Raja Rani ಕಿರೀಟ ಮತ್ತು ದೊಡ್ಡ ಮೊತ್ತ ಪಡೆದುಕೊಂಡ ನೇಹಾ-ಚಂದು!

By Suvarna News  |  First Published Nov 26, 2021, 3:08 PM IST

ರಿಯಲ್ ಲೈಫ್ ರಾಜಾ ರಾಣಿಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದು ಬರುತ್ತಿವೆ ಶುಭಾಶಯಗಳು. ನೇಹಾ - ಚಂದು ಕೈ ಸೇರಿದೆ ದೊಡ್ಡ ಬಹುಮಾನದ ಮೊತ್ತ.  
 


ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜಾ ರಾಣಿ (Raja Rani) ರಿಯಾಲಿಟಿ ಶೋ ಅಂತ್ಯವಾಗಿದೆ. ಕಳೆದ ವಾರ ಪ್ರಸಾರವಾದ ಗ್ರ್ಯಾಂಡ್ ಫಿನಾಲೆಯಲ್ಲಿ (Grand Finale) ವಿನ್ನರ್ ಟ್ರೋಫಿಯನ್ನು ನೇಹಾ ಗೌಡ (Neha Gowda) ಮತ್ತು ಚಂದನ್ ಗೌಡ (Chandan Gowda) ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಎರಡನೇ ಸ್ಥಾನವನ್ನು ಇಶಿತಾ (Ishita) ಮತ್ತು ಮುರುಗಾನಂದ (Muruga) ಪಡೆದುಕೊಂಡಿದ್ದಾರೆ. ರಿಯಾಲಿಟಿ ಶೋ ಅಂತ್ಯವಾಗಿದ್ದಕ್ಕೆ ವೀಕ್ಷಕರು ಬೇಸರ ವ್ಯಕ್ತ ಪಡಿಸಿದ್ದರೂ, ಮತ್ತೊಂದು ಆರಂಭಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ. 

ನೇಹಾ ಮತ್ತು ಚಂದನ್ ಬಾಲ್ಯದಿಂದಲೂ ಒಟ್ಟಿಗೆ ಓದಿ ಬೆಳೆದವರು. ಶಾಲೆಗೆ (School) ಹೋಗುವಾಗಲೇ ನೇಹಾ ಚಂದನ್‌ಗೆ ಪತ್ರ (letters) ಬರೆದು ಪ್ರೀತಿ ಹೇಳಿಕೊಳ್ಳುತ್ತಿದ್ದರಂತೆ. ಇಬ್ಬರು ಸುಮಾರು  25 ವರ್ಷಗಳಿಂದ ಪ್ರೀತಿಸುತ್ತಿದ್ದಾರೆ ಎಂದು ಆಗಾಗ ತೀರ್ಪುಗಾರ ಸೃಜನ್ ಲೋಕೇಶ್ (Srujan Lokesh) ಹೇಳುತ್ತಿದ್ದರು. ಅಲ್ಲದೇ ಕಾರ್ಯಕ್ರಮದಲ್ಲಿದ್ದ ಪ್ರತಿಸ್ಪರ್ಧಿಗಳಿಗೂ ಇವರಿಬ್ಬರ ನಡುವಳಿಕೆ, ಪ್ರೀತಿ ಸ್ಪೂರ್ತಿಯಾಗಿತ್ತು. 

Tap to resize

Latest Videos

ಮೊದಲ ಸ್ಥಾನ ಪಡೆದುಕೊಂಡು, ನೇಹಾ ಮತ್ತು ಚಂದನ್ ಟ್ರೋಫಿ ಜೊತೆಗೆ 5 ಲಕ್ಷ ಹಣವನ್ನು ಗೆದ್ದಿದ್ದಾರೆ. ಎರಡನೇ ಸ್ಥಾನದಲ್ಲಿದ್ದ ಇಶಿತಾ ಮತ್ತು ಮುರುಗಾ ಅವರು 2.5 ರೂ. ಲಕ್ಷ ಹಣ ಗೆದ್ದಿದ್ದಾರೆ.  ಫಿನಾಲೆ ತಲುಪಿದ ಪ್ರತಿ ಜೋಡಿಯ ಕುಟುಂಬಸ್ಥರು (Family) ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅಲ್ಲದೆ ನೇಹಾ ತಂದೆ ರಾಮಕೃಷ್ಣ (Makeup artiste Ramakrishna) ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿರುವ ಕಾರಣ ಅವರನ್ನು ವೇದಿಕೆಯ ಮೇಲೆ ಕರೆದು ಗೌರವಿಸಲಾಗಿತ್ತು. 

'Congratulations ಪಪ್ಪಾ, ಇಂಡಸ್ಟ್ರಿಯಲ್ಲಿ ನೀವು 50 ವರ್ಷಗಳನ್ನು ಪೂರೈಸಿದ್ದೀರಿ,' ಎಂದು ನೇಹಾ ಗೌಡ ಹೇಳಿದ್ದಾರೆ. ಈ ವಿಡಿಯೋವನ್ನು ಸಹೋದರಿ ಸೋನು ಗೌಡ (Sonu gowda) ಹಂಚಿಕೊಂಡು, 'ಚಿತ್ರರಂಗದಲ್ಲಿ 50 ವರ್ಷಗಳ ಅನುಭವ, ಖಂಡಿತವಾಗಿಯೂ ಇದೊಂದು ದೊಡ್ಡ ಸಾಧನೆ. ಚಿತ್ರರಂಗದಲ್ಲಿದ್ದು ಅದರಲ್ಲಿ ಕಷ್ಟ-ಸುಖಗಳನ್ನು ಅರ್ಥಮಾಡಿಕೊಂಡಿದ್ದಾರೆ. ನನ್ನ ತಂದೆಯ ಬಗ್ಗೆ ಹೆಮ್ಮೆಯಾಗುತ್ತಿದೆ. ನನ್ನನ್ನು ಅನೇಕರು ಕೇಳುತ್ತಾರೆ, ಅಂಕಲ್ ಯಾಕೆ ಇಷ್ಟೊಂದು ಬ್ಯುಸಿ ಇರುತ್ತಾರೆಂದು. ಅದಕ್ಕೆ ಉತ್ತರ ಇಲ್ಲಿದೆ, ಅವರು ಸದಾ ಎಂಗೇಜ್ ಆಗಿರುತ್ತಾರೆ, ಶೂಟಿಂಗ್ ಇರಲಿ, ಇಲ್ಲದೆ ಇರಲಿ, ಕೆಟ್ಟ ಕ್ಲೈಮೇಟ್ (Bad Climate) ಇರಲಿ, ಲಾಕ್‌ಡೌನ್‌ ಇರಲಿ, ಬಿಡಲಿ ಅವರಿಗೆ ದಿನ ಶುರುವಾಗುವುದು ಬೆಳಗ್ಗೆ 5.30ಕ್ಕೆ.  ದಿನವೂ ಪ್ರೊಡಕ್ಟಿವ್ ಡೇ (Productive day) ಆಗಿರುವಂತೆ ನೋಡಿಕೊಳ್ಳುತ್ತಾರೆ. ಏನಾದರೂ ಹೇಳಿದರೆ ತಂದೆ ಹೇಳುವ ಟಿಪಿಕಲ್ ಡೈಲಾಗ್ ಅಂದ್ರೆ  ನೋಡಿ ಸ್ವಾಮಿ ನಾವು ಇರೋದೇ ಹೀಗೆ' ಎಂದು ಹೇಳುತ್ತಾರೆ' ಎಂದು ನಟಿ ಸೋನು ಗೌಡ ಬರೆದುಕೊಂಡಿದ್ದಾರೆ. 

ಹೆಣ್ಣು ಮಗುವನ್ನು ದತ್ತು ಪಡೆದು ಕೊಳ್ಳಲು ಮುಂದಾದ ಕಿರುತೆರೆ ನಟಿ ನೇಹಾ ಗೌಡ!

ಮಜಾ ಟಾಕೀಸ್ (Maja Talkies) ನಂತರ ಸೃಜನ್ ಲೋಕೇಶ್ ತುಂಬಾನೇ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ರಾಜಾ ರಾಣಿ ಶೋನಲ್ಲಿ. ಪ್ರತಿಯೊಂದು ಜೋಡಿಗೂ ಶಕ್ತಿ ರೂಪದಲ್ಲಿ ನಿಂತು ಅವರ ಬೆನ್ನು ತಟ್ಟಿ ಏನಾದರೂ ವಿಭಿನ್ನ ಪ್ರಯತ್ನ ಮಾಡಲು ಸಹಾಯ ಮಾಡಿದ್ದಾರೆ. ಮೊದಲ ಬಾರಿ ನಟಿ ತಾರ ಅನುರಾಧ (Tara Anuradha) ಕೂಡ ತೀರ್ಪುಗಾತಿಯಾಗಿ ಆಗಿ ಕಾಣಿಸಿಕೊಂಡಿದ್ದು, ಈಗ ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಕೂಡ ಇರಲಿದ್ದಾರೆ. 

ಅವಸರದಲ್ಲಿ ಜಿಲೇಬಿ ತಿನ್ನಲು ಹೋಗಿ ಚಂದನ್‌ ಶೆಟ್ಟಿ ಬೆರಳು ಕಚ್ಚಿದ ನಿವೇದಿತಾ ಗೌಡ!

ಶ್ರೀಕಾಂತ್- ಹರಣಿ, ಸಮೀರ್ ಆಚಾರ್ಯ- ಶ್ರಾವಣಿ, ಚಂದನ್ ಶೆಟ್ಟಿ (Chandan Shetty)- ನಿವೇದಿತಾ ಗೌಡ (Niveditha Gowda), ಅನು- ಅಯ್ಯಪ್ಪ, ಪವನ್- ಸುಮನ್, ರಾಜು ತಾಳಿಕೋಟಿ- ಪ್ರೇಮ-ಪ್ರೇಮ ಹೀಗೆ ಪ್ರತಿಯೊಂದು ಜೋಡಿಯೂ ಎಲಿಮಿನೇಟ್ ಆದರೂ ಜನರ ಮನಸ್ಸಿಗೆ ಹತ್ತರವಾಗಿದ್ದಾರೆ.

click me!