ತಮಾಷೆಗೆ ಹೆದರಿಸಿದ ಚಂದನ್ ಶೆಟ್ಟಿ; ಬೀಪ್‌ ಪದಗಳಿಂದ ಬೈದ ನಿವೇದಿತಾ ಗೌಡ, ವಿಡಿಯೋ ವೈರಲ್!

Published : Jul 20, 2023, 12:02 PM IST
 ತಮಾಷೆಗೆ ಹೆದರಿಸಿದ ಚಂದನ್ ಶೆಟ್ಟಿ; ಬೀಪ್‌ ಪದಗಳಿಂದ ಬೈದ ನಿವೇದಿತಾ ಗೌಡ, ವಿಡಿಯೋ ವೈರಲ್!

ಸಾರಾಂಶ

ವೈರಲ್ ಆಯ್ತು ನಿವೇದಿತಾ ಗೌಡ ಹೆದರಿಸುವ ವಿಡಿಯೋ. ಬೀಪ್‌ ಪದಗಳ ಮೇಲೆ ನೆಟ್ಟಿಗರ ಕಣ್ಣು....   

ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ಕ್ಯೂಟ್ ಬಿಗ್ ಬಾಸ್ ಕಪಲ್ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಈಗ ಸೋಷಿಯಲ್ ಮೀಡಿಯಾದಲ್ಲೂ ಹೊಸ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ದಿನಕ್ಕೊಂದು ವಿಚಾರಕ್ಕೆ ಸುದ್ದಿಯಲ್ಲಿ ಈ ಜೋಡಿ ಈಗ ತಮ್ಮನ್ನು ತಾವು ಮತ್ತೊಮ್ಮೆ ಟ್ರೋಲ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಬಂದಿರುವ ಕಾಮೆಂಟ್‌ಗಳನ್ನು ನೋಡಿಯೇ ಜನರು ನಗುತ್ತಿದ್ದಾರೆ. 

ಹೌದು! ಅತಿ ಚಿಕ್ಕ ವಯಸ್ಸಿಗೆ ನೇಮ್ ಆಂಡ್ ಫೇಮ್ ಗಳಿಸಿದ ನಿವೇದಿತಾ ಗೌಡ ವೈವಾಹಿಕ ಜೀವನ ಕೂಡ ಬೇಗ ಅರಂಭಿಸಿದರು. ಹೀಗಾಗಿ ಪುಟ್ಟ ಹುಡುಗಿ ಪುಟ್ಟ ಹುಡುಗಿ ಎನ್ನುತ್ತಿದ್ದವರು ಫೂಲ್ ಆಗಿ ನಿವಿ ಯಶಸ್ಸು ನೋಡಿ ಹೊಟ್ಟೆ ಉರಿ ಪಟ್ಟುಕೊಳ್ಳುತ್ತಿದ್ದಾರೆ. ಸಖತ್ ಬೋಲ್ಡ್‌ ಇಂಡಿಪೆಂಡೆಂಟ್ ಹಾಗೂ ಸ್ಟೈಲಿಷ್ ಕ್ವೀನ್ ಕಿರೀಟ ಪಡೆದಿರುವ ನಿವೇದಿತಾ ಗೌಡ ಈಗ ಯಾವುದಕ್ಕೆ ಹೆದರಿಕೊಳ್ಳುತ್ತಾರೆ ಅನ್ನೋದು ತಿಳಿದು ಬಂದಿದೆ. ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಚಂದನ್ ರಿವೀಲ್ ಮಾಡಿದ್ದಾರೆ.

ಚಂದನ್ ಹೆಂಡ್ತಿಗೆ ದೊಡ್ಡ ಬಟ್ಟೆ ಕೊಡ್ಸಪ್ಪ; ನಿವೇದಿತಾ ಡ್ಯಾನ್ಸ್‌ ವಿಡಿಯೋಗೆ ಹರಿದು ಬಂತು ಕಾಮೆಂಟ್ಸ್‌!

ಹಾಗೆ ಸುಮ್ಮನೆ ನಿವೇದಿತಾ ಗೌಡ ನಡೆದುಕೊಂಡು ಬರುತ್ತಿರುವಾಗ ಚಂದನ್ ಎದುರು ನಿಂತು ಜೋರಾಗಿ Baaaaaa ಎಂದು ಕೂಗುತ್ತಾರೆ ಅದಕ್ಕ ಹೆದರಿಕೊಂಡು ನಿವಿ ಬೀಪ್‌ ಪದಗಳಿಂದ ಏನೋ ಹೇಳುತ್ತಾರೆ. ವಿಡಿಯೋದಲ್ಲಿ ಚಂದನ್ ಬೀಪ್‌ ಪದಗಳಿಗೆ ಬೀಪ್ ಸೌಂಡ್ ಹಾಕಿದ್ದಾರೆ. ಇದಾದ ಚಂದನ್ ಮನೆ ಬೆಲ್ ಮಾಡುತ್ತಾರೆ ಆಗ ನಿವಿ ಓಪನ್ ಮಾಡಿ ಹೊರ ನೋಡುವಷ್ಟರಲ್ಲಿ ಮತ್ತೊಮ್ಮೆ Baaaaaa ಎಂದು ಕೂಗಿದಾತ ಗಾಬರಿಯಾಗುತ್ತಾರೆ. ಇಷ್ಟಕ್ಕೆ ಸುಮ್ಮನೆ ಬಿಟ್ಟಿಲ್ಲ ಲಿಫ್ಟ್‌ನಲ್ಲಿ ನಿವಿ ಮತ್ತು ಚಂದನ್ ಸೆಲ್ಫಿ ಕ್ಲಿಕ್ ಮಾಡಿಕೊಳ್ಳುವಾಗ ಮತ್ತೊಮ್ಮ Baaaaaa ಎಂದು ಕೂಗುತ್ತಾರೆ. ಆಗಲೂ ನಿವಿ ಹೆದರಿಕೊಳ್ಳುತ್ತಾರೆ. ಈ ವಿಡಿಯೋಗೆ ದೆವ್ವದ ಎಮೋಜಿ ಹಾಕಿ ಚಂದನ್ ಅಪ್ಲೋಡ್ ಮಾಡಿದ್ದಾರೆ. 

'ನಾನು ಇಷ್ಟು ದಿನ ಆಕ್ಟಿಂಗ್ ನೋಡಿದ್ದೀನಿ ಆದರೆ ಇಷ್ಟೊಂದು ಓವರ್ ಆಕ್ಟಿಂಗ್ ನೋಡಿಲ್ಲ, ಯಪ್ಪಾ ಚಂದನ್ ಬೀಪ್ ಸೌಂಡ್ ಹಾಕಿಲ್ಲ ಅಂದ್ರೆ ತೊಂದರೆ ಆಗುತ್ತಿತ್ತು. ಅಣ್ಣ ಈ ತಮಾಷೆಯಲ್ಲಿ ಬಿಟ್ಟು ಮೊದಲು ಮಗು ಪ್ಲ್ಯಾನ್ ಮಾಡು' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ಆಂಟಿ ತುಂಬಾ ಕ್ಯೂಟ್; ಮಗಳನ್ನೇ ಮೀರಿಸ್ತಾರೆ ನಿವೇದಿತಾ ಗೌಡ ತಾಯಿ!

ನಯಾಗರದಲ್ಲಿ ಡ್ಯಾನ್ಸ್‌:

 ನಿವೇದಿತಾ ಪತಿ ಚಂದನ್​ ಶೆಟ್ಟಿ ಜೊತೆ ಅಮೆರಿಕ ಟೂರ್​ ಎಂಜಾಯ್‌ ಮಾಡಿ ಬಂದಿದ್ದಾರೆ. ಚಂದನ್ ಮತ್ತು ನಿವಿ ನಯಾಗರ ಫಾಲ್ಸ್‌ನಲ್ಲಿ ಡ್ಯಾನ್ಸ್‌ ಮಾಡಿದ್ದಾರೆ. ಸೌಂಡ್‌ ಇಲ್ಲದೆ ಡ್ಯಾನ್ಸ್ ಮಾಡಿರುವುದು ಆನಂತರ ಸೌಂಡ್ ಸೇರಿಸಿರುವುದು, ಫಾಲ್ಸ್‌ ನೀರಿ ಮಾತ್ರ ಕೇಳಿಸುತ್ತಿತ್ತು ಎಂದು ನಿವಿ ಹೇಳಿಕೊಂಡಿದ್ದರು. ರೇನ್ ಕೋಟ್‌ ಧರಿಸಿ ಸುರಕ್ಷಿತವಾಗಿ ಇರುವ ಬದಲು ತಮಾಷೆ ಮಾಡಿರುವುದು ತಪ್ಪು ಎಂದು ಅದಕ್ಕೂ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?
Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...