Anil Kumble In Saregamapa: ಸರಿಗಮಪ ಚಾಂಪಿಯನ್ ಶಿಪ್ ಸಂಗೀತ ಹಬ್ಬದಲ್ಲಿ ಜಂಬೋ ಸವಾರಿ

Contributor Asianet   | Asianet News
Published : Dec 24, 2021, 05:54 PM ISTUpdated : Dec 24, 2021, 06:03 PM IST
Anil Kumble In Saregamapa: ಸರಿಗಮಪ ಚಾಂಪಿಯನ್ ಶಿಪ್ ಸಂಗೀತ ಹಬ್ಬದಲ್ಲಿ ಜಂಬೋ ಸವಾರಿ

ಸಾರಾಂಶ

ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ಸರಿಗಮಪ ಚಾಂಪಿಯನ್ ಶಿಪ್ ಕನ್ನಡಿಗ ಜಂಬೋ ಖ್ಯಾತಿಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಪತ್ನಿ ಚೇತನಾ ವಿಶೇಷ ಅತಿಥಿ

ಇದು ಕನ್ನಡ ಕಿರುತೆರೆ ಲೋಕ ಸಂಭ್ರಮಿಸುವ ಅದ್ಭುತ ಕ್ಷಣ. ಬಹುದಿನಗಳಿಂದ ಕರ್ನಾಟಕದ ಜನತೆ ಎದುರು ನೋಡುತ್ತಿದ್ದ ಆ ವಿಶೇಷ ಘಳಿಗೆಗೆ ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ಸರಿಗಮಪ ಚಾಂಪಿಯನ್ ಶಿಪ್ ವೇದಿಕೆ ಸಾಕ್ಷಿಯಾಗಿದೆ. ಇಡೀ ವಿಶ್ವವೇ ಮೆಚ್ಚಿ ಮೆರೆಸಿರುವ ಭೂಮಿತೂಕದ ಮನುಷ್ಯ, ಸ್ಪಿನ್ ಮಾಂತ್ರಿಕ, ಕ್ರಿಕೆಟ್ ದಿಗ್ಗಜ  ಎಲ್ಲಕ್ಕಿಂತಲೂ ಮಿಗಿಲಾಗಿ ನಮ್ಮೆಲ್ಲರ ಪ್ರೀತಿಯ ಹೆಮ್ಮೆಯ ಕನ್ನಡಿಗ ಜಂಬೋ ಖ್ಯಾತಿಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಪತ್ನಿ ಚೇತನಾ ಜೊತೆ ವಿಶೇಷ ಅತಿಥಿಯಾಗಿ ಆಗಮಿಸಿದ್ದಾರೆ.

ಪ್ರತಿವಾರ ಅನೇಕ ಪ್ರಯೋಗ, ಅದ್ಧೂರಿತನದೊಂದಿಗೆ ಮನರಂಜಿಸುತ್ತ  ಸಂಗೀತ ಪ್ರಿಯರ ಮನಗೆದ್ದಿರುವ ನಂಬರ್ 1 ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪ ಚಾಂಪಿಯನ್ ಶಿಪ್ . ವಾರಂತ್ಯದ ಈ ವಿಶೇಷ ಸಂಚಿಕೆಯಲ್ಲಿ ಎಂದಿನಂತೆ ಮಹಾಗುರು ನಾದಬ್ರಹ್ಮ ಹಂಸಲೇಖ , ವಿಜಯ್ ಪ್ರಕಾಶ್ , ಅರ್ಜುನ್ ಜನ್ಯ , ಅನುಶ್ರೀ , ಮ್ಯೂಸಿಷಿಯನ್ಸ್ , ಜ್ಯೂರಿ ಮೆಮ್ಬರ್ಸ್ ಅಷ್ಟೇ ಅಲ್ಲದೆ 6 ತಂಡಗಳ ನಾವಿಕರ ಉಪಸ್ಥಿತಿಯಲ್ಲಿ ಅನಿಲ್ ಕುಂಬ್ಳೆ ಇಡೀ ಕಾರ್ಯಕ್ರಮವನ್ನು ಎಂಜಾಯ್ ಮಾಡಿದರು.

ಸೀನನ್ 6ಕ್ಕೆ ಬಂದಾಗಲೇ ಮದುವೆ ಅಂತಿದ್ರು.. ಈಗ ಸಿಹಿ ಸುದ್ದಿ ಕೊಟ್ಟ ಬೆಡಗಿ

'ಮನಮೆಚ್ಚಿದ ಹಾಡುಗಳ' ಸುತ್ತಿನಲ್ಲಿ ಅತ್ಯಂತ ಉತ್ಸಾಹದ ಸ್ವರ ಸೇನಾನಿಗಳ ಗಾಯನಕ್ಕೆ ಅನಿಲ್ ಕುಂಬ್ಳೆ ಮನಸೋತಿದ್ದಾರೆ. ಕ್ರಿಕೆಟ್ ಜಗತ್ತಿನ ಹಲವು ವಿಸ್ಮಯ, ನೆನಪು ,ಅನುಭವಗಳನ್ನು ಹಂಚಿಕೊಂಡಿರುವ ಈ ಬೌಲಿಂಗ್ ಸಾರ್ವಭೌಮ 'ಮಾಮರವೆಲ್ಲೋ ಕೋಗಿಲೆ ಎಲ್ಲೋ' ಹಾಡನ್ನೂ ಹಾಡಿ ತಮ್ಮಲ್ಲಿರುವ ಅದ್ಭುತ ಹಾಡುಗಾರನನ್ನು ಈ ಕಾರ್ಯಕ್ರಮದ ಮೂಲಕ ಲೋಕಕ್ಕೆ ಪರಿಚಯಿಸಿದ್ದಾರೆ.

ಮತ್ತೊಂದು ವಿಶೇಷವೆಂದರೆ ಕ್ರಿಕೆಟ್ ಪ್ರಿಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ವಿಡಿಯೋ ಕಾಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕುಂಬ್ಳೆಯವರೊಟ್ಟಿಗಿನ ಅವರ ಒಡನಾಟದ ಬಗ್ಗೆ ಅಪರೂಪದ ಮಾಹಿತಿಗಳನ್ನು ಹಂಚಿಕೊಂಡು ಸರಿಗಮಪ ಚಾಂಪಿಯನ್ ಶಿಪ್ ಅನ್ನು ಮತ್ತಷ್ಟು ಶ್ರೀಮಂತಗೊಳಿಸಿದರು. ಇನ್ನೂ ಹಲವು ವಿಶೇಷತೆಗಳನ್ನು ಹೊತ್ತಿರುವ ಈ ವಾರದ ಸರಿಗಮಪ ಚಾಂಪಿಯನ್ ಶಿಪ್ ಕಾರ್ಯಕ್ರಮ ಇದೇ ಡಿಸೆಂಬರ್ 25 ಶನಿವಾರ ರಾತ್ರಿ 7.30 ರಿಂದ 10.30 ರವರೆಗೂ ಪ್ರಸಾರವಾಗಲಿದೆ.

ಕನ್ನಡಿಗರ ಬಹುದಿನದ ಕೋರಿಕೆಯನ್ನು ಗೌರವಿಸಿ ಅದನ್ನು ನನಸು ಮಾಡಿರುವ ಜೀ ಕನ್ನಡ ವಾಹಿನಿಗೆ ಎಲ್ಲೆಡೆ ಅಭಿನಂದನೆಯ ಮಹಾಪೂರ ಹರಿದುಬರುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?