರುವ ಹಿನ್ನೆಲೆಯಲ್ಲಿ  ಅದನ್ನು ನಂಬಿಕೊಂಡು ಸುಮಾರು ಕುಟುಂಬಗಳಿವೆ. ನಾನು ಬಿಗ್​ಬಾಸ್​ ಮನೆಗೆ ಹೋದಾಗ ಬಿಜಿನೆಸ್​ ಅನ್ನು ಪತ್ನಿಗೆ ವಹಿಸಿ ಹೋಗಿದ್ದೆ. ಆದರೆ ಆಕೆಗೆ ಅದರ ಬಗ್ಗೆ ಹೆಚ್ಚಿನ ಅರಿವು ಇಲ್ಲ. ಅವಳಿಗೆ ಮ್ಯಾನೇಜ್ ಮಾಡಲು ಆಗುತ್ತಿರಲಿಲ್ಲ. ಅದಕ್ಕಾಗಿ ಅನಿವಾರ್ಯವಾಗಿ ಹೊರಕ್ಕೆ ಬರಬೇಕಾಯಿತು ಎಂದು ತಿಳಿಸಿದ್ದಾರೆ.  ಬಿಗ್ ಬಾಸ್ ಆಫರ್ ಬಂದಾಗಲೂ ಬಿಜಿನೆಸ್​ ಯಾರು ನೋಡಿಕೊಳ್ತಾರೆ ಎನ್ನುವ ಕೊರಗೇ ಇತ್ತು. ನನ್ನ ಪತ್ನಿಗೆ ಇದನ್ನು ಹ್ಯಾಂಡಲ್​ ಮಾಡಲು ಆಗದೇ ಒತ್ತಡ ಅನುಭವಿಸುತ್ತಿದ್ದಳು.  ಆಕೆಗೆ ಮ್ಯಾನೇಜ್ ಮಾಡಲು ಆಗುತ್ತಿರಲಿಲ್ಲ. ನಾನು ತೆಗೆದುಕೊಳ್ಳುವ ಖಡಕ್ ನಿರ್ಧಾರಗಳನ್ನು ಆಕೆ ತೆಗೆದುಕೊಳ್ಳಲು ಆಗಲ್ಲ. ಆ ತರ ಗೊಂದಲ ಎದುರಾದಾಗ ತುಂಬಾ ಕುಗ್ಗಿಬಿಟ್ಟಳು. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಹೊರಕ್ಕೆ ಬರಬೇಕಾಯಿತೇ ವಿನಾ ಬೇರೆ ಕಾರಣ ಏನಿಲ್ಲ ಎಂದಿದ್ದಾರೆ.
 
ಇದರ ನಡುವೆಯೇ ಈಗ ಅವರು ಬಿಗ್​ಬಾಸ್​​  ಮನೆಯಿಂದ ಹೊರಕ್ಕೆ ಬಂದ ಮೇಲೆ ಬಹುದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಮೈತುಂಬಾ ಚಿನ್ನಾಭರಣ ಹಾಕಿಕೊಂಡಿರೋ ಗೋಲ್ಡ್​  ಸುರೇಶ್​,  ಹೊರಕ್ಕೆ ಬಂದ  ಮೇಲೆ ಬಹುತೇಕ ಎಲ್ಲಾ ಆಭರಣಗಳನ್ನೂ ತೆಗೆದಿಟ್ಟಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿರುವ ಸುರೇಶ್​ ಅವರು, ಯಾರೂ ಊಹಿಸದ ರೀತಿಯಲ್ಲಿ ತಾವೊಂದು ದೊಡ್ಡ ನಿರ್ಧಾರ ತೆಗೆದುಕೊಂಡಿರುವ ಮಾಹಿತಿಯನ್ನು ತೆರೆದಿಟ್ಟಿದ್ದಾರೆ. ಅದೇನೆಂದರೆ, ಇನ್ನು ಮುಂದೆ ತಾವು ಬಾರಿ ಗೋಲ್ಡ್​  ಧರಿಸಲ್ಲ. ಇದು ಬಿಗ್​ಬಾಸ್​ ತಮಗೆ ಕಲಿಸಿರುವ ಪಾಠ. ಕಿಚ್ಚ ಸುದೀಪ್​ ಅವರೂ ಇದೇ ಮಾತನ್ನು ಪದೇ ಪದೇ ಹೇಳುತ್ತಿದ್ದರು. ಮನೆಯಲ್ಲಿ ಕೂಡ ಗೋಲ್ಡ್​ ಇಲ್ಲದೆನೇ ನೀನು ಚೆನ್ನಾಗಿ ಕಾಣಿಸ್ತಿಯಾ ಎಂದರು. ಸುದೀಪ್​ ಅವರೂ ನಿಮ್ಮನ್ನು ಚಿನ್ನ ಇಲ್ಲದೆನೇ ನೋಡೋಕೆ ಚೆನ್ನ ಅಂತಿದ್ದರು. ಆದ್ದರಿಂದ ಇನ್ನು ಮುಂದೆ ಸಿಂಪಲ್​ ಆಗಿ ಇರೋ ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ.

ಡಾಕ್ಟರ್​ಗೆ ಫ್ರೆಂಡ್​ ರಿಕ್ವೆಸ್ಟ್​ ಕಳಿಸಿದ್ಲು, ವಿಡಿಯೋ ಕಾಲ್​ ಮಾಡಿ ಬಟ್ಟೆ ಬಿಚ್ಚಿದ್ಲು... ಆಮೇಲೆ... ಘಟನೆ ವಿವರಿಸಿದ ಪೊಲೀಸ್

Tap to resize

Latest Videos

undefined

ಇದೇ ವೇಳೆ ಅವರು, ನಾನು ಬಿಗ್​ಬಾಸ್​ಗೆ ಹೋಗುವಾಗ 78 ಕೆ.ಜಿ. ಇದ್ದೆ. ಈಗ 60 ಕೆ.ಜಿ. ಆಗಿದ್ದೇನೆ. ಇಷ್ಟೆಲ್ಲಾ ಆಭರಣ ಹೇರಿಕೊಳ್ಳುವ ಶಕ್ತಿ ಇಲ್ಲ. ಅದಕ್ಕೂ ಈ ನಿರ್ಧಾರ ಎಂದಿದ್ದಾರೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ನಾನು ಬಿಗ್​ಬಾಸ್​ ಒಳಗೆ ಇದ್ದಾಗ, ಸುದೀಪ್​ ಅವರು, ಸೂರಿ ನೀವೆಷ್ಟು ಮುದ್ದಾಗಿ ಕಾಣಿಸ್ತೀರಿ ಗೋಲ್ಡ್​ ಇಲ್ಲದೇ ಎಂದಿದ್ದೇ ನನ್ನ ಮೇಲೆ ತುಂಬಾ ಪ್ರಭಾವ ಬೀರಿದೆ. ಗೋಲ್ಡ್​ ಹಾಕಿದಾಗ ಹಾರ್ಡ್​  ಆಗಿ, ಹಾಕದೇ ಇದ್ದಾಗ ಸಾಫ್ಟ್​ ಆಗಿ ಕಾಣಿಸ್ತೇನೆ ಎಂದು ತುಂಬಾ ಮಂದಿ ಹೇಳಿದ್ದಾರೆ. ಅದಕ್ಕೇ ಈ ನಿರ್ಧಾರ ಎಂದು ಖಾಸಗಿ ಚಾನೆಲ್​ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಗೋಲ್ಡ್​ ಸುರೇಶ್​ ಹೇಳಿದ್ದಾರೆ. 

ಇನ್ನು ಸುರೇಶ್​ ಅವರ ಕುರಿತು ಹೇಳುವುದಾದರೆ,  ಬೆಳಗಾವಿಯ ಅಥಣಿ ತಾಲೂಕಿ ವರಾದವರು ಇವರು.   ಕುತ್ತಿಗೆಯಲ್ಲಿ ಕೆ.ಜಿಗಟ್ಟಲೆ ಚಿನ್ನದ ಸರಗಳು, ಕೈಯಲ್ಲಿ ಭಾರಿ ಚಿನ್ನದ ಬ್ರೇಸ್‌ಲೈಟ್, ದಪ್ಪದಪ್ಪ ಉಂಗುರ ಹೀಗೆ ಇವರ ಲುಕ್​ ಇತ್ತು.  ಅದೇ ಕಾರಣಕ್ಕೆ ಜನರು ಅವರನ್ನು ಗೋಲ್ಡ್ ಸುರೇಶ್ ಎಂದೇ ಗುರುತಿಸಿಕೊಂಡಿದ್ದಾರೆ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಇವರು ಕೆಲಸ ಬಿಟ್ಟು ಕ್ರಿಯೇಟಿವ್ ಇಂಟೀರಿಯರ್ ಸಂಸ್ಥೆ ಸ್ಥಾಪಿಸಿದ್ದಾರೆ. ಏನಾದರೂ ಸಾಧಿಸಬೇಕು ಎಂದು ಊರಿನಿಂದ  ಓಡಿ ಬಂದು ಸ್ವಂತ ಸಂಸ್ಥೆ ಸ್ಥಾಪಿಸಿದ್ದಾರೆ. ಈಗ ಇವರ ಬಳಿ ಸಾಕಷ್ಟು ಜನರು ಕೆಲಸ ಮಾಡುತ್ತಿದ್ದಾರೆ.  ಇತ್ತೀಚೆಗೆ ಜೀ ನ್ಯೂಸ್ ಯುವರತ್ನ ಅವಾರ್ಡ್ ಕೂಡ ಇವರು ಪಡೆದಿದ್ದರು.  
 

ಬಾಯ್​ಫ್ರೆಂಡ್​ಗೆ ಸಾಯುವ ಗಡುವು ನೀಡಿದ್ದ ವಿವಾಹಿತೆ: ರಿಪ್ಲೈ ಬಾರದ್ದಕ್ಕೆ ವಿಡಿಯೋ ಮಾಡಿ ಸಾವಿಗೆ ಶರಣು...

click me!