2021ರಲ್ಲಿ ಇದ್ದಕ್ಕಿದ್ದಂತೆ ಸಣ್ಣ ಆಗಲು ನನ್ನ ತಾಯಿ, ಹೆಂಡ್ತಿ ಕಾರಣ: Akul Balaji

By Suvarna NewsFirst Published Jan 18, 2022, 11:09 AM IST
Highlights

38ನೇ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿರುವ ಅಕುಲ್ ಬಾಲಾಜಿ ಕಾರ್ಯಕ್ರಮ, ವೇಟ್‌ ಲಾಸ್‌ ಜರ್ನಿ, ಫ್ಯಾಮಿಲಿ ಮತ್ತು ಟ್ರೋಲ್ ಬಗ್ಗೆ ಮಾತನಾಡಿದ್ದಾರೆ. 
 

ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ಡ್ಯಾನ್ಸಿಂಗ್ ಚಾಂಪಿಯನ್ ನಿರೂಪಣೆ ಮಾಡುವ ಮೂಲಕ ತಮ್ಮ 2022 ಅನ್ನು ಅದ್ಭುತವಾಗಿ ಆರಂಭಿಸಿದ್ದಾರೆ. ವರ್ಷದ ಆರಂಭದಲ್ಲಿ ಬ್ಯುಸಿಯಾಗಿದ್ದರೆ, ಇಡೀ ವರ್ಷ ಬ್ಯುಸಿಯಾಗಿರುತ್ತೀವಿ ಎಂದು ನಂಬುವ ಅಕುಲ್ ತಮ್ಮ ಜೀವನ ಹೇಗಿದೆ, ಡ್ಯಾನ್ಸ್‌ ಬಗ್ಗೆ ತಮಗಿರುವ ಆಸಕ್ತಿ, ವೇಟ್ ಲಾಸ್ ಜರ್ನಿ ಮತ್ತು ಟ್ರೋಲ್‌ಗಳ ಬಗ್ಗೆ ಮಾತನಾಡಿದ್ದಾರೆ.

'ವರ್ಷದ ಆರಂಭದಲ್ಲಿ ಕೆಲಸ ಶುರು ಮಾಡಬೇಕು, ಎಂಬುವುದು ಅನೇಕರ ಕನಸು. ಆರಂಭದಲ್ಲಿ ಕೆಲಸ ಸಿಕ್ಕರೆ ಇಡೀ ವರ್ಷ ಬ್ಯುಸಿಯಾಗಿರುತ್ತೀವಿ ಅನ್ನೋದು ನನ್ನ ನಂಬಿಕೆ. ಡ್ಯಾನ್ಸ್‌ ನಿರೂಪಕನಾಗಿ ಕೆಲಸ ಶುರು ಮಾಡುವುದಕ್ಕೆ ಸಂತೋಷವಿದೆ. ನಾನು ಜರ್ನಿ ಆರಂಭಿಸಿದ್ದು ಡ್ಯಾನ್ಸ್‌ ರಿಯಾಲಿಟಿ ಶೋಯಿಂದ. 17 ವರ್ಷಗಳ ಹಿಂದೆ ನಡೆದ ಕುಣಿಯೋಣ ಬಾ ಶೋ ಮೂಲಕ ತಮ್ಮ ಕಿರುತೆರೆ ಜರ್ನಿ ಆರಂಭಿಸಿದರು. ಆರ್ಟ್ಸ್‌ಗೆ ನಾನು ತುಂಬಾನೇ ಕನೆಕ್ಟ್‌ ಆಗ್ತೀನಿ. ನಾನೊಬ್ಬ ಟ್ರೈನ್ಡ್‌ ಕ್ಲಾಸಿಕಲ್ ಡ್ಯಾನ್ಸರ್, ಮಾರ್ಷಿಯಲ್ ಆರ್ಟ್ಸ್‌ ಮತ್ತು contemporary ಡ್ಯಾನ್ಸರ್. ದೇಶಗಳನ್ನು ಸುತ್ತಿ ಜನಪ್ರಿಯ ನೃತ್ಯ ಗುರುಗಳ ಜೊತೆ ನೃತ್ಯ ಮಾಡಿರುವೆ. ಈಗ ನಾನು ವೇದಿಕೆ ಮೇಲೆ ಡ್ಯಾನ್ಸ್ ನೋಡಿದರೆ ಯಾರ ಡ್ಯಾನ್ಸ್ ಕ್ಲಿಕ್ ಆಗುತ್ತದೆ ಎಂದು ಹೇಳಬಲ್ಲೆ,' ಎಂದು ಅಕುಲ್ ಬಾಲಾಜಿ ಇ-ಟೈಮ್ಸ್‌ ಟಿವಿ ಜೊತೆ ಮಾತನಾಡಿದ್ದಾರೆ. 

ಡ್ಯಾನ್ಸಿಂಗ್ ಚಾಂಪಿಯನ್:
'ಅನೇಕ ರೀತಿಯ ಡ್ಯಾನ್ಸ್‌ ಫಾರ್ಮ್‌ಗಳಿವೆ. ನಾನು ಎಂದೂ ನೋಡಿರದ ಡ್ಯಾನ್ಸ್‌ನ ಈ ವೇದಿಕೆ ಮೇಲೆ ನೋಡು ಇಷ್ಟ ಪಡುವೆ. ನಾನು Choreograhers ಜೊತೆ ಹೊಸ ಡ್ಯಾನ್ಸ್‌ ಶೈಲಿ ಬಗ್ಗೆ ಚರ್ಚೆ ಮಾಡುವೆ. ರಿಯಾಲಿಟಿ ಶೋ ಮೂಲಕ ಅನೇಕರು ಸೆಲೆಬ್ರಿಟಿಗಳಾಗಿದ್ದಾರೆ. ಸಾಮಾನ್ಯರು ಈ ವೇದಿಕೆಗೆ ಬಂದು ಸೆಲೆಬ್ರಿಟಿ ಆಗಿರುವುದನ್ನು ನೋಡಿದ್ದೀನಿ, ಸೆಲೆಬ್ರಿಟಿಗಳು ಕೂಡ ಸ್ಪರ್ಧಿಗಳಿಗೆ ಸಾಥ್ ನೀಡುತ್ತಾರೆ. ಅದೇ ಈ ಶೋಗಿರುವ ಶಕ್ತಿ. ಚಿತ್ರೀಕರಣ ಮಾಡುವುದಕ್ಕೆ ತುಂಬಾನೇ ಎನರ್ಜಿ ಬೇಕು. ಕೆಲವೊಮ್ಮೆ 18 ಗಂಟೆಗಳ ಕಾಲ ಚಿತ್ರೀಕರಣ ಮಾಡುವೆ. ಒಂದೆರಡು ಗಂಟೆ ಮಾತ್ರ ಎನರ್ಜಿ ಇರುವುದಲ್ಲ. ಇಡೀ ಶೋ ಇರಬೇಕು ಅದು ದೊಡ್ಡ ಚಾಲೆಂಜ್. ಇದುವರೆಗೂ ನಾನು 38 ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿರುವೆ. ಪ್ರತಿಯೊಂದೂ ಶೋ ನನಗೆ ಹೊಸ ಅನುಭವ ನೀಡುತ್ತದೆ. ಎಲ್ಲರನ್ನೂ ಮನೋರಂಜಿಸಲು ನಾನು ಹೊಸ ಟ್ರಿಕ್‌ಗಳನ್ನು ಹುಡುಕುವೆ,' ಎಂದು ಅಕುಲ್ ಹೇಳಿದ್ದಾರೆ. 

ಫ್ಯಾಮಿಲಿ, ವೇಟ್‌ ಲಾಸ್‌: 
'ನಾನು ಮಾಡುವ ಪ್ರ್ಯಾಂಕ್‌ಗಳನ್ನು ನನ್ನ ಮಗ ಎಂಜಾಯ್ ಮಾಡುತ್ತಾರೆ. ನಾನು ವೇದಿಕೆ ಮೇಲೆ ಇದ್ದಾಗ ಅವನು ಹೇಳುತ್ತಾನೆ 'ಅಪ್ಪ ನೀನು ವೇದಿಕೆ ಮೇಲೆ ಫನ್ನಿ ಮತ್ತು silly ಆಗಿರುವುದಕ್ಕೆ ಆಗುವುದಿಲ್ಲ. ಏಕೆಂದರೆ ನೀನು 40ರ ವಯಸ್ಸಿನವರು. ವೇದಿಕೆ ಮೇಲೆ ಪ್ಯಾಂಟ್ ಹರಿದುಕೊಳ್ಳುವುದು ಹೇಗಿರುತ್ತದೆ ಹೇಳಿ?' ಅನ್ನುತ್ತಾನೆ. ನಾನು ಮಾಡುವುದಕ್ಕೆ ಜನರು ನನ್ನ ನೋಡಿ ನಗುತ್ತಾರೆ ಆದರೆ ನನ್ನ ಮಗ ಇದನ್ನು ಎಂಜಾಯ್ ಮಾಡುತ್ತಾನೆ. ನನ್ನ ಪತ್ನಿಗೆ ನಾನು ಮಾಡುವ ಕೆಲಸ ಅಂದ್ರೆ ತುಂಬಾನೇ ಇಷ್ಟ. ಆಕೆಯೂ ಡ್ಯಾನ್ಸರ್ ಆಗಿರುವ ಕಾರಣ ನನಗೆ ಫೀಡ್‌ಬ್ಯಾಕ್ ಕೊಡುತ್ತಾಳೆ. ನನ್ನ ಮಾತುಗಳ ಬಗ್ಗೆ ಮಾತ್ರವಲ್ಲ, ನಾನು ಧರಿಸುವ ಬಟ್ಟೆ, ಹೇರ್‌ಸ್ಟೈಲ್‌ ಮತ್ತು ಮೇಕಪ್‌ ಬಗ್ಗೆ ಹೇಳುತ್ತಾರೆ. ನನ್ನ ತಾಯಿ ಕೂಡ ನನ್ನನ್ನು ಟಿವಿಯಲ್ಲಿ ನೋಡುವುದಕ್ಕೆ ಖುಷಿ ಪಡುತ್ತಾರೆ,' ಎಂದು ಅಕುಲ್ ಫ್ಯಾಮಿಲಿ ಬಗ್ಗೆ ಹೇಳಿದ್ದಾರೆ. 

ಪ್ರಯತ್ನ ಮಾಡೋಣ ನನ್ನ ಇತಿಮಿತಿಯಲ್ಲಿದ್ದರೆ ಡ್ಯಾನ್ಸ್‌ ಮಾಡ್ತೀನಿ: ನಟ Vijay Raghavendra

'ನಾನು ಸಣ್ಣ ಆಗಬೇಕೆಂದು ಮೊದಲು ಹೇಳಿದ್ದು ನನ್ನ ತಾಯಿ. ನಾನು ಬ್ಯಾಡ್‌ ಫ್ಯಾಟ್‌ ಬೆಳಸಿಕೊಂಡಿದ್ದು, ಕರಗಿಸು ಎಂದು ಅಮ್ಮ ಹೇಳಿದ್ದು. ಮಗ ಫಿಟ್ ಆ್ಯಂಡ್ ಫ್ಯಾಬ್ ಆಗಿರಬೇಕು ಎಂದು ಅವರಿಗೆ ಇಷ್ಟ. 2021ರಲ್ಲಿ ನಡೆದ ಬೆಸ್ಟ್‌ ವಿಚಾರ ಅಂದ್ರೆ ನಾನು ಸಣ್ಣ ಆಗಿದ್ದು. ನನ್ನ ಪತ್ನಿ ಕೂಡ ನನಗೆ inspire ಮಾಡುತ್ತಾರೆ. ಸಣ್ಣ ಆಗಲು ನನಗೆ ತುಂಬಾ ಮೆಸೇಜ್‌ಗಳು ಬರುತ್ತಿದ್ದವು. ಆಗ ನನಗೆ ಅರಿವಾಯ್ತು. ಡಯಟ್ ಮಾಡುವುದು ತುಂಬಾನೇ ಕಷ್ಟ. ನಾನು ದೇಸಿ ಊಟ ಲವರ್. ಈ ಸಮಯದಲ್ಲಿ ನಾನು ಎಲ್ಲಾ ಊಟ ಕಟ್ ಮಾಡಿ ಬರೀ, salads ಸೇವಿಸುತ್ತಿದ್ದೆ,' ಎಂದಿದ್ದಾರೆ ಅಕುಲ್.

ಅಪ್ಪುಗೆ ಅವಮಾನ ಮಾಡಿದ್ರಾ ರಕ್ಷಿತಾ, ಪ್ರೇಮ್, ರಚಿತಾ, ಅಕುಲ್?

ಟ್ರೋಲ್:
'ಟ್ರೋಲ್‌ ನಮ್ಮ ಕೆಲಸದ ಒಂದು ಭಾಗ. ಪಬ್ಲಿಕ್ ಫಿಗರ್ ಆದಮೇಲೆ ನಾವು ಟ್ರೋಲ್ ಆಗುವುದು ತುಂಬಾನೇ ಕಾಮನ್. ನನ್ನದು ವಿಡಿಯೋಗಳು ತುಂಬಾ ಸಮಯಗಳ ಕಾಲ ಟ್ರೋಲ್ ಆಯ್ತು ಆದರೂ ಪರ್ವಾಗಿಲ್ಲ ಸಮಯ ಕಳೆಯುತ್ತಿದ್ದಂತೆ, ಸತ್ಯ ತಿಳಿಯುತ್ತದೆ. ಟ್ರೋಲ್‌ ಮೂಲಕ ಒಬ್ಬರಿಗೆ ಅವಮಾನ ಮಾಡಬಾರದು ಅವರನ್ನು ನೋಡಿ ನಗುವಂತೆ ಮಾಡಬಾರದು.  Healthier ಟ್ರೋಲ್ ಆದರೂ ಪರ್ವಾಗಿಲ್ಲ. ನಾನು ಸೋಷಿಯಲ್ ಮೀಡಿಯಾ ವ್ಯಕ್ತಿ ಅಲ್ಲ. ರಿಯಲ್ ಆಗಿ ಜನರನ್ನು ಭೇಟಿ ಮಾಡಿ, ಮಾತನಾಡಿ ಸಮಯ ಕಳೆಯುವುದಕ್ಕೆ ಇಷ್ಟ ಪಡುವೆ. ಜನಪ್ರಿಯ ಎಂಬ ಪ್ರೆಶರ್‌ನಿಂದ ಬಳಸುತ್ತಿರುವೆ,' ಎಂದಿದ್ದಾರೆ.

click me!