ಕ್ಯಾನ್ಸರ್‌ಗೆ ತಾಯಿ ಕಳೆದುಕೊಂಡೆ, ಡಿಪ್ರೆಶನ್‌ಗೆ ಜಾರಿ ಮಗು ಮಾಡಿಕೊಂಡೆ: 'ಕಿನ್ನರಿ' ನಟಿ ಜ್ಯೋತಿ ರೈ ಕಣ್ಣೀರು

By Vaishnavi Chandrashekar  |  First Published Jul 27, 2023, 4:05 PM IST

ತಾಯಿ ಕಳೆದುಕೊಂಡ ನೋವಿನಲ್ಲಿ ನಟಿ ಜ್ಯೋತಿ ರೈ. ಮಗುವಿನ ಪರಿಸ್ಥಿತಿ ಜನರಿಗೆ ಅರ್ಥ ಮಾಡಿಸುವುದೇ ಕಷ್ಟವಾಯ್ತು... 


ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ಜ್ಯೋತಿ ರೈ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಅಲ್ಲದೆ ಇತ್ತೀಚಿಗೆ ಜ್ಯೋತಿ ಮತ್ತೊಂದು ಮದುವೆ ಮಾಡಿಕೊಳ್ಳುತ್ತಿದ್ದಾರೆ ಹಾಗೆ ಹೀಗೆ ಎಂದು ಸುದ್ದಿ ಕೇಳಿ ಬರುತ್ತಿತ್ತು. ಇದೇ ಸಮಯಕ್ಕೆ ಅವರ ಹಳೆ ಸಂದರ್ಶನಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು...ಅದರಲ್ಲಿ ಇದೂ ಒಂದು. ತಾಯಿ ಮತ್ತು ಮಗನ ಬಗ್ಗೆ ಮಾತನಾಡಿರುವ ಅಪರೂಪದ ವಿಡಿಯೋ.. 

'ನಾನು 8ನೇ ವಯಸ್ಸಿನಲ್ಲಿದ್ದಾಗ ತಂದೆಯನ್ನು ಕಳೆದುಕೊಂಡೆ. ನನ್ನ ತಂದೆಗೆ ಎರಡು ಮದುವೆಯಾಗಿತ್ತು. ತಮ್ಮ ಮತ್ತು ನನ್ನನ್ನು ಅಮ್ಮ ಸಾಕುತ್ತಿದ್ದರು ಹೀಗಾಗಿ ಡಿಗ್ರಿ ಮುಗಿದ ತಕ್ಷಣವೇ ನನ್ನ ಮದುವೆ ಮಾಡಿಬಿಟ್ಟರು. 20 ವರ್ಷ ಹುಡುಗಿಯಾಗಿ ನನಗೆ ಪ್ರಪಂಚವೇ ಗೊತ್ತಿರಲಿಲ್ಲ ಅದೇ ಸಮಯಕ್ಕೆ ಬೆಂಗಳೂರಿನಲ್ಲಿ ಕೆಲಸ ಸಿಕಿತ್ತು ಇಂಗ್ಲಿಷ್ ಬರುತ್ತಿರಲಿಲ್ಲ ಬೆಂಗಳೂರು ಸಂಪೂರ್ಣ ಹೊಸ ಜಾಗ. ನನ್ನ ತಮ್ಮ ತುಂಬಾ ಚಿಕ್ಕವನು ನನ್ನ ತಾಯಿ ಕ್ಯಾನ್ಸರ್ ಪೇಷಂಟ್ ಹೀಗಾಗಿ ಚಿಕ್ಕ ವಯಸ್ಸಿಗೆ ಸಾಕಷ್ಟು ಜವಾಬ್ದಾರಿಗಳು ನನ್ನ ಕೈಯಲ್ಲಿತ್ತು. ತಾಯಿ ಆರೋಗ್ಯ ನೋಡಿಕೊಳ್ಳುವುದಕ್ಕೂ ನಮ್ಮ ಬಳಿ ಏನೂ ಇರಲಿಲ್ಲ ತೀರಾ ಬಡತನದಲ್ಲಿದ್ದೀವಿ ನನ್ನ ದೊಡ್ಡಮ್ಮ ಮಗ ನನ್ನ ವಿದ್ಯಾಭ್ಯಾಸ ನೋಡಿಕೊಳ್ಳುತ್ತಿದ್ದರು. ಆಗ ಕ್ಯಾನ್ಸರ್‌ ಬಗ್ಗೆ ಏನೂ ಗೊತ್ತಿರಲಿಲ್ಲ ನಾನು ಹಾಸ್ಟೆಲ್‌ನಲ್ಲಿದೆ ಅಮ್ಮ ಒಬ್ಬರೇ ಆಸ್ಪತ್ರೆಗೆ ಹೋಗಿ ಆಪರೇಷನ್ ಮಾಡಿಸಿಕೊಂಡು ಬಂದ್ರು ಅಲ್ಲಿ ಫೋನ್ ಏನೂ ಇರಲಿಲ್ಲ' ಎಂದು ಜ್ಯೋತಿ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.

Tap to resize

Latest Videos

'ಮೂರುಗಂಟು' ಜ್ಯೋತಿ ರೈ- ಪರದೆ ಮೇಲೆ ಸ್ವಾರ್ಥಿ, ನಿಜದಲ್ಲಿ ತ್ಯಾಗಮೂರ್ತಿ!

'ಮದ್ವೆ ಆದ್ಮೇಲೆ ನನ್ನ ಜೊತೆನೇ ತಾಯಿ ಇದ್ದರು. ಇದ್ದಕ್ಕಿದ್ದಂತೆ ಕ್ಯಾನ್ಸರ್ ಹೆಚ್ಚಾಗಿತ್ತು ಖರ್ಚು ಮಾಡುವುದಕ್ಕೆ ಹಣ ಇರಲಿಲ್ಲ ಈಗಲೂ ನಾನು ಪಾರ್ಟಿ ಮಾಡ್ಕೊಂಡು ಹಣ ಖರ್ಚು ಮಾಡಿರಲಿಲ್ಲ. ತಾಯಿಗೆ ತುಂಬಾ ಅಟ್ಯಾಚ್ ಆಗಿದೆ 2011ರಲ್ಲಿ ಅಗಲಿದರು. ಇಂದಿಗೂ ತಾಯಿ ಇಲ್ಲದೆ ಬದುಕುವುದು ಕಷ್ಟವಾಗುತ್ತಿತ್ತು. ತಾಯಿ ಇಲ್ಲ ಅಂದ್ರೂ ಅವರ ನಂಬರ್‌ಗೆ ಕರೆ ಮಾಡುತ್ತಿದ್ದೆ...ಏನೋ ಮಿರಾಕಲ್ ಆಗುತ್ತೆ ಅನ್ನೋ ಭರವಸೆ ನನ್ನಲ್ಲಿತ್ತು. ಆ ಡಿಪ್ರೆಶನ್‌ನಲ್ಲಿ ಮಗುಗೆ ಪ್ಲ್ಯಾನ್ ಮಾಡಿಕೊಂಡೆ. ತಾಯಿಗೆ ಮಗು ಆಸೆ ಇತ್ತು ಇವತ್ತಿಗೂ ನೋವಿಗೆ ಅವರಿದ್ದಾಗ ಮಗು ಮಾಡಿಕೊಳ್ಳಬೇಕಿತ್ತು ಎಂದು. ಒಂದು ಕಾರು ತೆಗೆದುಕೊಂಡು ಅವರನ್ನು ದೇಗುಲಕ್ಕೆ ಕರೆದುಕೊಂಡು ಹೋಗು ಅಂದಿದ್ದರು ಅದು ಕೂಡ ಮಾಡಲು ಅಗಲಿಲ್ಲ. ಬೇಗ ಬೇಕು ಎಂದು ಕಾರು ಬುಕ್ ಮಾಡಿದೆ ಆದರೆ ಅವ್ರು ಅಗಲಿ ಮೂರನೇ ದಿನದ ಕಾರ್ಯಕ್ಕೆ ಹೋಗುವಾಗ ಆ ಕಾರಿನಲ್ಲಿ ಪ್ರಯಾಣ ಮಾಡಿದೆ. ಸದಾ ಶೂಟಿಂಗ್ ಮಾಡುತ್ತಿದ್ದೆ ಎಂದು ಒಂದು ದಿನ ರಜೆ ಮಾಡು ಎನ್ನುತ್ತಿದ್ದರು ಅದು ಕೂಡ ಮಾಡಲು ಆಗುತ್ತಿರಲಿಲ್ಲ'ಎಂದು ಜ್ಯೋತಿ ಹೇಳಿದ್ದಾರೆ.

ಬೋಲ್ಡ್ ಫೋಟೋ ಶೇರ್ ಮಾಡಿದ ನಟಿ, ಇವ್ರೆನಾ ತಾಯಿ ಪಾತ್ರ ಮಾಡಿದ್ದು ಎಂದ ನೆಟ್ಟಿಗರು

'ನನ್ನ ಮಗ ಕೂಡ Autistic ಅವನಿಗೆ 30% ಆಟಿಸಂ ಇದೆ. ನನ್ನ ಮಗು ಹೇಗಿದ್ದರೂ ನನಗೆ ಖುಷಿನೇ ಆದರೆ ಜನರಿಂದ ಸಪೋರ್ಟ್‌ ಸಿಗುವುದಿಲ್ಲ ಎಲ್ಲರಿಗೂ ಹೆಚ್ಚಾಗಿ ನೋಡಿಕೊಳ್ಳಿ ಎಂದು ಹೇಳಲು ಆಗಲ್ಲ. ಆರಂಭದಲ್ಲಿ ನನ್ನ ಮಗ ಮಾತನಾಡುತ್ತಿರಲಿಲ್ಲ ಸುಮ್ಮನಿರುತ್ತಿದ್ದ ಆಗ ನಿನ್ನ ಮಗನಿಗೆ ಮಾತು ಬರುವುದಿಲ್ಲ ಹಾಗೆ ಹೀಗೆ ಎನ್ನುತ್ತಿದ್ದರು. ಈಗ ನನ್ನ ಮಗನಿಗೆ 10 ವರ್ಷ ಯಾರೂ ಮಾತನಾಡದಷ್ಟು ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತಾನೆ ನೆನಪಿನ ಶಕ್ತಿ ಹೆಚ್ಚಿದೆ ಒಂದು ಸಲ ಹೇಳಿದ ಮಾತನ್ನು ಮರೆಯುವುದಿಲ್ಲ ಅಷ್ಟು ಚೆನ್ನಾಗಿದ್ದಾರೆ. ಬೆಂಗಳೂರಿಗೆ ಬಂದಾಗ ಏನೂ ಇರಲಿಲ್ಲ ಹಿಂದೆ ತಿರುಗಿ ನೋಡಿದರೆ ನಾನು ಮಾಡಿರುವ ಸಾಧನೆ ಖುಷಿ ಕೊಡುತ್ತಿದೆ' ಎಂದು ಜರ್ನಿ ನೆನೆದು ಜ್ಯೋತಿ ಖುಷಿ ಪಟ್ಟಿದ್ದಾರೆ. 

click me!