
ದಾಂಪತ್ಯ ಜೀವನಕ್ಕೆ ಹೊಸ ಕಳೆ ಬರೋದು ಮಕ್ಕಳಾದ್ಮೇಲೆ ಎನ್ನುವ ಮಾತಿದೆ. ಮದುವೆಯಾದ ವರ್ಷದ ನಂತ್ರ ಮಕ್ಕಳನ್ನು ಪಡೆಯಲು ಅನೇಕ ದಂಪತಿ ನಿರ್ಧರಿಸ್ತಾರೆ. ಈಗಿನ ಕಾಲದಲ್ಲಿ ವೃತ್ತಿ, ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮದುವೆಯಾದ ನಾಲ್ಕೈದು ವರ್ಷದ ನಂತ್ರ ದಂಪತಿ ಮಕ್ಕಳ ಪ್ಲಾನ್ ಮಾಡ್ತಾರೆ. ನಾಲ್ಕೈದು ವರ್ಷದ ನಂತ್ರವೂ ಮಕ್ಕಳಾಗಿಲ್ಲ ಎಂದಾಗ ಟೆನ್ಷನ್ ಶುರುವಾಗುತ್ತದೆ. ವೈದ್ಯಕೀಯ ಲೋಕದಲ್ಲಿ (Medical World) ಸಾಕಷ್ಟು ಆವಿಷ್ಕಾರವಾಗಿದ್ದು, ಐವಿಎಫ್ (IVF), ಬಾಡಿಗೆ ತಾಯಿ (Surrogate Mother) ಸೇರಿ ನಾನಾ ರೀತಿಯಲ್ಲಿ ಮಕ್ಕಳನ್ನು ಪಡೆಯಲು ದಂಪತಿ ಪ್ರಯತ್ನಿಸುತ್ತಾರೆ. ಎಷ್ಟೇ ಪ್ರಯತ್ನಿಸಿದ್ರೂ ಕೆಲವರಿಗೆ ಮಕ್ಕಳ ಭಾಗ್ಯ ಇರೋದಿಲ್ಲ. ಒಂದೆರಡಲ್ಲ, ಹದಿನೆಂಟು ವರ್ಷಗಳ ಸತತ ಪ್ರಯತ್ನದ ನಂತ್ರ ನಟಿ ಶಿಲ್ಪಾ ಸಕ್ಲಾನಿ ಮನೆಯಲ್ಲೊಂದು ಬೆಳಕು ಮೂಡಿದೆ. ನಟಿ ಶಿಲ್ಪಾ ಸಕ್ಲಾನಿ ಕೂಡ ಮಗುವನ್ನು ಪಡೆಯಲು ನಿರಂತರ ಪ್ರಯತ್ನಗಳನ್ನು ಮಾಡಿ ಕೊನೆಯಲ್ಲಿ ಕೈಚೆಲ್ಲಿ ಕುಳಿತಿದ್ದರು. ಈಗ ಹೆಣ್ಣು ಮಗುವಿನ ತಾಯಿಯಾಗಿರುವ ನಟಿ, ತನ್ನ ಅನುಭವನ್ನು ಹಂಚಿಕೊಂಡಿದ್ದಾರೆ.
ಶಿಲ್ಪಾ ಸಕ್ಲಾನಿ (Shilpa Saklani) ತಮ್ಮ 21ನೇ ವಯಸ್ಸಿನಲ್ಲೇ ಮದುವೆ (Marriage) ಯಾದ್ರು. ಮಗುವಿಗೆ ಜನ್ಮ ನೀಡಲು ಶಿಲ್ಪಾ ಸಕ್ಲಾನಿ ಹದಿನೆಂಟು ವರ್ಷ ಕಾಯಬೇಕಾಯ್ತು. ಸಂದರ್ಶನವೊಂದರಲ್ಲಿ ತಮ್ಮ ಪ್ರೆಗ್ನಿನ್ಸಿ (Pregnancy) ಬಗ್ಗೆ ಮಾತನಾಡಿದ್ದಾರೆ. ಮದುವೆಯಾದ ನಾಲ್ಕು ವರ್ಷದ ನಂತ್ರ ಮಗು ಬೇಕೆಂದು ಶಿಲ್ಪಾ ಸಕ್ಲಾನಿ ಬಯಸಿದ್ದರು. ಹೆಣ್ಣು ಮಗುವಾಗ್ಬೇಕು, ಆ ಮಗು ಪತಿ ಅಪೂರ್ವ್ ಅಗ್ನಿಹೋತ್ರಿಯಂತೆ ಇರಬೇಕೆಂದು ಅವರು ಬಯಸಿದ್ದರು. ಆದ್ರೆ ಅವರ ನಿರೀಕ್ಷೆಯಂತೆ ನಾಲ್ಕು ವರ್ಷದ ನಂತ್ರ ಮಗುವಾಗ್ಲಿಲ್ಲ. ಗರ್ಭಧರಿಸಲು ಶಿಲ್ಪಾ ಸಕ್ಲಾನಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಎಲ್ಲ ಚಿಕಿತ್ಸೆಗಳು ನಡೆದಿದ್ದವು.
ಮದುವೆ ಬಳಿಕ ಸೀಸನ್ ಸಂಬಂಧ ಕುರಿತು ಮಾತನಾಡಿದ ವಿದ್ಯಾ ಬಾಲನ್; ಏನಿದರ ಒಳಗುಟ್ಟು?
ನನಗೆ ಕರ್ಮದ ಮೇಲೆ ನಂಬಿಕೆ ಇದೆ. ಮಗು ಸ್ವಲ್ಪ ತಡವಾಗಿ ಹದಿನೆಂಟು ವರ್ಷಗಳ ನಂತ್ರ ಜನಿಸಿದೆ. ನನ್ನ ಜೀವನದ ಅತ್ಯಂತ ದೊಡ್ಡ ಚಮತ್ಕಾರವೆಂದ್ರೆ ನನ್ನ ಮಗಳು. ಈಗ ಆಕೆಗೆ 17 ತಿಂಗಳು ಎನ್ನುತ್ತಾರೆ ಶಿಲ್ಪಾ ಸಕ್ಲಾನಿ.
ಮಗುವಾದ್ಮೇಲೆ ಅತ್ಯಂತ ಖುಷಿಯಾಗಿರುವ ಶಿಲ್ಪಾ ಸಕ್ಲಾನಿ, ನಾನು ವಿಶ್ವದ ಅತ್ಯಂತ ಸಂತೋಷದ ವ್ಯಕ್ತಿ. ಅತ್ಯಂತ ಕಡಿಮೆ ಸಮಯ ನನ್ನ ಜೀವನ ಕತ್ತಲೆಯಲ್ಲಿತ್ತು. ಆ ಸಮಯದಲ್ಲಿ ಮಗುವಿಗಾಗಿ ಸಾಕಷ್ಟು ಪ್ರಯತ್ನಿಸಿದ್ದೆವು. ಆದ್ರೆ ಮಕ್ಕಳಾಗಿರಲಿಲ್ಲ ಎಂದು ಶಿಲ್ಪಾ ಸಕ್ಲಾನಿ ಹೇಳಿದ್ದಾರೆ.
ಒಂದಲ್ಲ ಒಂದು ದಿನ ನನಗೆ ಮಗುವಾಗುತ್ತೆ ಎನ್ನುವ ಭರವಸೆ ಇತ್ತು. ದೇವರ ಮೇಲೆ ಭರವಸೆ ಇಟ್ಟಿದ್ದೆ ಎಂದು ಶಿಲ್ಪಾ ಸಕ್ಲಾನಿ ಹೇಳಿದ್ದಾರೆ. ನನಗೆ ಮಗಳನ್ನು ನೋಡಿದ್ರೆ ತುಂಬಾ ಖುಷಿಯಾಗುತ್ತದೆ. ಆಕೆ ನನಗೆ ಬ್ಲೆಸ್ಸಿಂಗ್ ಎಂದು ಶಿಲ್ಪಾ ಸಕ್ಲಾನಿ ಹೇಳಿದ್ದಾಳೆ.
ನಿಮ್ಮ ಆರೋಗ್ಯ ಕೆಟ್ಟಿದ್ದರೆ, ಜೀವನದಲ್ಲಿ ಕತ್ತಲೆ ಆವರಿಸಿದ್ದರೆ ಚಿಂತಿಸಬೇಡಿ; ನಟಿ ಸಮಂತಾ!
ಶಿಲ್ಪಾ ಸಕ್ಲಾನಿ, ಕ್ಯೂಕಿ ಸಾಸ್ ಭಿ ಕಭಿ ಬಹು ಥಿ ಧಾರಾವಾಹಿ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಶಿಲ್ಪಾ, ಜೆಸ್ಸಿ ಜೆಸ್ಸಿ ಕೋಯಿ ನಹಿ, ಕುಸುಮ್, ಶ್ರೀಮದ್ ನಾರಾಯಣ್, ಬಿಗ್ ಬಾಸ್ ಸೆವೆನ್ ಸೇರಿದಂತೆ ನಾನಾ ಕಾರ್ಯಕ್ರಮದಲ್ಲಿ ಶಿಲ್ಪಾ ಕಾಣಿಸಿಕೊಂಡಿದ್ದಾರೆ. ಮಗುವಾದ್ಮೇಲೂ ಟಿವಿ ಸಿರಿಯಲ್ ನಲ್ಲಿ ಶಿಲ್ಪಾ ಕಾಣಿಸಿಕೊಳ್ತಿದ್ದಾರೆ. ವಿರಾಮದ ನಂತ್ರ ವಾಪಸ್ ಕೆಲಸಕ್ಕೆ ಬರೋದು ಸವಾಲಾಗಿತ್ತು ಎಂದು ಹಿಂದೆ ನಡೆದ ಸಂದರ್ಶನವೊಂದರಲ್ಲಿ ಶಿಲ್ಪಾ ಸಕ್ಲಾನಿ ಹೇಳಿದ್ದರು. 2004 ರಲ್ಲಿ ನಟ ಅಪೂರ್ವ ಅಗ್ನಿಹೋತ್ರಿ ಅವರನ್ನು ವಿವಾಹವಾದ ಸಕ್ಲಾನಿ, 2019 ರ ನಂತ್ರ ಸುಮಾರು ನಾಲ್ಕು ವರ್ಷಗಳ ಕಾಲ ವಿಶ್ರಾಂತಿ ಪಡೆದಿದ್ದರು. ಯಾವುದೇ ಶೋನಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ. ಕೆಲ ದಿನಗಳ ಹಿಂದಷ್ಟೆ ಒಟಿಟಿ ಶೋ ಬಗ್ಗೆ ಮಾತನಾಡಿದ್ದ ಶಿಲ್ಪಾ, ಅಲ್ಲಿನ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು ನನಗೆ ಇಷ್ಟವಿಲ್ಲ ಎಂದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.