ಮೂರು ತಿಂಗಳ ನಂತರ ಪತಿಗೆ ಜೊತೆಯಾದ Nitya Ram!

Suvarna News   | Asianet News
Published : Dec 26, 2021, 11:36 AM IST
ಮೂರು ತಿಂಗಳ ನಂತರ ಪತಿಗೆ ಜೊತೆಯಾದ Nitya Ram!

ಸಾರಾಂಶ

ವಿದೇಶದಿಂದ ಭಾರತಕ್ಕೆ ಆಗಮಿಸಿದ್ದ ಕನ್ನಡ ಕಿರುತೆರೆ ನಟಿ ನಿತ್ಯಾ ರಾಮ್. ಕಮ್ ಬ್ಯಾಕ್ ಬಗ್ಗೆ ಪ್ರಶ್ನೆ ಮಾಡುತ್ತಿರುವ ನೆಟ್ಟಿಗರು.   

ಕನ್ನಡ ಚಿತ್ರರಂಗದಲ್ಲಿ (Sandalwood) ಅಕ್ಕ-ತಂಗಿ ಒಟ್ಟಿಗೆ ಗುರುತಿಸಿಕೊಳ್ಳುವುದು ಸ್ವಲ್ಪ ಕಡಿಮೆಯೇ. ಒಬ್ಬರು ಕ್ಲಿಕ್ ಆದರೆ ಮತ್ತೊಬ್ಬರು ಕ್ಲಿಕ್ ಆಗಬೇಕು ಅಂದ್ರೆ ಹರ ಸಾಹಸ ಮಾಡಬೇಕು. ಆದರೆ ಈ ಅಕ್ಕ ತಂಗಿ (Sisters) ಜೋಡಿ ತುಂಬಾನೇ ಸ್ಪೆಷಲ್. ಬೇರೆ ಬೇರೆ ಸಮಯದಲ್ಲಿ ತಮ್ಮ ಬಣ್ಣದ ಜರ್ನಿ ಆರಂಭಿಸಿದ್ದರೂ, ಒಂದೇ ಶೈಲಿಯನ್ನು ಫಾಲೋ ಮಾಡುತ್ತಿದ್ದಾರೆ. 

ಹೌದು! ಅವರೇ ನಟಿ ನಿತ್ಯಾ ರಾಮ್ (Nithya Ram) ಮತ್ತು ರಚಿತಾ ರಾಮ್ (Rachita Ram). ಬಾಲ್ಯದಿಂದಲೂ ಇಬ್ಬರೂ ಭರತನಾಟ್ಯ (Bharatanatyam Dancers) ಕಲಾವಿದರು. ಸಣ್ಣ ಪುಟ್ಟ ಸ್ಟೇಜ್ ಪರ್ಫಾರ್ಮೆನ್ಸ್‌ (Stage Performance) ನೀಡುತ್ತಿದ್ದವರು. ಮೊದಲು ಅಕ್ಕ ನಿತ್ಯಾ ರಾಮ್ ಕಿರುತೆರೆಗೆ ಎಂಟ್ರಿ ಕೊಟ್ಟು, ದೊಡ್ಡ ಹೆಸರು ಮಾಡಿದ ನಂತರ ಬೆಳ್ಳಿತೆರೆಗೆ ಕಾಲಿಟ್ಟರು. ಸಹೋದರಿ ರಚಿತಾ ರಾಮ್ ಕಿರುತೆರೆಗೆ ಎಂಟ್ರಿ ಕೊಟ್ಟು ಒಂದೇ ಧಾರಾವಾಹಿ (Kannada Serial) ನಂತರ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡ್ಡರು. ನಿತ್ಯಾಗೆ ಸಿನಿಮಾ ಅಷ್ಟು ಕೈ ಹಿಡಿಯಲಿಲ್ಲ. ಹೀಗಾಗಿ ಮತ್ತೆ ಕನ್ನಡ ಮತ್ತು ತೆಲುಗು ಧಾರಾವಾಹಿಗಳ (Telugu Serials) ಕಡೆ ಮುಖ ಮಾಡಿದ್ದರು. ಸಿನಿಮಾ ಕ್ಷೇತ್ರದಲ್ಲಿ ಡಿಂಪಲ್ ಕ್ವೀನ್ (Dimple Queen) ಆಗಿ ಗುರುತಿಸಿಕೊಂಡ ರಚ್ಚು ಕೂಡ ಜಡ್ಜ್‌ ಆಗಿ ಮತ್ತೆ ಕಿರುತೆರೆಗೆ ಬಂದರು. ಒಟ್ಟಿನಲ್ಲಿ ಅಕ್ಕ-ತಂಗಿ ವೀಕ್ಷಕರ ಡಿಮ್ಯಾಂಡ್‌ಗೆ ತಕ್ಕಂತೆ ತಮ್ಮ ತಮ್ಮ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 

2019ರಲ್ಲಿ ಎರಡನೇ ಸಲ ದಾಂಪತ್ಯ ಜೀವನಕ್ಕೆ (Marriage) ಕಾಲಿಟ್ಟ ನಟಿ ನಿತ್ಯಾ ರಾಮ್ ಪತಿ ಜೊತೆ ವಿದೇಶದಲ್ಲಿ ನೆಲೆಸಿದ್ದಾರೆ. ಅತಿ ಹೆಚ್ಚು ಟಿಆರ್‌ಪಿ ಗಳಿಸುತ್ತಿದ್ದ ಧಾರಾವಾಹಿಗಳಿಗೆ ಗುಡ್ ಬೈ ಹೇಳಿ, ಆಸ್ಟ್ರೇಲಿಯಾ (Australia) ಕಡೆ ಮುಖ ಮಾಡಿದ್ದರು. ಅವರು ವಿದೇಶಕ್ಕೆ ತೆರಳುತ್ತಿದ್ದಂತೆ, ಕೊರೋನಾ ಸೋಂಕು (Covid19) ಹೆಚ್ಚಾಗಿತ್ತು. ಈ ವೇಳೆ ತಾವು ಹಂಚಿಕೊಂಡ ಕಿಸ್ ಫೋಟೋ ಸಖತ್ ಸುದ್ದಿ ಮಾಡಿತ್ತು. ಕೊರೋನಾ ಇರುವುದಿಂದ ಮಾಸ್ಕ್‌ ಧರಿಸಿ ರೊಮ್ಯಾನ್ಸ್‌ responsibaly ಎಂದು ಬರೆದುಕೊಂಡಿದ್ದರು. ಇದೇನು ಮದುವೆ ಆದ ನಂತರ ನೀವು ಇಷ್ಟೊಂದು ಬೋಲ್ಡ್ ಆಗಿದ್ದೀರಾ, ಎಂದು ಕೂಡ ಅನೇಕರು ಪ್ರಶ್ನೆ ಮಾಡಿದ್ದರು. ಇದಾದ ನಂತರ ಅದೆಷ್ಟೋ ತಿಂಗಳ ಕಾಲ ಯಾರಿಗೂ ಕಾಣಿಸಿಕೊಳ್ಳಲಿಲ್ಲ, ಎಲ್ಲಿ ಹೋದರು ಎಂದು ಪ್ರಶ್ನೆ ಕೂಡ ಮೂಡಿತ್ತು.

ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ರಚಿತಾ ರಾಮ್ ಅಕ್ಕ!

ಈ ವರ್ಷ ಅಕ್ಟೋಬರ್ (October) ತಿಂಗಳಲ್ಲಿ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ (Shri Ghati Subrahmanya Temple) ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟರು. ವಿದೇಶದಿಂದ ನಿತ್ಯಾ ಭಾರತಕ್ಕೆ ಆಗಮಿಸಿರುವುದರ ಬಗ್ಗೆ ಸಹೋದರಿ ರಚಿತಾ ರಾಮ್ ಸೋಷಿಯಲ್ ಮೀಡಿಯಾದಲ್ಲಿ (Social Media) ರಿವೀಲ್ ಮಾಡಿದ್ದರು. Why this kolaveridi ಹಾಡಿಗೆ ಇಬ್ಬರೂ ಮುಖದ ಎಕ್ಸಪ್ರೆಷನ್‌ (Facial Expression) ನೀಡುವ ಮೂಲಕ ಮತ್ತೆ ಒಟ್ಟಾಗಿರುವ ಬಗ್ಗೆ ರಿವೀಲ್ ಮಾಡಿದ್ದರು. ಆನಂತರ ದಿನಗಳಲ್ಲಿ ನಿತ್ಯಾ ಇಲ್ಲೇ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದರು. ಪತಿ ಗೌತಮ್ ಮಾತ್ರ ವಿದೇಶದಲ್ಲಿದ್ದರು. 

ಅಭಿಮಾನಿಗಳು ಬೇಡಿದರೂ ವಿದೇಶದಲ್ಲಿರುವ ರಚಿತಾ ರಾಮ್‌ ಸಹೋದರಿ ನಿತ್ಯಾ ರಾಮ್ ಪ್ರತಿಕ್ರಿಯಿಸುತ್ತಿಲ್ಲ ಯಾಕೆ?

ಕೆಲವು ದಿನಗಳಿಂದ ಗೌತಮ್ ಸಹ ತವರು ಬೆಂಗಳೂರಿಗೆ (Bengaluru) ಆಗಮಿಸಿದ್ದರು. ಅವರು ಬರುತ್ತಿದ್ದಂತೆ, ರಚಿತಾ ರಾಮ್ ಓಡಿ ಹೋಗಿ ತಬ್ಬಿಕೊಂಡಿದ್ದಾರೆ. ಈ ವಿಡಿಯೋವನ್ನು ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಡಿಸೆಂಬರ್ 7ರಂದು ತಮ್ಮ ವಿವಾಹ ವಾರ್ಷಿಕೋತ್ಸವಕ್ಕೆ (Wedding Anniversary) ಅಭಿಮಾನಿಗಳ  ಮೆಸೇಜ್‌ಗೆ ಪ್ರತಿಕ್ರಿಯೆ ನೀಡಿರುವ ನಿತ್ಯಾ ರಾಮ್ 'Gratitude ಫೀಲ್ ಆಗುತ್ತಿದೆ ಪ್ರತಿಯೊಬ್ಬರು ನಮಗೆ ಶುಭ ಹಾರೈಸಿರುವ ಮೆಸೇಜ್ ಓದುವುದಕ್ಕೆ.ಥ್ಯಾಂಕ್ಯು,' ಎಂದು ಕಡಲ ತೀರವನ್ನು ನೋಡುತ್ತಿರುವ ಫೋಟೋ ಹಂಚಿಕೊಂಡಿದ್ದರು. 

ಇದಾದ ನಂತರ ನಿತ್ಯಾ ಮತ್ತೊಂದು ವಿಡಿಯೋ ಶೇರ್ ಮಾಡಿದ್ದರು. ನಿತ್ಯಾ ಕುಳಿತ್ತಿದ್ದರೆ, ಅವರನ್ನು ತಬ್ಬಿಕೊಂಡು ಪತಿ ಗೌತಮ್ ಮತ್ತು ಅವರ ಮಡಿಲಿನಲ್ಲಿ ರಚಿತಾ ರಾಮ್ ಮಲಗಿರುವ ವಿಡಿಯೋ ಹಂಚಿಕೊಂಡಿದ್ದರು. ಇವರಿಬ್ಬರೂ ಸೂಪರ್ ಎಂದು ರಚಿತಾ ರಾಮ್ ತೋರಿಸುತ್ತಿದ್ದರೆ, ನಿತ್ಯಾ ಪತಿ ಮತ್ತು ತಂಗಿಯನ್ನು ಮುದ್ದು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಮೂರು ತಿಂಗಳ ನಂತರ ಪತಿಯನ್ನು ಭೇಟಿ ಮಾಡುತ್ತಿರುವುದಕ್ಕೆ ಸಂತೋಷ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?