ಕೆಂಡಸಂಪಿಗೆ ಸೀರಿಯಲ್ ವಿರುದ್ಧ ಕೆಂಡ ಕಾರುತ್ತಿರುವ ವೀಕ್ಷಕರು, ಏನಾಗ್ತಿದೆ ಇಲ್ಲಿ?

Published : Feb 06, 2024, 03:23 PM IST
ಕೆಂಡಸಂಪಿಗೆ ಸೀರಿಯಲ್ ವಿರುದ್ಧ ಕೆಂಡ ಕಾರುತ್ತಿರುವ ವೀಕ್ಷಕರು, ಏನಾಗ್ತಿದೆ ಇಲ್ಲಿ?

ಸಾರಾಂಶ

ಅಬಾರ್ಶನ್‌ ಹಿನ್ನೆಲೆಯಲ್ಲಿ ಹೆಣ್ಣನ್ನು ಹೀನವಾಗಿ ನೋಡಲಾಗುತ್ತಿದೆ ಎಂದು ಕೆಂಡಸಂಪಿಗೆ ಸೀರಿಯಲ್ ವೀಕ್ಷಕರು ಸೀರಿಯಲ್ ಟೀಮಿಗೆ ಯದ್ವಾ ತದ್ವಾ ಉಗೀತಿದ್ದಾರೆ.

ಆಕ್ಸಿಡೆಂಟ್‌ ಆಗಿ ಅಬಾರ್ಶನ್ ಆಗಿದ್ದನ್ನೇ ಮುಖ್ಯವಾಗಿಟ್ಟುಕೊಂಡು ಸೀರಿಯಲ್‌ನಲ್ಲಿ ಹೆಣ್ಣಿನ ಬಗ್ಗೆ ಹೀನವಾದ ಮೆಸೇಜ್ ಕೊಡ್ತಿದ್ದಾರೆ ಅಂತ ಆರೋಪಿಸಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಕೆಂಡಸಂಪಿಗೆ' ಸೀರಿಯಲ್‌ಗೆ ವೀಕ್ಷಕರು ಯದ್ವಾತದ್ವಾ ಉಗೀತಿದ್ದಾರೆ. ಹೀಗೆಲ್ಲ ತೋರಿಸೋ ಮೂಲಕ ಜನಸಾಮಾನ್ಯರಿಗೆ ಸೀರಿಯಲ್ ಟೀಮ್ ಯಾವ ಸಂದೇಶ ಕೊಡಲು ಹೊರಟಿದೆ ಎಂದು ವೀಕ್ಷಕರು ಸೀರಿಯಲ್ ತಂಡವನ್ನು ಪ್ರಶ್ನೆ ಮಾಡಿದ್ದಾರೆ.

ಹಾಗೆ ನೋಡಿದರೆ ನಮ್ಮ ಹೆಚ್ಚಿನ ಸೀರಿಯಲ್‌ಗಳಲ್ಲಿ ಇನ್ನೂ ಎಷ್ಟೋ ದಶಕಗಳ ಹಿಂದಿನ ಕಥೆಯನ್ನೇ ಕಾಣುತ್ತೇವೆ. ಮನೆಯಲ್ಲಿ ಈ ಕಾಲದ ಸೌಲಭ್ಯಗಳೆಲ್ಲ ಇದ್ದರೂ ಮನಸ್ಸು ಮಾತ್ರ ಶತಮಾನಗಳ ಹಿಂದೆಯೇ ಇರುತ್ತದೆ. ಈ ಟ್ರಿಕ್ಕು ಸೀರಿಯಲ್‌ ಕತೆಗಳಲ್ಲಿ ಸಖತ್ ವರ್ಕ್‌ ಆಗುತ್ತೆ ಅಂತ ಸೀರಿಯಲ್ ಟೀಮ್ ಭಾವಿಸಿರುತ್ತೆ. ಈ ಸೀರಿಯಲ್‌ ನೋಡುವ ಮಿಡಲ್‌ ಕ್ಲಾಸ್ ಹೆಣ್ಣುಮಕ್ಕಳು ಆ ಮೈಂಡ್‌ಸೆಟ್‌ನಿಂದ ಹೊರಬಂದು ಬಹಳ ಕಾಲ ಆಗಿದೆ ಅನ್ನೋದು ಇವರಿಗೆ ಗೊತ್ತಾದ ಹಾಗಿಲ್ಲ. ಈ ಕಾರಣಕ್ಕೆ ಅಬಾರ್ಶನ್ ಅನ್ನೋದು ಸೀರಿಯಲ್‌ಗಳಲ್ಲಿ ಮಹಾ ಅಪರಾಧದ ಥರ ಬಿಂಬಿತವಾಗುತ್ತದೆ. ಇದು ಪ್ರಜ್ಞಾವಂತ ವೀಕ್ಷಕರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡೋದು ಸುಳ್ಳಲ್ಲ.

ಅಯೋಧ್ಯೆಯಲ್ಲಿ ಮೊಳಗಿದ ರಾಮ ಭಜನೆಗೆ ನೃತ್ಯದ ಮೆರುಗು ನೀಡಿದ ನಟಿ, ನೃತ್ಯಾಂಗನೆ ಅಂಕಿತಾ ಅಮರ್​...

ಹೊರ ಜಗತ್ತಿನಲ್ಲಿ ತೀರಾ ಸಾಮಾನ್ಯ ಹೆಣ್ಣುಮಕ್ಕಳೂ ಅಬಾರ್ಶನ್‌ (Abortion) ಬಗ್ಗೆ ಸಾಮಾನ್ಯ ಜ್ಞಾನ ಹೊಂದಿರುತ್ತಾರೆ. ಎಷ್ಟೋ ಸಲ ಆಕಸ್ಮಿಕವಾಗಿ ಕನ್ಸೀವ್ ಆದ ವೇಳೆ ಅಬಾರ್ಶನ್ ಮಾಡಿಸುವುದು ಈ ಕಾಲದಲ್ಲಿ ತೀರಾ ಸಾಮಾನ್ಯ. ಹೀಗಿರುವಾಗ ಸೀರಿಯಲ್‌ಗಳಲ್ಲಿ ಇದನ್ನು ಅಪರಾಧ ಅನ್ನೋ ಥರ ನೋಡುವುದು ಹೆಣ್ಣನ್ನು ಮತ್ತಷ್ಟು ಕೆಳ ತಳ್ಳುವ ಮನಸ್ಥಿತಿ ಎಂದು ಹೆಣ್ಮಕ್ಕಳು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿರುತ್ತಾರೆ. ಅದರಲ್ಲೂ ಕೆಂಡಸಂಪಿಗೆ ಸೀರಿಯಲ್‌ ಬಗ್ಗೆ ಸದ್ಯ ಹೆಣ್ಮಕ್ಕಳು ಸಹನೆ ಕಳೆದುಕೊಂಡಿದ್ದಾರೆ. ಇದೇ ಮೈಂಡ್‌ಸೆಟ್‌ನಲ್ಲಿ ಕಥೆ ಮುಂದುವರಿಸಿದರೆ ನಿಮ್ಮ ಕಥೆ ನೆಟ್ಟಗಿರೋದಿಲ್ಲ ಅಂತ ಕ್ಲಾಸ್ ತಗೊಳ್ತಿದ್ದಾರೆ.

ಅಷ್ಟಕ್ಕೂ ಕೆಂಡಸಂಪಿಗೆ ಸೀರಿಯಲ್ಲಿನಲ್ಲಿ ಸುಮನಾ ಎಂಬ ಬಡ ಹೆಣ್ಣುಮಗಳು ತೀರ್ಥಂಕರ ಎಂಬ ಆಗರ್ಭ ಶ್ರೀಮಂತನ ಕೈ ಹಿಡಿಯೋದು ಆಕಸ್ಮಿಕವಾಗಿ. ತಾತ್ಕಾಲಿಕ ಮದುವೆ (Temporary Marriage) ಎಂದೇ ಅವಳ ಕೈ ಹಿಡಿದ ತೀರ್ಥಂಕರ ತೀರ್ಥಪಾನ ಮಾಡಿ ಅವಳು ಗರ್ಭವತಿಯಾಗುವ ಹಾಗೆ ಮಾಡಿದ್ದೂ ಆಕಸ್ಮಿಕವೇ. ನಿರೀಕ್ಷೆಯಂತೆ ಕ್ರಮೇಣ ಅವಳ ಮೇಲೆ ಪ್ರೀತಿ ಆಗಿದೆ. ಅವಳ ಹೊಟ್ಟೆಯಲ್ಲಿರುವ ಮಗುವಿನ ಬಗ್ಗೆ ನಿರೀಕ್ಷೆಯೂ ಬೆಳೆದಿದೆ. ಈ ನಡುವೆ ಆಕಸ್ಮಿಕವಾಗಿ ಗರ್ಭಪಾತವಾಗಿದೆ. ಅದು ವಿಲನ್‌ಗೆ ಗೊತ್ತಾಗಿ ಅವಳು ಮನೆಯವರೆಲ್ಲ ಇದನ್ನ ಮಹಾ ಅಪರಾಧವಾಗಿ ನೋಡಿ ಸುಮನಾಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಸುಮಾರು ದಿನದಿಂದ ಅದದೇ ಕಥೆ, ಅದದೇ ಡೈಲಾಗ್ (dialogue) ನೋಡಿ ರೋಸಿ ಹೋಗಿರುವ ವೀಕ್ಷಕರು ಇದೀಗ ಕೆಂಡಸಂಪಿಗೆ ಮೇಲೆ ಕೆಂಡಕಾರುತ್ತಿದ್ದಾರೆ. ಇದೇ ಥರ ಸೀರಿಯಲ್ (serial) ಕಥೆ ಮುಂದುವರಿಸಿದರೆ ಸೀರಿಯಲ್‌ ಅನ್ನೇ ನೋಡೋದಿಲ್ಲ ಅಂತಿದ್ದಾರೆ.

ಬಿಗ್​ಬಾಸ್​ನಲ್ಲಿ ಸಂಗೀತಾ-ಕಾರ್ತಿಕ್​ ದೂರವಾಗಿದ್ದೇಕೆ? ಹೊರಬಂದ್ಮೇಲೆ ಹೇಗಿದೆ ಸಂಬಂಧ? ವಿನ್ನರ್​ ಹೇಳಿದ್ದೇನು ಕೇಳಿ...

ಹಾಗೆ ನೋಡಿದರೆ ಈ ಸೀರಿಯಲ್ಲಿಗೆ ಹೇಳಿಕೊಳ್ಳುವಂಥಾ ಟಿಆರ್‌ಪಿ (TRP)ಇಲ್ಲ. ಆದರೆ ಈ ಥರದ ಏಕತಾನತೆಯ ಕಥೆ, ಸಂಪ್ರದಾಯ, ಸಂಸ್ಕೃತಿ (culture), ಅತೀ ಒಳ್ಳೆಯತನವನ್ನು ಅವಳ ಮೇಲೆ ಆರೋಪಿಸಿ ಆಕೆಯನ್ನು ಹೀನ ಮಾಡುವುದರ ಬಗ್ಗೆಯೂ ಎಲ್ಲೆಡೆ ಅಸಾಮಾಧಾನ ವ್ಯಕ್ತವಾಗುತ್ತಿದೆ. ಒಮ್ಮೆ ಆಕಸ್ಮಿಕವಾಗಿ ಅಬಾರ್ಶನ್ ಆದ್ರೆ ಹೋಯ್ತು, ಇನ್ನೊಂದು ಮಗುನೇ ಆಗಲ್ವಾ ಅವಳಿಗೆ, ಒಂದು ವೇಳೆ ಮಗು ಆಗದೇ ಹೋದರೂ ಅದೇನು ಅಂಥಾ ದೊಡ್ಡ ಅಪರಾಧವಾ? ಇದೇ ಥರ ಕಥೆ ಮುಂದುವರಿಸಿದರೆ ಒಂದಿನ ಹೆಣ್ಮಕ್ಕಳು ಹುಡ್ಕೊಂಡು ಬಂದು ಮುಖಕ್ಕೆ ಉಗೀತಾರೆ ಅನ್ನೋ ಥರದ ಉಗ್ರ ಕಮೆಂಟ್‌ಗಳೂ ಸೋಷಿಯಲ್ ಮೀಡಿಯಾದಲ್ಲಿ (Social media) ಕೇಳಿ ಬರ್ತಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!