
ಕನ್ನಡತಿ ನಟಿ ರಂಜನಿ ರಾಘವನ್ ಅವರು ಮದ್ವೆಯಾಗ್ತಿದ್ದಾರಾ..? ಹೀಗೊಂಡು ಪ್ರಶ್ನೆ ಮೂಡೋ ತರ ಮಾಡಿದೆ ನಟಿಯ ಲೇಟೆಸ್ಟ್ ಇನ್‌ಸ್ಟಾಗ್ರಾಂ ಪೋಸ್ಟ್. ಹೌದು ರಂಜನಿ ಅವರ ಜಾತಕ ಶೇರ್ ಮಾಡ್ಕೊಂಡಿದ್ದಾರೆ.
ಕನ್ನಡತಿಯ ಭುವಿ ಹುಡುಗ ಹುಡುಕ್ತಿದ್ದಾರಾ..? ಜಾತಕ ಶೇರ್ ಮಾಡಿದ್ಯಾಕೆ..? ಜಾತಕದಲ್ಲೇನಿದೆ ? ರಂಜನಿ ತಮ್ಮ ಪಾಸ್‌ಪೋರ್ಟ್ ಸೈಝ್ ಫೋಟೋ ಇಟ್ಟು ಜಾತಕ ಹಂಚಿಕೊಂಡಿರೋದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಕನ್ನಡತಿ ಚೆಲುವೆಯ ಹೊಸ ಸ್ಟೈಲ್: ಮೂಗುತಿ ಹೇಗಿದೆ ಅಂತ ಕೇಳ್ತಿದ್ದಾರೆ ರಂಜನಿ
ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಉತ್ತರಾಯಣ ಪುಣ್ಯಕಾಲದಲ್ಲಿ ಸೌಮ್ಯಾ ಜಾತಕ ಬಯಲಾಗಿದೆ. ಜಾತಕದಲ್ಲಿ ಅವಳ ಗುಣಗಳು ಏನೇನ್ ಕಾಣಿಸ್ತು ಅಂತ ಕಮೆಂಟ್ ಮಾಡಿ ಎಂದು ಪೋಸ್ಟ್‌ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ ರಂಜನಿ.
ಅಂದಹಾಗೆ ಇದು ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದ ಪೋಸ್ಟರ್. ಇಂತಹ ಕ್ರಿಯೇಟಿವ್ ಪೋಸ್ಟರ್‌ಗೆ ಧನ್ಯವಾದಗಳು ಎಂದು ರಂಜನಿ ನಿರ್ದೇಶಕರನ್ನು ಟ್ಯಾಗ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.