
ಕನ್ನಡ ಕಿರುತೆರೆ ಜನಪ್ರಿಯ ನಟಿ ಕಾವ್ಯಾ ಗೌಡ (Kavya Gowda) ಮತ್ತು ಉದ್ಯಮಿ ಸೋಮಶೇಖರ್ (Somashekar) ರವರು ಡಿಸೆಂಬರ್ 2ರಂದು ದಾಂಪತ್ಯ ಜೀವನಕ್ಕೆ (Marriage) ಕಾಲಿಡಲು ಸಜ್ಜಾಗಿದ್ದಾರೆ. ಮದುವೆ ತಯಾರಿಯಲ್ಲಿ ಬ್ಯುಸಿಯಾಗಿರುವ ನಟಿ ತಮ್ಮ ಮದುವೆ ಹೇಗಿರಬೇಕು ಎಂದು ಕನಸು ಕಂಡಿದ್ದರು, ಎಂಬುದನ್ನು ರಿವೀಲ್ ಮಾಡಿದ್ದಾರೆ. ಅಲ್ಲದೆ ಇತ್ತೀಚಿಗೆ ನಡೆದ ಬ್ಯಾಚುಲರ್ ಪಾರ್ಟಿ (Bachelor Party) ಹೇಗಿತ್ತು ಈ ಥೀಮ್ ಆಯ್ಕೆ ಮಾಡಿಕೊಳ್ಳಲು ಕಾರಣವೇನು ಎಂದು ತಿಳಿಸಿದ್ದಾರೆ.
'ಈ ಹಿಂದೆಯೇ ಮದುವೆ ಆಗಬೇಕಿತ್ತು. ಆದರೆ ಕೊರೋನಾದಿಂದ (Covid19) ದಿನಾಂಕ ಮುಂದೂಡಲಾಗಿತ್ತು. ನನ್ನ ಕುಟುಂಬದಲ್ಲಿ ಮದುವೆ ಆಗುತ್ತಿರುವ ಕೊನೆ ಹುಡುಗಿ ನಾನೇ. ಹಾಗೇ ಸೋಮಶೇಖರ್ ಕುಟುಂಬದಲ್ಲಿ ಅವರೇ ಕಿರಯವರು. ಹೀಗಾಗಿ ಮದುವೆಯ ಸಣ್ಣ ಪುಟ್ಟ ಕಾರ್ಯಕ್ರಮಗಳನ್ನೂ ನಾವು ಅದ್ಧೂರಿಯಾಗಿ ಮಾಡಬೇಕು ಎಂದು ಪ್ಲಾನ್ ಮಾಡಿದೆವು. ಸಂಗೀತ್ (Sangeeth, ಮೆಹೆಂದಿ (Mehendi), ಆರತಕ್ಷತೆ (Reception), ಮುಹೂರ್ತ ಮತ್ತು ಕಾಕ್‌ಟೇಲ್ ಪಾರ್ಟಿ (Cocktail party) ಎಲ್ಲವೂ ಪ್ಲಾನ್ ಆಗಿದೆ. ಇದು ಒಂದು ಬಿಗ್ ಫ್ಯಾಟ್ ಇಂಡಿಯನ್ (Big fat Indian wedding) ಮದುವೆ ಆಗಬೇಕು, ಇದರ ಬಗ್ಗೆ ನಾನು ಸದಾ ಕನಸು ಕಾಣುತ್ತಿದ್ದೆ. ಸಮಯ, ಸಂದರ್ಭ ಸರಿ ಹೋಗಲಿ ಎಂದು ಕಾಯುತ್ತಿದ್ದೆವು...ಕೊನೆಗೂ ದಿನಾಂಕ ಫಿಕ್ಸ್ ಮಾಡಿದ್ದೀವಿ,' ಎಂದು ಕಾವ್ಯಾ ಗೌಡ ಟೈಮ್ಸ್ ಆಫ್ ಇಂಡಿಯಾಗೆ ನೀಡಿರುವ ಸಂದರ್ಶನದಲ್ಲಿ ಹೇಳಿ ಕೊಂಡಿದ್ದಾರೆ.
ಇನ್ನು ಕೆಲವು ದಿನಗಳ ಹಿಂದೆ ಕ್ರಿಶ್ಚಿಯನ್ (Christian) ರೀತಿಯಲ್ಲಿ ಬ್ಯಾಚುಲರ್ ಪಾರ್ಟಿ ಹಮ್ಮಿಕೊಂಡ ಕಾವ್ಯಾ ಗೌಡ ಮತ್ತು ಸ್ನೇಹಿತರು ಡಿಸೈನರ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದರು. ಸಹೋದರಿ ಭವ್ಯಾ ಗೌಡ (Bhavya Gowda) ಮತ್ತು ಅವರು ಪುತ್ರಿ ಮತ್ತು ಭಾವಿ ಪತಿ ಸೋಮಶೇಖರ್ ಕೂಡ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು. 'ನನ್ನ ಮದುವೆಯ ಎಲ್ಲಾ ಕಾರ್ಯಕ್ರಮಗಳಿಗೂ ಒಂದೊಂದು ಥೀಮ್ (Theme Wedding) ಬಗ್ಗೆ ನಾನು ಚಿಂತಿಸಿದ್ದೆ. ಇದಾದ ಮೇಲೆ ಮೆಹೆಂದಿ, ಬಳೆ ಶಾಸ್ತ್ರ ಆನಂತರ ಸಂಗೀತ್. ಆರತಕ್ಷತೆ ಡಿಸೆಂಬರ್ 1ರಂದು ನಡೆಯಲಿವೆ. 2ರಂದು ಮುಹೂರ್ತ. ಇವೆಲ್ಲಾ ಆದ ನಂತರ ಪಾರ್ಟಿ ಹಮ್ಮಿಕೊಂಡಿದ್ದೀವಿ,' ಎಂದು ಕಾವ್ಯಾ ತಿಳಿಸಿದ್ದಾರೆ.
ಸ್ಕಿನ್ ಕೇರ್ (Skin care),ಮೇಕಪ್, ಬಟ್ಟೆ ಹೀಗೆ ತಯಾರಿಯಲ್ಲಿರುವ ನಟಿ ಕ್ಯಾವ್ಯಾ ಗೌಡ ಕೆಲವು ತಿಂಗಳುಗಳ ಹಿಂದೆ ಫ್ಯಾಮಿಲಿ ಜೊತೆ ಜಾಲಿ ಟ್ರಿಪ್ (Trip) ಮಾಡಿದ್ದರು. ಕುಟುಂಬಸ್ಥರ ಜೊತೆ ಭಾವಿ ಪತಿ ಸೋಮಶೇಖರ್ ಕೂಡ ಭಾಗಿಯಾಗಿದ್ದರು. ಇಬ್ಬರೂ ಕೆಲವು ಸ್ಪೂರ್ಟ್ಸ್ ಗೇಮ್ ಜೊತೆಗೆ ಟ್ರೆಕ್ಕಿಂಗ್ (trecking) ಮಾಡಿದ್ದಾರೆ.
ಮದುವೆ ವಿಚಾರ ಅನೌನ್ಸ್ ಮಾಡಲು ಕಾವ್ಯಾ ಮತ್ತು ಸೋಮಶೇಖರ್ ದುಬೈನಲ್ಲಿ (Dubai) ವಿಭಿನ್ನ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿದ್ದರು. ಆರಂಭದಲ್ಲಿ ಬಹುತೇಕ ಕೂಲಿಂಗ್ ಗ್ಲಾಸ್ (Cooling glass) ಹಾಕಿಕೊಂಡ ಭಾವೀ ಪತಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದ ಕಾವ್ಯಾಗೆ, ಅಭಿಮಾನಿಗಳು ಪೂರ್ತಿ ಮುಖ ಕಾಣುವಂತೆ ಫೋಟೋ ಹಾಕಲು ಡಿಮ್ಯಾಂಡ್ ಮಾಡಿದ್ದರು. ಹೀಗಾಗಿ ಸೋಷಿಯಲ್ ಮೀಡಿಯಾ (Social Media) ತುಂಬಾ ಭಾವಿ ಪತಿ ಜೊತೆಗಿರುವ ಫೋಟೋಗಳು ಹೆಚ್ಚಿವೆ. ಕಾವ್ಯಾ ಆಮಂತ್ರಣ ಪತ್ರಿಕೆ (Wedding Invitation) ಅಥವಾ ಡಿಜಿಟಲ್ ಕಾರ್ಡ್ ಯಾವುದೂ ರಿವೀಲ್ ಅಗಿಲ್ಲ, ಯಾರೆಲ್ಲ ಆಗಮಿಸಿ ನವ ಜೋಡಿಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.