
ಸರಿಗಮಪ ಖ್ಯಾತಿಯ ಇಂಪನಾ ಮತ್ತು ನಟ ಅಜಿತ್ 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದಾದ ಮೇಲೆ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಸೂಪರ್ ಕಪಲ್ಸ್ ಪಟ್ಟ ಪಡೆದರು. ಇದಾದ ಮೇಲೆ ಇಂಪನಾ ಮತ್ತು ಅಜಿತ್‌ನ ಮೆಚ್ಚಿಕೊಳ್ಳುವವರು ಹೆಚ್ಚಾದರು. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಇಂಪನಾ ಮಹತ್ವದ ಪೋಸ್ಟ್ ಅಪ್ಲೋಡ್ ಮಾಡಿದ್ದಾರೆ.
'ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯಿಸಿರುವುದು ಅಂತಾರೆ ಅದು 100% ನಿಜ. ನನ್ನ ಕನಸಿನ ಹುಡುಗನನ್ನ ಮದುವೆ ಆಗಬೇಕು ಆಸೆ ಪಟ್ಟವಳು ನಾನು....ಅದರಂತೆ ಈಗ ಮದುವೆ ಆಗಿದ್ದೀನಿ. ಮದುವೆ ನಂತರ ನನ್ನ ವೃತ್ತಿ ಜೀವನಕ್ಕೆ ಸಮಸ್ಯೆ ಆಗುತ್ತಾ ಅಥವಾ ಆಗಿದ್ಯಾ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಉತ್ತರ ಕೊಡುತ್ತೀನಿ ತಡಿರೀ....ಮದುವೆ ಹೇಗೆ ನನ್ನ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರುತ್ತದೆ? ನಾನು ಕಾಲುಂಗುರ ಧರಿಸಿದ್ದೀನಿ, ನಮ್ಮ ಶೈಲಿಯ ಮಂಗಳಸೂತ್ರ ಅಂದ್ರೆ ತಾಳಿ ಧರಿಸಿದ್ದೀನಿ....ಯಾವುದೇ ಡ್ರೆಸ್ ಧರಿಸಿದರೂ ಅದನ್ನು ಅದ್ಭುತವಾಗಿ ಫ್ಲಾಂಟ್ ಮಾಡುತ್ತೀನಿ. ಕಾಲುಂಗುರ ಮತ್ತು ತಾಳಿಯನ್ನು ಅಮ್ಮ ಮತ್ತು ನನ್ನ ಸುತ್ತಲಿರುವ ಹೆಂಗಸರು ಧರಿಸಿರುವುದನ್ನು ನೋಡಿ ನಾನು ಎಂಜಾಯ್ ಮಾಡಿದ್ದೀನಿ ಅದನ್ನು ನಾನು ಧರಿಸಬೇಕು ಅನ್ನೋ ಆಸೆ ಪಟ್ಟಿದ್ದೆ' ಎಂದು ಇಂಪನಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ.
ಅಮ್ಮನಿಗೆ ಚಿನ್ನದ ಉಂಗುರ ಕೊಡಿಸಿದ ವರುಣ್ ಆರಾಧ್ಯ; ಶೋಕಿ ಕಮ್ಮಿನೇ ಆಗಿಲ್ಲ ಎಂದು ಕಾಲೆಳೆದ ನೆಟ್ಟಿಗರು!
'ಗ್ಲಾಮರ್ ಇಂಡಸ್ಟ್ರಿಯಲ್ಲಿ ಇರುವ ಹೆಣ್ಣು ಮಕ್ಕಳು ಇದನ್ನು ಧರಿಸುವುದು ಇರಲಿ ಮದುವೆ ಆಗಿದ್ದೀವಿ ಅಂತ ಹೇಳಿಕೊಳ್ಳಲು ಕೂಡ ಹಿಂಚರಿಯುತ್ತಾರೆ. ದಯವಿಟ್ಟು ಹಾಗೆ ಮಾಡಬೇಡಿ ನೀವು ತಪ್ಪು ದಾರಿಯಲ್ಲಿದ್ದೀರಿ....ಮದುವೆ ಆದ ಮೇಲೆ ಗೌರವ ಹೆಚ್ಚಾಗಿದೆ. ಅಜಿತ್ ಜಯರಾಜ್ ನನ್ನ ಜೀವನದ ಲಕ್ಕಿ ಚಾರ್ಮ್...ಹೆಮ್ಮೆಯಿಂದ ನಾನು ಮಿಸೆಸ್ ಅಜಿತ್ ಜಯರಾಮ್ ಎಂದು ಹೇಳಿಕೊಂಡು ಓಡಾಡುತ್ತೀನಿ. ನನ್ನ ಸಂಬಂಧ ಮುಚ್ಚಿಟ್ಟುಕೊಳ್ಳಲು ತಾಯಿ ಮತ್ತು ಕಾಲುಂಗುರ ತೆಗೆಯುವುದಿಲ್ಲ. ಯಾವುದೇ ಔಟ್‌ಫಿಟ್ ಇರಲಿ ತಾಳಿ ಮತ್ತು ಕಾಲುಂಗುರವನ್ನು ಖುಷಿಯಿಂದ ಧರಿಸುತ್ತೀನಿ. ನಾನು ಹೀಗೆ ಮಾಡುತ್ತಿರುವೆ ನೀವು ಕೂಡ ನನ್ನಂತೆ ಪಾಲಿಸಬೇಕು ಎಂದು ಹೇಳಲು ನಾನು ಯಾರೂ ಅಲ್ಲ ಆದರೆ ಮದುವೆ ಆಗಿದ್ದೀರಾ ಅನ್ನೋದನ್ನು ಒಪ್ಪಿಕೊಳ್ಳಿ. ನಿಜ ಹೇಳುತ್ತಿರುವೆ...ಖುಷಿ ಮತ್ತು ಹೆಮ್ಮೆಯಿಂದ ಜೀವನ ಮಾಡುತ್ತೀರಿ' ಎಂದು ಇಂಪನಾ ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ಪಾರ್ಟಿ ಬಿಟ್ಟಿದ್ದು ಯಾಕೆ?; ನಟಿ ರಮ್ಯಾ ವಿರುದ್ಧ ಕೇಸ್ ಹಾಕಲು ಮುಂದಾದ ದಿಗಂತ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.