ಕನ್ನಡದಲ್ಲಿ ರವಿಚಂದ್ರನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸಿನಿಮಾಗಳಲ್ಲಿ ನಟಿಸಿದ್ದ ಈಕೆ, 2017ರಲ್ಲಿ ವಿವಾಹವಾಗಿದ್ದರು. ಏಳು ವರ್ಷಗಳ ದಾಂಪತ್ಯದಿಂದ ಈಕೆ ಹೊರಬರಲಿದ್ದಾರೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ.
ಬೆಂಗಳೂರು (ಮೇ.28): ದಕ್ಷಿಣದ ಮತ್ತೊಂದು ಪ್ರಸಿದ್ಧ ನಟಿಯ ವಿಚ್ಛೇದನ ಸುದ್ದಿ ವೈರಲ್ ಆಗಿದೆ. ಆರ್ಯನ್ ರಾಜೇಶ್ ಅಭಿನಯದ ಸೊಂತಮ್ ಸಿನಿಮಾದ ಮೂಲಕ ಟಾಲಿವುಡ್ ಇಂಡಸ್ಟ್ರಿಗೆ ಪ್ರವೇಶಿಸಿದ್ದ ನಟಿಗೆ ಈಗಲೂ ದೊಡ್ಡ ಪ್ರಮಾಣದ ಫ್ಯಾನ್ ಫಾಲೋವಿಂಗ್ ಇದೆ. ತಮಿಳುನಾಡಿನ ಬಿಜೆಪಿ ಪಕ್ಷ ನಾಯಕಿಯೂ ಆಗಿರುವ ಈಕೆ, ಇತ್ತೀಚೆಗೆ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಮಟ್ಟದ ಪ್ರಚಾರದಲ್ಲಿ ಭಾಗಿಯಾಗಿದ್ದರು. ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲೂ ನಟಿಸಿರುವ ಈ ನಟಿಗೆ ತೆಲುಗು ಹಾಗೂ ತಮಿಳಿನಲ್ಲಿ ದೊಡ್ಡ ಪ್ರಮಾಣದ ಅಭಿಮಾನಿ ಬಳಗವಿದೆ. ತಮ್ಮ ರೊಮಾಂಟಿಕ್ ಫಿಲ್ಮ್‌ಗಳ ಮೂಲಕವೇ ಕಿಚ್ಚೆಬ್ಬಿಸುತ್ತಿದ್ದ ನಟಿ, ರವಿಚಂದ್ರನ್ ಅವರ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿದರು. ಬಳಿಕ ದರ್ಶನ್ ಅಭಿನಯದ ಸಿನಿಮಾದಲ್ಲೂ ನಟಿಸಿದ ಈ ನಟಿ, 2017ರಲ್ಲಿ ಮದುವೆಯಾದ ಬಳಿಕ ಸಿನಿಮಾದಿಂದ ದೂರವೇ ಉಳಿದಿದ್ದರು. ಎರಡು ಅವಳಿ ಗಂಡು ಮಕ್ಕಳ ತಾಯಿಯಾಗಿರುವ ಈ ನಟಿ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎಂದು ಸುದ್ದಿಯಾಗಿದೆ.
ಕನ್ನಡದಲ್ಲಿ ನೀಲಕಂಠ ಹಾಗೂ ಇಂದ್ರ ಚಿತ್ರದ ಮೂಲಕ ನಟಿಸುವ ಮೂಲಕ ಸ್ಯಾಂಡಲ್‌ವುಡ್ ಅಭಿಮಾನಿಗಳಿಗೆ ಪರಿಚಿತರಾಗಿದ್ದ ನಟಿ ನಮಿತಾ ವಿಚ್ಛೆದನ ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ತೆಲುಗು, ತಮಿಳು ಭಾಷೆಯ ಹಲವು ಚಿತ್ರಗಳಲ್ಲಿ ನಟಿಸಿದ ನಮಿತಾ. ಆ ನಂತರ ಕೆರಿಯರ್ ಕೊಂಚ ಡಲ್ ಆಯಿತು. ದಪ್ಪಗಾಗುತ್ತಿದ್ದಂತೆ ಈ ಚೆಲುವೆಗೆ ಅವಕಾಶಗಳೂ ಕಡಿಮೆಯಾದವು. ಇದರೊಂದಿಗೆ ನಮಿತಾ ಎರಡನೇ ನಾಯಕಿ ಹಾಗೂ ಸ್ಪೆಷಲ್ ಸಾಂಗ್‌ಗಳನ್ನೂ ಮಾಡಿದ್ದಾರೆ. ಮಾಡಿದ್ದಾರೆ. ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಅಭಿನಯದ ಬಿಲ್ಲಾ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿದ್ದ ನಮಿತಾ ಆ ನಂತರ ಬೇರೆ ಪ್ರಾಜೆಕ್ಟ್ ಮಾಡಿರಲಿಲ್ಲ. ಇತ್ತೀಚೆಗೆ ಸಂಗೀತ ನಿರ್ದೇಶಕ ಹಾಗೂ ನಟ ಜಿವಿ ಪ್ರಕಾಶ್ ಅವರ ವಿಚ್ಛೇದನ ತಮಿಳು ಚಿತ್ರರಂಗಕ್ಕೆ ಆಘಾತ ನೀಡಿದ ಬಳಿಕ ಈಗ ನಮಿತಾ ಅವರ ವಿಚ್ಛೇದನ ಸುದ್ದಿ ವೇಗವಾಗಿ ಹರಿದಾಡುತ್ತಿದೆ.
2017ರಲ್ಲಿ ತಮ್ಮ ಸಿನಿಮಾ ಕೆರಿಯರ್ ಹಿನ್ನಡೆಯಲ್ಲಿದ್ದಾಗ ನಟಿ ನಮಿತಾ ಹಾಗೂ ಉದ್ಯಮಿ ವೀರೆಂದ್ರ ಚೌಧರಿ ಲವ್ ಸ್ಟೋರಿ ಸುದ್ದಿ ಹರಿದಾಡಿದ್ದವು. ಕೊನೆಗೆ ಉದ್ಯಮಿಯಾಗಿದ್ದ ಇವರನ್ನೇ ನಮಿತಾ ಮದುವೆಯಾಗಿದ್ದರು. 2022ರಲ್ಲಿ ನಮಿತಾ ಅವಳಿ ಗಂಡುಮಕ್ಕಳಿಗೂ ಜನ್ಮ ನೀಡಿದ್ದರು. ಅದಾದ ಬಳಿಕ ಸಿನಿಮಾದಿಂದ ದೂರವೇ ಉಳಿದಿದ್ದ ನಮಿತಾ ರಾಜಕಾರಣಕ್ಕೆ ಇಳಿದಿದ್ದರು. ಇತ್ತೀಚಿನ ವರದಿಗಳ ಪ್ರಕಾರ ನಮಿತಾ ಹಾಗೂ ವೀರೇಂದ್ರ ಚೌಧರಿ ವಿಚ್ಛೇದನ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವು ವರದಿಗಳು ಇವರಿಬ್ಬರೂ ಶೀಘ್ರದಲ್ಲಿಯೇ ಡಿವೋರ್ಸ್ ಪಡೆದುಕೊಳ್ಳಲಿದ್ದು, ಈಗಾಗಲೇ ಬೇರೆ ಬೇರೆಯಾಗಿ ಬದುಕಲು ಆರಂಭಿಸಿದ್ದಾರೆ ಎನ್ನಲಾಗಿದೆ.
ತಮಿಳುನಾಡಿನಲ್ಲಿ ದಳಪತಿ ವಿಜಯ್ ವಿರುದ್ಧ ಸ್ಪರ್ಧೆ ಮಾಡೋಕೆ ರೆಡಿ ಎಂದ ಕ್ರೇಜಿಸ್ಟಾರ್ ಹೀರೋಯಿನ್!
ಈ ಸುದ್ದಿಗಳ ನಡುವೆ ಸ್ವತಃ ನಮಿತಾ ಇದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. “ನಾನು ಮತ್ತು ನನ್ನ ಪತಿ ಬೇರೆಯಾಗುತ್ತಿದ್ದೇವೆ ಎಂಬ ವರದಿಗಳಿವೆ... ನಾವು ವಿಚ್ಛೇದನ ಪಡೆಯುತ್ತಿದ್ದೇವೆ, ಆ ವದಂತಿಗಳನ್ನು ನೋಡಿ, ನನ್ನ ಸ್ನೇಹಿತರು ಮತ್ತು ಸಂಬಂಧಿಕರು ನಮಗೆ ಕರೆ ಮಾಡಿ ಕೇಳಿದರು. ಆದರೆ ಕೆಲವು ದಿನಗಳ ಹಿಂದೆ ನಾನು ನನ್ನ ಪತಿಯೊಂದಿಗೆ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದೇನೆ. ಆದರೆ , ಇಂತಹ ಆಧಾರ ರಹಿತ ಸುದ್ದಿಗಳು ಏಕೆ ಬರುತ್ತಿವೆಯೋ ಗೊತ್ತಿಲ್ಲ,ಕೆಲವೊಮ್ಮೆ ನನ್ನ ಪತಿ ಮತ್ತು ನಾನು ನಮ್ಮ ವಿಚ್ಛೇದನದ ಸುದ್ದಿಗೆ ನಗುತ್ತೇವೆ. ಅಲ್ಲದೆ, ಇಂತಹ ವದಂತಿಗಳಿಂದ ನಾವು ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲಿಯೇ ತಾವು ಸ್ಪಷ್ಟೀಕರಣ ನೀಡಿ ಮಾಡಿರುವ ಪೋಸ್ಟ್‌ಅನ್ನು ಅವರು ಡಿಲೀಟ್ ಕೂಡ ಮಾಡಿದ್ದಾರೆ.
ನಟಿ ನಮಿತಾ ಜೊತೆ 4ನೇ ಮದುವೆ ಆಗಿದ್ರಾ ಶರತ್ ಬಾಬು? ಪತಿ ವೀರೇಂದ್ರ ಚೌಧರಿ ಹೇಳಿದ್ದೇನು?