ಮಹಾನಟಿ ಶೋನಲ್ಲಿ 2ನೇ ರನ್ನರ್ ಅಪ್ ಆಗಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸ್ಪರ್ಧಿಯಾಗಿ ಕಾಲಿಟ್ಟಿರುವ ಗಗನ ಭಾರಿ ತನ್ನ ಜೀವನದ ಅರ್ಧ ಭಾಗ ಜೀ ಕನ್ನಡ ವಾಹಿನಿ ಶೋಗಳಿಗೆ ಮುಡಿಪಾಗಿಡುವುದಾಗಿ ಹೇಳಿದ್ದಾಳೆ. ಇದನ್ನು ಕೇಳಿದ ಹ್ಯಾಟ್ರಿಕ್ ಹಿರೋ ಶಿವಣ್ಣ ಬೆಚ್ಚಿ ಬಿದ್ದಿದ್ದಾರೆ.
ಬೆಂಗಳೂರು (ಜು.21): ಡ್ಯಾನ್ಸ್ ಬರದೇ ಇರೋ ಸೆಲೆಬ್ರಿಟಿಗಳ ಜೊತೆ ಸಾಮಾನ್ಯ ಡ್ಯಾನ್ಸ್ ಪ್ರತಿಭೆಗಳ ಸಮಾಗಮ ಎಂಬ ಥೀಮ್ ಅಡಿಯಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 2024 ರಿಯಾಲಿಟಿ ಶೋ ಆರಂಭವಾಗಿದೆ. ಆದರೆ, ಈ ಡಿಕೆಡಿಗೆ ಮಹಾನಟಿ ಶೋನ 2ನೇ ರನ್ನರ್ ಅಪ್ ಚಿತ್ರದುರ್ಗದ ಗಗಬ ಭಾರಿ ಕೂಡ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾಳೆ. ಡ್ಯಾನ್ಸ್ ಶೋಗೆ ಎಂಟ್ರಿ ಕೊಡುತ್ತಲೇ ತಾನು ಅರ್ಧ ಜೀವನವನ್ನು ಜೀ ಕನ್ನಡ ವಾಹಿನಿಯ ಶೋಗಳಲ್ಲಿಯೇ ಕಳೆಯುವುದಾಗಿ ಘೋಷಣೆ ಮಾಡಿದ್ದಾಳೆ. ಈ ಮಾತುಗಳನ್ನು ಕೇಳಿ ಡಿಕೆಡಿ ಜಡ್ಜ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೆಚ್ಚಿ ಬಿದ್ದಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಮಹಾನಟಿ ರಿಯಾಲಿಟಿ ಶೋನಲ್ಲಿ 3ನೇ ಸ್ಥಾನ ಪಡೆದ ಚಿತ್ರದುರ್ಗದ ಗಗನ ಭಾರಿ ತನ್ನ ಮಾತುಗಳಿಂದಲೇ ನಾಡಿನ ಜನತೆಯ ಮನ ಗೆದ್ದಿದ್ದರು. ಈಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (ಡಿಕೆಡಿ) ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾಳೆ. ಆದರೆ, ತಾನು ಇನ್ನುಮುಂದೆ ಜೀ ಕನ್ನಡ ವಾಹಿನಿಯಿಂದ ನಡೆಸಲಾಗುವ ಎಲ್ಲ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಆಗಮಿಸುತ್ತೇನೆ. ಈ ಮೂಲಕ ತಾನು ಮದುವೆಯಾಗಿ ಮಕ್ಕಳಾದ ನಂತರವೂ ಜೀ ಕನ್ನಡ ವಾಹಿನಿಗಳ ಶೋನಲ್ಲಿ ಭಾಗವಹಿಸುವ ಮೂಲಕ ತನ್ನ ಜೀವನದ ಅರ್ಧ ಭಾಗವನ್ನು ಜೀ ಕನ್ನಡ ವಾಹಿನಿ ಶೋಗಳಲ್ಲಿಯೇ ಕಳೆಯುವುದಾಗಿ ಹೇಳಿಕೊಂಡಿದ್ದಾಳೆ.
ಆಂಕರ್ ಅನುಶ್ರೀ ನೋಡಲು ಪ್ರೇಕ್ಷಕಳಾಗಿ ಬಂದು, ಈಗ ಕೆಮಿಸ್ಟ್ರಿ ಆರಂಭಿಸಿದ ಮಹಾನಟಿ ಗಗನ ಭಾರಿ!
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗ್ರ್ಯಾಂಡ್ ಪ್ರೀಮಿಯರ್ ಕಾರ್ಯಕ್ರಮದಲ್ಲಿ ಆಹಾ ಜುಮ್ ತಕ ಜುಮ್ ಜುಮ್ ಹಾಡಿಗೆ ನೃತ್ಯ ಮಾಡುತ್ತಾ ಎಂಟ್ರಿ ಕೊಟ್ಟ ಚಿತ್ರದುರ್ಗದ ಮಹಾನಟಿ ಖ್ಯಾತಿಯ ಗಗನ ಭಾರಿ ಇಲ್ಲಿಯೂ ತನ್ನ ತುಂಟ ಮಾತುಗಳಿಂದ ವೇದಿಕೆ ಮೇಲಿದ್ದ ಜಡ್ಜಸ್‌ಗಳ ಮನಸ್ಸು ಗೆದ್ದಿದ್ದಾಳೆ. ಈ ವೇಳೆ ನಾನು ಅನುಶ್ರೀ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಳ್ಳುತ್ತಾ, ಅನುಶ್ರೀ ಅವರು ಮಹಾನಟಿ ಶೋನಿಂದ ಡಿಕೆಡಿಗೆ ಬಂದಂತೆ ನಾನು ಅವರನ್ನು ಹಿಂಬಾಲಿಸಿಕೊಂಡಿ ಡಿಕೆಡಿಗೆ ಬಂದಿದ್ದೇನೆ ಎಂದು ಹೇಳಿದ್ದಾಳೆ. ಮುಂದುವರೆದು ತಾನು ಜೀ ಕನ್ನಡದ ಇತರೆ ರಿಯಾಲಿಟಿ ಶೋಗಳಲ್ಲಿಯೂ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದು, ತನಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾಳೆ.
ಸದ್ಯಕ್ಕೆ ನಡೆಯುತ್ತಿರುವ ನಾನ್ ಡ್ಯಾನ್ಸರ್ಸ್ (ನೃತ್ಯ ಬಾರದವರ) ಡಿಕೆಡಿ ಮಾಡಿದಂತೆ, ಮುಂದೆ ನಾನ್ ಸಿಂಗರ್ಸ್ (ಹಾಡು ಹೇಳಲು ಬಾರದವರು) ಅವರಿಗಾಗಿ ಒಂದು ಸರಿಗಮಪ ನಾನ್ ಸಿಂಗರ್ಸ್ ಕಾರ್ಯಕ್ರಮ ಮಾಡಿದರೆ ಅದರಲ್ಲಿಯೂ ನಾನು ಸ್ಪರ್ಧಿಯಾಗಿ ಬರುತ್ತೇನೆ ನನಗೆ ಜೀ ಕನ್ನಡ ವಾಹಿನಿಯಿಂದ ಅವಕಾಶ ಮಾಡಿಕೊಡಬೇಕು. ಇದಾದ ನಂತರ ಸೂಪರ್ ಕ್ವೀನ್ಸ್ ಕಾರ್ಯಕ್ರಮ ಮಾಡಿ, ಇದಾದ ನಂತರ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮ ಮಾಡಿ ಅದಕ್ಕೂ ಒಂದು ಸಾರಿ ಬರ್ತೇನೆ. ಇದಾದ ನಂತರ ನಾನು ಮದುವೆಯಾಗಿ ಜೋಡಿ ನಂಬರ್ 1 ಕಾರ್ಯಕ್ರಮದ ಸ್ಪರ್ಧಿಯಾಗಿ ಗಂಡನನ್ನು ಕರೆದುಕೊಂಡು ಬರ್ತೇನೆ. ಇಷ್ಟಕ್ಕೇ ಆಸೆ ಮುಗಿಯುವುದಿಲ್ಲ ನನ್ನ ಮಕ್ಕಳನ್ನು ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋಗೆ ಕರೆದುಕೊಂಡು ಬರ್ತೇನೆ ಎಂದು ಗಗನ ಭಾರಿ ಹೇಳಿಕೊಳ್ಳುವ ಮೂಲಕ ವೇದಿಕೆ ಮೇಲಿದ್ದ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ. ಹೇಳಿದರು.
ಜೈಲಿನಲ್ಲಿರೋ ದರ್ಶನ್‌ಗೆ ಕಾಟೇರ ನಮಸ್ಕಾರ; ಮದುವೆಗೆ ಆಶೀರ್ವಾದ ಪಡೆದ ನಿರ್ದೇಶಕ ತರುಣ್ ಸುಧೀರ
ಇಷ್ಟಕ್ಕೆ ಸುಮ್ಮನಾಗದೇ ಜೀ ಕನ್ನಡ ವಾಹಿನಿಯ ಧ್ಯೇಯವಾಕ್ಯ 'ಬಯಸಿದ ಬಾಗಿಲು ತೆಗೆಯೋಣ' ಇದೆ ಅಲ್ವಾ ಅದರಂತೆ ಒಮ್ಮೆ ಜೀ ಕನ್ನಡ ವಾಹಿನಿಗೆ ಕಾರ್ಯಕ್ರಮದ ಒಳಗೆ ಬಂದುಬಿಡಿ, ಆಮೇಲೆ ಬಾಗಿಲು ಹಾಕೊಂಡು ಒಳಗೆ ಇದ್ದುಬಿಡಿ' ಎನ್ನುವಂತೆ ನಾನು ಕೂಡ ಜೀ ಕನ್ನಡ ವಾಹಿನಿಯಲ್ಲಿ ಇದ್ದುಬಿಡುತ್ತೇನೆ ಎಂದು ಹೇಳಿದ್ದಾರೆ. ಗಗನ ಭಾರಿ ಮಾತು ಕೇಳಿ ಕಾರ್ಯಕ್ರಮ ನೋಡಲು ಬಂದ ಎಲ್ಲ ವೀಕ್ಷಕರು ಶಿಳ್ಳೆ, ಚಪ್ಪಾಳೆ ಹಾಕಿದ್ದಾರೆ.
ಮಹಾನಟಿ ಶೋನಲ್ಲಿ 2ನೇ ರನ್ನರ್ ಅಪ್ ಆಗಿದ್ದ ಗಗನ ಭಾರಿ: ಕಳೆದ ವಾರವಷ್ಟೇ ಮುಕ್ತಾಯಗೊಂಡ ಮಹಾನಟಿ ರಿಯಾಲಿಟಿ ಶೋನಲ್ಲಿ ಮಹಾನಟಿ ಸ್ಪರ್ಧೆಯಲ್ಲಿ ಒಟ್ಟು 5 ಜನರು ಫೈನಲ್‌ಗೆ ತಲುಪಿದ್ದರು. ಅದರಲ್ಲಿ ಮೈಸೂರಿನ ಪ್ರಿಯಾಂಕಾ ಮಹಾನಟಿ ವಿಜೇತರಾಗಿ ಬಂಗಾರದ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಚಿಕ್ಕಮಗಳೂರು ತರೀಕೆರೆಯ ಧನ್ಯಶ್ರೀ ರನ್ನರ್ ಅಪ್ ಆಗಿದ್ದಾರೆ. ಚಿತ್ರದುರ್ಗದ ಗಗನ ಭಾರಿ 3ನೇ ಸ್ಥಾನ, ಮೂಡಬಿದ್ರೆಯ ಆರಾಧನಾ ಭಟ್ 4ನೇ ಸ್ಥಾನವನ್ನು ಹಾಗೂ ಕಾರವಾರದ ಶ್ವೇತಾ ಅವರು 5ನೇ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಎಲ್ಲ ಮಹಾನಟಿ ಸ್ಪರ್ಧಿಗಳಿಗೂ ಸ್ಮರಣಿಕೆಗಳನ್ನು ಕೊಟ್ಟು ಕಳುಹಿಸಲಾಗಿದೆ.