ಅಭಿಮಾನಿಗಳಿಗಾಗಿ ಕಾಯ್ತಿದ್ದಾರೆ ಬಿಗ್​ಬಾಸ್​ ಸ್ಪರ್ಧಿಗಳು! ಮಾತುಕತೆ ಜೊತೆ ಸೆಲ್ಫಿಗೆ ಇಲ್ಲಿದೆ ಸುವರ್ಣಾವಕಾಶ...

Published : Feb 06, 2024, 11:40 AM ISTUpdated : Feb 06, 2024, 11:47 AM IST
ಅಭಿಮಾನಿಗಳಿಗಾಗಿ ಕಾಯ್ತಿದ್ದಾರೆ ಬಿಗ್​ಬಾಸ್​ ಸ್ಪರ್ಧಿಗಳು! ಮಾತುಕತೆ ಜೊತೆ ಸೆಲ್ಫಿಗೆ ಇಲ್ಲಿದೆ ಸುವರ್ಣಾವಕಾಶ...

ಸಾರಾಂಶ

ಈ ಎಲ್ಲಾ ಬಿಗ್​ಬಾಸ್​ ಸ್ಪರ್ಧಿಗಳು ಅಭಿಮಾನಿಗಳ ಜೊತೆ ಮಾತುಕತೆ ನಡೆಸಿ ಸೆಲ್ಫೀ ಕ್ಲಿಕ್ಕಿಸಿಕೊಳ್ಳುವುದಾಗಿ ಹೇಳಿದ್ದಾರೆ. ಹಾಗಿದ್ದರೆ ಎಲ್ಲಿ? ಯಾವಾಗ?  

ಬಿಗ್​ಬಾಸ್​ ಸೀಸನ್​ 10 ಮುಗಿದರೂ ಬಿಗ್​ಬಾಸ್​ ಗುಂಗಿನಿಂದ ಹಲವರು ಇನ್ನೂ ಹೊರಕ್ಕೆ ಬಂದಿಲ್ಲ. ಬಿಗ್​ಬಾಸ್ ಸ್ಪರ್ಧಿಗಳನ್ನು ಒಮ್ಮೆಯಾದರೂ ಕಣ್ತುಂಬಿಸಿಕೊಳ್ಳಬೇಕು ಎಂದು ಆಸೆ ಪಡುವವರೇ ಹಲವರು. ತಮ್ಮ ನೆಚ್ಚಿನ ಸ್ಪರ್ಧಿಗೆ ​ಬಿಗ್​ಬಾಸ್​ ಪಟ್ಟ ಸಿಕ್ಕಿಲ್ಲವೆಂದು, ಟ್ರೋಫಿ ಸಿಕ್ಕಿಲ್ಲವೆಂದು ನಿರಾಸೆ ಪಟ್ಟುಕೊಂಡವರೇ ಹಲವರು. ಬಿಗ್​ಬಾಸ್​ ಒಳಗೆ ಸ್ಪರ್ಧಿಗಳು ಟ್ರೋಫಿ ಗಿಟ್ಟಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದರೆ, ಬಿಗ್​ಬಾಸ್​ ಹೊರಕ್ಕೆ ಅವರ ಅಭಿಮಾನಿಗಳು ಅವರ ನೆಚ್ಚಿನ ಸ್ಪರ್ಧಿಯ ಗೆಲುವಿಗಾಗಿ ಹರಸಾಹಸ ಪಡುತ್ತಿದ್ದರು. ಕೊನೆಗೂ ಬಿಗ್​ಬಾಸ್​ ಕಿರೀಟ ಕಾರ್ತಿಕ್​ ಪಾಲಾಗಿದ್ದು, ರನ್ನರ್ಸ್​ ಅಪ್​ ಆಗಿ ಡ್ರೋನ್​ ಪ್ರತಾಪ್​ ಮತ್ತು ಸಂಗೀತಾ ಹೊರಹೊಮ್ಮಿದ್ದಾರೆ. ಇದೀಗ ಕೆಲವು ಸ್ಪರ್ಧಿಗಳು ತಮ್ಮ ಅಭಿಮಾನಿಗಳನ್ನು ಭೇಟಿಯಾಗಲು ಅಭಿಮಾನಿಗಳಿಗಾಗಿ ಕಾಯುತ್ತಿದ್ದಾರೆ. ತಮಗೆ ಪ್ರೀತಿ ತೋರಿದ ಫ್ಯಾನ್ಸ್​ ತಮ್ಮ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅವಕಾಶವನ್ನು ನೀಡಿದ್ದಾರೆ. 

ಬಿಗ್​ಬಾಸ್​ನಲ್ಲಿ ಸಂಗೀತಾ-ಕಾರ್ತಿಕ್​ ದೂರವಾಗಿದ್ದೇಕೆ? ಹೊರಬಂದ್ಮೇಲೆ ಹೇಗಿದೆ ಸಂಬಂಧ? ವಿನ್ನರ್​ ಹೇಳಿದ್ದೇನು ಕೇಳಿ...

ಅಂದಹಾಗೆ, ರಕ್ಷಕ್​ ಬುಲೆಟ್, ನಮ್ರತಾ ಗೌಡ, ವಿನಯ್ ಗೌಡ ಮತ್ತು ಮೈಕಲ್ ಅಜಯ್ ಅವರನ್ನು ಮೀಟ್​ ಮಾಡುವ ಅವಕಾಶ ಅಭಿಮಾನಿಗಳಿಗೆ ನೀಡಲಾಗಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಅಂದರೆ ಫೆ. 6ರ ಮಧ್ಯಾಹ್ನ 12 ಗಂಟೆಯಿಂದ ಈ ನಾಲ್ವರು ಬಿಗ್​ಬಾಸ್​ ಸ್ಪರ್ಧಿಗಳು ಅಭಿಮಾನಿಗಳನ್ನು ಮೀಟ್​ ಮಾಡಿ ಮಾತನಾಡಲಿದ್ದಾರೆ, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲಿದ್ದಾರೆ. ಅಂದಹಾಗೆ ಹಾಗೆ  ರಕ್ಷಕ್​ ಬುಲೆಟ್, ನಮ್ರತಾ ಗೌಡ, ವಿನಯ್ ಗೌಡ ಮತ್ತು ಮೈಕಲ್ ಅಜಯ್ ಇದೀಗ ಅಭಿಮಾನಿಗಳ ಭೇಟಿಗೆ ಕಾಯುತ್ತಿದ್ದಾರೆ. ಈ ಎಲ್ಲ ಸ್ಪರ್ಧಿಗಳು ಬಿಗ್​ಬಾಸ್​ನಲ್ಲಿ ಟಫ್​ ಕಾಂಪಿಟೀಷನ್​ ನೀಡಿದವರು. ಆದರೆ ಕೆಲವೇ ವಾರಗಳಲ್ಲಿ ಹೊರಕ್ಕೆ ಬಂದಿದ್ದಾರೆ. ಮೈಕಲ್​ ಅವರು ಅಚ್ಚ ಕನ್ನಡ ಮಾತನಾಡುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದವರು. ನಮ್ರತಾ ಗೌಡ, ವಿನಯ್​ ಅವರು ಕೂಡ ಸಕತ್​ ಹೆಸರು ಮಾಡಿದವರು. ಅದೇ ರೀತಿ ರಕ್ಷಕ್​ ಬುಲೆಟ್​ ಅವರು ಬಿಗ್​ಬಾಸ್ ಮನೆಗಿಂತಲೂ ಹೆಚ್ಚಾಗಿ ಹೊರಕ್ಕೆ ಬಂದ ಮೇಲೆ ಸದ್ದು ಮಾಡಿದವರು. ಇವರೆಲ್ಲರನ್ನೂ ಭೇಟಿಯಾಗಿ, ಇಷ್ಟದ ಪ್ರಶ್ನೆ ಕೇಳುವ ಅವಕಾಶ ಇದೀಗ ಅಭಿಮಾನಿಗಳಿಗೆ ಸಿಕ್ಕಿದೆ. ಯಾವುದೇ ಪ್ರಶ್ನೆ ಕೇಳಬಹುದು, ಜೊತೆಗೆ ತಮ್ಮ ನೆಚ್ಚಿನ ಬಿಗ್​ಬಾಸ್​ ಸ್ಪರ್ಧಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಅದರ ಸ್ಮರಣೆಯನ್ನು ಮಾಡುತ್ತಿರಬಹುದು. 

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಇರುತ್ತೇವೆ. ಪ್ರೀತಿ ಹಂಚಿಕೊಳ್ಳೋಣ. ಎಲ್ಲರ ಜೊತೆ ಮಾತನಾಡುತ್ತೇವೆ, ಪ್ರೀತಿ ಹಂಚಿಕೊಳ್ಳುತ್ತೇವೆ. ಎಲ್ಲರನ್ನೂ ಮೀಟ್​ ಮಾಡುತ್ತೇವೆ.  ಟೈಂ ರಿಸ್ಟ್ರಿಕ್ಷನ್​ ಎಲ್ಲಾ ಇಲ್ಲ. ಎಲ್ಲರಿಗೂ ಟೈಂ ಕೊಡುತ್ತೇವೆ. ಮೊದಲು ಪೂಜೆ ಸಲ್ಲಿಸಿ ಆಮೇಲೆ ಬಂದು ನಮ್ಮನ್ನು ಭೇಟಿಯಾಗಿ ಎಂದು ಈ ಸ್ಪರ್ಧಿಗಳು ಹೇಳಿದ್ದಾರೆ. ಹಾಗಿದ್ದರೆ ಇನ್ನು ಕೆಲವೇ ನಿಮಿಷಗಳು ಬಾಕಿ ಇದ್ದು, ಸ್ಥಳೀಯರು ಆದಷ್ಟು ಬೇಗ ಚಾಮುಂಡೇಶ್ವರಿ ಬೆಟ್ಟಕ್ಕೆ ಹೋದರೆ ಅಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿಗಳನ್ನು ನೋಡಿ, ಫೋಟೋ ಕ್ಲಿಕ್ಕಿಸಿಕೊಳ್ಳುವ ಅವಕಾಶ ಸಿಗಲಿದೆ. 

ಲೈವ್​ನಲ್ಲಿ ನಮ್ರತಾ ಸೌಂದರ್ಯ ಹೊಗಳಿದ ಕಾರ್ತಿಕ್​: ಸ್ನೇಹಿತ್​ನ ಕಾಲು ಹೀಗೆ ಎಳೆಯೋದಾ ಫ್ಯಾನ್ಸ್​?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!