ಎರಡು ಮಕ್ಕಳಾಗೋ ತನಕ ಸುಮ್ಮನಿದ್ದಿ ಯಾಕೆ? ಲೈವ್‌ನಲ್ಲಿ ಬೆವರಿಳಿಸಿದ ವೀಕ್ಷಕರಿಗೆ ತಾಂಡವ್‌ ಉತ್ತರ ಕೇಳಿ...

By Suchethana D  |  First Published Dec 7, 2024, 2:38 PM IST

ವೀಕ್ಷಕರ ಜೊತೆ ನೇರಪ್ರಸಾರದಲ್ಲಿ ಭಾಗ್ಯಲಕ್ಷ್ಮಿ ಪಾತ್ರಧಾರಿ ತಾಂಡವ್‌ ಅಂದರೆ ಸುದರ್ಶನ್‌ ರಂಗಪ್ರಸಾದ್‌ ಮಾತನಾಡಿದ್ದು, ವೀಕ್ಷಕರು ಸಿಕ್ಕಾಪಟ್ಟೆ ಬೈದಿದ್ದಾರೆ. ಏನೇನು ಹೇಳಿದರು ನೋಡಿ...
 


ನಿಮಗೆ ನಾಚಿಕೆ ಆಗಲ್ವಾ...? ಥೂ ನಿಮ್‌ ಜನ್ಮಕ್ಕೆ... ನೀವು ಈ ಜನ್ಮದಲ್ಲಿ ಉದ್ಧಾರ ಆಗಲ್ಲ... ಪಾಪಿ ನೀವು... ಅದ್ಯಾವಳೋ ಸಿಕ್ಕಳೆಂದು ಹೆಂಡ್ತಿಯನ್ನು ಬಿಟ್ಟು ಹೋಗ್ತೀರಾ? ನಿಮಗಿದೆ ಮುಂದೆ ಮಾರಿ ಹಬ್ಬ... ಹೆಂಡ್ತಿ ಇಷ್ಟ ಇಲ್ಲ ಅಂದ್ರೆ ಮೊದಲೇ ಹೇಳಬೇಕಿತ್ತು, ಎರಡು ಮಕ್ಕಳಾಗೋ ತನಕ ಏನು ಮಾಡಿದ್ರಿ, ಯಾಕೆ ಸುಮ್ಮನಿದ್ರಿ....? 
ಅಬ್ಬಬ್ಬಾ ಒಂದೋ, ಎರಡೋ ಬೈಗುಳಗಳು! ನೇರಪ್ರಸಾರದಲ್ಲಿ ಬಂದ ಭಾಗ್ಯಲಕ್ಷ್ಮಿ ಸೀರಿಯಲ್‌ ತಾಂಡವ್‌ನ ಮೇಲೆ ವೀಕ್ಷಕರು ಗದಾ ಪ್ರಹಾರವನ್ನೇ ಹರಿಸಿದ್ದಾರೆ. ಅವರು ಕೇವಲ ನಟ, ಅದು ನಟನೆ ಮಾತ್ರ ಎನ್ನುವುದನ್ನೂ ಮರೆತು ಬೈಗುಳಗಳ ಸರಮಾಲೆಯನ್ನೇ ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ, ಇಂದು ಸೀರಿಯಲ್​ಗಳು ಕೇವಲ ಸೀರಿಯಲ್​ಗಳಾಗಿ ಉಳಿದಿಲ್ಲ. ಅದು ಮನೆಮನೆಯ ಕಥೆಗಳಾಗಿವೆ. ಅಲ್ಲಿರುವ ಪಾತ್ರಗಳು ತಾವೇ ಎಂದು ಅಂದುಕೊಳ್ಳುತ್ತಾರೆ ಪ್ರೇಕ್ಷಕರು. ಆದ್ದರಿಂದ ಎಲ್ಲವೂ ತಾವು ಅಂದುಕೊಂಡಂತೆ ಆಗಬೇಕು ಎನ್ನುವುದು ಅವರ ಮನದಾಳದ ಆಸೆ. ಒಂದು ಸೀರಿಯಲ್​ ಅಂದ್ರೆ ಹೀಗೆಯೇ ಇರಬೇಕು, ಎಲ್ಲವೂ ಒಳ್ಳೆಯದಾಗಬೇಕು, ಒಳ್ಳೆಯವರಿಗೆ ಒಳ್ಳೆಯದಾಗಬೇಕು- ಕೆಟ್ಟವರಿಗೆ ಕೆಟ್ಟದ್ದಾಗಬೇಕು. ಅದು ಎಷ್ಟರಮಟ್ಟಿಗೆ ಎಂದ್ರೆ ವರ್ಷಗಟ್ಟಲೆ ಚ್ಯೂಯಿಂಗ್​ ಗಮ್​ನಂತೆ ಸೀರಿಯಲ್​ ಎಳೆದರೂ ಎಲ್ಲಿಯೂ ಒಳ್ಳೆಯವರಿಗೆ ಕೆಟ್ಟದ್ದು ಆಗಬಾರದು. ವಿಲನ್​ಗಳು ವಿನ್ ಆಗಬಾರದು... ಹೀಗೆ ಏನೇನೋ ಕಲ್ಪನೆಯಲ್ಲಿ ಮುಳುಗಿರುತ್ತಾರೆ ಸೀರಿಯಲ್​ ಪ್ರೇಮಿಗಳು.   

ತಾಂಡವ್‌ ಕ್ರೂರತನಕ್ಕೆ ಕಾರಣ ತಿಳಿಸುತ್ತಲೇ ಪ್ರತಿ ಪೋಷಕರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ ನಟ ಸುದರ್ಶನ್!

Tap to resize

Latest Videos

ಬಹುತೇಕ ಮಂದಿ ಸೀರಿಯಲ್‌ಗಳನ್ನು  ತಮ್ಮ ಬದುಕಿನ ಅವಿಭಾಜ್ಯ ಅಂಗ ಅಂದೇ ಅಂದುಕೊಂಡಿದ್ದಾರೆ. ಅಲ್ಲಿ ಬರುವ ಪಾತ್ರಗಳು ಕೇವಲ ಪಾತ್ರಗಳಾಗಿರದೇ ನಿಜ ಜೀವನ ಅಂದುಕೊಳ್ಳುವವರು ಇದ್ದಾರೆ. ಇದೇ ಕಾರಣಕ್ಕೆ ಎಷ್ಟೋ ಸೀರಿಯಲ್​ಗಳು ಇಂದು ಹಲವರಿಗೆ ದಾರಿದೀಪಗಳಾಗಿವೆ. ಅಲ್ಲಿರುವುದನ್ನೇ ಅನುಸರಿಸುತ್ತಾರೆ. ಕೆಲವೊಂದು ನಟ-ನಟಿಯರನ್ನು ತಮ್ಮ ಆದರ್ಶ ಎಂದುಕೊಂಡುಬಿಡುತ್ತಾರೆ. ಸೀರಿಯಲ್​ಗಳಲ್ಲಿ ಏನೇ ಎಡವಟ್ಟು ಆದರೂ ಅದು ಕೇವಲ ಧಾರಾವಾಹಿ ಎನ್ನುವುದನ್ನು ಮರೆತು ಬೈಯುವುದು ಉಂಟು. ಅಷ್ಟಕ್ಕೂ ಈಗ ಭಾಗ್ಯಲಕ್ಷ್ಮಿ ಸೀರಿಯಲ್ ಕುತೂಹಲದ ಘಟ್ಟ ತಲುಪಿದೆ. ಭಾಗ್ಯ ಗಂಡನನ್ನು ಬಿಟ್ಟು ತವರು ಮನೆ ಸೇರಿದ್ದಾಳೆ. ಅತ್ತೆ-ಮಾವ, ತಂಗಿ, ಸುಂದ್ರಿ, ಅಪ್ಪ-ಅಮ್ಮ ಎಲ್ಲರನ್ನೂ ಸಾಕುವ ಜವಾಬ್ದಾರಿ ಹೊತ್ತಿದ್ದಾಳೆ. ಇದೇ ಕಾರಣಕ್ಕೆ ಈಗ ನಾನು ಭಾಗ್ಯಟ್ರೆಂಡ್‌ ಸೋಷಿಯಲ್‌ ಮೀಡಿಯಾದಲ್ಲಿಯೂ ಶುರುವಾಗಿದೆ.

ಇದರ ನಡುವೆಯೇ ತಾಂಡವ್‌ ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್‌ ಅವರು ವೀಕ್ಷಕರ ಜೊತೆ ಮಾತುಕತೆ ನಡೆಸಿದ್ದಾರೆ. ಆದರೆ ಎಲ್ಲರೂ ಇವರಿಗೆ ಕೆಟ್ಟ ಕೆಟ್ಟ ಶಬ್ದಗಳಿಂದ ಬೈದು ಮೆಸೇಜ್‌ ಮಾಡಿದ್ದಾರೆ. ಆರಂಭದಲ್ಲಿ ತಾಂಡವ್‌ ಆಗಿಯೇ ಮಾತನಾಡಿದ ಸುದರ್ಶನ್‌ ಅವರು, ಹೌದು, ನಾನು ಕೆಟ್ಟವ. ನಿಮಗೆ ತಾಂಡವ್‌ ಕೆಟ್ಟತನ ಅಷ್ಟೇ ಕಾಣಿಸುತ್ತದೆ. ನನ್ನನ್ನು ಯಾವ ರೀತಿ ಸ್ಟ್ರಿಕ್ಟ್‌ನಲ್ಲಿ ಬೆಳೆಸಿದರು ಎನ್ನುವುದು ನಿಮಗೆ ಕಾಣಲ್ಲ, ನಾನೇನೂ ತಪ್ಪು ಮಾಡ್ತಿಲ್ಲ. ಭಾಗ್ಯ ನನಗೆ ಇಷ್ಟ ಇಲ್ಲ ಅಷ್ಟೇ. ಶ್ರೇಷ್ಠಾ ಎಲ್ಲ ರೀತಿಯಲ್ಲಿಯೂ ನನಗೆ ಸರಿ ಹೊಂದುತ್ತಾಳೆ ಎಂದಿದ್ದಾರೆ. ಆಗ ಒಬ್ಬರು ಎರಡು ಮಕ್ಕಳಾಗೋ ತನಕ ಯಾಕೆ ಸುಮ್ಮನಿದ್ರಿ ಎಂದಾಗ ನಟ ಸ್ವಲ್ಪ ಗಲಿಬಿಲಿಗೊಂಡು, ಮಕ್ಕಳಾಗುವ ಮಾತು ಸದ್ಯ ಪಕ್ಕದಲ್ಲಿ ಇರಲಿ, ಆದ್ರೆ ಅದೇ ತಾಂಡವ್‌ ಮಾಡಿದ ತಪ್ಪು. ಮದುವೆಗೂ ಮುನ್ನವೇ ವಿಚ್ಛೇದನ ಕೊಟ್‌ಬಿಡಬೇಕಿತ್ತು ಎಂದು ತಮಾಷೆ ಮಾಡಿದ್ದಾರೆ.

ಕೊನೆಯಲ್ಲಿ ತಾಂಡವ್‌ ಪಾತ್ರದಿಂದ ಹೊರಕ್ಕೆ ಬಂದು, ನಾನು ಸುದರ್ಶನ್ ರಂಗಪ್ರಸಾದ್‌ ಆಗಿ ಹೇಳುತ್ತಿದ್ದೇನೆ. ಭಾಗ್ಯಳಿಗೆ ಅನ್ಯಾಯ ಆಗಿದೆ. ನೀವೆಲ್ಲಾ ಭಾಗ್ಯಳಿಗೆ ಸಪೋರ್ಟ್ ಮಾಡಬೇಕು. ಯಾರೂ ತಾಂಡವ್‌ ಆಗಲು ಹೋಗಬೇಡಿ. ಭಾಗ್ಯಳಂಥ ಸ್ಥಿತಿ ಯಾರಿಗೂ ಬರುವುದು ಬೇಡ. ಇಂಥ ಸ್ಥಿತಿ ಬಂದರೆ ಅವರಿಗೆಲ್ಲರಿಗೂ ಭಾಗ್ಯ ಆದರ್ಶ ಆಗಬೇಕು, ಅನ್ಯಾಯ ಸಹಿಸಬಾರದು ಎನ್ನುತ್ತಲೇ ನಾನು ಭಾಗ್ಯ, ನೀವು...? ಎನ್ನುವ ಮೂಲಕ ಮಾತನ್ನು ಮುಗಿಸಿದ್ದಾರೆ. 

ಭಾಗ್ಯಲಕ್ಷ್ಮಿ ಕುಸುಮತ್ತೆ ರಿಯಲ್‌ ಪುತ್ರಂಗೆ ಹಾವೆಂದ್ರೆ ಜೀವ: ಕುಕ್ಕೆಗೆ ಹೋದ್ರೂ ಬಗೆ ಹರಿದಿಲ್ಲ ಸಮಸ್ಯೆ!

click me!