ಆ ಒಂದು ರಿಯಾಲಿಟಿ ಶೋ ನನ್ನ ಜೀವನದ ದಿಕ್ಕನ್ನೇ ಬದಲಿಸಿತು: ನಿರೂಪಕಿ ಅನುಶ್ರೀ

By Gowthami K  |  First Published May 15, 2024, 6:56 PM IST

ಬಿಗ್‌ ಬಾಸ್‌ ಸೀಸನ್‌ 1 ಶೋ  ನನಗೆ ಜೀವನದಲ್ಲಿ ಅವಕಾಶಗಳಿಗೆ ತೆರೆದ ಬಾಗಿಲು ಆಗಿತ್ತು ಎಂದು ಅನುಶ್ರೀ ಸಂತಸ ಹಂಚಿಕೊಂಡಿದ್ದಾರೆ. 


ಕರಾವಳಿ ಬೆಡಗಿ ಪ್ರಸಿದ್ಧ ನಿರೂಪಕಿ ಅನುಶ್ರೀ ಅವರು ಮೊದಲ ಬಾರಿಗೆ ತುಳುವಿನ ಪಾಡ್‌ ಕಾಸ್ಟ್ ಚಿಲ್ಲಿಂಗ್ ವಿಥ್ ಚಿಲಿಂಬಿ ಕಾರ್ಯಕ್ರಮದಲ್ಲಿ ಮಾತನಾಡಿದ್ದು,  ಬಿಗ್‌ ಬಾಸ್‌ ಶೋ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ದಿ ಪವರ್ ಹೌಸ್‌ ವೈನ್ಸ್ ಯೂಟ್ಯೂಬ್‌ ನಲ್ಲಿ ಸಂದರ್ಶನ ಲಭ್ಯವಿದೆ.

ನಾನು ಎಷ್ಟೇ ಕೆಲಸ ಮಾಡಿದ್ರು "ಅನುಶ್ರೀ" ಎಂಬ ಗುರತಿಸುವಿಕೆ ಸಿಕ್ಕಿರಲಿಲ್ಲ. ಈಟಿವಿ, ಕಸ್ತೂರಿ ಚಾನೆಲ್‌ ಹೀಗೆ ತುಂಬಾ ಕೆಲಸ ಮಾಡಿದ್ದರೂ ಜನ ಗುರುತಿಸಿರಲಿಲ್ಲ. ಒಂದು ಶೋ ನನ್ನ ಜೀವನಕ್ಕೆ ಅರಸಿ ಬಂತು ಅದು ನನ್ನ ಬದುಕಿನ ದಿಕ್ಕನ್ನೇ ಬದಲಿಸಿತು. ಮನೆಯ ಗೃಹಿಣಿಯರು ಯಾವಾಗ ಗುರುತಿಸಲು ಆರಂಭಿಸುತ್ತಾರೋ ಆವಾಗ ನಮ್ಮ ವ್ಯಕ್ತಿತ್ವಕ್ಕೆ ಬೆಲೆ ಸಿಕ್ಕಿದಂತಾಗುತ್ತದೆ. ನನ್ನನ್ನು ಗುರುತಿಸುವಂತೆ ಆಗಿದ್ದೇ ಬಿಗ್‌ಬಾಸ್ ಕನ್ನಡ ಸೀಸನ್ 1, ನನಗೆ ಆಗ ಅನ್ನಿಸಿತು ಈ ಶೋ ಗೆ ನನ್ನನ್ಯಾಕೆ ಕರಿತಾರೆ. ನನ್ನ ಬಗ್ಗೆ ಯಾರಿಗೂ ಗೊತ್ತಿಲ್ಲ ಅಲ್ವಾ ಅಂದುಕೊಂಡೆ. ನೀವೇ ಬೇಕು ಬನ್ನಿ ಎರಡು ವಾರಕ್ಕೆ ಬೇಕಾದ ಬಟ್ಟೆ ತೆಗೆದುಕೊಂಡು ಬನ್ನಿ ಅಂದಿದ್ದರು. ನಾನು ಅಷ್ಟೇ ತೆಗೆದುಕೊಂಡು ಹೋಗಿದ್ದೆ.

Tap to resize

Latest Videos

ಕೇವಲ 1 ರೂ ಕಡಿಮೆಯಾಗಿದ್ದಕ್ಕೆ ಕರಿಮಣಿ ಅಡವಿಟ್ಟು ಸ್ಕೂಲ್‌ ಫೀಜ್‌ ಕಟ್ಟಿದ್ದ ಅನುಶ್ರೀ ಅಮ್ಮ

ಬಿಗ್‌ ಬಾಸ್‌ ಸೀಸನ್‌ 1 ರಲ್ಲಿ ಫಿನಾಲೆಗೆ 1 ವಾರಕ್ಕೆ ಮುಂಚೆ ನಾನು ಎಲಿಮಿನೇಟ್‌ ಆದೆ. ಆ ಶೋ ನನಗೆ ಜೀವನದಲ್ಲಿ ಅವಕಾಶಗಳಿಗೆ ತೆರೆದ ಬಾಗಿಲು ಆಗಿತ್ತು. ನನ್ನನ್ನು ಜನ ತುಂಬಾ ಗುರುತಿಸುವಂತೆ ಮಾಡಿತ್ತು. ಅಲ್ಲಿಂದ ನಾನು ಯಾವುದೇ ಶೋ ಮಾಡಿದರು ಜನ ಗುರುತಿಸುವಂತೆ ಆಯ್ತು. ಅಲ್ಲಿಂದ ನನಗೆ ಸರಿಗಮಪ ಶೋ ಸಿಕ್ಕಿತು. ನಾನು ಹೋದಾಗ ಸರಿಗಮಪ 10 ಸೀಸನ್‌ ಮುಗಿದಿತ್ತು. ಸಿಂಗಿಂಗ್‌ ಗೆ ಸಂಬಂಧಿಸಿದವರೇ ನಡೆಸಿಕೊಟ್ಟಿದ್ದರು. ನಾನು ಕಾಶ್ಮೀರದಲ್ಲಿದ್ದೆ ನೆನಪಿರಲಿ ಸಿನೆಮಾದ  ಹಿರೋಯಿನ್ ವರ್ಷಾ ನನಗೆ ಕಾಲ್‌ ಮಾಡಿದ್ದರು ಸರಿಗಮಪ ಶೋ ನಿರೂಪಣೆ ಮಾಡ್ತಿಯಾ? ಇದು ಬಹುದೊಡ್ಡ ಜವಾಬ್ದಾರಿ ಅಂದರು. ನಾನು ಸರಿ ಅಂದೆ. ಆವಾಗ ಅರ್ಜುನ್ ಜನ್ಯಾ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಆ ಶೋ ಗೆ ಜಡ್ಜ್‌ ಆಗಿದ್ದರು.  ಸರಿಗಮಪ ಬಹುದೊಡ್ಡ ಶೋ, ಯಾವಾಗ ನಾನು ಆ ಶೋ ಗೆ ಬಂದೆ ಅಲ್ಲಿ ನಾನು ನೆಲೆಯಾದೆ. ತುಂಬಾ ಧೈರ್ಯ ತಂದು ಕೊಟ್ಟಿತು.

ರಾಜ್‌ ಬಿ ಶೆಟ್ಟಿ ನನ್ನ ಆಧ್ಯಾತ್ಮ ಗುರು, ರಕ್ಷಿತ್‌ ಶೆಟ್ಟಿ ಜಂಟಲ್‌ ಮ್ಯಾನ್‌: ನಿರೂಪಕಿ ಅನುಶ್ರೀ

ಜೀವನದಲ್ಲಿ ಏನೂ ಇಲ್ಲ ಎಂದಾಗ ಯಾವುತ್ತೂ ಶಾರ್ಟ್ ಕಟ್‌ ತೆಗೆದುಕೊಳ್ಳಬೇಡಿ. ಹುಟ್ಟಿಸಿದ ದೇವರು ಯಾರಿಗೂ ಮೋಸ ಮಾಡುವುದೇ ಇಲ್ಲ. ಏನಾದರೂ ಒಂದು ಒಳ್ಳೆಯದನ್ನು ಮಾಡಿಯೇ ಮಾಡುತ್ತಾನೆ. ನಂಬಿಕೆ ಇರಬೇಕಷ್ಟೇ. ದೇವರು ನಂಬಿಕೆಗೆ ಮೋಸ ಮಾಡುವುದಿಲ್ಲ. ದೇವರು ಮೂರು ಹೊತ್ತು ಊಟ ಮಾಡುವ ಶಕ್ತಿ ಕೊಟ್ಟಿರ್ತಾನೆ. ಜೀವನದಲ್ಲಿ ದುಡ್ಡು ಮುಖ್ಯ ಹಾಗಂತ ಅದೇ ಜೀವನ ಅಲ್ಲ. ಜೀವನದಲ್ಲಿ ಪ್ರೀತಿ, ಗೌರವ ಸಿಕ್ಕುವುದು ಕೂಡ ಅಷ್ಟೇ ಮುಖ್ಯ. 

 

click me!