ಕೆಂಡ ಸಂಪಿಗೆ ಸೀರಿಯಲ್​ ಬಿಡಲು ಕಾರಣವೇನು? ಸುಮನಾ ಪಾತ್ರಧಾರಿ ನಟಿ ಕಾವ್ಯ ಹೇಳಿದ್ದೇನು?

Published : May 15, 2024, 05:39 PM IST
ಕೆಂಡ ಸಂಪಿಗೆ ಸೀರಿಯಲ್​ ಬಿಡಲು ಕಾರಣವೇನು? ಸುಮನಾ ಪಾತ್ರಧಾರಿ ನಟಿ ಕಾವ್ಯ ಹೇಳಿದ್ದೇನು?

ಸಾರಾಂಶ

ನಟಿ ಕಾವ್ಯ ಶೈವ ಕೆಂಡಸಂಪಿಗೆ ಸೀರಿಯಲ್​ ಬಿಡಲು ಕಾರಣವೇನು? ಸೋಷಿಯಲ್​ ಮೀಡಿಯಾದಲ್ಲಿ ನಟಿ ಹೇಳಿದ್ದೇನು?  

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಧಾರಾವಾಹಿಯಲ್ಲಿ ನಾಯಕಿ ಸುಮನಾ ಪಾತ್ರದಲ್ಲಿ ನಟಿಸುತ್ತಿದ್ದವರು ಕಾವ್ಯ ಶೈವ ಸೀರಿಯಲ್​ನಿಂದ ಹೊರಕ್ಕೆ ಬಂದಿದ್ದಾರೆ.  ಗೆಲುವು ಸಾಧಿಸಲು ಸಾಧ್ಯವಾಗದೇ ಅತ್ತೂ ಅತ್ತೂ ವೀಕ್ಷಕರನ್ನೇ ಸುಸ್ತು ಮಾಡಿದ್ದ ಸುಮನಾ ಪಾತ್ರ ಮಾಡುತ್ತಿದ್ದ ಕಾವ್ಯ ಶೈವ ಬದಲು ಈಗ ಬೇರೊಬ್ಬ ನಟಿಯ ಆಯ್ಕೆಯಾಗಿದೆ. ಸೀರಿಯಲ್​  ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿರುವ ಹೊತ್ತಿನಲ್ಲಿಯೇ, ಈ ರೀತಿಯ ಬದಲಾವಣೆ ಆಗಿದ್ದು,  ಪ್ರೇಕ್ಷಕರಿಗೆ ಶಾಕ್ ನೀಡಿತ್ತು. ಧಾರಾವಾಹಿ ಉತ್ತಮವಾಗಿ ವೀಕ್ಷಣೆ ಕಾಣುತ್ತಿರುವಾಗಲೇ ಸುಮನಾ ಪಾತ್ರಧಾರಿಯನ್ನು ಏಕೆ ಬದಲಾಯಿಸಲಾಯಿತು. ಅಥವಾ ಕಾವ್ಯ ಶೈವ ಧಾರಾವಾಹಿಯಿಂದ ಯಾಕೆ ಹೊರಬಂದರು ಎನ್ನುವ ಪ್ರಶ್ನೆ ಪ್ರೇಕ್ಷಕರನ್ನು ಕಾಡುತ್ತಿದೆ. ಹೀಗಾಗಿ ಸ್ವತಃ ನಟಿ ಕಾವ್ಯ ಶೈವ ಧಾರಾವಾಹಿಯಿಂದ ಹೊರ ಬಂದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.


ಇದೀಗ ವಿಡಿಯೋ ಮಾಡುವ ಮೂಲಕ ನಟಿ ಕಾವ್ಯ, ತಾವು ಸೀರಿಯಲ್​ನಿಂದ ಹೊರಬಂದಿರುವ ಕಾರಣ ಹೇಳಿದ್ದಾರೆ.  'ತುಂಬಾ ಜನ ಮೆಸೇಜ್‌ ಮಾಡಿದ್ದೀರಾ, ಎಲ್ಲರದೂ ಒಂದೇ ಪ್ರಶ್ನೆ. ನಾನು ಯಾಕೆ ಕೆಂಡಸಂಪಿಗೆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದು. ನಾನಾ ಕಾರಣದಿಂದ ನಾನು ಆ ಪ್ರಾಜೆಕ್ಟ್‌ನ ಕಂಪ್ಲೀಟ್‌ ಮಾಡೋಕೆ ಆಗಲಿಲ್ಲ. ಕ್ಷಮೆ ಇರಲಿ ಅದಕ್ಕೆ. ನಾನು ನನ್ನ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇನೆ. ಆದ್ರೂ ಆಗಲಿಲ್ಲ' ಎಂದಷ್ಟೇ ಕಾವ್ಯ ಹೇಳಿದ್ದಾರೆ. ಆದರೆ ಯಾವ ಕಾರಣಕ್ಕೆ ಎನ್ನುವ ಬಗ್ಗೆ ಸ್ಪಷ್ಟ ಉತ್ತರವನ್ನು ಅವರು ನೀಡಲಿಲ್ಲ. ಆದರೆ ನಿಮ್ಮ ಪ್ರೀತಿ ಹೀಗೆಯೇ ಮುಂದುವರೆಯಲಿ ಎಂದು ಹೇಳಿದ್ದಾರೆ. 'ಈಗ ಎಷ್ಟು ಪ್ರೀತಿ ಕೊಡುತ್ತಿದ್ದೀರೋ ಮುಂದೆನೂ ಅದಕ್ಕಿಂತ ಜಾಸ್ತಿ ಪ್ರೀತಿ ಕೊಟ್ಟು ಸಪೋರ್ಟ್ ಮಾಡಿ. ಹಾಗೆ ನನಗೆಷ್ಟು ಪ್ರೀತಿ ಕೊಟ್ಟಿದ್ದೀರೋ ಹೊಸ ಸುಮನಾ ಪಾತ್ರಕ್ಕೂ ಅಷ್ಟೇ ಪ್ರೀತಿ ಹಂಚಿ ಅಂತಾ ಕೇಳಿಕೊಳ್ಳುತ್ತೇನೆ' ಎಂದು ನಟಿ ಹೇಳಿದ್ದಾರೆ.  

ಹಾರಿಸಿ ಹಾರಿಸಿ ತೋರಿಸ್ತಿರೋದೇನು? ಸೀತಾರಾಮ ಸೀತಾಳ ರೀಲ್ಸ್​ಗೆ ಸಕತ್​ ಕಮೆಂಟ್​!

ಸುಮನಾ ಪಾತ್ರದಲ್ಲಿ ನಟಿಸುತ್ತಿದ್ದ ಕಾವ್ಯ ಶೈವ ಅವರು ಇತ್ತೀಚೆಗೆ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡುವ ಮೂಲಕ ಪಾತ್ರದಿಂದ ಹೊರ ಬರುವ ಬಗ್ಗೆ ಕ್ಲೂ ನೀಡಿದ್ದರು. ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸುಮನಾ ಪಾತ್ರವನ್ನು ನಾನು ಇಷ್ಟಪಟ್ಟು ನಿರ್ವಹಿಸುತ್ತಿದ್ದೆ. ಧನ್ಯವಾದಗಳು ಎಂದಿದ್ದರು. ಆದರೆ ಏನು ವಿಷಯ ಎಂದು ಹೇಳಿರಲಿಲ್ಲ. ಇದೀಗ ಪುನಃ ನೇರಪ್ರಸಾರದಲ್ಲಿ ಈ ವಿಷಯವನ್ನು ತಿಳಿಸಿದ್ದರೂ ನಿರ್ದಿಷ್ಟ ಕಾರಣವನ್ನು ಅವರು ನೀಡಲಿಲ್ಲ. ಅಂದಹಾಗೆ, ಸುಮನಾ ಪಾತ್ರಕ್ಕೆ ಮಧುಮಿತಾ ಆಯ್ಕೆಯಾಗಿದ್ದಾರೆ. ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೇನುಗೂಡು ಎಂಬ ಧಾರಾವಾಹಿಯಲ್ಲಿ ಪ್ರಾಚಿ ಎಂಬ ಪಾತ್ರವನ್ನು ನಿರ್ವಹಿಸಿದ್ದರು ಮಧುಮಿತಾ ಇನ್ನು ಮುಂದೆ ಸುಮನಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಇನ್ನು ಈ ಸೀರಿಯಲ್​  ಕುರಿತು ಹೇಳುವುದಾದರೆ, ತನ್ನ ಪ್ರೀತಿಯ ತಮ್ಮನ ಸಾವಿನ ಸೇಡು ತೀರಿಸಲು ಹೊರಟ ಸುಮನಾಳಿಗೆ ಸತ್ಯ ಏನು ಅನ್ನೋದು ಗೊತ್ತಾಗಿದೆ. ಆದರೆ ಯಾರಿಗೂ ಹೇಳದ ಪರಿಸ್ಥಿತಿ, ಪ್ರತಿಬಾರಿಯೂ ಗೆಲುವು ಸಾಧನದ್ದೆ ಆಗಿತ್ತು, ತಾನು ಅತ್ತೂ ಅತ್ತೂ ವೀಕ್ಷಕರನ್ನು ಅಳುವಂತೆ ಮಾಡಿದ ಸುಮನಾ ಪಾತ್ರಧಾರಿ ಕಾವ್ಯ ಶೈವ (Kavya Shaiva) ಇದೀಗ ಸತ್ಯವನ್ನು ಬಹಿರಂಗ ಮಾಡೋ ಮೊದಲೇ ಸೀರಿಯಲ್ ಪಾತ್ರದಿಂದ ಹೊರ ಬಂದಿದ್ದಾರೆ. ಸದ್ಯ ಸೀರಿಯಲ್ ನಲ್ಲಿ ಸುಮನಾ ಅವರ ಕಿಡ್ನಾಪ್ ಆಗಿದೆ, ಹಾಗಾಗಿ ಹಲವು ದಿನಗಳಿಂದ ಸುಮನಾ ಅವರ ಹುಡುಕಾಟವೇ ನಡೆಯುತ್ತಿದೆ. ಇದರ ಮಧ್ಯೆ ಸಾಧನಾ ತಾನೇ ಸುಮನಾ ಕೊಲೆ ಮಾಡಿರೋದಾಗಿ ಕೂಡ ಹೇಳಿದ್ದಾಳೆ. ಆದರೆ ಈ ಕಿಡ್ನಾಪ್ ಟ್ವಿಸ್ಟ್ ಗೆ ಕಾರಣ ಸುಮನಾ ಪಾತ್ರದ ಬದಲಾವಣೆ.  ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುವ ಕಾವ್ಯ ಅವರು ಇದೀಗ  ಫೋಟೋಶೂಟ್ ಮಾಡಿಸುತ್ತಿದ್ದಾರೆ. 

ಅತಿದೊಡ್ಡ ಮುಸ್ಲಿಂ ರಾಷ್ಟ್ರಕ್ಕೆ ಗಣಪನ ಕಾವಲು! ಜ್ವಾಲಾಮುಖಿಯ ಬದಿ ಕುಳಿತ ಕೌತುಕದ ಸ್ಟೋರಿ ಡಾ.ಬ್ರೋ ಬಾಯಲ್ಲಿ...
 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?