ನನ್ನಮ್ಮ ಸೂಪರ್‌ಸ್ಟಾರ್ ಹಾಗೂ ಗಿಚ್ಚಿ ಗಿಲಿಗಿಲಿ ಶೋನಿಂದ ಜನಪ್ರಿಯರಾದವರು ಟಿವಿ ನಿರೂಪಕಿ ಜಾಹ್ನವಿ. ಪತಿಯೊಂದಿಗಿನ ವಿಚ್ಛೇದನ ಬಳಿಕ ಹೆಚ್ಚಾಗಿ ಕಿರುತೆರೆಯಲ್ಲಿಯೇ ಕಾಣಿಸಿಕೊಂಡಿರುವ ಜಾಹ್ನವಿ ಇತ್ತೀಚೆಗೆ ತಮ್ಮ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ್ದಾರೆ.
ಟಿವಿ ಚಾನೆಲ್‌ಗಳಲ್ಲಿ ನ್ಯೂಸ್ ರೀಡರ್ ಆಗಿ ಕೆಲಸ ಮಾಡ್ತಿದ್ದ ಜಾಹ್ನವಿ ಯಾವಾಗ ನನ್ನಮ್ಮ ಸೂಪರ್‌ಸ್ಟಾರ್ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟರೋ ಅಂದಿನಿಮದ ಅವರ ಜೀವನವೇ ಬದಲಾಗಿ ಹೋಗಿದೆ. ಗಂಡನಿಂದ ವಿಚ್ಛೇದನ ಪಡೆದುಕೊಂಡು ವೈಯಕ್ತಿಕ ಜೀವನದಲ್ಲಿ ಹಿನ್ನಡೆ ಕಂಡರೂ, ವೃತ್ತಿಪರ ಜೀವನದಲ್ಲಿ ಅವರು ಸಖತ್ ಮಿಂಚುತ್ತಿದ್ದಾರೆ. ಈಗ ಸವಿರುಚಿ ಎನ್ನುವ ಕಾರ್ಯಕ್ರಮ ನಡೆಸಿಕೊಡುತ್ತಿರುವ ಜಾಹ್ನವಿ, ಹೊಸ ಬ್ರೈಡಲ್ ಫೋಟೋ ಶೂಟ್ ಮೂಲಕ ಇನ್ಸ್‌ಟಾಗ್ರಾಮ್‌ನಲ್ಲಿ ಕೆಲ ದಿನ ವೈರಲ್ ಆಗಿದ್ದರು. ಗಿಚ್ಚಿ ಗಿಲಿಗಿಲಿ ಸೀಸನ್2ನಲ್ಲಿ ನಟಿಸಿದ್ದ ಜಾಹ್ನವಿ ಈ ರಿಯಾಲಿಟಿ ಶೋನಲ್ಲಿ 2ನೇ ಸ್ಥಾನ ಪಡೆದಿದ್ದರು. ಇತ್ತೀಚೆಗೆ ಖಾಸಗಿ ಟಿವಿಗೆ ನೀಡಿರುವ ಸಂದರ್ಶನವೊಂದರಲ್ಲಿ ತಮ್ಮ ಆರಂಭಿಕ ಹಾಗೂ ಕಾಲೇಜಿ ಜೀವನದ ಬಗ್ಗೆ ಮಾತನಾಡಿದ್ದಾರೆ. ಎಲ್ಲಿರಿಗೂ ಗೊತ್ತಿರುವ ಹಾಗೆ ಜಾಹ್ನವಿ ಹಾಸನದ ಸಕಲೇಶಪುರದವರು. ಕಾಲೇಜು ಓದುವ ದಿನದಲ್ಲೇ ಮದುವೆಯಾಗಿದ್ದ ಜಾಹ್ನವಿ, ಗರ್ಭಿಣಿಯಾಗಿರುವಾಗಲೇ ಪರೀಕ್ಷೆ ಬರೆದು ಗೋಲ್ಡ್ ಮೆಡಲ್ ಪಡೆದುಕೊಂಡಿದ್ದರು.
ಈಗಲೇ ನೀವು ನೋಡಲು ಇಷ್ಟು ಸುಂದರವಾಗಿದ್ದೀರೀ, ಇನ್ನು ಕಾಲೇಜು ದಿನಗಳಲ್ಲಿ ನೀವು ಹೇಗಿದ್ರಿ ಆ ದಿನಗಳು ಹೇಗಿದ್ದವು. ಆ ಟೈಮ್‌ನಲ್ಲಿ ನಿಮಗೆ ಹುಡುಗಟ ಕಾಟ ಜಾಸ್ತಿ ಇತ್ತಾ? ಎಂದು ನಿರೂಪಕ ಕೇಳುವ ಪ್ರಶ್ನೆಗೆ ಉತ್ತರಿಸಿರುವ ಜಾಹ್ನವಿ, 'ಹುಡುಗರ ಕಾಟ ಇರೋದು ತುಂಬಾನೆ ಸಹಜ. ನಮ್ಮೂರೆಲ್ಲಾ ತಾಲೂಕು. ನಮ್ಮ ಗರ್ಲ್ಸ್ ಗ್ಯಾಂಗ್ ಇತ್ತು. ನಾವಂದ್ರೆ ತುಂಬಾನೇ ಫೇಮಸ್ ಆಗಿದ್ವಿ. ಹಾಸನದಲ್ಲಿ ಬೇರೆ ಬೇರೆ ಕಾಲೇಜಿನಿಂದ ನಮ್ಮನ್ನು ಹುಡುಕಿಕೊಂಡು ಬರ್ತಾ ಇದ್ರು. ಸಕಲೇಶಪುರದಿಂದ ಹಾಸನಕ್ಕೆ ಹೋಗೋವಾಗ, ಬಾಗೆ, ಬಾಳುಪೇಟೆ, ಆಲೂರು ಹಾಗೂ ಅದಾದ ಮೇಲೆ ಹಾಸನ. ಅಲ್ಲಿಂದ ಎಲ್ಲಾ ಹುಡುಗರು ಬಸ್ ಹತ್ತುತ್ತಾ ಇದ್ರು. ಅವರೆಲ್ಲಾ ಬೇರೆ ಬೇರೆ ಕಾಲೇಜು. ಅದೆಲ್ಲಾ ಆರಂಭದಲ್ಲಿ ಕಿರಿಕಿರಿ ಅನಿಸ್ತಾ ಇತ್ತು. ಬಟ್ ನಮಗೆ ಆ ಒಂದು ಜೋಶ್, ಬಿಸಿರಕ್ತ ಅಂತೀವಲ್ಲ ಹಾಗೆ ಇತ್ತು. ಅವರೇನಾದ್ರೂ ನಮಗೆ ತುಂಬಾ ರೇಗಿಸೋದು, ನಮ್ಮನ್ನು ನೋಡಿ ಹಾಡೋದನ್ನ ಮಾಡ್ತಾ ಇದ್ರೆ ಅವರಿಗೆ ಬೈದಿರುತ್ತಿದ್ದೆ. ಮರುದಿನ ಬೆಳಗ್ಗೆ ಅವರು ನಾನು ಯಾವ ಬಸ್‌ನಲ್ಲಿ ಬರ್ತಾ ಇದ್ದೀನಿ ಅನ್ನೋದನ್ನ ಸಕಲೇಶಪುರ ಹುಡುಗರಿ ಫೋನ್ ಮಾಡಿ ತಿಳಿದುಕೊಂಡಿರ್ತಾ ಇದ್ರು. ನಾನು ಬಸ್ ಹತ್ತೀದ್ದೀನಾ, ಇಲ್ವಾ ಅನ್ನೋದನ್ನ ತಿಳಿದುಕೊಳ್ತಾ ಇದ್ರು. ಅಲ್ಲಿಂದ ಹಾಸನ ಹೋಗೋತನಕನೂ ನಮ್ಮನ್ನ ರೇಗಿಸೋದು ಮಾಡ್ತಾ ಇದ್ರು ಎಂದು ಜಾಹ್ನವಿ ಹೇಳಿದ್ದಾರೆ.
ನನಗೆ ಯಾರೂ ಬಂದು ಪ್ರಪೋಸ್ ಏನೂ ಮಾಡ್ತಾ ಇರ್ಲಿಲ್ಲ. ಎಲ್ಲೋ ಒಂದೊಂದು ಪ್ರಪೋಸಲ್‌ಗಳು ಬರ್ತಾ ಇದ್ವು. ಆದರೆ, ನನ್ನ ರೇಗಿಸೋದೇ ಜಾಸ್ತಿ ಇತ್ತು. ಕಾಲೆಳೆಯೋದು, ರೇಗಿಸೋದು ಬಹಳ ಕಾಮನ್ ಆಗಿತ್ತು. ಅದೆಲ್ಲಾ ತುಂಬಾ ಆಗಿದೆ ಎಂದು ಜಾಹ್ನವಿ ಹೇಳಿದ್ದಾರೆ.
undefined
ಯಾವ ಹೀರೋಯಿನ್‌ಗೂ ಕಮ್ಮಿ ಇಲ್ಲ ಈ ನಿರೂಪಕಿ, ನನ್ನಮ್ಮ ಸೂಪರ್ ಸ್ಟಾರ್ ಫೇಮ್ ಜಾಹ್ನವಿ
ಇದೇ ವೇಳೆ ತಮ್ಮ ಅಣ್ಣನ ಬಗ್ಗೆಯೂ ಅವರು ಮಾತನಾಡಿದ್ದು, ನನ್ನ ಅಣ್ಣ ಅಂದ್ರೆ ನನಗೆ ಬಹಳ ಭಯ. 20ನೇ ವರ್ಷಕ್ಕೆ ಅವನಿಗೆ ಜೆಇಇ ಆಗಿ ಕೆಲ್ಸ ಸಿಕ್ಕಿತ್ತು. ಡಿಫ್ಲೊಮೋ ಮುಗೀತಾ ಇದ್ದ ಹಾಗೆ ಕೆಲ್ಸ ಸಿಕ್ಕಿತ್ತು. ಆತನದ್ದು ವಯಸ್ಸಿಗೆ ಮೀರಿದ ಪ್ರಬುದ್ಧತೆ ಅಂತಾರಲ್ಲ ಅದು. ಈಗ ಅಪ್ಪ ಆಗಿದ್ದಾನೆ. ನಮ್ಮನ್ನ ತುಂಬಾನೇ ಸೇಫ್ ಹಾಗೂ ಸ್ಟ್ರಿಕ್ಟ್ ಆಗಿ ಬೆಳೆಸಿದ್ದ. ಪುಂಡರು ಮನೆಮುಂದೆ ಬಂದು ನನ್ನ ಹೆಸರು ಕೂಗಿ ಹೋಗ್ತಾ ಇದ್ದಾಗ ನನಗೆ ಬೈಯ್ತಿದ್ದ. ಆದರೆ, ಅಣ್ಣ ಇದ್ದಾನೆ ಅನ್ನೋ ಧೈರ್ಯ ನನಗೆ ಇರ್ತಾ ಇತ್ತು ಎಂದು ಜಾಹ್ನವಿ ಹೇಳಿದ್ದಾರೆ. ನನಗೆ ಪ್ರಪೋಸ್ ಮಾಡೋಕೆ ಲೆಟರ್ ಹಿಡ್ಕೊಂಡು ಬರೋರನ್ನ ನೋಡಿದ್ದೆ. ಆದರೆ, ಅವರೂ ಧೈರ್ಯ ಮಾಡಿರ್ಲಿಲ್ಲ ಎಂದಿದ್ದಾರೆ.