ಅನುಶ್ರೀ ಮದುವೆ ಫಿಕ್ಸ್, ಒಂದು ಕಂಡೀಷನ್ ಇಟ್ಟು ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ ಆ್ಯಂಕರ್​!

By Shriram Bhat  |  First Published Jul 21, 2024, 7:59 PM IST

'ನನಗೆ ಇದು ಎರಡನೇ ಅಥವಾ ಮೂರನೇ ಮದುವೆ ಅಲ್ಲ. ನನಗೆ ಇನ್ನೂ ಮದುವೆಯೇ ಆಗಿಲ್ಲ'ಎಂದು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಕಾರಣ, ನನಗೆ ಬಹಳಷ್ಟು ಜನರು ಈಗಾಗಲೇ ಮದುವೆ ಮಾಡಿಬಿಟ್ಟಿದ್ದೀರಿ. ಒಮ್ಮ ನಟ ರಕ್ಷಿತ್ ಶೆಟ್ಟಿ ಜೊತೆ ಮದುವೆ ಮಾಡಿಸಿದ್ದೀರಿ. ಇನ್ನೊಮ್ಮೆ ನನ್ನ...


ಆ್ಯಂಕರ್​ ಅನುಶ್ರೀ (Anchor Anushree) ಮದುವೆ ಆಗಲಿದ್ದಾರೆ. ಮದುವೆ ಆಗಲೋ ಬೇಡವೋ ಎಂದು ಯೋಚಿಸಿ ತೂಗುಯ್ಯಾಲೆ ಆಡುತ್ತಿದ್ದ ನಟಿ, ನಿರೂಪಕಿ ಅನುಶ್ರೀ ಕೊನೆಗೂ ಮದುವೆ ಆಗಲು ಒಪ್ಪಿಕೊಂಡಿದ್ದಾರೆ. ಅದೆಷ್ಟೋ ಜನರು ತಮ್ಮ ಮದುವೆ, ತಮ್ಮ ಮಕ್ಕಳ-ಮೊಮ್ಮಕ್ಕಳ ಮದುವೆಗಿಂತ ಹೆಚ್ಚಾಗಿ ಅನುಶ್ರೀ ಮದುವೆಯನ್ನು ನೋಡಲು ಕಾತರದಿಂದ ಕಾಯುತ್ತಿದ್ದರು ಎನ್ನಬಹುದು. ಅಂಥವರಿಗೆ ಇದೀಗ ಶುಭ ಸುದ್ದಿ ಸಿಕ್ಕಿದೆ. ಅನುಶ್ರೀ ಮದುವೆ ಆಗಲಿದ್ದಾರೆ. 

Tap to resize

Latest Videos

undefined

ಅದೆಷ್ಟೋ ಜನರು ಆ್ಯಂಕರ್​ ಅನುಶ್ರೀ ಮದುವೆಯನ್ನು ಸ್ವತಃ ಕಣ್ಣಾರೆ ನೋಡಲಾಗದಿದ್ದರೂ ಟಿವಿಯಲ್ಲೋ ಅಥವಾ ಮದುವೆ ವೀಡಿಯೋವನ್ನಾದರೂ ಸಾಯುವ ಮೊದಲು ನೋಡಬೇಕು ಎಂದುಕೊಂಡಿದ್ದರು ಎನ್ನಬಹುದು. ಏಕೆಂದರೆ, ಅನುಸ್ರೀ ಹೋದಲ್ಲಿ, ಬಂದಲ್ಲಿ ಕುಂತಲ್ಲಿ ನಿಂತಲ್ಲಿ ಮದುವೆ ಯಾವಾಗ ಎಂದೇ ಕೇಳುತ್ತಿದ್ದರಂತೆ. ಗೊತ್ತಿಲ್ಲದ ಉತ್ತರ ಕೊಡಲಾಗದೇ ಅದೆಷ್ಟೋ ಬಾರಿ ಮಾತಿನ ಮಲ್ಲಿ ಅನುಶ್ರೀಯೇ ಸೈಲೆಂಟ್‌ ಆಗಿ ಅಲ್ಲಿಂದ ಜಾರಿಕೊಂಡಿದ್ದರಂತೆ. 

ಬಾಳ ಸಂಗಾತಿ ಯಾರಂತ ಅಧಿಕೃತವಾಗಿ ಅನೌನ್ಸ್ ಮಾಡಲಿರುವ ನಿರ್ದೇಶಕ ತರುಣ್ ಸುಧೀರ್, ಯಾವತ್ತು ಗೊತ್ತಾ?

ಆದರೆ ಈಗ ಸ್ವತಃ ಅನುಶ್ರೀ ತುಳುನಾಡಿನಲ್ಲಿ ಕೊಟ್ಟ ಸಂದರ್ಶನವೊಂದರಲ್ಲಿ ಕ್ಲಿಯರ್ ಆಗಿ ಹೇಳಿದ್ದಾರೆ. 'ಹೌದು, ನಾನು ಮದುವೆ ಆಗಲಿದ್ದೇನೆ. ನನ್ನ ತಂದೆ-ತಾಯಿಯ ದಾಂಪತ್ಯದ ಕಹಿ ಅನುಭವವನ್ನು ಕಣ್ಣಾರೆ ಕಂಡಿದ್ದ ನನಗೆ ಮದುವೆ ಎಂದರೆ ನೋವು ತರುವ ಸಂಗತಿಯಾಗಿತ್ತು. ನಾನು ನನ್ನ ಮದುವೆ ಬಗ್ಗೆ ಯೋಚಿಸಿದಾಗಲೆಲ್ಲಾ ನನಗೆ ಮದುವೆ-ದಾಂಪತ್ಯ ಇವೆಲ್ಲಾ ನನಗೆ ಬೇಡವೇ ಬೇಡ. ನನ್ನ ಅಮ್ಮ-ಅಪ್ಪನ ಸಂಸಾರದ ಸುಖದ ಹಣೆಬರಹವನ್ನು ನೋಡಿದ್ದಾಗಿದೆ, ಸಾಕು' ಎನಿಸುತ್ತಿತ್ತು. 

ನನ್ನದೇ ಪೋಷಕರ ಮುರಿದ ಬಿದ್ದ ಮದುವೆ ನೋಡಿದ ಮೇಲೂ ನನಗೆ ಮದುವೆ ಆಗಬೇಕೆಂಬ ಕನಸು ಕಾಣುವುದರಲ್ಲಿ ಅರ್ಥವೇ ಇಲ್ಲ ಎನ್ನಿಸುತ್ತಿತ್ತು. ಆದರೆ ಈಗ, ವರ್ಷಗಳು ಉರುಳುತ್ತಿವೆ. ನನಗೂ ವಯಸ್ಸಾಗುತ್ತಿದೆ. ಎಲ್ಲರ ಜೀವನದಲ್ಲೂ ಮದುವೆ ಕಹಿ ಘಟನೆ ಆಗಲೇಬೇಕು ಎಂದೇನಿಲ್ಲ, ಅದು ಸುಮಧುರ ಕೂಡ ಆಗಬಹುದು ಎನ್ನಿಸುತ್ತಿದೆ. ಹೀಗಾಗಿ ನಾನು ಮದುವೆಯಾಗಲು ನಿರ್ಧರಿಸಿದ್ದೇನೆ. ಮದುವೆಯೇ ಬೇಡ ಎನ್ನುತ್ತಿದ್ದವಳು ಮದುವೆಗೆ ಗ್ರೀನ್ ಸಿಗ್ನಲ್ ನೀಡಿಬಿಟ್ಟಿದ್ದೇನೆ. 

ಆದರೆ, ಎಲ್ಲರಲ್ಲೂ ಒಂದು ವಿನಂತಿ. 'ನನಗೆ ಇದು ಎರಡನೇ ಅಥವಾ ಮೂರನೇ ಮದುವೆ ಅಲ್ಲ. ನನಗೆ ಇನ್ನೂ ಮದುವೆಯೇ ಆಗಿಲ್ಲ'ಎಂದು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಕಾರಣ, ನನಗೆ ಬಹಳಷ್ಟು ಜನರು ಈಗಾಗಲೇ ಮದುವೆ ಮಾಡಿಬಿಟ್ಟಿದ್ದೀರಿ. ಒಮ್ಮ ನಟ ರಕ್ಷಿತ್ ಶೆಟ್ಟಿ ಜೊತೆ ಮದುವೆ ಮಾಡಿಸಿದ್ದೀರಿ. ಇನ್ನೊಮ್ಮೆ ನನ್ನ ಕಸಿನ್ ಗಂಡನ ಜೊತೆಯಲ್ಲೂ ಆಗಿಹೋಗಿದೆಯಂತೆ. ಅದನ್ನು ನನ್ನ ಕಸಿನ್ ಕಾಲ್ ಮಾಡಿ ಹೇಳಿ ನಕ್ಕಿದ್ದಾಳೆ. ಆದರೆ, ನನಗೆ ನಿಜವಾಗಿಯೂ ಮದುವೆ ಆಗಿಲ್ಲ. 

ಡಾ ರಾಜ್‌ ಜೊತೆ ಭೋಜರಾಜನ ಪಾತ್ರಕ್ಕೆ ಆಸೆ ಪಟ್ಟಿದ್ದ ವಿಷ್ಣುವರ್ಧನ್; ಆದ್ರೆ ಕೈ ತಪ್ಪಿದ್ದು ಹೇಗೆ?

ದಯವಿಟ್ಟು ನಾನು ಈಗ ಮದುವೆಯಾಗಲು ನಿರ್ಧರಿಸಿದ್ದೇನೆ. ಆದರೆ, ನನಗೆ ಸೂಕ್ತ ವರ ಇನ್ನೂ ಸಿಕ್ಕಿಲ್ಲ. ದಯವಿಟ್ಟು ನನ್ನ ಕನಸಿನ ಹುಡುಗನನ್ನು ಯಾರಾದರೂ ಹುಡುಕಿಕೊಡಿ. ನೀವು ಎಷ್ಟು ಬೇಗ ಹುಡಕಿಕೊಡುತ್ತಿರೋ ಅಷ್ಟೂ ಬೇಗ ನಿಮಗೆ ನನ್ನ ಮದುವೆ ಊಟ ಸಿಗುತ್ತದೆ. ಇದು ಗ್ಯಾರಂಟಿ..' ಎಂದಿದ್ದಾರೆ ಆ್ಯಂಕರ್​ ಅನುಶ್ರೀ. ಎಲಿಜೆಬಲ್ ಹುಡುಗರೇ, ಹಾಗಿದ್ದರೆ ಇನ್ನೇಕೆ ತಡ, ನೀವು, ನಿಮ್ಮ ಪರಿಚಯದವರು ಅಥವಾ ಫ್ರೆಂಡ್ಸ್ ಅನುಶ್ರೀ ಜೋಡಿಯಾಗಲು ಟ್ರೈ ಮಾಡಬಹುದು. ಬೆಟರ್ ಲಕ್!

click me!