Deepika Das Warning: ನನ್ನ ವೈಯಕ್ತಿಕ ಜೀವನ ನಿಮ್ಮ ಬ್ಯುಸಿನೆಸ್‌ ಅಲ್ಲ ಎಂದ ನಟಿ!

Suvarna News   | Asianet News
Published : Dec 26, 2021, 03:51 PM IST
Deepika Das Warning: ನನ್ನ ವೈಯಕ್ತಿಕ ಜೀವನ ನಿಮ್ಮ ಬ್ಯುಸಿನೆಸ್‌ ಅಲ್ಲ ಎಂದ ನಟಿ!

ಸಾರಾಂಶ

ಗರಂ ಆದ ಕನ್ನಡ ಕಿರುತೆರೆ ನಟಿ ದೀಪಿಕಾ ದಾಸ್. ಬೇಕೆಂದು ಕೆಟ್ಟ ಮೆಸೇಜ್ ಮಾಡಿದವರಿಗೆ ನಟಿಯಿಂದ ಖಡಕ್ ವಾರ್ನಿಂಗ್. ಇವೆಲ್ಲಾ ನೆಟ್ಟಿಗರಿಗೆ ಬೇಕಿತ್ತಾ?  

ಕನ್ನಡ ಕಿರುತೆರೆ ಲೋಕದಲ್ಲಿ ನಾಗಿಣಿ (Nagini) ಎಂದೇ ಗುರುತಿಸಿಕೊಂಡ ನಟಿ ದೀಪಿಕಾ ದಾಸ್ (Deepika Das) ಬಿಗ್ ಬಾಸ್ ಸೀಸನ್ (Bigg boss kannada)  7ರಲ್ಲಿ ಕಾಣಿಸಿಕೊಂಡ ನಂತರ ಬೋಲ್ಡ್ ಆ್ಯಂಡ್ ಬ್ಯೂಟಿ ಎಂದೇ ಹೆಸರು ಗಳಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ (Social Media) ಜೀವನ ಮತ್ತು ಕೆಲಸಗಳ ಬಗ್ಗೆ ಅಪ್ಡೇಟ್ ಮಾಡುವ ನಟಿ, ಇದ್ದಕ್ಕಿದ್ದಂತೆ ಗರಂ ಆಗಿರುವ ಪೋಸ್ಟ್ ಹಾಕಿ ವಾರ್ನಿಂಗ್ (Warning) ಕೊಟ್ಟಿದ್ದಾರೆ. ಅಷ್ಟಕ್ಕೂ ಏನಾಗಿದೆ? 

ದೀಪಿಕಾ ದಾಸ್ ಪೋಸ್ಟ್:
'ನನ್ನ ಅಭಿಮಾನಿಗಳು (fans) ಎಂದು Pretend ಮಾಡಿ ಬೇರೆಯವರನ್ನು harassing ಮಾಡುತ್ತಿರುವವರಿಗೆ ಈ ಮಾತುಗಳು. ಕೆಲವೊಂದು ಅಕೌಂಟ್‌ಗಳಿಗೆ (account) ನೀವು ಮೆಸೇಜ್ ಮಾಡಿರುವುದನ್ನು ನಾನು ನೋಡಿದ್ದೀನಿ, ಮೆಸೇಜ್ (Message) ಮಾತ್ರವಲ್ಲದೇ ಇ-ಮೇಲ್ ಕೂಡ ನೋಡಿದ್ದೀನಿ. ನನ್ನ ವೈಯಕ್ತಿಕ ಜೀವನದ (Personal Life) ಬಗ್ಗೆ ಮಾತನಾಡುವುದು ಅಥವಾ ಅದರ ಬಗ್ಗೆ ತೆಲೆ ಕೆಡಿಸಿಕೊಳ್ಳುವುದು ನಿಮ್ಮ ಬ್ಯುಸಿನೆಸ್ (Business) ಅಲ್ಲ. ಇಂತಹ ವ್ಯಕ್ತಿಗಳಿಂದ ಮೊದಲು ದೂರ ಇರಿ, ದಯವಿಟ್ಟು ಈ ರೀತಿ ಯಾವುದೇ ಫಸ್ ಕ್ರಿಯೇಟ್ ಮಾಡಬೇಡಿ. ನಾನು ನಿಮಗೆ ಕೊಡುತ್ತಿರುವ ವಾರ್ನಿಂಗ್ ಇದು. ನಿಜ ಹೇಳಬೇಕು ಅಂದ್ರೆ ಈ ವಿಚಾರಗಳಲ್ಲಿ ಯಾವ ಬದಲಾವಣೆಗಳು (Changes) ಆಗುವುದಿಲ್ಲ, ನೀವು ಹೇಳಿದ್ದೀರಿ ಅಂತ ನಾನು ಮಾಡಿದ್ದಕ್ಕೆ ಯಾವ ಬದಲಾವಣೆ ಆಗೋಲ್ಲ,' ಎಂದು ದೀಪಿಕಾ ಬರೆದುಕೊಂಡಿದ್ದಾರೆ. 

ಬಿಗ್ ಬಾಸ್‌ ಆದ್ಮೇಲೆ ದೀಪಿಕಾ ದಾಸ್ ಏನು ಮಾಡುತ್ತಿದ್ದಾರೆ ನೋಡಿ!

'ಪ್ರಾಮಾಣಿಕವಾಗಿರುವ ಅಭಿಮಾನಿಗಳ ಪರ ನಾನು ಸದಾ ಇರುವೆ. ನನ್ನ ವೃತ್ತಿ ಜೀವನದ (Career) ಪ್ರತಿಯೊಂದೂ ಹಂತದಲ್ಲಿಯೂ ನನಗೆ ಸಪೊರ್ಟ್ ಮಾಡಿದ್ದೀರಿ. ನನ್ನ ರಿಯಲ್ ಫ್ಯಾನ್ಸ್‌ ತುಂಬಾನೇ ಥ್ಯಾಂಕ್ಸ್. ಹಾಗೆ ಮತ್ತೊಂದು ವಿಚಾರ ಹೇಳಲು ಇಷ್ಟ ಪಡುವೆ, ಈ ವಿಚಾರಗಳ ಬಗ್ಗೆ ತಾವುಗಳು ತಲೆ ಕೆಡಿಸಿಕೊಳ್ಳುವುದು ಬೇಡ. ನಾನು ಯಾರನ್ನು ಡೇಟ್ (Date) ಮಾಡಬೇಕು, ಯಾರನ್ನು ಮದುವೆ (Marriage) ಆಗಬಾರದು ಎನ್ನುವುದರ ಬಗ್ಗೆ ನಿಮಗೆ ಚಿಂತೆ ಬೇಡ. ಮನಸ್ಸಿಗೆ ನೋವಾಗುವ ರೀತಿ ಗ್ರೂಪ್‌ಗಳಲ್ಲಿ ಮೆಸೇಜ್ (Group Message) ಮಾಡುತ್ತಿರುವವರನ್ನು ನಾನು ಗಮನಿಸಿರುವೆ. ಇದು ಒಪ್ಪಿಕೊಳ್ಳುವಂತ ವಿಚಾರ ಅಲ್ಲ. ದಯವಿಟ್ಟು ನಿಲ್ಲಿಸಿ. ನಿಮಗೆ ನನ್ನ ಮೇಲಿರುವ ಪ್ರೀತಿ ಬಗ್ಗೆ ನನಗೆ ಅರ್ಥವಾಗುತ್ತದೆ ಆದರೆ ಇದು ಬೇರೆಯವರ ಫೀಲಿಂಗ್ಸ್‌ (Feelings) ನೋವು ಆಗಬಾರದು,' ಎಂದು ದೀಪಿಕಾ ದಾಸ್ ಹೇಳಿಕೊಂಡಿದ್ದಾರೆ. 

ಬಿಗ್ ಬಾಸ್ ನಂತರ ದೀಪಿಕಾ ದಾಸ್‌ಗೆ ಫ್ಯಾನ್ಸ್‌ ಹೆಚ್ಚಾದರು. ಹೀಗಾಗಿ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದ್ದವು ಹಾಗೂ ಹಬ್ಬುತ್ತಿವೆ. ಆರಂಭದಲ್ಲಿ ಶೈನ್ ಶೆಟ್ಟಿಯನ್ನು (Shine Shetty) ಇಷ್ಟ ಪಡುತ್ತಿದ್ದಾರೆ ಎನ್ನುತ್ತಿದ್ದರು. ಆನಂತರ ನಾಗಿಣಿ ಧಾರಾವಾಹಿ ದೀಕ್ಷಿತ್ (Deekshith) ಜೊತೆ ಲಿಂಕ್ ಮಾಡಲಾಯಿತು. ಹೀಗೆ ಒಬ್ಬೊಬ್ಬರ ಜೊತೆ ಹೆಸರು ಕೇಳಿ ಬರುತ್ತಿರುವುದು ದೀಪಿಕಾ ದಾಸ್‌ಗೆ ಬೇಸರವಾಗಿದೆ. 

Breathtaking Photo: ಗ್ಲಾಮರಸ್ ಲುಕ್‌ನಲ್ಲಿ ದೀಪಿಕಾ ದಾಸ್!

ಇನ್ನೂ ಕೆಲವು ದಿನಗಳಿಂದ ದೀಪಿಕಾ ದಾಸ್ ಲೈಮ್ ಲೈಟ್‌ನಿಂದ (Lime Light) ದೂರ ಉಳಿದಿದ್ದಾರೆ. ನಾಗಿಣಿ ಮತ್ತು ಬಿಗ್ ಬಾಸ್ ನಂತರ ಯಾವ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿಲ್ಲ. ಬದಲಿಗೆ ಸೋಷಿಯಲ್ ಮೀಡಿಯಾ ಪ್ರಮೋಷನ್ ಮತ್ತು ತಮ್ಮದೇ ಯುಟ್ಯೂಬ್ ಚಾನೆಲ್‌ನಲ್ಲಿ (Youtube Channel) ಬ್ಯುಸಿಯಾಗಿದ್ದಾರೆ. ಕಾರ್‌ (Car), ಬ್ಯಾಗ್ (bag), ಅಡುಗೆ, ಬ್ಯೂಟಿ ಟಿಪ್ಸ್ (beauty Tips) ಹೀಗೆ ಅಭಿಮಾನಿಗಳಿಗೆ ಉಪಯೋಗ ಆಗುವಂತ ಮಾಹಿತಿಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಇನ್ನು ಜೀವನಕ್ಕೆ ಆದಾಯ ಬರುವಂತೆ ಅವರದ್ದೇ ಬಟ್ಟೆ ವ್ಯಾಪಾರ ಶುರು ಮಾಡಿದ್ದಾರೆ. ಬಟ್ಟೆ, ಒಡವೆ ಮತ್ತು ಹೇರ್‌ ಕ್ಲಿಪ್ ಈ ರೀತಿ ತಮ್ಮ ಸೈಟ್‌ನಲ್ಲಿ ಮಾರುತ್ತಾರೆ. ಒಟ್ಟಿನಲ್ಲಿ ದೀಪಿಕಾ ದಾಸ್ ಸಖತ್ ಗರಂ ಆಗಿರುವುದಕ್ಕೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?