ಬೆಂಗಳೂರಿನಲ್ಲಿ ಜಾಬ್ ಕಳೆದುಕೊಂಡೆ, ಪಿಜಿ ಓನರ್‌ ಮಧ್ಯರಾತ್ರಿ ಹೊರ ಹಾಕಿದ್ರು: ಅನುಶ್ರೀ

By Gowthami KFirst Published May 15, 2024, 2:56 PM IST
Highlights

ಬೆಂಗಳೂರಿನಲ್ಲಿ ಕೆಲಸ ಕಳೆದುಕೊಂಡು ಕಷ್ಟಪಡುತ್ತಿದ್ದಾಗ ಪಿಜಿ ಓನರ್‌ ಮಧ್ಯರಾತ್ರಿ ಮನೆಯಿಂದ ಹೊರ ಹಾಕಿದ ಬಗ್ಗೆ ನಿರೂಪಕಿ ಅನುಶ್ರೀ  ಮಾತನಾಡಿದ್ದಾರೆ.

ಕರಾವಳಿ ಬೆಡಗಿ ಪ್ರಸಿದ್ಧ ನಿರೂಪಕಿ ಅನುಶ್ರೀ ಅವರು ಮೊದಲ ಬಾರಿಗೆ  ತುಳುವಿನ ಪಾಡ್‌ ಕಾಸ್ಟ್ ಚಿಲ್ಲಿಂಗ್ ವಿಥ್ ಚಿಲಿಂಬಿ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಬೆಂಗಳೂರಿನಲ್ಲಿ ಕೆಲಸ ಕಳೆದುಕೊಂಡು ಪಿಜಿ ಓನರ್‌ ಮಧ್ಯರಾತ್ರಿ ಮನೆಯಿಂದ ಹೊರ ಹಾಕಿದ ಬಗ್ಗೆ ಮಾತನಾಡಿದ್ದಾರೆ. ದಿ ಪವರ್ ಹೌಸ್‌ ವೈನ್ಸ್ ಯೂಟ್ಯೂಬ್‌ ನಲ್ಲಿ ಸಂದರ್ಶನ ಲಭ್ಯವಿದೆ.

ನನಗೆ ಒಂದು ಸಮಯ ಬಂತು ಕೆಲಸವೇ ಇಲ್ಲದ ಹಾಗಾಯ್ತು. 2-3 ತಿಂಗಳಿಂದ ಹಾಸ್ಟೆಲ್‌ ಫೀಸ್‌ ಕಟ್ಟಲೇ ಇಲ್ಲ. ಮನೆಗೆ ದುಡ್ಡು ಕಳಿಸಲು ಕೂಡ ನನ್ನ ಬಳಿ ದುಡ್ಡು ಇಲ್ಲದ ಸ್ಥಿತಿ ಬಂತು. ಎಷ್ಟೋ ದಿನ ಊಟ ಮಾಡದೆ ಇದ್ದೆ. ಇದನ್ನು ಯಾರು ಈಗ ಹೇಳಿದರೆ ನಂಬುವುದಿಲ್ಲ. ಆದರೆ ಹಸಿವು ಅನ್ನುವುದು ನನಗೆ ಹೊಸದಾಗಿ ಇರಲಿಲ್ಲ. ಮಂಗಳೂರಿನಲ್ಲಿ ಕೂಡ ಮನೆಯಲ್ಲಿ ಈ ಪರಿಸ್ಥಿತಿಯನ್ನು ಎದುರಿಸಿದ್ದೆವು. ಕೆಲಸ ಅರಸಿ ಬಂದ ನನ್ನ ಜೀವನದಲ್ಲಿ ಕೆಲ ಇಲ್ಲದ ದಿನ ಬಂದಾಗ ಎಲ್ಲಿ ಎಡವಿದ್ದೇನೆ? ಏನಾಯ್ತು? ಯಾಕೆ ಕೆಲಸ ಇಲ್ಲ?  ಸೋತೆ ನಾನು ಅಂದು ಕೊಂಡು ಬೆಂಗಳೂರು ಬಿಟ್ಟು ಮತ್ತೆ ಮಂಗಳೂರು ಹೋಗುವ ಅನ್ನಿಸಿತು.

Latest Videos

ಕೋಟ್ಯಂತರ ಜನರ ಪ್ರಶ್ನೆಗೆ ಇಲ್ಲಿದೆ ಉತ್ತರ, ಮದುವೆಯಾಗಲು ನಿರ್ಧರಿಸಿದ ನಿರೂಪಕಿ ಅನುಶ್ರೀ

ಮೆಜೆಸ್ಟಿಕ್‌ ಬಸ್‌ ನಿಲ್ದಾಣಕ್ಕೆ ಬಂದು ಅತ್ತುಕೊಂಡು ಅಮ್ಮನಿಗೆ ಕಾಲ್‌ ಮಾಡಿದೆ. ನನಗೆ ಆಗುತ್ತಿಲ್ಲ ಬೆಂಗಳೂರು ಬಿಟ್ಟು ಊರಿಗೆ ಬರುತ್ತೇನೆ ಎಂದೆ. ಅಮ್ಮ ಆಯ್ತು ಬಾ ಎರಡು ಅಗಳು ಅನ್ನ ತಿನ್ನುವ ಶಕ್ತಿ ನಮಗೆ ದೇವರು ಕೊಡ್ತಾರೆ. ಬಾ ಇಲ್ಲೇ ಎರಡು ತುತ್ತು ತಿಂದು ಇಲ್ಲೇ ಬದುಕೋಣ. ಆದ್ರೆ ನೀನು ಪ್ರಯತ್ನವೇ ಪಡದೆ ವಾಪಸ್‌ ಬರುವುದು ನನ್ನ ಮಗಳಲ್ಲ. ನೀನು ಸ್ವಲ್ಪ ಕೂಡ ಪ್ರಯತ್ನ ಪಡುತ್ತಿಲ್ಲ. ಇಷ್ಟು ಬೇಗ ನೀನು ಸೋಲು ಒಪ್ಪಿಕೊಂಡ್ಯಾ ಅಂತ ಕೇಳಿದರು. ಆಗ ನನಗೆ ರಿಯಲೈಸ್‌ ಆಯ್ತು ಸಿಕ್ಕಿದ ಕೆಲಸವನ್ನಷ್ಟೇ ಮಾಡಿದ್ದೇನೆ. ನಾನಾಗಿ ಯಾವುದು ಟ್ರೈ ಮಾಡಿಲ್ಲವಲ್ಲ ಎಂದು. 

ಅಲ್ಲಿಂದ ಮತ್ತೆ ನಾನು ಹಿಂತಿರುಗಿ ಹಾಸ್ಟೆಲ್‌ ಗೆ ಹೋದೆ. ಅಂದು ರಾತ್ರಿ ಯೋಚಿಸಿದೆ. "ನೀನು ಕೆಲಸವನ್ನು ಪ್ರೀತಿಸಿದರೆ, ಕೆಲಸ ನಿನ್ನನ್ನು ಪ್ರೀತಿಸುತ್ತದೆ" ಎಂದು ಅರಿತುಕೊಂಡೆ ಅದು ನನ್ನ ಇಡೀ ಬದುಕನ್ನು ಬದಲಾಯಿಸಿತು. ಯಾರು ಎಷ್ಟು ಹೊತ್ತಿಗೆ ಬೇಕಾದರೂ ರಾತ್ರಿ ಬೇಕಾದರೂ ಎಬ್ಬಿಸಿ ನನ್ನ ಮುಂದೆ ಕ್ಯಾಮರಾ ಇಟ್ಟರೆ ನಾನು ಮಾತನಾಡುತ್ತೇನೆ. ನನ್ನ ಕೆಲಸವನ್ನು ನಾನು ಅಷ್ಟು ಪ್ರೀತಿಸುತ್ತೇನೆ. ನೀವೊಂದು ಮರವನ್ನು ಪ್ರೀತಿಸುತ್ತೀರಿ ಅಂದರೆ ಅದು ನಿಮಗೆ ಮರಳಿ ಪ್ರೀತಿ ಕೊಡುತ್ತದೆ. ನೀವು ಏನು ಮಾಡುತ್ತೀರಿ ಅದನ್ನು ಪ್ರೀತಿಯಿಂದ ಮಾಡಿ ನಿಮಗೆ ಫಲ ಸಿಗುತ್ತದೆ. ನಾನು ಯಾವಾಗ ನನ್ನ ಕೆಲಸವನ್ನು ಇಷ್ಟು ಪಟ್ಟೆ. ಆ ಕೆಲಸ ನನ್ನ ಕೈಹಿಡಿಯಿತು. ಜನ ನನ್ನನ್ನು ಇಷ್ಟಪಡಲು ಆರಂಭಿಸಿದರು. ನನ್ನ ಅಮ್ಮ ಹೇಳಿದ ಮಾತು ನನ್ನ ಜೀವನದಲ್ಲಿ ಒಂದು ಪ್ರಮುಖ ಪಾತ್ರವಾಯ್ತು.

ಚಿನ್ನದ ಕರಿಮಣಿ ಇಲ್ಲವೆಂದು ಯಾವ ಸಮಾರಂಭಕ್ಕೂ ಅಮ್ಮನನ್ನ ಕರೆಯುತ್ತಿರಲಿಲ್ಲ: ಆ ದಿನ ನೆನದು ಅನುಶ್ರೀ ಕಣ್ಣೀರು

ನಾನು ಮೂರು ತಿಂಗಳು ಹಾಸ್ಟೆಲ್‌ ಫೀಸ್‌ ಕಟ್ಟಿರಲಿಲ್ಲ. ಪಿಜಿ ಓನರ್‌ ಅಂತು ಉಪೇಂದ್ರ ಅವರ ಸಿನೆಮಾದಲ್ಲಿನ ಮಾರಿಮುತ್ತು ಪಾತ್ರದ ತರ ಇದ್ದರು. ನನ್ನನ್ನು ಪಿಜಿಯಿಂದ ಹೊರಗಡೆ ಹಾಕಿದರು. ನಾನು ಮತ್ತೆ ಮೆಜೆಸ್ಟಿಕ್‌ ಬಸ್‌ ಸ್ಟಾಂಡ್‌ ಗೆ ಹೋದೆ. ಆಗ ನನ್ನ ಫ್ರೆಂಡ್‌ ತಮೀಶ್ ಸಹಾಯ ಮಾಡಿದರು. ನಾನು ಮೆಜೆಸ್ಟಿಕ್‌ ಗೆ ಹೋಗುತ್ತಿರಬೇಕಾದರೆ ಅವರ ಕಾಲ್‌ ಬಂತು. ಎಲ್ಲಿದ್ದೀಯಾ ಅಂತ ಕೇಳಿದರು. ನಾನು ನಡೆದ ವಿಷ್ಯ ಹೇಳಿದೆ. ಅವರು ತುಂಬಾ ರೆಬೆಲ್‌, ಅದು ಹೇಗೆ ಒಂದು ಹೆಣ್ಣನ್ನು ಹೊರಗಡೆ ಹಾಕಿದರು? ಇದು ಸರಿಯಲ್ಲ ನಾನು ಬರುತ್ತೇನೆ ಎಂದು  ಮೆಜೆಸ್ಟಿಕ್‌ ಗೆ ಬಂದು ಬೈಕ್‌ ನಲ್ಲಿ ಪಿಕ್ ಮಾಡಿಕೊಂಡು ನೇರವಾಗಿ ಪಿಜಿಗೆ ಹೋಗಿ 3 ತಿಂಗಳ ದುಡ್ಡು ಕಟ್ಟಿ, ನೀವು ಒಂದು ಹೆಣ್ಣು ಅದು ಹೇಗೆ ನೀವು ಒಂದು ಹೆಣ್ಣನ್ನು ಹೊರಗಡೆ ಹಾಕಿದ್ರಿ ಅಂತ ಕೇಳಿದರು. ಅದೊಂದು ಸಿನೆಮಾಟಿಕ್‌ ಸೀನ್‌, ಹಿರೋ ತರ ಬೈದಿದ್ದರು.

ಅದರ ಹಿಂದಿನ ದಿನ ಏನಾಗಿತ್ತು ಅಂದರೆ ರಾತ್ರಿ ಕೆಲಸ ಮುಗಿಸಿ ಬಂದಾಗ ಅವರು ಡೋರ್‌ ಓಪನ್‌ ಮಾಡಿರಲಿಲ್ಲ. ನೀನು ಫೀಸ್‌ ಕಟ್ಟಿಲ್ಲ ಎಂದು ಗದರಿದ್ದರು. ಪಿಜಿ ಓನರ್‌ ಮಲಗಿದ ಮೇಲೆ ಅಡುಗೆ ಕೆಲಸ ಮಾಡುವವರು ಮೆಲ್ಲಗೆ ಬಾಗಿಲು ತೆಗೆದು ನನ್ನನ್ನು ಒಳಗೆ ಕರೆಸಿಕೊಂಡಿದ್ದರು. ಬೆಳಗ್ಗೆ ಓನರ್‌ ಬಂದು ನನ್ನನ್ನು ಹೊರಗೆ ಹಾಕಿದ್ದರು.  ಬಳಿಕ ಮಲ್ಲೇಶ್ವರಂ ಇಡೀ ತಿರುಗಾಡಿ ದಿನಕ್ಕೆ 100 ರೂ ನಂತೆ ಒಂದು ಪಿಜಿ ಸಿಕ್ಕಿತು. ಆಗ ಕೂಡ ದುಡ್ಡು ನಿನ್ನ ಬಳಿ ಇರಲಿ ಎಂದು ಕೊಟ್ಟಿದ್ದರು. ನನ್ನ ಪ್ರಕಾರ ಅವರ 7 ಸಾವಿರ ಸಾಲ ಇದೆ. ಈವರೆಗೆ ನಾನು ಅದನ್ನು ತೀರಿಸಿಲ್ಲ. ನಾನು ಅವರು ಸಿಕ್ಕಿದಾಗ ಹೇಳಿದ್ದೆ ನಾನು ಈ ಸಾಲ ಮರಳಿ ಕೊಡಲ್ಲ ಎಂದು.

ರಾಜ್‌ ಬಿ ಶೆಟ್ಟಿ ನನ್ನ ಆಧ್ಯಾತ್ಮ ಗುರು, ರಕ್ಷಿತ್‌ ಶೆಟ್ಟಿ ಜಂಟಲ್‌ ಮ್ಯಾನ್‌: ನಿರೂಪಕಿ ಅನುಶ್ರೀ

ನಾನು ಇಂದಿಗೂ ಫ್ರೆಂಡ್‌ ತಮೀಶ್ ಅವರನ್ನು ನೆನಪಿಸಿಕೊಳ್ಳುತ್ತೇನೆ.  ನಾನು ಸಾಲ ತೀರಿಸದ ವ್ಯಕ್ತಿ ಎಂದರೆ ಅದು ತಮೀಶ್. ಕೆಲವು ಸಾಲ ಜೀವನದಲ್ಲಿ ಇರಬೇಕಂತೆ. ಅವರ ಸಾಲ ನಾನು ಹಾಗೆಯೇ ಇಟ್ಟಿದ್ದೇನೆ. ಅವರು ನನ್ನ ಫ್ರೆಂಡ್‌ ನನ್ನ ಕ್ಲಾಸ್‌ ಮೆಟ್‌ ಅನ್ನೇ ಮದುವೆಯಾಗಿದ್ದಾರೆ. ನನ್ನನ್ನು ಬೀದಿಗೆ ಹಾಕಿದಾಗ ಸಹಾಯ ಮಾಡಿದ ವ್ಯಕ್ತಿ ಕರೆದುಕೊಂಡು ಹೋಗಿ ಆಶ್ರಯ ಕೊಡ್ತಾನಲ್ವ ಅದರ ಋಣ ನಾನು ತೀರಿಸುವುದೇ ಬೇಡ ಅಂದುಕೊಂಡಿದ್ದೇನೆ. ಅದಕ್ಕೋಸ್ಕರ ಆದರೂ ಇನ್ನೊಂದು ಜನ್ಮ ತಾಳಿ ಬರಬೇಕು ಅನ್ನಿಸುತ್ತದೆ. ಯಾರೂ ಇಲ್ಲದಾಗ ಬಂದ ವ್ಯಕ್ತಿ ದೇವರಿಗಿಂತ ಕಡಿಮೆ ಅಲ್ಲ ಎಂದಿದ್ದಾರೆ.

click me!