
ಜೀ ಕನ್ನಡದಲ್ಲಿ ಬಹಳ ಜನ ಮೆಚ್ಚುವ ಸೀರಿಯಲ್ ಅಮೃತಧಾರೆ. ಈ ಸೀರಿಯಲ್ ಟೀಮ್ ಇದೀಗ ಚಿಕ್ಕಮಗಳೂರಿನ ಗ್ರೀನರಿ ನಡುವೆ ಕಳೆದುಹೋಗಿದೆ. ಕಾರಣ ಗೌತಮ್ ಭೂಮಿಕಾ ಹನಿಮೂನ್ ಸೀನ್. ಹೌದು. ಇವರಿಬ್ಬರನ್ನು ಫಾರಿನ್‌ಗೆ ಹನಿಮೂನ್‌ಗೆ ಕಳಿಸೋ ಪ್ಲ್ಯಾನ್ ಮೊದಲು ಆತನ ಗೆಳೆಯ ಹಾಗೂ ಅವನ ಪತ್ನಿ ಮಾಡಿದ್ದರು. ಆದರೆ ಈ ಸೀರಿಯಲ್ ನಿರ್ಮಾಪಕರಿಗೆ ಬಜೆಟ್ ಸಮಸ್ಯೆ ಆಗಿರ್ಬೇಕು. ಹೀಗಾಗಿ ಜಸ್ಟ್ ಡೈಲಾಗ್‌ನಲ್ಲೇ ಕಾಗೆ ಹಾರಿಸಿ ಫಾರಿನ್ ಹನಿಮೂನ್ ಟ್ರಿಪ್ ಕ್ಯಾನ್ಸಲ್ ಮಾಡಿದ್ರು. ಆದರೆ ಕಹಾನಿ ಮೆ ಟ್ವಿಸ್ಟ್ ಬೇಕಲ್ವಾ ಸೋ ಫಾರಿನ್‌ನಿಂದ ಕರ್ನಾಟಕದ ಸ್ವಿಟ್ಜರ್‌ಲ್ಯಾಂಡಿಗೆ ಹನಿಮೂನ್ ಪ್ಯಾಕೇಜ್ ಟರ್ನ್ ಆಗಿದೆ. ಸದ್ಯ ಭೂಮಿ ಮತ್ತು ಡುಮ್ಮ ಸರ್ ಚಿಕ್ಕಮಗಳೂರಿನ ಗ್ರೀನರಿ ನಡುವೆ ಹನಿಮೂನ್ ಮೂಡ್‌ನಲ್ಲಿದ್ದಾರೆ.
ಗೌತಮ್ ಮತ್ತು ಭೂಮಿಕಾ ತೆರೆದ ಜೀಪ್‌ನಲ್ಲಿ ಚಿಕ್ಕಮಗಳೂರು ಕಡೆಗೆ ಪ್ರಯಾಣ ಬೆಳೆಸಿರುವುದು ಪ್ರೋಮೋದಲ್ಲಿ ಕಾಣಿಸಿದೆ. ಐಷಾರಾಮಿ ಕಾರ್‌ನಲ್ಲಿ ಓಡಾಡೋ ಗೌತಮ್ ಜೀಪ್ ತಗೊಂಡು ಬಂದಾಗ ಭೂಮಿ ಹೌಹಾರಿ, 'ಇದೇನಿದು, ಜೀಪ್ ತಗೊಂಡು ಬಂದಿದ್ದೀರಿ..' ಅಂದಿದ್ದಾಳೆ. ಫುಲ್ ಜೋಶ್‌ನಲ್ಲಿರುವ ಡುಮ್ಮ ಸರ್, 'ಚಿಕ್ಕಮಗಳೂರನ್ನು ಜೀಪ್‌ನಲ್ಲಿ ಎಕ್ಸ್‌ಪ್ಲೋರ್ ಮಾಡಿದ್ರೇ ಮಜಾ..' ಅಂದಿದ್ದಾರೆ. ಭೂಮಿಗೆ ಇದು ಸಖತ್ ಥ್ರಿಲ್ಲಿಂಗ್ ಎಕ್ಸ್ ಪೀರಿಯನ್ಸ್. ಮದುವೆ ಆದಮೇಲೆ ಗೌತಮ್ ಜೊತೆ ಅವಳ ಮೊದಲ ಟ್ರಿಪ್ ಕೂಡ ಹೌದು. ಈ ಸೀನ್ ವೀಕ್ಷಕರಿಗೂ ಸಖತ್ ಇಷ್ಟವಾಗಿದೆ. ಅವರು ಈ ಸೀನ್‌ಗಳನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.
ನಾನು ಇಷ್ಟೊಂದು ಮಾತನಾಡುತ್ತಿರುವುದು ಅಪ್ಪನ ಬಳುವಳಿ, ನನ್ನಪ್ಪ ಗೋಲ್ಡ್ ಮೆಡಲಿಸ್ಟ್ : ನಿರೂಪಕಿ ಅನುಶ್ರೀ
ಇನ್ನೊಂದು ಕಡೆ ಭೂಮಿಕಾಳಿಗೆ ಮದುವೆಯಾದ ಬಳಿಕ ಏನೂ ಗಿಫ್ಟ್ ನೀಡಿಲ್ಲ. ಅದಕ್ಕೆ ನಮ್ಮ ಚಿಕ್ಕಮಗಳೂರು ಎಸ್ಟೇಟ್ ಅನ್ನೇ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದೇನೆ ಎಂದು ಗೌತಮ್ ಹೇಳುತ್ತಾರೆ. ಈ ವಿಷಯ ಕೇಳಿ ಅಜ್ಜಮ್ಮ ಖುಷಿಯಾಗಿದ್ದಾರೆ. ಓಕೆ ಕೊಡು, ಆದರೆ, ನಮಗೆ ಮೊಮ್ಮಗನನ್ನು ನೀಡಲು ಮರೆಯಬೇಡ ಎಂದು ಹೇಳಿದ್ದಾರೆ. ಚಿಕ್ಕಮಗಳೂರು ಎಸ್ಟೇಟ್ ಗಿಫ್ಟ್ ನೀಡುವ ಗೌತಮ್ ನಿರ್ಧಾರವನ್ನು ಮನೆಹಾಳ ಮಾವ ಕೇಳಿಸಿಕೊಂಡಿದ್ದಾನೆ. ಈ ವಿಷಯವನ್ನು ಶಕುಂತಲಾದೇವಿ ಕಿವಿಗೆ ಹಾಕೋದು ಪಕ್ಕಾ. ಬಳಿಕ ಇವರು ಮತ್ತೇನಾದ್ರೂ ಮನೆಹಾಳು ಐಡಿಯಾ ಮಾಡಿ ಭೂಮಿಗೆ ಆ ಎಸ್ಟೇಟ್ ದಕ್ಕದ ಹಾಗೆ ಮಾಡುವ ಎಲ್ಲ ಸಾಧ್ಯತೆ ಇದೆ.
ಆದರೆ ಇದ್ಯಾವುದರ ಪರಿವೆಯೇ ಇಲ್ಲದೇ ಭೂಮಿ ಮತ್ತ ಗೌತಮ್ ತೆರೆದ ಜೀಪ್‌ನಲ್ಲಿ ಚಿಕ್ಕಮಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿನ ಪ್ರಕೃತಿ ಸೌಂದರ್ಯ (nature beauty) ನೋಡಿ ಭೂಮಿಕಾ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ. ಗೌತಮ್ ಮತ್ತು ಭೂಮಿಕಾರಿಗೆ ತಮ್ಮ ಹೃದಯದ ಮಾತುಗಳನ್ನು ಹೇಳಲು ಪ್ರಸಕ್ತ ಸ್ಥಳ ನಿಗದಿಯಾಗಿದೆ. ಈ ಹನಿಮೂನ್ ಮೂಲಕ ಇಬ್ಬರು ಮೂವರಾಗುವ ಕನಸಿನಲ್ಲಿ ಗೌತಮ್ ಮನೆಯವರಿದ್ದಾರೆ. ಹಾಗಂತ ಹನಿಮೂನ್ ಇವರು ಅಂದುಕೊಂಡ ಹಾಗೆ ನಡೆಯೋ ಸಾಧ್ಯತೆ ಇಲ್ಲ.
ಮದುವೆ ಬಳಿಕ ಸೀಸನ್ ಸಂಬಂಧ ಕುರಿತು ಮಾತನಾಡಿದ ವಿದ್ಯಾ ಬಾಲನ್; ಏನಿದರ ಒಳಗುಟ್ಟು?
ಏಕೆಂದರೆ ಚಿಕ್ಕಮಗಳೂರಿನ ಎಸ್ಟೇಟ್‌ನಲ್ಲಿ ಇನ್ನೂ ಅನೇಕ ತೊಂದರೆಗಳು ಇವೆ. ಅಲ್ಲಿನ ಜಮೀನನ್ನು ಕಬಳಿಸಲು ಕೆಂಚ ಕಾಯ್ತಾ ಇದ್ದಾನೆ. ಆತನಿಂದ ಇವರಿಗೆ ಏನಾದರೂ ತೊಂದರೆ ಖಂಡಿತಾ ಎದುರಾಗುತ್ತೆ. ಈ ಆತಂಕ ವೀಕ್ಷಕರಿಗೂ ಇದೆ. ಇಲ್ಲೂ ಗೋಳು ಬೇಡ. ನಮಗೆ ಹಾಯಾಗಿ ಚಿಕ್ಕಮಗಳೂರಿನಲ್ಲಿ ಡುಮ್ಮ ಸಾರ್ ಮತ್ತು ಭೂಮಿ ವಿಹರಿಸೋದನ್ನು ನೋಡೋ ಆಸೆ ಎನ್ನುತ್ತಿದ್ದಾರೆ ವೀಕ್ಷಕರು.
ಇನ್ನೊಂದು ಕಡೆ ಭೂಮಿ ಹೇರ್ ಸ್ಟೈಲ್ ಚೇಂಜ್ ಆಗಿದೆ. ಕೂದಲನ್ನು ನೇಯ್ದು ಜಡೆ ಮಾಡುತ್ತಿದ್ದ ಭೂಮಿ ಈಗ ಫ್ರೀ ಹೇರ್ ಸ್ಟೈಲ್‌ನಲ್ಲಿ (free hair) ಕಾಣಿಸಿಕೊಂಡಿದ್ದಾಳೆ. ಇದು ಬಹಳ ಮಂದಿಗೆ ಇಷ್ಟವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.