ಸಾಮಾನ್ಯ ಪ್ರೇಕ್ಷಕರಂತೆ ಆಂಕರ್ ಅನುಶ್ರೀ ನೋಡಲು ಬಂದಿದ್ದ ಗಗನ ಭಾರಿ, ಮಹಾನಟಿ ಶೋ ಮುಗಿಯುತ್ತಿದ್ದಂತೆ ಅನುಶ್ರೀ ಜೊತೆಗೆ ಕೆಮಿಸ್ಟ್ರಿ ಆರಂಭಿಸಿದ್ದಾಳೆ..
ಬೆಂಗಳೂರು (ಜು.21): ಮಹಾನಟಿ ರಿಯಾಲಿಟಿ ಶೋನಲ್ಲಿ 3ನೇ ಸ್ಥಾನ ಪಡೆದುಕೊಂಡ ಚಿತ್ರದುರ್ಗದ ಗಗನ ಭಾರಿ (Gagana Bhari) ಈಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ (Dance Karnataka Dance) ಕಾಣಿಸಿಕೊಂಡಿದ್ದಾರೆ. ಆದರೆ, ವೇದಿಕೆಗೆ ಬರುತ್ತಲೇ ತಾನು ಆಂಕರ್ ಅನುಶ್ರೀ ಅವರೊಂದಿಗೆ ಕೆಮಿಸ್ಟ್ರಿ ಆರಂಭಿಸುತ್ತೇನೆ ಎಂದು ಹೇಳಿವ ಮೂಲಕ ನೋಡುಗರಿಗೆ ಅಚ್ಚರಿ ಮೂಡಿಸಿದ್ದಾರೆ.
ಜೀ ಕನ್ನಡ (Zee Kannada) ವಾಹಿನಿ ವತಿಯಿಂದ ಕೆಲವು ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿ (Chitradurga) ನಡೆದಿದ್ದ ಕಾರ್ಯಕ್ರಮ ವೀಕ್ಷಣೆಗೆ ಸಾಮಾನ್ಯ ಪ್ರೇಕ್ಷಕರಂತೆ ಬಂದಿದ್ದ ಗಗನ ಭಾರಿ ಆಂಕರ್ ಅನುಶ್ರೀ (Anchor Anushree) ನೋಡಿ ಕುಣಿದು ಕುಪ್ಪಳಿಸಿದ್ದಳು. ಈ ವೇಳೆ ಗಗನ ಭಾರಿ ತಾನೂ ನಟಿ ಆಗಬೇಕು, ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಎಂದು ಕನಸು ಕಂಡಿದ್ದಳು. ಇದಾದ ಕೆಲವು ವರ್ಷಗಳು ಕಳೆದ ನಂತರ ಜೀ ಕನ್ನಡದಿಂದ ಮಹಾನಟಿ ರಿಯಾಲಿಟಿ ಶೋ ಆಯೋಜನೆ ಮಾಡಿದ್ದು, ಜನ ಸಾಮಾನ್ಯರಿಗೂ ಆಡಿಷನ್ ಕೊಡಲು ಅವಕಾಶವಿತ್ತು. ಆಡಿಷನ್ ಕೊಟ್ಟಿದ್ದ ಗಗನ ಭಾರಿ ಮಹನಾಟಿ ಶೋಗೆ ಆಯ್ಕೆ ಆಗುತ್ತಾಳೆ. ಇದಾದ ನಂತರ ಮಹಾನಟಿ ವೇದಿಕೆಯಲ್ಲಿ ತನ್ನ ನಟನೆಯನ್ನು ಪ್ರದರ್ಶನ ಮಾಡುವ ಮೂಲಕ ಫೈನಲಿಸ್ಟ್ ಆಗಿದ್ದಳು. ಆದರೆ, ಫೈನಲ್‌ನಲ್ಲಿ 2ನೇ ರನ್ನರ್ ಅಪ್ ಸ್ಥಾನ ಪಡೆಯುತ್ತಾಳೆ.
ಆಂಕರ್ ಅನುಶ್ರೀ ಲವ್ ಮಾಡ್ತಿದ್ದಾರಂತೆ ನಟ ಜಗ್ಗೇಶ್ 2ನೇ ಸಹೋದರ ರಾಮಚಂದ್ರ!
ಮಹಾನಟಿ ರಿಯಾಲಿಟಿ ಶೋನಲ್ಲಿ ಗಗನಾ ಭಾರಿ ತನ್ನ ಕ್ಯೂಟ್ ಹಾಗೂ ಫೀಲ್ಟರ್ ಇಲ್ಲದ ಮಾತುಗಳಿಂದಲೇ ರಾಜ್ಯದ ಜನತೆಯ ಮನಸ್ಸನ್ನೂ ಗೆದ್ದಿದ್ದಳು. ಜೊತೆಗೆ, ತನ್ನ ಉತ್ತಮ ನಟನೆಯೊಂದಿಗೆ ರಾಜ್ಯದ ಜನರನ್ನು ಮನರಂಜಿಸಿದ್ದಳು. ಆದರೆ, ವಿಕ್ಷಕರು ಹೆಚ್ಚು ಇಷ್ಟಪಡುತ್ತಿದ್ದ ಗಗನ ಭಾರಿಗೆ ಮಹಾನಟಿ ಪ್ರಶಸ್ತಿಯ ಬಂಗಾರದ ಕಿರೀಟ ತಪ್ಪಿದ್ದರೂ ಜನರ ಆಶೀರ್ವಾದ ಮಾತ್ರ ತಪ್ಪಲಿಲ್ಲ. ಮಹಾನಟಿ ಶೋನಲ್ಲಿ ಪ್ರೇಕ್ಷಕರಿಗೆ ಹಾಗೂ ಎಲ್ಲ ಜಡ್ಜಸ್‌ಗಳಿಗೆ ಅತಿಹೆಚ್ಚು ಇಷ್ಟವಾಗುತ್ತಿದ್ದಳು. ತನ್ನ ಒಂದು ಫೇವರೇಟ್ ಡೈಲಾಗ್ ಆಗಿದ್ದ 'ಓದುವುದರಲ್ಲಿ 1 ಹೆಜ್ಜೆ ಹಿಂದೆ ಆದರೆ, ನಟನೆಯಲ್ಲಿ 2 ಹೆಜ್ಜೆ ಮುಂದೆ' ಎಂದು ಹೇಳುತ್ತಿದ್ದ ಗಗನ ಭಾರಿ ಈಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಸ್ಪರ್ಧಿಯಾಗಿ ಪುನಃ ಜೀ ಕನ್ನಡ ವೇದಿಕೆಗೆ ಆಗಮಿಸಿದ್ದಾಳೆ.
ಜೀ ಕನ್ನಡದ ಡಿಕೆಡಿ ಶೋನ ಗ್ರ್ಯಾಂಡ್ ಪ್ರೀಮಿಯರ್ ಶೋನಲ್ಲಿ ಡ್ಯಾನ್ಸ್ ಮೂಲಕ ವೇದಿಕೆಗೆ ಎಂಟ್ರಿ ಕೊಟ್ಟಿರುವ ಮೊದಲ ದಿನವೇ ಪಟಪಟನೇ ಮಾತನಾಡುವ ಮೂಲಕ ತನ್ನ ಮಾತಿನ ಕೌಶಲ್ಯ ತೋರಿಸಿದ್ದಾಳೆ. ಡಿಕೆಡಿ ಜಡ್ಜಸ್‌ಗಳಾದ ನಟರಾದ ಶಿವರಾಜ್ ಕುಮಾರ್, ವಿಜಯ್ ರಾಘವೇಂದ್ರ, ಚಿನ್ನಿ ಮಾಸ್ಟರ್ ಹಾಗೂ ನಟಿ ರಕ್ಷಿತಾ ಅವರ ಮನಸ್ಸನ್ನೂ ತನ್ನ ಮಾತಿನ ಮೂಲಕ ಗೆದ್ದಿದ್ದಾಳೆ.
ಗಗನ ಬಗ್ಗೆ ಮಾತನಾಡಿದ ಆಂಕರ್ ಅನುಶ್ರೀ, ಗಗನ ನನ್ನ ಫುಟ್ ಸ್ಟೆಪ್ಸ್ ಫಾಲೋ ಮಾಡ್ತಿದ್ದಾಳೆ. ನಾನು ಮಹಾನಟಿ ಶೋ ಮುಗಿಸಿ ಡಿಕೆಡಿಗೆ ಬಮದರೆ ಅವಳೂ ನನ್ನ ಹಿಂದೆ ಡಿಕೆಡಿಗೆ ಕಂಟೆಸ್ಟೆಂಟ್ ಆಗಿ ಬಂದಿದ್ದಾಳೆ ಎಂದು ಹೇಳುತ್ತಾರೆ. ಆದರೆ, ಚಿತ್ರದುರ್ಗದಲ್ಲಿ ನಡೆದ ಜೀ ಕನ್ನಡ ವಾಹಿನಿಯ ಈವೆಂಟ್ ನೋಡಲು ಬಂದಿದ್ದ ಗಗನ ಭಾರಿ, ನಂತರ ಮಹಾನಟಿ ಶೋನಲ್ಲಿ ಕಾಣಿಸಿಕೊಂಡಿದ್ದಾಳೆ. ಈಗ ಡಿಕೆಡಿ ವೇದಿಕೆಯಲ್ಲಿ ಶಿವಣ್ಣನ ಮುಂದೆ ಡ್ಯಾನ್ಸ್ ಮಾಡಲು ಬಂದಿದ್ದಾಳೆ. ಇದು ಗಗನ ಭಾರಿ ಬೆಳವಣಿಗೆ ಎಂದು ಆಂಕರ್ ಅನುಶ್ರೀ ಹೇಳುತ್ತಾರೆ.
ಆಂಕರ್ ಅನುಶ್ರೀಯನ್ನು ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿದ ಕನ್ನಡಿಗರು; ಇದಕ್ಕೆಲ್ಲಾ ಅಕುಲ್ ಬಾಲಾಜಿ ಹೊಣೆ!
ಈ ವೇಳೆ ಗಗನ ಭಾರಿ ಮೈಕ್ ಹಿಡಿದು ಮಾತನಾಡುತ್ತಾ ನೀವೆಲ್ಲೋ ನಾನಲ್ಲೇ.. ಈ ಜೀವ ಜೀ ಕನ್ನಡದಲ್ಲಿ... ಎಂದು ಹಾಡನ್ನು ಆರಂಭಿಸುತ್ತಾರೆ. ನಾನು ಜೀ ಕನ್ನಡ ಶೋ ನೋಡಲು ಅನುಶ್ರೀಗಾಗಿ ಬಂದಿದ್ದೆ. ಇದಾದ ನಂತರ ಮಹಾನಟಿ ಶೋನಲ್ಲಿ ಆಂಕರ್ ಅನುಶ್ರೀ ಅವರ ಪಕ್ಕದಲ್ಲಿ ನಿಂತುಕೊಂಡು ನಾನು ಟಿವಿ ಪರದೆ ಮೇಲೆ ಕಾಣಿಸಿಕೊಂಡಿದ್ದೇನೆ. ಈ ಮೂಲಕ ನನ್ನದು ಮತ್ತು ಅನುಶ್ರೀ ಅವರದ್ದೊಂದು ಕೆಮಿಸ್ಟ್ರಿ, ಬಾಂಡಿಂಗ್ ಬಿಲ್ಡ್ ಆಗುತ್ತದೆ. ನಾನು ಈ ಬಗ್ಗೆ ಕನಸು ಮನಸಿನಲ್ಲಿಯೂ ಊಹೆ ಮಾಡಿರಲಿಲ್ಲ. ಮತ್ತೆ ಅನುಶ್ರೀ ಜೊತೆಗೇನೆ ಇನ್ನೊಂದು ಶೋನಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.