ಮನೆ ಕ್ಲೀನ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡ ಬಾರ್ಬಿ ಡಾಲ್. ಎಲ್ಲರೂ ಮಾಡೋದೆ ನೀನು ಮಾಡಿರುವುದು ಎಂದು ಕಾಲೆಳೆದ ನೆಟ್ಟಿಗರು...
ಕನ್ನಡ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ಇದೀಗ ಯೂಟ್ಯೂಬ್‌ನಲ್ಲಿ ಸಖತ್ ಅಕ್ಟಿವ್ ಅಗಿದ್ದಾರೆ. ಹೇರ್ ಕೇರ್, ಸ್ಕಿನ್ ಕೇರ್, ಶಾಪಿಂಗ್, ಟ್ರಿಪ್ ಆಂಡ್ ಫ್ಯಾಮಿಲಿ ಎಂದು ವಿಡಿಯೋ ಮಾಡುವ ನಿವಿ ಮೊದಲ ಬಾರಿ ಮನೆ ಕ್ಲೀನ್ ಮಾಡುತ್ತಿರು ವಿಡಿಯೋ ಮಾಡಿದ್ದಾರೆ. ನಿವೇದಿಯಾಗೂ ಟ್ರೋಲ್‌ಗಳಿಗೂ ತುಂಬಾನೇ ಕನೆಕ್ಷನ್ ಇದೆ ಬೇರೊಬ್ಬರು ನಮ್ಮನ್ನು ಟ್ರೋಲ್ ಮಾಡುವ ಬದಲು ನಮ್ಮನ್ನು ನಾವೇ ಮೊದಲು ಟ್ರೋಲ್ ಮಾಡಿಕೊಳ್ಳಬೇಕು ಅನ್ನೋದು ಡಾಲ್ ಫಾಲೋ ಮಾಡುವ ಪಾಲಿಸಿ. ಇದೀಗ ಮನೆ ಕ್ಲೀನ್ ವಿಡಿಯೋಗೂ ಸಖತ್ ಟ್ರೋಲ್ ಅಗುತ್ತಿದ್ದಾರೆ.
'ಮನೆ ಹಾಲಿನಲ್ಲಿ ಬಟ್ಟೆ ಹರಡಿರುವೆ ಇದನ್ನು ನಾನು ಕ್ಲೀನ್ ಮಾಡಬೇಕು ಓಕೆ ಆದರೆ ಚಂದನ್‌ದೂ ನಾನೇ ಕ್ಲೀನ್ ಮಾಡಬೇಕು. ದೀಪಾವಳಿಗೆಂದು ಅಮ್ಮ ನನ್ನ ಜೊತೆ ಒಂದು ವಾರ ಮನೆಯಲ್ಲಿ ಇರಲು ಬರುತ್ತಿದ್ದಾರೆ ಅವರ ಜೊತೆ ನಾನು ಸಮಯ ಕಳೆದು ತುಂಬಾ ದಿನ ಆಯ್ತು. ನನ್ನ ಮನೆ ಇಷ್ಟೊಂದು ಗಲೀಜ್ ಆಗಿದೆ ಎಂದು ಗೊತ್ತಾದ್ದರೆ ಬೇಸರ ಮಾಡಿಕೊಳ್ಳುತ್ತಾರೆ ಅವರಿಗೆ ಎಲ್ಲಾನೂ ಫುಲ್ ನೀಟ್ ಆಗಿರಬೇಕು' ಎಂದು ನಿವೇದಿತಾ ಗೌಡ ಆರಂಭಿಸಿದ್ದಾರೆ.
'ಮನೆ ಕ್ಲೀನ್ ಮಾಡುವಾಗ ಎಷ್ಟೊಂದು ಬಟ್ಟೆಗಳು ಸಿಗುತ್ತದೆ. ಓ ಇದೆಲ್ಲಾ ನನ್ನ ಬಳಿನೂ ಇದೆ ನಾನು ಧರಿಸಿಲ್ಲ ಎಂದು ನೆನಪಾಗುತ್ತದೆ ಹೀಗಾಗಿ ಎರಡು ಮೂರು ತಿಂಗಳಿಗೊಮ್ಮೆ ಆದರೂ ಕ್ಲೀನ್ ಮಾಡಬೇಕು. ಇಷ್ಟು ದಿನ ಕ್ಲೀನ್ ಮಾಡುವಾಗ ಒಂದು ಸೋಫ ಮೇಲೆ ಏನೇ ಇದ್ದರೂ ಮತ್ತೊಂದು ಸೋಫ ಮೇಲೆ ಹಾಕುತ್ತಿದ್ದೆ ಆದರೆ ಮಮ್ಮಿ ಬರುತ್ತಿರುವುದಕ್ಕೆ ಆ ರೀತಿ ಮಾಡಲು ಆಗುವುದಿಲ್ಲ. ಮನೆ ಕ್ಲೀನ್ ಮಾಡುವುದು ನನಗೆ ತುಂಬಾನೇ ಕಷ್ಟವಾಗುತ್ತದೆ ಈ ರೀತಿ ಟಾಸ್ಕ್‌ಗಳು ಮಾಡುವುದಕ್ಕೆ ಒಂದು ಚೂರು ಇಷ್ಟವಿಲ್ಲ . ನಾನು ಕ್ಲೀನ್ ಮಾಡಿದ್ದೀನಿ ಅಂತ ಅಮ್ಮಂಗೆ ಗೊತ್ತಾದ್ದರೆ ಫುಲ್ ಖುಷಿ ಪಡುತ್ತಾರೆ.' ಎಂದು ನಿವಿ ಹೇಳಿದ್ದಾರೆ.
'ನಮ್ಮ ಅಡುಗೆ ಮನೆ ಹೇಗಿದೆ ಅಂತ ಪದಗಳಲ್ಲಿ ಹೇಳಲು ಅಗುವುದಿಲ್ಲ ಇದು ನನ್ನ ತಪ್ಪು ಅಲ್ಲ ಇದೆಲ್ಲಾ ಚಂದನ್ ಮಾಡಿರುವ ತಪ್ಪು ಏಕೆಂದರೆ ನಾನು ಒಂದು ವಾರ ಟ್ರಿಪ್ ಹೋಗಿದ್ದೆ. ಚಂದನ್ ಮಾಡಿರುವ ಕೆಲಸಕ್ಕೆ ನಾನು ತಪ್ಪು ಮಾಡಬೇಕು. ಚಂದನ್ ಖಾಲಿ ಡಬ್ಬಗಳನ್ನು ತೊಳೆಯುವುದಕ್ಕೂ ಹಾಕಲ್ಲ. ನಾವು ಮನೆಗೆ ಬಂದು ಒಂದೂವರೆ ವರ್ಷ ಆಗಿದೆ ಇದೇ ಮೊದಲು ಕಾಫಿ ಟೇಬಲ್‌ನ ಕ್ಲೀನ್ ಮಾಡುತ್ತಿರುವುದು ನನಗೆ ಕ್ಲೀನ್ ಮಾಡುವ ಅಭ್ಯಾಸನೇ ಇಲ್ಲ. ಹಬ್ಬ ಇರುವುದಕ್ಕೆ ಕ್ಲೀನ್ ಮಾಡುತ್ತಿರುವ ಹಬ್ಬ ಜೋರಾಗಿ ನಡೆಯಬೇಕು' ಎಂದಿದ್ದಾರೆ ನಿವಿ.
Niveditha Gowda ಹಲವು ವರ್ಷಗಳ ನಂತರ ದ್ವಿಚಕ್ರ ಏರಿ ಮೈಸೂರಿನಲ್ಲಿ ಶಾಪಿಂಗ್ ಮಾಡಿದ ನಿವಿ!
ವರ್ಷ ಆದ್ರೂ 1 ಸಿಲೆಂಡರ್ ಖಾಲಿ ಆಗಿಲ್ಲ:
ನಿವೇದಿತಾ ಗೌಡ ಅಡುಗೆ ಮನೆ ಸೀಕ್ರೆಟ್‌ನ ತೀರ್ಪುಗಾರ ಸೃಜನ್ ಲೋಕೇಶ್ ರಿವೀಲ್ ಮಾಡಿದ್ದಾರೆ. ಸೆಟ್‌ನಲ್ಲಿದ್ದವರು ಮಾತ್ರವಲ್ಲ ಅಪಟ್ಟ ನಿವೇದಿತಾ ಗೌಡ ಫ್ಯಾನ್‌ಗಳಿಗೂ ಶಾಕ್ ಆಗಿದ್ದಾರೆ.
'ಹಲವು ದಿನಗಳ ನಂತರ ಮತ್ತೆ ಸ್ಕಿಟ್ ಮಾಡಿರುವುದಕ್ಕೆ ಖುಷಿಯಾಗುತ್ತಿದೆ ಏಕೆಂದರೆ ನನ್ನಮ್ಮ ಸೂಪರ್ ಸ್ಟಾರ್ ಸ್ಟೇಜ್ ನೋಡಲು ಸೂಪರ್ ಆಗಿದೆ ಹೂವುಗಳ ರೀತಿ ಕಾಣಿಸುತ್ತಿದೆ. ಯಾವಾಗ ಮತ್ತೆ ಬರ್ತೀನಿ ಯಾವಾಗ ರೀ-ಹರ್ಸನಲ್ ಮಾಡ್ತೀನಿ ಅನಿಸುತ್ತಿತ್ತು. ಬಂದ್ಮೇಲೆ ಮತ್ತೆ ವಾಪಸ್ ಹೋಗಬೇಕು ಅನಿಸುತ್ತಿಲ್ಲ' ಎಂದು ನಿವೇದಿತಾ ಗೌಡ ಮಾತನಾಡುತ್ತಾರೆ. ಈ ವೇಳೆ ಸೃಜನ್ ಇಂಟ್ರೆಸ್ಟಿಂಗ್ ಸ್ಟೋರಿ ರಿವೀಲ್ ಮಾಡಿದ್ದಾರೆ.
Niveditha Gowda ನಿವೇದಿತಾ ಚಂದನ್ ಶೆಟ್ಟಿ ಲಿಪ್‌ಲಾಕ್ ವಿಡಿಯೋ ವೈರಲ್!
'ವಿ ಬಗ್ಗೆ ಒಂದು ವಿಚಾರ ಹೇಳಬೇಕು ಇದನ್ನು ಹೇಳಲು ನಾನು ಸರಿಯಾದ ಸಮಯಕ್ಕೆ ಕಾಯುತ್ತಿರುವೆ. ಮೊನ್ನೆ ಒಂದು ವಿಚಾರ ಹಂಚಿಕೊಂಡರು. ಪ್ರತಿಯೊಬ್ಬರ ಮನೆಯಲ್ಲಿ ಎಷ್ಟು ದಿನ ಗ್ಯಾಸ್ ಸಿಲೆಂಡರ್ ಬರುತ್ತೆ? ನಮ್ಮ ಮನೆಯಲ್ಲಿ ಹೆಚ್ಚಿಗೆ ಜನರು ಇರುವ ಕಾರಣ 15 ದಿನ ಬರುತ್ತೆ. ಆದರೆ ನಿವೇದಿತಾ ಗೌಡ ಹೊಸ ಮನೆಗೆ ಹೋಗಿ ಒಂದುವರೆ ವರ್ಷ ಆಯ್ತು ಮೊನ್ನೆ ಮೊದಲ ಸಿಲೆಂಡರ್ ಖಾಲಿ ಮಾಡಿದ್ದಾರಂತೆ.ಆ ಒಂದು ಸಿಲೆಂಡರ್ ಯಾಕೆ ಖಾಲಿ ಆಯ್ತು ಅಂದ್ರೆ ಮೊನ್ನೆ ಯೂಟ್ಯೂಬ್ ಚಾನೆಲ್‌ಗಾಗಿ ಜಿಲೇಬಿ ಮಾಡುವ ರೆಸಿಪಿ ಮಾಡುತ್ತಿದ್ದರು ಅದಿಕ್ಕೆ ಖಾಲಿ ಆಯ್ತು ಇಲ್ಲ ಅಂದ್ರೆ ಇನ್ನು ಹೆಚ್ಚಿಗೆ ಬರುತ್ತಿತ್ತು ಅಂದಿದ್ದಾರೆ' ಎಂದು ಸೃಜನ್ ಮಾತನಾಡಿದ್ದಾರೆ.
'ಒಂದು ವರ್ಷ ಸಿಲೆಂಡರ್ ಉಳಿಸಿಕೊಂಡಿರುವ ಇನ್ನು ಹೆಚ್ಚಿಗೆ ದಿನ ಬರುತ್ತಿತ್ತು ಆದರೆ ಮಮ್ಮಿ ಬಂದು ನಮ್ಮ ಮನೆಯಲ್ಲಿ ಅಡುಗೆ ಮಾಡಿದ್ದರು ಅದಿಕ್ಕೆ ಖಾಲಿ ಆಯ್ತು.ಶೂಟಿಂಗ್ ಅಲ್ಲಿ ಇಲ್ಲಿ ಅಂತ ಬ್ಯುಸಿಯಾಗಿರುವೆ. ಬರೀ ಯೂಟ್ಯೂಬ್ ವಿಡಿಯೋಗಾಗಿ ಅಡುಗೆ ಮಾಡುವೆ. ಆಡುಗೆ ಮಾಡಬೇಕು ಅಂತ ಮನಸ್ಸು ಮಾಡಿದ್ದಾಗ ಕಾಲಿ ಆಯ್ತು ಅಂದ್ರೆ ಆ ದೇವರೇ ಬೇಡ ನೀನು ಅಡುಗೆ ಮಾಡಬೇಡ ಆರ್ಡರ್ ಮಾಡ್ಕೊಂಡು ತಿನ್ನು ಅಂತ ಹೇಳುತ್ತಿದೆ' ಎಂದು ನಿವಿ ಹೇಳಿದ್ದಾರೆ.