
ನಾಡಹಬ್ಬದ ಖುಷಿ, ಸಡಗರ ಸೀರಿಯಲ್‌ಗಳಲ್ಲೂ ಕಾಣುತ್ತಿದೆ. ಕಲರ್ಸ್ ಕನ್ನಡದ (Colors Kannada) ಸೀರಿಯಲ್‌ಗಳಲ್ಲಿ (Serials) ಒಂದು ಕಡೆ ಹಬ್ಬದ ಸಂಭ್ರಮ ಕಾಣಿಸಿದರೆ ಇನ್ನೊಂದು ಕಡೆ ಪ್ರೀತಿ (Love), ಪ್ರೊಪೋಸಲ್‌ನ (Proposal) ರಂಗೂ ಹೆಚ್ಚಾಗ್ತಿದೆ. ಮುಖ್ಯವಾಗಿ ಕನ್ನಡತಿ (Kannadathi) ಹಾಗೂ ಹೂಮಳೆ ಸೀರಿಯಲ್‌ಗಳಲ್ಲಿ ಹೀರೋ, ಹೀರೋಯಿನ್‌ಗೆ ಪ್ರೊಪೋಸ್ ಮಾಡಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಹಾಗಿದ್ರೆ ಯಾರು ಮೊದಲು ಪ್ರೊಪೋಸ್ ಮಾಡ್ತಾರೆ. ಹೀರೋನನ್ನು ಒಳಗೊಳಗೇ ಇಷ್ಟಪಡುವ, ಆದರೆ ಧೈರ್ಯವಾಗಿ ಪ್ರೀತಿ ಬಗ್ಗೆ ಮಾತಾಡುವ ಪರಿಸ್ಥಿತಿಯಲ್ಲಿಲ್ಲದ ನಾಯಕಿಯರು ಇದಕ್ಕೆ ಹೇಗೆ ಪ್ರತಿಕ್ರಿಯೆ ಕೊಡ್ತಾರೆ. ಅವರ ಈ ಪ್ರತಿಕ್ರಿಯೆಯಿಂದ ಹೀರೋಗಳ ಸ್ಥಿತಿ ಹೇಗಿರಬಹುದು ಅನ್ನೋದು ಸದ್ಯದ ಕುತೂಹಲ.
ಹರ್ಷ ಭುವಿಗೆ ಹಾಕಬೇಕಿದ್ದ ಉಂಗುರ ವರೂ ಕೈಯಲ್ಲಿ! ಹರ್ಷನ ಪ್ರಪೋಸ್ ಸಕ್ಸಸ್ ಆಗುತ್ತಾ?
ಕನ್ನಡತಿ ಸೀರಿಯಲ್‌ನಲ್ಲಿ ಕಳೆದ ಒಂದಿಷ್ಟು ದಿನದಿಂದ ಪ್ರೊಪೋಸ್ ಮಾಡುವ ಕಣ್ಣಾಮುಚ್ಚಾಲೆ ಶುರುವಾಗ್ತಿದೆ. ಹರ್ಷ ಭುವಿಯನ್ನು ಇಷ್ಟಪಡೋದಿಕ್ಕೆ ಶುರು ಮಾಡಿ ಸಾಕಷ್ಟು ಕಾಲವಾಗಿದೆ. ಹಲವಾರು ಬಾರಿ ಅವರಿಬ್ಬರ ಕಣ್ಣುಗಳಲ್ಲಿ ಪ್ರೀತಿ ಮಿನುಗಿದೆ. ತಾವಿಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡೋದು ಇಬ್ಬರಿಗೂ ಗೊತ್ತು. ಆದರೆ ಇನ್ನೊಬ್ಬರೂ ತಮ್ಮನ್ನು ಇಷ್ಟ ಪಡಬಹುದಾ ಅನ್ನುವ ಬಗ್ಗೆ ಅವರಿಗೇ ಅನುಮಾನವಿದೆ. ಮಾಲಾ ಕೆಫೆ ಸಿಇಓ (CEO) ಹರ್ಷ ಭುವಿಯಿಂದ ಸಾಕಷ್ಟು ಬದಲಾಗಿದ್ದಾನೆ. ಎಷ್ಟರ ಮಟ್ಟಿಗೆ ಆತನಲ್ಲಿ ಬದಲಾವಣೆ ಆಗಿದೆ ಅಂದರೆ, ಮೊದಲು ಏನನಸಿದರೂ ಓಪನ್ ಆಗಿ ಎಕ್ಸ್ ಪ್ರೆಸ್ ಮಾಡುತ್ತಿದ್ದ, ಯಾರು ಏನಂದುಕೊಳ್ಳುವರೋ ಅನ್ನೋದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದಿದ್ದ ಹರ್ಷ ಈಗ ಮಾತಿಗೂ ಮೊದಲು ಯೋಚಿಸುತ್ತಾನೆ. ಭುವಿಯ ಜೊತೆಗೆ ಮಾತಾಡಲೂ ಬಹಳ ಯೋಚಿಸುವ ಜೊತೆಗೆ ಏನೇನೋ ರೂಪಕಗಳಲ್ಲಿ ಮಾತನಾಡೋದನ್ನೂ ಕಲಿತಿದ್ದಾನೆ. ಬಹಳ ಕಾಲದಿಂದ ಭುವಿಯೇ ತನ್ನ ಪ್ರೀತಿ ವ್ಯಕ್ತಪಡಿಸುತ್ತಾಳೆ ಅಂತ ಕಾದ ಹರ್ಷನಿಗೆ ಅವಳಿಂದ ಆ ಥರ ಪ್ರತಿಕ್ರಿಯೆ ಬರದಿದ್ದಾಗ ತಾನೇ ಪ್ರೊಪೋಸ್ ಮಾಡೋದು ಅನಿವಾರ್ಯವಾಗುತ್ತೆ. ಕಳೆದ ಕೆಲವು ದಿನಗಳಿಂದ ಭುವಿಯ ಬರ್ತ್ ಡೇ ಜೊತೆಗೆ ತನ್ನ ಪ್ರೊಪೋಸ್‌ಗೂ ಹರ್ಷನ ಪ್ಲಾನಿಂಗ್ ನಡಿಯುತ್ತಿದೆ. ಆದರೆ ಇಲ್ಲೀವರೆಗೆ ಆತ ತಾನು ಪ್ರಿಯತಮೆಗಾಗಿ ಖರೀದಿಸಿದ ಉಂಗುರವನ್ನು ಆಕೆಗೆ ತೊಡಿಸುವ ಸಮಯ ಕೂಡಿ ಬಂದಿಲ್ಲ. ಸದ್ಯಕ್ಕೀಗ ದೇವಿಯ ಕೃಪೆ ಆತನ ಮೇಲಿದೆ. ಹರ್ಷ ಈ ಬಾರಿ ಪ್ರೊಪೋಸ್ ಮಾಡೋದಂತೂ ಗ್ಯಾರಂಟಿ. ಆದರೆ ಯಾವಾಗ ಅನ್ನೋದು ಬಹುಶಃ ಆ ಸೀರಿಯಲ್ ಡೈರೆಕ್ಟರ್ ಗೂ ಗೊತ್ತಿಲ್ಲ, ಆ ದೇವಿಗಷ್ಟೇ ಗೊತ್ತಿರೋ ಹಾಗಿದೆ, ಆ ಪಾಟಿ ಈ ಸೀನ್‌ಅನ್ನು ಎಳೆದಾಡುತ್ತಾ ಇದ್ದಾರೆ.
ಈ ಕಾಲದ ಹೆಣ್ಮಕ್ಕಳು ಹೇಗಿರಬೇಕು ಅಂತ ಹೇಳ್ತಾಳೆ ಹೀರೋಯಿನ್ ಸತ್ಯಾ!
ಇನ್ನೊಂದು ಕಡೆ ಹೂಮಳೆ ಸೀರಿಯಲ್ ನಲ್ಲಿ ಯದುವೀರ್ ಲಹರಿಗೆ ಪ್ರೊಪೋಸ್ ಮಾಡಲು ಹೊರಟ ಮೂರನೇ ಅಟೆಂಪ್ಟೂ ಫೇಲ್ ಆಗುತ್ತೆ. ಕಾರಿನ ಡಿಕ್ಕಿಯನ್ನೇ ಬೆಲೂನ್, ಲವ್ ಸಿಂಬಲ್ ಗಳಿಂದ ಅಲಂಕರಿಸಿ, ಗ್ರಾಂಡಾಗಿ ಲಹರಿಗೆ ಪ್ರೊಪೋಸ್ ಮಾಡೋ ಪ್ಲಾನ್ ಮಾಲ್‌ನ ಸೆಕ್ಯುರಿಟಿ ಚೆಕ್‌ನಿಂದ ವಿಫಲವಾಗುತ್ತೆ. ಆಮೇಲೆ ಮಗ ಇಶಾನ್ ಪ್ಲಾನ್‌ನಂತೆ ಕೇಕ್ ಮಾಡಿ, ಐ ಲವ್ ಯೂ ಅಂತ ಬರೆದು ಪ್ರೊಪೋಸ್ ಮಾಡುವ ಐಡಿಯಾವನ್ನು ವಿಧಿಯೇ ಫ್ಲಾಪ್ ಮಾಡಿ ನಕ್ಕಂಗಿದೆ. ಆದರೆ ತನ್ನ ಎಲ್ಲ ಪ್ರಯತ್ನಗಳೂ ವಿಫಲವಾದದ್ದಕ್ಕೆ ಲಹರಿ ಎದುರಿಗೇ ಬಿಕ್ಕಿ ಬಿಕ್ಕಿ ಅಳುವ ಯದುವೀರ್, ಇನ್ನೊಂದು ಪ್ರಯತ್ನ ಮಾಡಿ ಗ್ರಾಂಡ್ ಆಗಿಯೇ ಪ್ರೊಪೋಸ್ ಮಾಡುವ ಪ್ಲಾನ್‌ನಲ್ಲಿದ್ದಾನೆ. ಅದರ ಕತೆ ಏನೋ, ಅಷ್ಟರಲ್ಲೇ ಎಂಟು ತಿಂಗಳು ತುಂಬಿರುವ ಲಹರಿಗೆ ಹೆರಿಗೆಯೇ ಆಗಿ ಬಿಡುತ್ತೋ ಏನೋ ಅಂತ ಜನ ಮಾತಾಡಿಕೊಳ್ತಿದ್ದಾರೆ.
ಸೀರಿಯಲ್‌ನಲ್ಲಿ ನಾಯಕಿ ನಾಯಕಿ ಪ್ರೊಪೋಸ್ ಮಾಡುವ, ರೊಮ್ಯಾಂಟಿಕ್ (Romantic) ಆಗಿರುವ ಸನ್ನಿವೇಶಗಳಿಗೆ TRP ಹೆಚ್ಚು. ಪ್ರೇಕ್ಷಕರನ್ನು ಹೆಚ್ಚು ಕಾಲ ಸೀರಿಯಲ್‌ನಲ್ಲಿ ಹಿಡಿದಿಡೋದಕ್ಕೇ ಸೀರಿಯಲ್ ರೈಟರ್ಸ್ ಇಂಥಾ ಸೀನ್‌ಗಳ ಮೂಲಕ ಪ್ರಯತ್ನಿಸುತ್ತಿರುವಂತಿದೆ. ಆದರೆ ಒಂದು ಹಂತದ ಎಳೆದಾಟದ ನಂತರ ಪ್ರೇಕ್ಷಕರು ತಾಳ್ಮೆ ಕಳೆದುಕೊಂಡು ಸೀರಿಯಲ್‌ಗಳಿಂದಲೇ ಆಚೆ ನಡೆಯೋ ಸಾಧ್ಯತೆಯೂ ಇಲ್ಲದಿಲ್ಲ.
'ಎದೆತುಂಬಿ ಹಾಡುವೆನು' ಸ್ಪರ್ಧಿ ನಾದಿರಾ ಬಾನು ನೋವಿನ ಕತೆ ಏನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.