ಚಂದನ್ ತಮ್ಮ ಅಂಗೈಯಲ್ಲಿ ಮಡದಿ ನೇಹಾ ಮೊಗವನ್ನು ಹಿಡಿದು ಚುಂಬಿಸಿ, ಪ್ರೀತಿಯ ಮಾತುಗಳನ್ನು ಹೇಳುತ್ತಿದ್ರೆ, ಗೊಂಬೆ ಒಕೆ,ಯೆಸ್ ಎಂದು ಸನ್ನೆ ಮಾಡಿದ್ದಾರೆ.
ಬೆಂಗಳೂರು: ಗರ್ಭಿಣಿ ನೇಹಾ ರಾಮಕೃಷ್ಣ (Pregnant Neha Ramakrishna) ಮೇಲೆ ಪತಿ ಚಂದನ್ ಗೌಡ (Chandan Gowda) ಮುತ್ತಿನ ಸುರಿಮಳೆಯನ್ನೇ ಸುರಿಸಿದ್ದಾರೆ. ಈ ರೊಮ್ಯಾಂಟಿಕ್ ವಿಡಿಯೋವನ್ನು ಚಂದನ್ ಹಾಗೂ ನೇಹಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳಿಂದ ಪ್ರೀತಿಯ ಹಾರೈಕೆ ಮತ್ತು ಆಶೀರ್ವಾದ ಹರಿದು ಬಂದಿದೆ. ಈ ವಿಡಿಯೋಗೆ ಪ್ರತಿಕ್ಷಣ ನಿನ್ನನ್ನು ಕಂಡಾಗ ಏನೋ ಆಗಿದೆ ಎಂದ ರೊಮ್ಯಾಂಟಿಕ್ ಹಾಡು ಸೇರಿಸಲಾಗಿದೆ. ಬ್ಲ್ಯಾಕ್ ಆಂಡ್ ವೈಟ್ ವಿಡಿಯೋ ಇದಾಗಿದ್ದು, ಚಂದನ್ ತಮ್ಮ ಅಂಗೈಯಲ್ಲಿ ಮಡದಿ ನೇಹಾ ಮೊಗವನ್ನು ಹಿಡಿದು ಚುಂಬಿಸಿ, ಪ್ರೀತಿಯ ಮಾತುಗಳನ್ನು ಹೇಳುತ್ತಿದ್ರೆ, ಗೊಂಬೆ ಒಕೆ,ಯೆಸ್ ಎಂದು ಸನ್ನೆ ಮಾಡಿದ್ದಾರೆ. ಈ ವಿಡಿಯೋ ಶೇರ್ ಮಾಡಿಕೊಂಡಿರುವ ನೇಹಾ ಮತ್ತು ಚಂದನ್ ನಮ್ಮಿಬ್ಬರ ಸಂಭಾಷಣೆ ಏನಾಗಿರಬಹುದು ಹೇಳಿ ನೋಡೋಣ ಎಂದು ಅಭಿಮಾನಿಗಳನ್ನು ಕೇಳಿದ್ದಾರೆ.
ನೇಹಾ ರಾಮಕೃಷ್ಣ ಮತ್ತು ಚಂದನ್ ಗೌಡ ಇಬ್ಬರು ಕಿರುತೆರೆಯ ಕಲಾವಿದರು. ಲಕ್ಷ್ಮೀ ಬಾರಮ್ಮಾ ಧಾರಾವಾಹಿಯ ಗೊಂಬೆಯ ಪಾತ್ರದಲ್ಲಿ ನಟಿಸಿದ ನೇಹಾ ರಾಮಕೃಷ್ಣ ಕರುನಾಡಿನ ಮನೆ ಮಗಳಾಗಿದ್ದಾರೆ. ಲಕ್ಷ್ಮೀ ಬಾರಮ್ಮಾ ಬಳಿಕ ಹಲವು ಧಾರಾವಾಹಿಗಳಲ್ಲಿ ನಟಿಸಿದರೂ ಜನರು ನೇಹಾರನ್ನು ಗೊಂಬೆ ಅಂತಾನೇ ಗುರುತಿಸುತ್ತಾರೆ. ಚಂದನ್ ಮತ್ತು ನೇಹಾ ಬಾಲ್ಯದ ಸ್ನೇಹಿತರಾಗಿದ್ದು, ಕುಟುಂಬಸ್ಥರ ಒಪ್ಪಿಗೆ ಪಡೆದು ಮದುವೆ ಆಗಿದ್ದರು. ಮದುವೆ ಬಳಿಕ ಜೊತೆಯಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.
ಗೊಂಬೆ ಬಳಿಕ ಬೇಬಿ ಬಂಪ್ ವಿಡಿಯೋ ಹಂಚಿಕೊಂಡ ಚಿನ್ನು; ಜಸ್ಟ್ ಕಿಡ್ಡಿಂಗ್ ಅಂತ ಅಂದಿದ್ಯಾರಿಗೆ?
ಕುಟುಂಬಸ್ಥರ ಜೊತೆ ಕೊಡಗು ಪ್ರವಾಸ
ಕೆಲ ದಿನಗಳ ಹಿಂದೆಯಷ್ಟೇ ನೇಹಾ ಕುಟುಂಬಸ್ಥರ ಜೊತೆಯಲ್ಲಿ ಕೊಡಗು ಪ್ರವಾಸ ಕೈಗೊಂಡಿದ್ದರು. ಕೊಡಗು ಪ್ರವಾಸದಲ್ಲಿ ಕುಟುಂಬಸ್ಥರ ಜೊತೆ ಕಳೆದ ಸುಂದರ ಕ್ಷಣದ ಫೋಟೋಗಳನ್ನು ಸಹ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಇದಕ್ಕೂ ಮೊದಲ ತೋಟವೊಂದರಲ್ಲಿ ಸಿಂಪಲ್ ಸೀರೆ ಧರಿಸಿ ಕ್ಲಿಕ್ಕಿಸಿದ್ದ ಫೋಟೋ ನೋಡಿದ ಅಭಿಮಾನಿಗಳು ನಿಮ್ಮ ಮುಖದಲ್ಲಿ ತಾಯಿ ಕಳೆ ಕಾಣಿಸುತ್ತಿದೆ ಎಂದು ಹೇಳಿ ಕಮೆಂಟ್ ಮಾಡಿದ್ದರು.
ಇದೀಗ ಕ್ಯೂಟ್ ವಿಡಿಯೋಗೆ ಜನರು ಮೊದಲು ದೃಷ್ಟಿ ತೆಗೆಸಿಕೊಳ್ಳಿ. ಸಂಭಾಷಣೆ ಏನು ಅನ್ನೋದನ್ನು ನೀವೇ ರಿವೀಲ್ ಮಾಡಿದ್ರೆ ಒಳ್ಳೆಯದು ಅಂತ ಕೆಲವರು ಹೇಳಿದರೆ, ಒಂದಿಷ್ಟು ಮಂದಿ ಮಗು ಹೆಣ್ಣೋ ಅಥವಾ ಗಂಡೋ ಎಂಬುದರ ಬಗ್ಗೆ ಚರ್ಚೆ ನಡೆದಿದೆ ಅಲ್ಲವಾ ಎಂದು ಹೇಳಿದ್ದಾರೆ. ಈ ವಿಡಿಯೋಗೆ 38 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು, ನೂರಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿವೆ.
ಸೀರೆಯಲ್ಲಿ ಗರ್ಭಿಣಿ ನೇಹಾ ಫೋಟೋಶೂಟ್; ಬೇಬಿ ಬಂಪ್ ನೋಡಿ ತಾಯಿ ಕಳೆ ಕಾಣಿಸ್ತಿದೆ ಎಂದ ಫ್ಯಾನ್ಸ್
ಹಲವು ಧಾರಾವಾಹಿಗಳಲ್ಲಿ ನೇಹಾ ನಟನೆ
ನೇಹಾ ರಾಮಕೃಷ್ಣ ಕನ್ನಡ ಜೊತೆಯಲ್ಲಿ ತಮಿಳು, ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸುವರ್ಣ ವಾಹಿನಿಯ ಪ್ರಸಾರವಾಗುತ್ತಿದ್ದ ಲಚ್ಚಿ ಧಾರಾವಾಹಿಯಲ್ಲಿಯೂ ನೇಹಾ ನಟಿಸಿದ್ದಾರೆ. ಇನ್ನು ಚಂದನ್ ಗೌಡ ಕಲರ್ಸ್ ಕನ್ನಡ ವಾಹಿನಿಯ ಅಂತರಪಟದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಅಂತರಪಟದ ಫೈಟ್ ಸೀಕ್ವೆನ್ಸ್ ಅದ್ಭುತವಾಗಿ ಮೂಡಿಬಂದಿತ್ತು.