2 ವರ್ಷ ಕೈ ಕಟ್ಟಾಕಿದ್ದಂತೆ ಆಗಿತ್ತು, ಯಾರಾದರೂ ನನ್ನನ್ನು ಸೇವ್ ಮಾಡಲಿ ಎಂದು ಕಾಯುತ್ತಿದ್ದೆ: ಚೈತ್ರಾ ವಾಸುದೇವನ್ ಕಣ್ಣೀರು

By Vaishnavi Chandrashekar  |  First Published Jul 20, 2024, 12:42 PM IST

ಡಿವೋರ್ಸ್ ಪಡೆಯಲು ಕಾರಣವೇನು? ಕುಟುಂಬ ಈ ಸಂದರ್ಭವನ್ನು ಹೇಗೆ ಎದುರಿಸಿತ್ತು? ಮೌನ ಮುರಿದ ಚೈತ್ರಾ ವಾಸುದೇವನ್.....


ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಚೈತ್ರಾ ವಾಸುದೇವ್ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ತಮ್ಮ ಡಿವೋರ್ಸ್‌ ವಿಚಾರವನ್ನು ಅನೌನ್ಸ್ ಮಾಡಿದ್ದರು. ಸುಮಾರು 5 ವರ್ಷಗಳ ಕಾಲ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಲು ಕಾರಣವೇನು?

'ಸಾಂಪ್ರದಾಯಿಕ ಕುಟುಂಬದಿಂದ ಬಂದವಳು ನಾನು ಆದರೆ ನನ್ನ ತಂದೆ ತಾಯಿ ಇಬ್ಬರು ವಿದ್ಯಾವಂತರು. ಓದಿದ ನಂತರ ಮದುವೆ ಮಾಡಿದ್ದರು. ನನ್ನ ಸ್ನೇಹಿತರಲ್ಲಿ ಮೊದಲು ಮದುವೆ ಆಗಿದ್ದು ನನಗೆ ಆದರೆ ಈಗ ಬೇರೆ ಅವರು ಮದುವೆ ಮಾಡಿಕೊಂಡು ಮಕ್ಕಳು ಮಾಡಿಕೊಂಡಿದ್ದಾರೆ. ಈಗ ಅನಿಸುತ್ತದೆ ಎಲ್ಲೋ ಹಿಂದೆ ಉಳಿದುಬಿಟ್ಟಿದ್ದೀನಿ ಇರ್ಲಿ ಪರ್ವಾಗಿಲ್ಲ ಈಗ ನಿಜವಾದ ಪ್ರೀತಿಯನ್ನು ಹುಡುಕುತ್ತಿರುವೆ. ಡಿವೋರ್ಸ್‌ ಅನೌನ್ಸ್ ಮಾಡುವ ಮುನ್ನವೇ ನನ್ನ ಡಿವೋರ್ಸ್ ಆಗಿತ್ತು ಆದರೆ ಅನೌನ್ಸ್ ಮಾಡಿದ ಮೇಲೆ ಎಲ್ಲಾ ಕಡೆಯಿಂದ ಕರೆ ಬಂದಿತ್ತು ಆರಂಭದಲ್ಲಿ ನನಗೆ ಏನೂ ಹೇಳಲು ಇಷ್ಟವಿರಲಿಲ್ಲ' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

Tap to resize

Latest Videos

'ನನ್ನ ತಂದೆ ತಾಯಿ ಒಂದು ಮಾತು ಹೇಳಿದ್ದರು...ನೋಡಮ್ಮ ಇದು ನಿಮ್ಮ ಜವಾಬ್ದಾರಿ ಅವರು ಏನು ಮಾಡಿರುತ್ತಾರೆ ಅದನ್ನು ದೇವರು ನೋಡುತ್ತಿರುತ್ತಾರೆ ಅದು ಅವರ ಕರ್ಮಗಳು ನೀನು ಹೇಳಿಕೊಂಡು ಅಯ್ಯೋ ಪಾಪ ಅನ್ನುವ ರೀತಿಯಲ್ಲಿ ಇರಬಾರದು ಏಕೆಂದರೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಯೋಚನೆ ಮಾಡುತ್ತಾರೆ. ಯಾರು ಏನು ಕರ್ಮ ಮಾಡಿರುತ್ತಾರೆ ಒಂದು ರೀತಿಯಲ್ಲಿ ಬರುತ್ತದೆ. ನಾನು ಎಲ್ಲೇ ಹೋದರು ಅವರ ಬಗ್ಗೆ ಕೇಳುತ್ತಿದ್ದರು ಹೀಗಾಗಿ ತಿಳಿಸಬೇಕು ಎಂದು ಮಾಹಿತಿ ನೀಡಿದೆ. ಸಣ್ಣ ಪುಟ್ಟ ಕಾರಣಕ್ಕೆ ಹೆಣ್ಣು ಮಕ್ಕಳು ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಖಾಸಗಿ ನ್ಯೂಸ್‌ನಲ್ಲಿ ವರದಿ ಮಾಡಿತ್ತು ಆದರೆ ಅವರು ಏನೂ ತಿಳಿದುಕೊಳ್ಳದೆ ಸುದ್ದಿ ಮಾಡಿದ್ದು ಬೇಸರ ಆಯ್ತು. ನನ್ನ ಕುಟುಂಬದಲ್ಲಿ...ಅಪ್ಪ, ಅಮ್ಮ, ತಂಗಿ ಚಂದನಾ ಮತ್ತು ನಾನು ಇರುವುದು...ನಮಗೆ ತುಂಬಾ ಬೇಸರ ಆಯ್ತು...ನಾವು ಮೋಸ ಹೋಗಿದ್ದೀವಿ ಮಾನಸಿಕವಾಗಿ ,ದೈಹಿಕವಾಗಿ ಹಾಗೂ ಎಮೋಷನಲಿ...ನಾವು ಏನೂ ಮಾಡಲು ಆಗಲ್ಲ ಅಂತ ತುಂಬಾ ಅನುಭವಿಸಿದ್ದೀನಿ' ಎಂದು ಚೈತ್ರಾ ವಾಸುದೇವನ್ ಹೇಳಿದ್ದಾರೆ.

'ಬದಲಾವಣೆ ಆಗುತ್ತದೆ ಎಂದು ಸುಮಾರು 5 ವರ್ಷ ಕಾದಿರುವೆ ನಾನು ತುಂಬಾ ಸಿಲ್ಲಿ ಹುಡುಗಿ ಅಲ್ಲ ನಾನು ಜೀವನವನ್ನು ಚೆನ್ನಾಗಿ ಪ್ಲ್ಯಾನ್ ಮಾಡಿದ್ದೆ. ನಾನು ಮದುವೆ ಆಗಿರುವ ಹುಡುಗ ಅಪ್ಪ ಅಮ್ಮನ ಜೊತೆ ಇರಬೇಕು ಆಗ ಫ್ಯಾಮಿಲಿ ಮೌಲ್ಯತ್ತೆ ಗೊತ್ತಿರುತ್ತದೆ ಆಮೇಲೆ ನಮ್ಮ ಮಕ್ಕಳು ಅವರಿಗೆ ಎಲ್ಲಾ ರೀತಿ ವಿದ್ಯೆಗಳನ್ನು ಹೇಳಿಕೊಡಬೇಕು ಎಂದು ನಾನು ಕನಸು ಕಂಡಿದ್ದೆ. ನನ್ನ ಫ್ಯಾಮಿಲಿಯಲ್ಲಿ ಒಬ್ಬರ ಒಬ್ಬರ ಕೈ ಹಿಡಿದು ಕಣ್ಣೀರು ಹಾಕಿದ್ದೀವಿ ಏಕೆಂದರೆ ಕಳೆದ 2 ವರ್ಷಗಳಿಂದ ಕೈ ಹಿಡಿದು ಕಟ್ಟು ಹಾಕಿದ್ದಾರೆ ಯಾರಾದರೂ ಬಂದು ನನ್ನನ್ನು ಸೇವ್ ಮಾಡುತ್ತಾರ ಅನ್ನೋ ಸಂಬಂಧ ಬಂದಿತ್ತು. ಒಬ್ಬಳೆ ಊಟ ಮಾಡುವಾಗ ಕಣ್ಣೀರಿಟ್ಟಿದ್ದೀನಿ, ನಾನು ಕಾರು ಓಡಿಸುವಾಗ ಕಣ್ಣೀರಿಟ್ಟಿದ್ದೀನಿ, ನಾನು ಗಾಡಿ ಓಡಿಸುವಾಗ ಮಾಸ್ಕ್‌ ಹಾಕಿಕೊಂಡು ಕಣ್ಣೀರಿಟ್ಟಿದ್ದೀನಿ ಒಂದು ಅಪ್ಪುಗೆ ಬೇಕಿತ್ತು ನನಗೆ ಅಷ್ಟೇ. ನನ್ನ ಪೋಷಕರಿಗೆ ವಯಸ್ಸಾಗುತ್ತಿದೆ ಅಲ್ಲದೆ ಅಮ್ಮ ತುಂಬಾ ಸ್ಟ್ರೆಸ್‌ ತೆಗೆದುಕೊಂಡು ಆಸ್ಪತ್ರೆ ಸೇರಿದ್ದರು' ಎಂದಿದ್ದಾರೆ ಚೈತ್ರಾ ವಾಸುದೇವನ್. 

click me!