'ಇದು ನಿಜವಾಗ್ಲೂ ಮಾಡಬೇಕೆಂದು ಮಾಡಿದ ವಿಡಿಯೋನಾ ಅಥವಾ ಬೀಳೋಕೆ ಮಾಡಿದ ವಿಡಿಯೋನಾ' ಅಂತ ಬಳಕೆದಾರರೊಬ್ಬರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ದೀಪಿಕಾ, ವಿಡಿಯೋ ಮಾಡ್ತಿರುವಾಗ ಬಿದ್ದೆ, ರಿಯಲೀ ಬಿದ್ದಿದ್ದು. ಅದಕ್ಕಾಗಿಯೇ ಮುಂದೆ ವಿಡಿಯೋ ಮಾಡೋಕೆ ಆಗ್ಲಿಲ್ಲ..'
ನಟಿ, ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕಾರಣ, ಈಗ ಅವರು ಮೂಲ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ನಟಿ ದೀಪಿಕಾ ದಾಸ್ ಅವರು ಫಾಲ್ಸ್‌ನಲ್ಲಿ ರೀಲ್ಸ್ ಮಾಡೋಕೆ ಹೋಗಿ ಅವರು ಕೆಳಗೆ ಬಿದ್ದಿದ್ದರು. ಅವರ ಮುಖದ ಎಡಭಾಗಕ್ಕೆ ಗಾಯವಾಗಿದ್ದು, ಅಭಿಮಾನಿಗಳ ಆತಂಕ ಹೆಚ್ಚಿಸಿತ್ತು. ಆ ಬಳಿಕ ದೀಪಿಕಾ ಅಭಿಮಾನಿಗಳು ಆ ಹಿಂದಿನ ವಿಡಿಯೋದ ಮುಂದಿನ ಭಾಗವನ್ನು ಪೋಸ್ಟ್ ಮಾಡುವಂತೆ ಒತ್ತಾಯ ಮಾಡಿದ್ದರು. ಅದರಂತೆ ದೀಪಿಕಾ ದಾಸ್ ಈಗ ಆ ಕೆಲಸ ಮಾಡಿದ್ದಾರೆ.
ಅಂದರೆ, ಅವರು ತಾವು ರೀಲ್ಸ್ ಮಾಡುತ್ತಿದ್ದ ವೇಳೆ ಬಿದ್ದ ಜಾಗದಲ್ಲಿ ಎದ್ದ ಬಳಿಕ ತಮಗೆ ಏನೇನು ಆಯಿತು ಎಂಬುದನ್ನು ಸಹ ನೋಡಲು ಸಾಧ್ಯವಾಗುವಂತೆ ಈಗ ಇನ್ನೊಂದು ವೀಡಿಯೋ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ, ಫಾಲ್ಸ್ ಬಳಿ ರೀಲ್ಸ್ ಮಾಡಲು ಹೋಗಿ ಬಿದ್ದಿದ್ದ ನಟಿ ದೀಪಿಕಾ ದಾಸ್ ಮುಖಕ್ಕೆ ಗಾಯಗಳಾಗಿದ್ದನ್ನು ನೋಡಬಹುದು. ಯಾವತ್ತೂ ಕಳೆಕಳೆಯಾಗಿ ಇರುತ್ತಿದ್ದ ದೀಪಿಕಾ ಮುಖ ಗಾಯದಿಂದ ಕಳೆಗುಂದಿದೆ. ಅದನ್ನು ಅಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಆದರೆ, ಇದನ್ನು ದೀಪಿಕಾ ದಾಸ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಎನ್ನಲೇಬೇಕು.
ಚಂದನ್ ಶೆಟ್ಟಿ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ'ಗೆ ಗುಡ್ ರೆಸ್ಪಾನ್ಸ್ ; ಗೆಲ್ಲಬಹುದೇ ಹೊಸಬರ ಸಿನಿಮಾ..?
ನಿಜವಾಗಿಯೂ ಘಟನೆ ಆಗಿದ್ದ ಹೇಗೆ? ಫಾಲ್ಸ್‌ಗೆ ಹೋಗಿದ್ದ ನಟಿ ದೀಪಿಕಾ ಕಾಲು ಸ್ಲಿಪ್ ಆಗಿದೆ. ತಕ್ಷಣ ದೀಪಿಕಾ ಕೆಳಗೆ ಬಿದ್ದಿದ್ದಾರೆ. ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ರೂ ದೀಪಿಕಾ ದಾಸ್ ಪಕ್ಕದಲ್ಲಿದ್ದ ನೀರಿಗೆ ಬೀಳುತ್ತಿದ್ದರು. ಆದರೆ ನಟಿ ಕೈ ನೆಲಕ್ಕೆ ಊರಿದ್ದರಿಂದ ತಲೆ ಬಂಡೆಗೆ ಹೊಡೆದಿದೆ. ಇದರಿಂದ ಅವರ ಮುಖಕ್ಕೆ ಗಾಯವಾಗಿದೆ. ಫಾಲ್ಸ್‌ನಲ್ಲಿ ಜಾರಿ ಬಿದ್ದ ವಿಡಿಯೋವನ್ನು ದೀಪಿಕಾ ದಾಸ್ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಒಂದು ಸುಂದರ ಫಾಲ್ಸ್ (Water Falls)ನಲ್ಲಿ ನೀರು ಬೀಳ್ತಿರೋದನ್ನು ಕಾಣಬಹುದು.
ನಟಿ, ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ (Deepika Das) ಪೋಸ್ಟ್ ಮಾಡಿರೋ ವಿಡಿಯೋದಲ್ಲಿ ಫಾಲ್ಸ್ ನೋಡಬಹುದು. ಒಂದು ಕಡೆ ನೀರು, ಇನ್ನೊಂದು ಕಡೆ ಬಂಡೆ ಇದೆ. ಸಣ್ಣ ಕಾಲು ದಾರಿಯಲ್ಲಿ ದೀಪಿಕಾ ನಡೆದು ಹೋಗುತ್ತಿದ್ದರು. ಕೈನಲ್ಲಿ ಹೂವನ್ನು ಹಿಡಿದಿದ್ದಾರೆ. ಹಿಂದಿನಿಂದ ಹುಷಾರು ಎನ್ನುವ ಧ್ವನಿ ಕೇಳಿ ಬರ್ತಿದೆ. ಅಷ್ಟರಲ್ಲೇ ದೀಪಿಕಾ ಕೆಳಗೆ ಬಿದ್ದಿದ್ದಾರೆ. ಆದರೆ, 'ಇದೇನು ಹೊಸ ಟ್ರೆಂಡ್ (Trend) ನಡೆಯುತ್ತಿದೆಯೇ? ಒಂದು ಸೆಕೆಂಡ್..' ಎಂದು ದೀಪಿಕಾ ವಿಡಿಯೋಕ್ಕೆ ಶೀರ್ಷಿಕೆ ಹಾಕಿದ್ದರು.
ರೀಲ್ಸ್ ಮಾಡಲು ಹೋಗಿ ದೀಪಿಕಾ ಬಿದ್ದಿದ್ದಾರೆ ಅನ್ನೋದನ್ನು ಅವರು ಹಾಕಿರೋ ಟ್ಯಾಗ್ಸ್ ನಿಂದಲೇ ಪತ್ತೆ ಮಾಡಬಹುದು. ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ಈ ವಿಡಿಯೋ ಹಂಚಿಕೊಳ್ತಿದ್ದಂತೆ ಅಭಿಮಾನಿಗಳು ಕಂಗಾಲಾಗಿದ್ದಾರೆ. 'ಮೇಡಂ ಏನಾಯ್ತ' ಎಂದು ಪ್ರಶ್ನೆ ಕೇಳಲು ಶುರು ಮಾಡಿದ್ದಾರೆ. ಅಭಿಮಾನಿಗಳ ಪ್ರಶ್ನೆಗೆ ದೀಪಿಕಾ ದಾಸ್ ಉತ್ತರವನ್ನು ಸಹ ನೀಡಿದ್ದಾರೆ. 'ನಿಮ್ಮ ಮುಖಕ್ಕೆ ಗಾಯವಾಗಿದ್ಯಾ' ಎಂದು ಒಬ್ಬರು ಕೇಳಿದ ಪ್ರಶ್ನೆಗೆ ದೀಪಿಕಾ 'ಯೆಸ್, ಆಗಿದೆ' ಎಂದಿದ್ದಾರೆ.
ಹಿಂದಿನ ಬೆಂಚಿನ ಹುಡುಗಿ ಮಾನ್ಯ ಗೌಡ ಮುಂದೆ ಸಾಲುಸಾಲು ಚಾನ್ಸ್; ಏನಿದು ಜಾದೂ!
'ನನ್ನ ಮುಖದ ಎಡ ಭಾಗಕ್ಕೆ ಗಾಯವಾಗಿತ್ತು, ಈಗ ಸುಧಾರಿಸಿಕೊಳ್ಳುತ್ತಿದ್ದೇನೆ, ಈಗ ನಾನು ಫೈನ್' ಅಂತ ದೀಪಿಕಾ ರೀಪ್ಲೆ ಮಾಡಿದ್ದಾರೆ. ಇನ್ನೊಬ್ಬರು 'ಇದು ನಿಜವಾಗ್ಲೂ ಮಾಡಬೇಕೆಂದು ಮಾಡಿದ ವಿಡಿಯೋನಾ ಅಥವಾ ಬೀಳೋಕೆ ಮಾಡಿದ ವಿಡಿಯೋನಾ' ಅಂತ ಬಳಕೆದಾರರೊಬ್ಬರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ದೀಪಿಕಾ, ವಿಡಿಯೋ ಮಾಡ್ತಿರುವಾಗ ಬಿದ್ದೆ, ರಿಯಲೀ ಬಿದ್ದಿದ್ದು. ಅದಕ್ಕಾಗಿಯೇ ಮುಂದೆ ವಿಡಿಯೋ ಮಾಡೋಕೆ ಆಗ್ಲಿಲ್ಲ..' ಎಂದಿದ್ದರು. ಆದರೆ ನಟಿ ದೀಪಿಕಾ ದಾಸ್ ಒಂದು ಸೆಕೆಂಡಿನ ವಿಡಿಯೋ ಅಭಿಮಾನಿಗಳಿಗೆ ಕ್ಲಾರಿಟಿ ಸಿಕ್ಕಿರ್ಲಿಲ್ಲ.
ಹಾಗಾಗಿ ಅನೇಕ ಬಳಕೆದಾರರು 'ಫುಲ್ ವಿಡಿಯೋ ಹಾಕಿ ಮೇಡಂ' ಎನ್ನುತ್ತಿದ್ದಾರೆ. ಬಿದ್ದ ಮೇಲೆ ನಂಗೆ ವಿಡಿಯೋ ಮಾಡೋಕೆ ಆಗಿಲ್ಲ' ಅಂತ ದೀಪಿಕಾ ದಾಸ್ ಉತ್ತರ ನೀಡಿದ್ದರು. ದೀಪಿಕಾ ದಾಸ್ ಅಭಿಮಾನಿಗಳು ಆ ವಿಡಿಯೋ ನೋಡಿ ತುಂಬಾ ಆತಂಕ ವ್ಯಕ್ತಪಡಿಸಿದ್ದರು. ಫ್ಯಾನ್ಸ್ ಒತ್ತಾಯದ ಮೇರೆಗೆ ಈಗ ನಟಿ ದೀಪಿಕಾ ದಾಸ್ ಬಿದ್ದ ಮೇಲೆ ಮುಖಕ್ಕೆ ಆಗಿರುವ ಗಾಯ ಕಾಣುವಂತಿರುವ ವೀಡಿಯೋ ಶೇರ್ ಮಾಡಿದ್ದಾರೆ.
ಅಂದಹಾಗೆ, ನಟಿ ದೀಪಿಕಾ ದಾಸ್ ಮದುವೆ ಆದ್ಮೇಲೆ ಯಾವುದೇ ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ. ನಾಗಿಣಿ ನಂತ್ರ ಬಿಗ್ ಬಾಸ್ ನ ಎರಡು ಸರಣಿಯಲ್ಲಿ ಸ್ಪರ್ಧಿಯಾಗಿ ಮಿಂಚಿದ್ದ ದೀಪಿಕಾ, ಟೂರ್-ಟ್ರಿಪ್‌ಗಳನ್ನು ಹೆಚ್ಚು ಇಷ್ಟಪಡ್ತಾರೆ. ಈ ಮೊದಲು ಆಗಾಗ ದುಬೈಗೆ ಹೋಗಿ ಬರ್ತಿದ್ದ ದೀಪಿಕಾ, ದುಬೈ ಹುಡುಗನನ್ನೇ ಮದುವೆ ಆಗಿದ್ದಾರೆ. ಅವರು ಯುಟ್ಯೂಬ್ ಚಾನೆಲ್ ಕೂಡ ಹೊಂದಿದ್ದು, ಅಲ್ಲಿ ತಮ್ಮ ಪ್ರವಾಸದ ವಿಡಿಯೋಗಳನ್ನು ಆಗಾಗ ಪೋಸ್ಟ್ ಮಾಡುತ್ತಾ ಇರುತ್ತಾರೆ.