ʼಕರಿಮಣಿʼ ಧಾರಾವಾಹಿಯಲ್ಲಿ ʼಬ್ಲ್ಯಾಕ್ ರೋಸ್ʼ ಯಾರು ಎನ್ನೋದು ರಿವೀಲ್ ಆಗಿದೆ. ಅರುಂಧತಿಯೇ ಬ್ಲ್ಯಾಕ್‌ರೋಸ್ ಅನ್ನೋದು ಪಕ್ಕಾ ಆಗಿದೆ.
'ಕರಿಮಣಿ' ಧಾರಾವಾಹಿಯ 'ಬ್ಲ್ಯಾಕ್ ರೋಸ್ʼ ಯಾರು ಎನ್ನೋದು ಯಕ್ಷ ಪ್ರಶ್ನೆ ಆಗಿತ್ತು. ಇದಕ್ಕೀಗ ಇಂದು ಉತ್ತರ ಸಿಕ್ಕಿದೆ. ಹೌದು, ತಾಯಿ ಎನ್ನುವ ಮುಖವಾಡ ಹಾಕಿಕೊಂಡಿರೋ ಅರುಂಧತಿಯೇ ಈ ಬ್ಲ್ಯಾಕ್ ರೋಸ್.
ಬ್ಲ್ಯಾಕ್‌ರೋಸ್ ಯಾರು?
ಬ್ಲ್ಯಾಕ್‌ರೋಸ್‌ನನ್ನು ನೋಡಬೇಕು ಅಂತಿದ್ಯಲ್ವಾ ನಾನೇ ಬ್ಲ್ಯಾಕ್‌ರೋಸ್ ಎಂದು ಕರ್ಣನ ಮಲತಾಯಿ ಕಿರುಚಿದ್ದಾಳೆ. ಅಷ್ಟೇ ಅಲ್ಲದೆ ಕರ್ಣನನ್ನು ಹಿಂದೆಯಿಂದ ಹೊಡೆದು ಬೀಳಿಸಿದ್ದಾಳೆ. ಬ್ಲ್ಯಾಕ್‌ರೋಸ್‌ನನ್ನು ಹಿಡಿಯೋದು ಅಷ್ಟು ಸುಲಭ ಅಲ್ಲ ಎಂದು ಅರುಂಧತಿ ಹೇಳಿದ್ದಾಳೆ. ವನಜಾ ಗಂಡ, ಅರುಂಧತಿ ಸೇರಿಕೊಂಡು ಇಷ್ಟೆಲ್ಲ ಪ್ಲ್ಯಾನ್ ಮಾಡಿದ್ದಾರೆ. ಪಾಪಮ್ಮಂಗೆ ಎಲ್ಲ ಸತ್ಯವೂ ಗೊತ್ತಿತ್ತು. ಅದನ್ನು ತಡೆಯಲು ಅವಳು ಪ್ರಯತ್ನಪಟ್ಟಾಗ, ಅರುಂಧತಿಯೇ ಬೀಳಿಸಿದ್ದಾಳೆ.
ಕರಿಮಣಿ ಧಾರಾವಾಹಿ; ಕರ್ಣನ ಗಾಳಕ್ಕೆ ಸಿಕ್ಕಿಬಿದ್ದ ಬ್ಲಾಕ್‌ರೋಸ್; ಮುಖ ರಿವೀಲ್ ಆಗೋದು ಬಾಕಿ; ಯಾರದು?
ಅರುಂಧತಿ ಮುಖವಾಡ ಕಳಚಿದರೆ?
ಅರುಂಧತಿಗೆ ಕರ್ಣನ ಕುಟುಂಬ ಕಂಡರೆ ಆಗೋದಿಲ್ಲ. ರಾಜೇಂದ್ರ ಪ್ರಸಾದ್ ಹಾಗೂ ಅನು ದಂಪತಿಯನ್ನು ದೂರ ಮಾಡಿ, ಅವನನ್ನು ಮದುವೆಯಾಗಿರುವ ಅರುಂಧತಿ ನಾಟಕ ಮಾಡಿ ಕರ್ಣನನ್ನು ಬುಟ್ಟಿಗೆ ಹಾಕಿಕೊಂಡಿದ್ದಾಳೆ. ಕರ್ಣನಿಗೆ ತನ್ನ ಸ್ವಂತ ತಾಯಿ ಮೇಲೆ ದ್ವೇಷ ಬರುವಂತೆ ಅರುಂಧತಿ ಬೆಳೆಸಿದ್ದಾಳೆ. ಇನ್ನೊಂದು ಕಡೆ ಏನೂ ಅರಿಯದ ಕರ್ಣ ತನ್ನ ಮಲತಾಯಿಯೇ ನನ್ನನ್ನು ಪ್ರೀತಿ ಮಾಡ್ತಾಳೆ ಅಂತ ನಂಬಿಕೊಂಡು ಕೂತಿದ್ದಾನೆ. ಇಷ್ಟುದಿನ ತಾಯಿ ವೇಷ ಹಾಕಿದ್ದವಳೇ ನನ್ನ ಶತ್ರು, ನನ್ನ ಮುಗಿಸೋಕೆ ಟ್ರೈ ಮಾಡಿದ್ದಳು, ಚಿತ್ರವಿಚಿತ್ರ ಹಿಂಸೆ ಕೊಟ್ಟಿದ್ದಳು ಅಂತ ಗೊತ್ತಾದರೆ ಕರ್ಣ ಏನು ಮಾಡ್ತಾನೋ ಏನೋ!
ಧಾರಾವಾಹಿ ನಟಿ ಅನುಕುಟ್ಟಿ ಗಂಡನಾಗಲು ಸಿಂಪಲ್ ಅರ್ಹತೆಗಳು ಸಾಕು; ದಪ್ಪಗಿದ್ರೂ, ಎಣ್ಣೆ ಹಾಕಿದ್ರೂ ಓಕೆ!
ಮುಂದೆ ಅರುಂಧತಿ ಏನ್ ಮಾಡ್ತಾಳೆ?
ಇನ್ನು ಕರ್ಣನಿಗೆ ಎಲ್ಲ ಸತ್ಯವನ್ನು ಹೇಳಬೇಕಿದ್ದ ರೌಡಿಯನ್ನು ಅರುಂಧತಿ ಜೀವಂತವಾಗಿ ಸುಟ್ಟಿದ್ದಾಳೆ. ಆ ರೌಡಿಯು ಕರ್ಣ, ಸಾಹಿತ್ಯಗೆ ಬ್ಲ್ಯಾಕ್‌ರೋಸ್ ಫೋಟೋ ಕಳಿಸಿದ್ದಳು. ಆದರೆ ಆ ಫೋಟೋವನ್ನು ಇನ್ನೂ ಅವರಿಬ್ಬರು ನೋಡಿರಲಿಲ್ಲ. ಈಗ ಆ ಫೋಟೋಗಳನ್ನು ನೋಡುತ್ತಾರೋ ಇನ್ನೂ ಅರುಂಧತಿ ನಾಟಕ ಮುಂದುವರೆಸುತ್ತಾಳೋ ಏನೋ! ಒಟ್ಟಿನಲ್ಲಿ ಮುಂಬರುವ ಎಪಿಸೋಡ್ ಭಾರೀ ರೋಚಕತೆಯಿಂದ ಕೂಡಿದೆ. ಅರುಂಧತಿ ಕರ್ಮಕಾಂಡ ಏನು ಅಂತ ಅನುಗೆ ಗೊತ್ತಾಗಿದೆ. ಅವಳು ಸುಮ್ಮನೆ ಇರೋದಿಲ್ಲ, ಏನಾದರೊಂದು ಮಾಡ್ತಾಳೆ ಅಂತ ಅನುಗೆ ಅನಿಸಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಕೂಡಿವೆ.
ಪಾತ್ರಧಾರಿಗಳು
ಅರುಂಧತಿ ಪಾತ್ರದಲ್ಲಿ ಅನುಷಾ ರಾವ್, ಕರ್ಣನ ಪಾತ್ರದಲ್ಲಿ ಅಶ್ವಿನ್ ಎಚ್, ಸಾಹಿತ್ಯ ಪಾತ್ರದಲ್ಲಿ ಸ್ಪಂದನಾ ಸೋಮಣ್ಣ ಅವರು ನಟಿಸುತ್ತಿದ್ದಾರೆ.