ಜೊತೆಜೊತೆಯಲಿ ಸೀರಿಯಲ್ ನೋಡ್ತಿದ್ರೆ ನಮ್ ಯೋಚನೆಗಳೆಲ್ಲ ತಲೆ ಕೆಳಗಾದ ಹಾಗನಿಸುತ್ತೆ. ಸದ್ಯದ ಸ್ಥಿತಿ ನೋಡಿದ್ರೆ ಅನುಗೂ ಸೂರ್ಯಂಗೂ ಮದುವೆ ಮಾಡ್ತಾರಾ ಅನಿರುದ್ಧ್?
ಜೊತೆ ಜೊತೆಯಲಿ ಸೀರಿಯಲ್ ಸೂರ್ಯನ ಆಗಮನದ ನಂತರ ಬದಲಾಗ್ತಾನೇ ಹೋಗ್ತಿದೆ. ಆ ಕಡೆ ಅಭಿಮಾನಿಗಳಿಗೂ ಟೆನ್ಶನ್ ಶುರುವಾಗಿದೆ. ಸೂರ್ಯಂಗೆ ಸಾವಿರ ಜನ ಹುಡುಗೀರು ಸಿಗಬಹುದು, ಆತನಿಗೆ ವಯಸ್ಸಿದೆ, ಒಳ್ಳೆ ಬ್ಯುಸಿನೆಸ್ ಇದೆ, ಸ್ಮಾರ್ಟ್ ನೆಸ್ ಇದೆ. ಆದರೆ ಆರ್ಯವರ್ಧನ್ ಗೆ ಅನು ಮಾತ್ರನೇ ಇರೋದು ಅವರಿಬ್ಬರನ್ನು ಅಗಲಿಸಬೇಡಿ ಅಂತ ದೊಡ್ಡ ಕ್ಯಾಂಪೇನ್ ನಡೀತಿದೆ. ಇದನ್ನೆಲ್ಲ ನೋಡ್ತಿದ್ರೆ ಜೊತೆ ಜೊತೆಯಲಿ ಸೀರಿಯಲ್ ಅನ್ನು ಜನ ಯಾವ ಲೆವೆಲ್ ಗೆ ಹಚ್ಚಿಕೊಂಡಿದ್ದಾರೆ ಅನ್ನೋದು ಗೊತ್ತಾಗುತ್ತೆ. ಜನರ ಈ ಇಮೋಶನ್ ನಡುವೆಯೇ ಈ ಸೀರಿಯಲ್ ಹೆಚ್ಚೆಚ್ಚು ಜನರಿಗೆ ಕನೆಕ್ಟ್ ಆಗುತ್ತಾ ಹೋಗುತ್ತೆ. ಸದ್ಯದ ಕತೆಯಂತೂ ಸಖತ್ ರೋಚಕವಾಗಿ ಸಾಗ್ತಾ ಇದೆ. ಒಂದು ಕಡೆ ಅನು ಸಿರಿಮನೆ ಮತ್ತು ಆರ್ಯವರ್ಧನ್ ಮದುವೆ ಆಗಬೇಕು ಅಂತ ಪ್ಲಾನ್ ಮಾಡುತ್ತಿದ್ದರೆ, ಈ ಕಡೆ ಸೂರ್ಯನಿಗೂ ಅನುವನ್ನು ಮದುವೆ ಆಗೋದಿಷ್ಟ. ಆದರೆ ಆತನಿಗೆ ಈ ವಿಚಾರವಾಗಿ ಅನು ಒಪ್ಪಿಗೆ ಬೇಕು. ಆಕೆಯ ಮನಸ್ಸಲ್ಲೇನಿದೆ ಅಂತ ಗೊತ್ತಾಗದೇ ಈ ವಿಚಾರವಾಗಿ ಮುಂದುವರಿಯೋದು ಸೂರ್ಯನಿಗೆ ಇಷ್ಟ ಇಲ್ಲ.
ನಾವೊಂದು ಬಯಸಿದರೆ ವಿಧಿ ಮಾಡೋದೇ ಮತ್ತೊಂದು ಅಂತೀವಲ್ಲ. ಸದ್ಯ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಆಗ್ತಿರೋದೂ ಇದೇ. ಆರ್ಯವರ್ಧನ್ ಗೆ ತಾನು ಅನುವನ್ನು ಮದುವೆ ಆಗಬೇಕು ಅಂತ ಬಹಳ ಇಷ್ಟ ಇದ್ದರೂ ಆತ ಇಂಡೆರೆಕ್ಟ್ ಆಗಿ ಸೂರ್ಯ ಮತ್ತು ಅನು ಮದುವೆಯನ್ನು ಪ್ರೋತ್ಸಾಹಿಸುತ್ತಾನೆ. ಸೂರ್ಯನ ಜೊತೆ ಸೌಹಾರ್ದಯುತವಾಗಿ ಮಾತನಾಡೋ ಸೀನ್ ಸಖತ್ ಇಂಟೆರೆಸ್ಟಿಂಗ್ ಆಗಿದೆ. ಇಲ್ಲಿ ಆರ್ಯವರ್ಧನ್ ಒಂದು ಮಾತು ಹೇಳ್ತಾರೆ. ಮಕರ ಸಂಕ್ರಾಂತಿ ನಂತರ ಸೂರ್ಯ ತನ್ನ ದಿಕ್ಕನ್ನು ಬದಲಿಸುತ್ತಾನೆ ಅನ್ನೋ ಮಾತಿದೆ. ಈ ಸಂಕ್ರಾತಿ ನಂತರ ನಿಮ್ಮ ಆಲೋಚನೆಯ ದಿಕ್ಕೂ ಬದಲಾಗಲಿ. ನೀವು ಆ ಹುಡುಗಿಯನ್ನು ಮದುವೆ ಆಗೋ ಹಾಗಾಗಲಿ ಅಂತ ಹಾರೈಸುತ್ತಾನೆ. ಅಂದರೆ ಪರೋಕ್ಷವಾಗಿ ಅನು-ಸೂರ್ಯ ಮದುವೆಗೆ ಅಕ್ಷತೆ ಹಾಕಲಿಕ್ಕೆ ರೆಡಿ ಮಾಡ್ಕೊಳ್ತಿದ್ದಾರೆ.
ಮೂಕ ಪ್ರಾಣಿಗಳಿಗೆ ದನಿಯಾದ ಅನಿರುದ್ಧ.. ಯಾರ ಪಾಪಕ್ಕೆ ಈ ಪ್ಲಾಸ್ಟಿಕ್? ...
ಸಿನಿಮಾದಲ್ಲಾಗಿದ್ದರೆ ಹೀರೋ ಭಾರೀ ಒಳ್ಳೆಯವನಾಗಿರ್ತಾನೆ. ವಿಲನ್ ಕೆಟ್ಟವನಾಗಿರ್ತಾನೆ. ಆದರೆ ಈ ಸೀರಿಯಲ್‌ನಲ್ಲಿ ಪರಿಸ್ಥಿತಿಯೇ ವಿಲನ್ ಆಗಿದೆ. ಇಲ್ಲಿ ಸೂರ್ಯನೂ ಒಳ್ಳೆಯವನೇ, ಆರ್ಯವರ್ಧನ್ ಒಳ್ಳೆತನದ ಬಗ್ಗೆ ಮಾತೇ ಬೇಕಿಲ್ಲ. ಇನ್ನು ಇವರಿಬ್ಬರ ಆಕರ್ಷಣೆ ಕೇಂದ್ರಬಿಂದು ಅನು, ಆಕೆಯೂ ಉತ್ತಮ ಗುಣ ನಡತೆಯ ಹುಡುಗಿ. ಆದರೆ ಈ ಮೂವರ ಲೈಫೂ ಯಾರೋ ಸಂಕ್ರಾಂತಿಲಿ ಗಾಳಿಪಟ ಹಾರಿಸಿದಂತೆ ಅತ್ತಿಂದಿತ್ತ ಗಾಳಿಯಲ್ಲಿ ಓಡಾಡ್ತಾನೇ ಇದೆ. ಇದರ ಸೂತ್ರ ವಿಧಿಯ ಕೈಲಿದೆ. ಆತ ಸದ್ಯ ಇವರಿಬ್ಬರನ್ನು ಹೀಗೆಲ್ಲ ಪೇಚಿಗೆ ಸಿಲುಕಿಸಿ ಮೋಜು ನೋಡ್ತಿರೋ ಹಾಗಿದೆ.
ಮೂಕ ಪ್ರಾಣಿಗಳಿಗೆ ದನಿಯಾದ ಅನಿರುದ್ಧ.. ಯಾರ ಪಾಪಕ್ಕೆ ಈ ಪ್ಲಾಸ್ಟಿಕ್? ...
ಇನ್ನೇನು ಗಾಳಿಪಟ ಉತ್ಸವ ನಡೀಲಿಕ್ಕಿದೆ. ಅಲ್ಲಿಗೆ ಸೂರ್ಯನನ್ನ ಆರ್ಯವರ್ಧನ್ ಆಹ್ವಾನಿಸುತ್ತಾರೆ. ಸೂರ್ಯನೊಂದಿಗೆ ಆತನ ಹುಡುಗಿಯನ್ನೂ ಕರೆದುಕೊಂಡು ಬರುವಂತೆ ಹೇಳುತ್ತಾನೆ. ಅಲ್ಲಿ ಅವರಿಬ್ಬರು ತಮ್ಮ ಮನದಿಂಗಿತವನ್ನು ಪರಸ್ಪರ ಹೇಳಿಕೊಳ್ಳಬಹುದು ಅಂತ ಸೂಚಿಸುತ್ತಾನೆ. ಎಲ್ಲಕ್ಕಿಂತ ಮುಖ್ಯವಾಗಿ ಆರ್ಯವರ್ಧನ್ ಒಂದು ನಿಧಾರ ಪ್ರಕಟಿಸಿಯೇ ಬಿಡುತ್ತಾನೆ. 'ಸೂರ್ಯ ನಿಮ್ಮನ್ನು ಯಾವ ಹುಡುಗಿನೂ ಒಪ್ಪದೇ ಇರೋದಿಲ್ಲ. ಈ ಹುಡುಗೀನೂ ಒಪ್ಪೇ ಒಪ್ಪುತ್ತಾಳೆ' ಅನ್ನೋ ಮೂಲಕ ಸೂರ್ಯ ಅನುಗೆ ಮತ್ತಷ್ಟು ಹತ್ತಿರವಾಗೋ ಹಾಗೆ ಮಾಡುತ್ತಾನೆ. ಈಗ ಎದುರಿಗಿರೋದು ಗಾಳಿಪಟ ಹಾರಿಸುವ ಸುಂದರ ಕ್ಷಣ. ಈಗ ಮೂವರ ಹೃದಯದಲ್ಲೂ ಗಾಳಿಪಟ ಹಾರಾಟ ಶುರುವಾಗಿದೆ. ಆದರೆ ವಿಧಿಯ ಇಚ್ಛೆ ಏನು ಅಂತ ಯಾರೂ ಬಲ್ಲವರಿಲ್ಲ. ಗಾಳಿಪಟ ಉತ್ಸವದಲ್ಲಿ ಯಾರ ಬದುಕಿನ ಪಟ ಹರಿದು ಚಿಂದಿಯಾಗಲಿದೆ, ಯಾರ ಬದುಕಿನ ಪಟ ಇನ್ನಷ್ಟು ಎತ್ತರಕ್ಕೆ ಹಾರಲಿದೆ ಅನ್ನೋದು ಗೊತ್ತಾಗಬೇಕಿದೆ.
ಮುಂದೈತೆ ಮಾರಿಹಬ್ಬ ಅಂತೀರಾ?
ಮಜ್ನುನನ್ನು ಭೇಟಿಯಾಗಲು ಮುಂಬೈಗೆ ತೆರಳಿದ ರಶ್ಮಿಕಾ ಮಂದಣ್ಣ? ...