ಯಾವ ತಾಯಿಗೂ ಇಂಥಾ ಕಷ್ಟ ಬರದಿರಲಿ; ದೇವರಿಗೆ ಕೈ ಮುಗಿದ ಕೆಜಿಎಫ್ ನಟಿ ಶಾಂಭವಿ ಫ್ಯಾನ್ಸ್

By Mahmad Rafik  |  First Published Dec 7, 2024, 5:37 PM IST

ಕಿರುತೆರೆ ನಟಿ ಶಾಂಭವಿ ತಮ್ಮ ಮಗನ ಕ್ಯಾನ್ಸರ್ ವಿರುದ್ಧದ ಹೋರಾಟದ ಬಗ್ಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಕಿಮೋಥೆರಪಿ ಚಿಕಿತ್ಸೆಯಿಂದಾಗಿ ಮಗುವಿನ ಕೂದಲು ಉದುರುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ನಟಿಗೆ ಧೈರ್ಯ ತುಂಬಿದ್ದಾರೆ.


ಬೆಂಗಳೂರು: ಕಿರುತೆರೆ ನಟಿ ಶಾಂಭವಿ ತನ್ನಿಬ್ಬರು ಅವಳಿ ಮಕ್ಕಳಲ್ಲಿ ಮಗ ದುಷ್ಯಂತ್‌ಗೆ ಬ್ಲಡ್ ಕ್ಯಾನ್ಸರ್ ಇರೋ ವಿಷಯವನ್ನು ಅಭಿಮಾನಿಗಳ ಜೊತೆ ಭಾರವಾದ ಹೃದಯದಿಂದಲೇ ಹಂಚಿಕೊಂಡಿದ್ದರು. ಇದೀಗ  ಅನಾರೋಗ್ಯಕ್ಕೆ ತುತ್ತಾಗಿರುವ ದುಷ್ಯಂತ್‌ನ ಕೂದಲು ತೆಗೆಯುವ ಭಾವನಾತ್ಮಕ ವಿಡಿಯೋ ಹಂಚಿಕೊಂಡಿದ್ದಾರೆ. ತನಗೆ ಏಕೆ ಕೂದಲು ತೆಗೆಯಲಾಗುತ್ತಿದೆ ಎಂಬ ವಿಷಯ ಮೂರು ವರ್ಷದ ಕಂದಮ್ಮಗೆ ಗೊತ್ತಿಲ್ಲ. ಮಗು ಬೇಸರ ಮಾಡಿಕೊಳ್ಳಬೇಕೆಂಬ ಕಾರಣಕ್ಕೆ ತಂದೆಯೂ ಸಹ ತಲೆ ಬೋಳಿಸಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಶಾಂಭವಿ ಅಭಿಮಾನಿಗಳು, ಯಾವ ತಾಯಿಗೂ ಇಂಥ ಕಷ್ಟ ಕೊಡಬೇಡಪ್ಪ ಕೈ ಮುಗಿದು ದೇವರಲ್ಲಿ ಪ್ರಾರ್ಥಿಸಿಕೊಂಡು, ನಟಿಗೆ ಧೈರ್ಯ ತುಂಬಿದ್ದಾರೆ.  

ಶಾಂಭವಿ ಪೋಷ್ಟ್
ದುಷ್ಯೂಗೆ ತನ್ನ ತಲೆಗೂದಲು ತುಂಬಾ ಇಷ್ಟವಾಗಿತ್ತು. 3 ವರ್ಷದ ಇವನು ಹೇರ್ ಕಟಿಂಗ್ ಸಮಯದಲ್ಲಿ ಇಲ್ಲಿ ಲೈನ್ ಬೇಕು ಅಲ್ಲಿ ಲೈನ್ ಬೇಕು ಅಂತ ಕಿವಿಯ ಅಕ್ಕ-ಪಕ್ಕ ಲೈನ್ ಹಾಕಿಸ್ಕೊಳ್ತಿದ್ದನು. ಕಿಮೋಥೆರಪಿಯ ಹಲವಾರು ಸೈಡ್ ಎಫೆಕ್ಟ್‌ನಲ್ಲಿ ಕೂದಲು ಉದುರುವದು ಕೂಡ ಒಂದು. ಥೆರಪಿಯ ಸೆಕೆಂಡ್ ಸೈಕಲ್‌ನಲ್ಲಿ ಶುರುವಾದ ಹೇರ್‌ ಫಾಲ್, ನೋಡ್ - ನೋಡ್ತಿದ್ದಂತೆ 24 ಗಂಟೆಗಳಲ್ಲಿ ಮನೆ ತುಂಬಾ ದುಷ್ಯೂ ಕೂದಲು ಹರಡೋಕೆ ಶುರುವಾಯ್ತು. ಮಗುವನ್ನ ಹೆಡ್ ಶೇವಿಂಗ್ ಮಾಡೋದಕ್ಕೆ ಒಪ್ಪಿಸೋದು ಕಷ್ಟದ ವಿಚಾರವಾಗಿತ್ತು. ಹೀಗಾಗಿ ಅವರಪ್ಪ ಕೂದಲು ತೆಗಿಸಿದರು, ಅವರನ್ನ ನೋಡಿ ದೂಷ್ಯು ಕೂಡ ಹೊಸ ಹೇರ್ ಸ್ಟೈಲ್ ಮಾಡಿಸ್ಕೋತಿನಿ ಅಂತಾ ಹೇಳ್ತಾ ಕೂದಲು ತೆಗೆಯೋಕೆ ಒಪ್ಪಿಕೊಂಡ. ಈಗ ನಮ್ಮ ಗುಂಡಣ್ಣ, ಮರಿ ಗೂಂಡಾ ಥರಾ ಕಾಣುತ್ತಿದ್ದಾನೆ ಎಂದು ಶಾಂಭವಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Tap to resize

Latest Videos

ಈ ವಿಡಿಯೋಗೆ ಕಮೆಂಟ್ ಮಾಡಿರುವ ಅಭಿಮಾನಿಗಳು, ರಾಯರಿದ್ದಾರೆ, ಅಕ್ಕ ಯೋಚನೆ ಮಾಡಿ. ನಿಮ್ಮ ಮಗ ಗುಣಮುಖನಾಗುತ್ತಾನೆ. ಬೇಗ ಹುಷಾರಾಗಿ ನೂರಾರು ಕಾಲ ಚೆನ್ನಾಗಿರು ಕಂದಮ್ಮ. ಆ ಮಂಜುನಾಥಸ್ವಾಮಿ‌ ಆಶೀರ್ವಾದ ನಿನ್ನ ಮೇಲಿರಲಿ. ಮಗನೇ ನಿನಗೆ ಏನು ಆಗೋಲ್ಲ ಬಂಗಾರಿ ಬೇಗ ಹುಷಾರು ಆಗಿತ್ತಿಯಾ. ಸ್ಟ್ರಾಂಗ್ ಆಗಿರು ಕಂದ. ನಿನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿಕೊಳ್ಳುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ. 

ನಟಿ ಶಾಂಭವಿ ಪೈಲ್ವಾನ್, ಕೆಜಿಎಫ್ ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ನಿಗೂಢ ರಾತ್ರಿ ಧಾರಾವಾಹಿಯಲ್ಲಿ ಪುಟ್ಟಿಯಾಗಿ  ಕಾಣಿಸಿಕೊಂಡಿದ್ದ ಶಾಂಭವಿ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ತಾಯಿಯಾದ ಬಳಿಕ ಅಮೃತಧಾರೆ ಸೀರಿಯಲ್ ಮೂಲಕ ಶಾಂಭವಿ ಕಮ್ ಬ್ಯಾಕ್ ಮಾಡಿದ್ದರು. ಇದೀಗ ಶಾಂಭವಿ ಪಾತ್ರವನ್ನು ಧಾರಾವಾಹಿಯಲ್ಲಿ ಕೊನೆಗೊಳಿಸಲಾಗಿದೆ. 

ಇದನ್ನೂ ಓದಿ: ತಂದೆ ಕ್ರಿಶ್ಚಿಯನ್,ತಾಯಿ ಸಿಖ್, ಸೋದರ ಮುಸ್ಲಿಂ, ಪತ್ನಿ ಹಿಂದೂ; ಸಾಲು ಸಾಲು ಸೂಪರ್‌ಹಿಟ್ ಸಿನಿಮಾ ಕೊಟ್ಟ ನಟನ ಖಾಸಗಿ ಬದುಕು

ನವೆಂಬರ್ 7ರ ಶಾಂಭವಿ ಪೋಸ್ಟ್
ಕನಸು ಮನಸಿನಲ್ಲೂ ನೆನೆಸದ ವಿಷಯ ನಡೆದುಹೋಗಿದೆ. ಸೆಪ್ಟೆಂಬರ್ 23ರಂದು 3 ವರುಷದ ಪುಟಾಣಿ ಕಂದ ದುಷ್ಯುಗೆ 3rd stage ಬ್ಲಡ್ ಕ್ಯಾನ್ಸರ್ ಇರೋದು ಪತ್ತೆ ಆಯ್ತು. 5-6 ದಿನಗಳಲ್ಲಿ ನಡೆದ ಟೆಸ್ಟ್ ರಿಸಲ್ಟ್ಸ್ ಬರೋವರೆಗೆ ಪ್ರತಿ ಕ್ಷಣವೂ "ಇದು ಕ್ಯಾನ್ಸರ್ ಆಗಿರದೆ ಇರಲಿ ಅಂತಾ ಪ್ರಾರ್ಥಿಸ್ತಾ ಇದ್ವಿ. ಹಣೆಯಲಿ ಬರೆದಿರೋದನ್ನ ಬಲಿಸೋಕೆ ಆಗದಿದ್ದಾಗ ಈ ಪೂಜೆ, ಪ್ರಾರ್ಥನೆ, ಹರಕೆಗಳೆಲ್ಲ ಯಾಕೆ ಅನ್ಸತ್ತೆ! ಎನಗತ್ತೋ ಆಗ್ಲಿ ಅಂತ ರೆಡಿ ಆಗಿ ನಿಂತಿದೀವಿ ಇವಾಗ. ಬೇರೆ ಆಪ್ಷನ್ ಆದ್ರೂ ಏನಿದೆ?? ಇದು 95% curable ಅಂತಾ doctors ಭರವಸೆ ಕೊಟ್ಟಿದ್ದಾರೆ. ಆದ್ರೆ ಪಾಪಾ ದುಷ್ಯೂಗೆ ತನ್ನ ಜೊತೆ ಏನಾಗ್ತಾ ಇದೆ? ಯಾಕ್ ಆಗ್ತಾ ಇದೆ ಅನ್ನೋ ಅರಿವೇ ಇಲ್ಲ. ಎಷ್ಟೆಲ್ಲ ನೋವು ಅನುಭವಿಸಬೇಕಲ್ಲ ಈ ಕಂದ ಅನ್ನೋದೇ ಸಂಕಟ. "ನಿನಗ ಹುಷಾರಿಲ್ಲ ಮಗನೇ, ತುಂಬಾ ದೊಡ್ಡ ಟ್ರೀಟ್ಮೆಂಟ್ ತಗೋಬೇಕಿದೆ" ಅಂತಾ ಅರ್ಥ ಮಾಡಿಸೋಕೆ ಪ್ರಯತ್ನ ಪಡ್ತಾ ಇರ್ತೀನಿ.

Chemotherapyಯ ಮೊದಲ ಹಂತ ಮುಗಿದು ಎರಡನೇ ಹಂತ ಶುರುವಾಗಿದೆ. ಸುಮಾರು 40 ದಿನಗಳ ಹಿಂದೆ therapy ಯ ಮೊದಲ ದಿನದಂದು ಕ್ಲಿಕ್ಕಿಸಿದ shots ಇದು ಎಂದು ಬರೆದುಕೊಂಡು ಮಗನ ಅನಾರೋಗ್ಯದ ವಿಷಯವನ್ನು  ಶಾಂಭವಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ಎರಡೇ ಗಂಟೆಯಲ್ಲಿ ನಡೆದಿತ್ತು ನಟನ ಮದುವೆ; ಹನಿಮೂನ್‌ನಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಮನೆಗೆ ಓಡೋಡಿ ಬಂದ

click me!