
ಹಿಂದಿ ಜನಪ್ರಿಯ ನಿರೂಪಕ ಹಾಗೂ ನಟ ಕರಣ್ ಕುಂದ್ರಾ (Karan Kunddra) ಬಿಗ್ ಬಾಸ್ ಸೀಸನ್ 15ರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹೊರ ಬರುತ್ತಿದ್ದಂತೆ, ಅದೆಷ್ಟೋ ಹೆಣ್ಣು ಮಕ್ಕಳು ಫಿದಾ ಆಗ್ಬಿಟ್ಟಿದ್ದಾರೆ. ಒಂದು ದಿನವೂ ಮಿಸ್ ಮಾಡದೇ ಸಂಚಿಕೆ ನೋಡಬೇಕು ಎಂದು ನಿರ್ಧಾರ ಮಾಡಿಕೊಂಡರು. ಆದರೆ ಕರಣ್ ಅಸಲಿ ಗುಣ ನೋಡುತ್ತಿದ್ದಂತೆ, ಎಲ್ಲ ಅಭಿಮಾನಿಗಳೂ ಶಾಕ್ ಆಗಿದ್ದಾರೆ. ನಿಜಕ್ಕೂ ನಾವು ಮೆಚ್ಚಿಕೊಳ್ಳುತ್ತಿದ್ದ ನಟ ಇವನೇನಾ ಎಂದು ಕೆಲವು ಪ್ರಶ್ನೆ ಮಾಡುಕೊಳ್ಳುತ್ತಿದ್ದಾರಂತೆ. ಚಾಕೋಲೇಟ್ ಬಾಯ್ (Chocolate Boy) ಆಗಿದ್ದವರು ಅರ್ಜುನ್ ರೆಡ್ಡಿ (Arjun reddy)ಈ ರೀತಿ ಬದಲಾಗಲು ಕಾರಣವೇ?
ಕಳೆದ ವರ್ಷ ನಿರೂಪಕಿ ಅನುಷಾ (Anchor Anusha) ಮತ್ತು ಕರಣ್ ಬ್ರೇಕಪ್ (Breakup) ಮಾಡಿಕೊಂಡ ನಂತರದ ದಿನಗಳಿಂದ ಇವರು ದಿನವೂ ಸುದ್ದಿಯಲ್ಲಿದ್ದರು. ಬಿಗ್ ಬಾಸ್ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಕರಣ್ ಮತ್ತು ತೇಜಸ್ವಿನಿ (Tejaswini) ತುಂಬಾ ಆತ್ಮೀಯತೆಯಿಂದ ಇದ್ದಾರೆ. ಇವರಿಬ್ಬರೂ ಪ್ರೀತಿಸುತ್ತಿದ್ದಾರೆ ಎನ್ನುವ ಅನುಮಾನವೂ ಶುರುವಾಗಿದೆ. ಹೀಗಾಗಿ ಅಭಿಮಾನಿಗಳು #TejRan ಎಂದು ಟ್ರೆಂಡ್ ಮಾಡುತ್ತಿದ್ದಾರೆ. ಕರಣ್ ಸಣ್ಣ ಪುಟ್ಟ ವಿಚಾರಕ್ಕೂ ಪೋಸೆಸಿವ್ (Possessive) ಆಗುತ್ತಿರುವ ಗುಣ ನೋಡಿ ಸ್ವತಃ ಅವರ ಸ್ನೇಹಿತರೇ ಶಾಕ್ ಆಗುತ್ತಿದ್ದಾರೆ.
ತೇಜಸ್ವಿನಿ ಅವರು ಸಹಸ್ಪರ್ಧಿ ಕೋಟ್ಯಾನ್ ಜೊತೆ ಹೆಚ್ಚಾಗಿ ಮಾತನಾಡುತ್ತಿರುವುದಕ್ಕೆ ಕರಣ್ ಕುಂದ್ರಾಗೆ ಸಿಟ್ಟು ತರಿಸಿದೆ. ತೇಜಸ್ವಿನಿ ಬಳಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ, ' ದಿನವಿಡೀ ಬೇರೆಯವರ ಬಗ್ಗೆ ಮಾತನಾಡುವ ವಿಶಾಲ್ (Vishal) ಕೋಟ್ಯಾನ್ ಜೊತೆ ನಿನ್ನದೆಂಥ ಗೆಳೆತನ?' ಎಂದು ಪ್ರಶ್ನೆ ಕೂಡ ಮಾಡಿದ್ದಾರೆ. 'ಬೇರೆ ಯಾರೋ ಹೇಳ್ತಿದ್ದಾರೆ ಅಂತ ನಾನು ಕೇಳಲ್ಲ. ಆರಂಭದಿಂದಲೂ ವಿಶಾಲ್ ನನಗೆ ಉತ್ತಮ ಗೆಳೆಯ (Friend). ನಿನಗೆ ಹೇಗೆ ಬೇಕೋ ಹಾಗೆ ಯೋಚನೆ ಮಾಡು, ನೀನು ದೂರ ಹೋದರೆ ನಾನೂ ದೂರು ಹೋಗುವೆ,' ಎಂದು ತೇಜಸ್ವಿನಿ ಕುಂದ್ರಾಗೆ ಉತ್ತರ ನೀಡಿದ್ದಾರೆ.
ಅರ್ಜುನ್ ರೆಡ್ಡಿ ಚಿತ್ರದಲ್ಲಿ ಗರ್ಲ್‌ಫ್ರೆಂಡ್ (Girl friend) ಬಗ್ಗೆ ಎಷ್ಟು ಪೊಸೆಸಿವ್‌ನೆಸ್ ತೋರಿಸಲಾಗಿದೆಯೋ, ಅದೇ ರೀತಿ ರಿಯಲ್ ಲೈಫ್‌ನಲ್ಲಿಯೂ ಕರಣ್ ಇರುವುದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಅನುಷಾ ಬ್ರೇಕಪ್ ಮಾಡಿಕೊಂಡ ಸಮಯದಲ್ಲಿ ಅನುಮಾನ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಕುಂದ್ರಾ ಪಾಪದ ಹುಡುಗ, ಹೀಗೆ ಮಾಡಿರಲು ಸಾಧ್ಯವೇ ಇಲ್ಲ ಎನ್ನುತ್ತಿದ್ದರು ಅಭಿಮಾನಿಗಳು. ಆದರೆ ಈಗ ಎಲ್ಲರೂ ಅನುಷಾ ಮಾತುಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
ತೆಲುಗು ಚಿತ್ರರಂಗದ ಸೂಪರ್ ಹಿಟ್ ಸಿನಿಮಾ ಅರ್ಜುನ್ ರೆಡ್ಡಿಯನ್ನು ಬಾಲಿವುಡ್‌ಗೆ ಕಬೀರ್ ಸಿಂಗ್ (Kabir Singh) ಎಂದು ರಿಮೇಕ್ ಮಾಡಲಾಗಿತ್ತು. ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ವಿಜಯ್ ದೇವರಕೊಂಡ (Vijay Deverakonda) ಮತ್ತು ಶಿಲ್ಪಾ (Shilpa) ನಟಿಸಿದ್ದರು ಮತ್ತು ಕಬೀರ್ ಸಿಂಗ್ ಚಿತ್ರದಲ್ಲಿ ಶಾಹಿದ್ ಕಪೂರ್ (Shahid Kapoor) ಮತ್ತು ಕಿಯಾರ ಅದ್ವಾನಿ (Kirana Advani) ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.