
ಕನ್ನಡ ಕಿರುತೆರೆಯ ಜನಪ್ರಿಯ ನಟ ಸ್ಕಂದ ಅಶೋಕ್ (Skanda Ashok) ಇದೀಗ ತಮ್ಮ ಹುಟ್ಟೂರು ಚಿಕ್ಕಮಗಳೂರಿನಲ್ಲಿ (Chikmagalur) ಸಮಯ ಕಳೆಯುತ್ತಿದ್ದಾರೆ. ಸಿನಿ ಜರ್ನಿ ಜೊತೆ ಕೃಷಿಯಲ್ಲಿ ತೋಡಗಿಸಿಕೊಂಡಿರುವ ಸ್ಕಂದ, ಸೋಷಿಯಲ್ ಮೀಡಿಯಾದಲ್ಲಿಯೂ ತಾವು ಮಾಡುವ ಕೆಲಸಗಳ ಸಣ್ಣ ಪುಟ್ಟ ವಿಡಿಯೋಗಳನ್ನು ಹಂಚಿ ಕೊಳ್ಳುತ್ತಾರೆ. ಸ್ಕಂದ ಸಿನಿಮಾ ಬಿಟ್ಟು, ಬೇರೆ ಏನು ಮಾಡುತ್ತಾರೆ ಎಂದು ಪ್ರಶ್ನಿಸುತ್ತಿದ್ದ ಅಭಿಮಾನಿಗಳಿಗೆ ಈ ವಿಡಿಯೋ ಉತ್ತರ ಕೊಟ್ಟಿವೆ...
ಹೌದು! ಚಿಕ್ಕಮಗಳೂರಿನಲ್ಲಿ ಸ್ಕಂದ ಅವರಿಗೆ ಸೇರಿರುವ ಕಾಫಿ ತೋಟಗಳಿವೆ (Coffee Estate).ಮಾಲೀಕರಾಗಿದ್ದರೂ ಅಲ್ಲಿನ ಆಳುಗಳ ಜೊತೆ ಸೇರಿ, ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಮಳೆಯೂ ಹೆಚ್ಚಾಗಿರುವ ಕಾರಣ ತಮ್ಮ ತೋಟ, ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದರಲ್ಲಿ ಅವರು ಬ್ಯುಸಿಯಾಗಿದ್ದಾರೆ. ಸ್ವತಃ ಸ್ಕಂದ ಅವರೇ ರೇನ್ ಕೋಟ್ (Rain Coat) ಧರಿಸಿ ಮರ ಕಡಿಸುತ್ತಿರುವುದು ಹಾಗೂ ಮರೆ ಮಾಡುತ್ತಿರುವ ಫೋಟೋಗಳನ್ನು ನೋಡಬಹುದು.
'ನಾನು ಹೊಸ ಮಷಿನ್ (Machine) ಖರೀದಿಸಿರುವೆ. ಮಳೆಗಾಲ ಅಲ್ವಾ? ಅದಕ್ಕೆ ತಯಾರಿ ಶುರುವಾಗಿದೆ. ಈ ರೀತಿ ಜೀವನವನ್ನೇ ನಾನು ಜೀವನ ಪೂರ್ತಿ ನಡೆಸುವುದಕ್ಕೆ ರೆಡಿ,' ಎಂದು ಬರೆದುಕೊಂಡಿದ್ದಾರೆ. ಇದು ಒಂದು ದಿನ ಮಾತ್ರವಲ್ಲ, ಮೂರ್ನಾಲ್ಕು ದಿನಗಳಿಂದಲೂ ಅವರು ಮಾಡುತ್ತಿದ್ದಾರೆ. ಮಿಸ್ಟರ್ ವುಡ್‌ಕಟರ್ (Wood cutter), ಮುಂದಿನ ಸಿನಿಮಾ ತಯಾರಿನಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಸು ಧಾರಾವಾಹಿ ಅರ್ಧಕ್ಕೇ ನಿಂತ ನಂತರ ಸ್ಕಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ (Sathya) ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಚಾಲೋಕೇಟ್ ಬಾಯ್ ಸ್ಕಂದ ಅವರನ್ನು ಪವರ್ ಬಾಯ್ ಪಾತ್ರದ ಮೂಲಕ ವೀಕ್ಷಕರಿಗೆ ಹತ್ತಿರವಾಗುವಂತೆ ತೋರಿಸಲಾಗುತ್ತಿದೆ. ಸಣ್ಣ ಪಾತ್ರವೆಂದು ಸ್ಕಂದ ಸತ್ಯ ಧಾರಾವಾಹಿಗೆ ಎಂಟ್ರಿ ಕೊಟ್ಟರೂ, ಜನರು ಅತೀವ ಮೆಚ್ಚುಗೆ ವ್ಯಕ್ತ ಪಡಿಸುತ್ತಿರುವ ಕಾರಣ ಈ ಪಾತ್ರವನ್ನು ಧಾರಾವಾಹಿ ತಂಡ ಹಾಗೆಯೇ ಉಳಿದುಕೊಂಡಿದೆ.
ಕೆಲವು ತಿಂಗಳ ಹಿಂದೆ ಸ್ಕಂದ ಪುತ್ರಿ ಒಂದು ವರ್ಷಕ್ಕೆ ಕಾಲಿಟ್ಟಿದ್ದಾರೆ. ಇದರ ಪ್ರಯುಕ್ತ ಮಾಲ್ಡೀವ್ಸ್‌ನಲ್ಲಿ (Maldives) ಫೋಟೋಶೂಟ್ ಮಾಡಿಸಿದ್ದರು. ಡಿಫರೆಂಟ್ ಥೀಮ್‌ನಲ್ಲಿ ಶೂಟ್ ಮಾಡಿರುವ ಕಾರಣ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಕಣ್ಸೆಳೆದಿವೆ. ಯಾವುದೇ ಹಬ್ಬ ಸಮಾರಂಭಗಳಿದ್ದರೂ ಪುತ್ರಿಗೆ ಡಿಫರೆಂಟ್ ಆಗಿ ಅಲಂಕಾರ ಮಾಡಿ ಫೋಟೋ ಅಪ್ಲೋಡ್ ಮಾಡುತ್ತಾರೆ. ಸ್ಕಂದ ಅವರಿಗೆ ಎಲ್ಲ ತಂದೆಯರಂತೆಯೇ ಮಗಳೆಂದರೆ ಪಂಚ ಪ್ರಾಣ. ತಮ್ಮ ಪ್ರೀತಿಯನ್ನು ವಿಧವಿಧವಾದ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.