Eco Friendly Menstrual cup ಬಗ್ಗೆ ಕಿರುತೆರೆ ನಟಿ ನಯನಾ ಮಾತು!

Suvarna News   | Asianet News
Published : Oct 07, 2021, 05:26 PM ISTUpdated : Oct 08, 2021, 08:52 AM IST
Eco Friendly Menstrual cup ಬಗ್ಗೆ ಕಿರುತೆರೆ ನಟಿ ನಯನಾ ಮಾತು!

ಸಾರಾಂಶ

ಮೆನ್ಸ್ಟ್ರುವಲ್ ಕಪ್ ಬಳಸುವುದರಿಂದ ಆಗುತ್ತಿರುವ ಬದಲಾವಣೆಗಳ ಬಗ್ಗೆ ಮಾತನಾಡಿದ ನಟಿ ನಯನಾ

 ಕಲರ್ಸ್‌ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಣಿ ರಾಮ (GiniRama) ಧಾರಾವಾಹಿ ಖ್ಯಾತಿಯ ನಟಿ ನಯನಾ ನಾಗರಾಜ್‌ (Nayana Nagaraj) ಸೋಷಿಯಲ್ ಮೀಡಿಯಾ ಮೂಲಕ ಮೊದಲ ಬಾರಿ ಪಿರಿಯಡ್ಸ್ ಹಾಗೂ ಮೆನ್ಸ್ಟ್ರುಯಲ್ ಕಪ್ ಬಗ್ಗೆ ಹಂಚಿಕೊಂಡಿದ್ದಾರೆ. 

'ಇದುವರೆಗೂ ಈ ದಿನಗಳ ಬಗ್ಗೆ ಎಂದೂ ಮಾತನಾಡಿಲ್ಲ. ಪಿರಿಯಡ್ಸ್ (Periods)!ಇದರಿಂದ ಸಂಪೂರ್ಣ ಛಿದ್ರಗೊಂಡ ಭಾವನೆ. ನನ್ನ ಸಂಪೂರ್ಣ ದೇಹ ಸತ್ತಂತೆ ಭಾಸವಾಗುತ್ತಿದೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ತುಂಬಾನೇ low ಫೀಲ್ ಆಗುತ್ತಿದೆ. ನಿರಾಶೆಯ ಭಾವ. ಊದಿಕೊಂಡ ಕಾಲು ಮತ್ತು ಬೆರಳುಗಳು. ನನ್ನ ದೇಹದ ಕೆಳಗಿನ ಭಾಗವನ್ನು ಕತ್ತರಿಸಬೇಕು ಅನಿಸುತ್ತಿದೆ. ತಲೆ ತಿರುಗುತ್ತಿದೆ. ವಾಂತಿ ಬರುತ್ತಿದೆ. ಪ್ರಯತ್ನಿಸಲು ಹೆದರಿಕೊಂಡೆ. ಒಂದು ವರ್ಷದ ನಂತರ ನಾನು ಅಂತಿಮವಾಗಿ ಮುಟ್ಟಿನ ಕಪ್ ಬಳಸಿದ್ದೇನೆ, ಎಂದು ಹೇಳಲು ಸಂತೋಷವಾಗುತ್ತಿದೆ. ವಿಚಿತ್ರ ಅನಸುತ್ತಿದೆ. ಆದರೆ ಅದ್ಭುತ ವ್ಯತ್ಯಾಸವನ್ನು ನಾನು ಖಂಡಿತವಾಗಿ ನೋಡಬಲ್ಲೆ,' ಎಂದು ನಯನಾ ಹೇಳಿಕೊಂಡಿದ್ದಾರೆ. 

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಕಡಿಮೆ ಬೆಲೆಯಲ್ಲಿ ಸ್ಯಾನಿಟರಿ ಪ್ಯಾಡ್ (Sanitary Pad) ಸಿಗಬೇಕು ಎನ್ನುವ ಚರ್ಚೆ ಎಂದೂ ಮುಗಿಯುವುದಿಲ್ಲ. ಅದೆಷ್ಟೋ ಹಳ್ಳಿಗಳಲ್ಲಿ ಕೆಲವರು ಬಟ್ಟೆ ಬಳಸುವ ಅಭ್ಯಾಸದಲ್ಲಿದ್ದಾರೆ. ಹಿಂದಿನ ಕಾಲದಲ್ಲೂ ಹಾಗೆಯೇ ಬಳಸುತ್ತಿದ್ದರು. ಆದರೆ ಕಾಲ ಬದಲಾದಂತೆ ಹೊಸ ಹೊಸ ಇನ್ವೇಂಷನ್ ಎಂಟರ್ ಆಗುತ್ತಿದೆ. ಮೆನ್ಸ್ಟ್ರುವೆಲ್‌ ಕಪ್‌ (Menstrual cup), ಟ್ಯಾಂಪೂನ್‌ನ (Tampoons) ಹೆಚ್ಚಾಗಿ ಸಿಟಿ ಜನ ಬಳಸುವುದು ಎನ್ನಬಹುದು. 

ಬೀದಿಯಲ್ಲಿ ಗಿಡಗಳನ್ನು ಮಾರುತ್ತಿದ್ದ 'ಗಿಣಿರಾಮ' ನಟಿ ನಯನ; ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟ ನಟ!

ಇತ್ತೀಚಿನ ದಿನಗಳಲ್ಲಿ ಶಾಲೆಯಲ್ಲಿ ಮೆಚುರ್‌ ಏಜ್‌ (Puberty) ಮುಟ್ಟುವ ಹೆಣ್ಣು ಮಕ್ಕಳಿಗೆ ಬ್ರೇಕ್ ಅಥವಾ ಫ್ರೀ ಪೀರಿಯಡ್‌ನಲ್ಲಿ ಪ್ಯಾಡ್ ಬಳಸುವುದು ಹೇಗೆ? ಬದಲಾಯಿಸುವುದು ಹೇಗೆ? ನಂತರ ಅದನ್ನು ಬಿಸಾಡುವುದು ಹೇಗೆ ಎಂದು ಟ್ರೈನಿಂಗ್ ನೀಡುತ್ತಿದ್ದಾರೆ. ಮೆನ್ಸ್ಟ್ರುವೆಲ್ ಕಪ್ ಹಾಗೂ ಟ್ಯಾಂಪೂನ್ ಬಳಸುವುದಕ್ಕೆ ಅನೇಕರು ಈಗಲೂ ಹೆದರುತ್ತಾರೆ. ಆದರೆ ಇನ್ನು ಬಳಸುವ ಉದ್ದೇಶ ಇಷ್ಟೆ. ಪ್ಯಾಡ್‌ಗೆ ಬಳಸಿರುವ ಪ್ಲಾಸ್ಟಿಕ್‌ ಪ್ರಕೃತಿಯಲ್ಲಿ ನಾಶವಾಗಲು ನೂರಾರು ವರ್ಷಗಳು ತೆಗೆದುಕೊಳ್ಳುತ್ತವೆ. ಆದರೆ ಮೆನ್ಸ್ಟ್ರುಯಲ್‌ ಕಪ್‌ ಒಮ್ಮೆ ಖರೀದಿಸಿದ್ದರೆ 1-2 ವರ್ಷ ಬಳಸಬಹುದು. ಬದಲಾಯಿಸುವ ಸಮಯದಲ್ಲಿ ಬಿಸಿ ನೀರಿನಿಂದ ಶುಚಿ ಮಾಡಿಕೊಳ್ಳಬೇಕು. ಇಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಆಗುತ್ತದೆ.  ಮೆನ್ಸ್ಟ್ರುಯಲ್ ಕಪ್ ಮೊದಲ ಬಾರಿ ಬಳಸುವವರು ವೈದ್ಯರ ಸಲಹೆ ತೆಗೆದುಕೊಳ್ಳಬೇಕು, ಎಂದು ಹೇಳಿದ್ದಾರೆ

ಇನ್ನು ಧಾರಾವಾಹಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಯನಾ ಕೆಲವು ದಿನಗಳ ಹಿಂದೆ ಲೇಪಾಕ್ಷಿಗೆ ಭೇಟಿ ನೀಡಿದ್ದರು. ಸ್ನೇಹಿತರ ಜೊತೆ ಬೇರೆ ಎಲ್ಲಿಗೋ ಪ್ಲಾನ್ ಮಾಡಿ, ಆನಂತರ ಇಲ್ಲಿಗೆ ಭೇಟಿ ನೀಡಿದೆ. ಬಾಗೇಪಲ್ಲಿಯಲ್ಲಿ ವಿದ್ಯಾಭ್ಯಾಸ ಮಾಡುವಾಗ ಲೇಪಾಕ್ಷಿಯಲ್ಲಿ ನೃತ್ಯ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ ಈ ನಟಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?