ಕಲರ್ಸ್ ಕನ್ನಡ ಚಾನೆಲ್ನಲ್ಲಿ ಪ್ರಸಾರ ಆಗುವ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಮನೆ ಎಂದರೆ ಹೇಗಿರಬೇಕು ಎಂದು ಲಕ್ಷ್ಮಿ ಪಾಠ ಮಾಡಿದ್ದು, ನೆಟ್ಟಿಗರು ಭೇಷ್ ಭೇಷ್ ಎನ್ನುತ್ತಿದ್ದಾರೆ.
ಮನೆ ಯಾರದ್ದೇ ದುಡ್ಡಿನಿಂದ ಕಟ್ಟಿರಬಹುದು. ಹಾಗಂತ ಉಳಿದವರು ಬಿಟ್ಟಿ ಊಟ ತಿಂತಾರೆ ಅನ್ನೋ ಅಧಿಕಾರದ ಮಾತು ಸಲ್ಲದು. ಒಂದು ಮನೆ ಅಂದ್ಮೇಲೆ ಎಲ್ಲರಿಗೂ ಗೌರವಿಸುವುದನ್ನು ಗೊತ್ತಿರರ್ಬೇಕು. ಯಾರ ದುಡ್ಡು ಅನ್ನೋದು ಮುಖ್ಯವಾಗ್ಬಾರ್ದು ಎಂದು ಲಕ್ಷ್ಮಿ ಬಾರಮ್ಮಾ ಮನೆಯವರಿಗೆ ಬುದ್ಧಿಮಾತು ಹೇಳಿದ್ದಾಳೆ. ಮನೆ ವೈಷ್ಣವ್ ದುಡ್ಡಿನಿಂದ ಕಟ್ಟಿರೋದು ಎಂಬ ಮೂದಲಿಕೆ ಮಾತಿಗೆ ನಟಿ ತಿರುಗೇಟು ನೀಡಿದ್ದಾಳೆ. ಮನೆ ವೈಷ್ಣವ್ (Vaishnav) ಅವರಿಗೆ ಸೇರಬೇಕು ಎಂದು ನನಗೆ ಹಿಂದೆನೂ ಅವಮಾನ ಮಾಡಲಾಗಿದೆ. ಈಗಲೂ ಮಾಡ್ತಿದ್ದಾರೆ. ಆದರೆ ಒಂದು ಮಾತು ನೆನಪಿರಲಿ. ಮನೆ ಯಾರೋ ಕಟ್ಟಿದ್ದು ಎಂದ ಮಾತ್ರಕ್ಕೆ ಉಳಿದವರು ಬಿಟ್ಟಿ ಊಟ ತಿಂತಿದ್ದಾರೆ ಅಂತ ಹೇಳೋ ಅಧಿಕಾರ ಯಾರಿಗೂ ಇಲ್ಲ. ಮನೆಯಲ್ಲಿ ಎಲ್ಲರಿಗೂ ಕೊಡಬೇಕಾಗಿರುವ ಗೌರವ ಕೊಡುವುದು ನಮಗೆ ಗೊತ್ತಿರಬವೇಕು. ವೈಷ್ಣವ್ ದುಡ್ಡಿನಿಂದ ಈ ಮನೆ ಕಟ್ಟಿರ್ಬೋದು. ಆದರೆ ಉಳಿದವರಿಗೂ ಈ ಮನೆ ಸೇರುತ್ತೆ. ಮನೆ ಅಂತ ಬಂದ್ರೆ ಒಬ್ರು ದುಡೀತಾರೆ. ಹಾಗಂತ ಅವರಿಗೇ ಸೇರಿದ್ದು ಅಂದ್ರೆ ಅದು ವ್ಯವಹಾರ ಆಗತ್ತೆ. ಸಂಸಾರ ವ್ಯವಹಾರ ಆಗಲ್ಲ. ಸಂಸಾರವೇ ಬೇರೆ ವ್ಯವಹಾರವೇ ಬೇರೆ. ಸಂಸಾರದಲ್ಲಿ ಕೂಡಿ ಬಾಳುವಾಗ ಅದು ಮನೆ ಎನಿಸುತ್ತದೆ. ಒಂದು ಮನೆಯಲ್ಲಿ ತಪ್ಪೋ ಒಪ್ಪೋ ಎಲ್ಲರೂ ಒಟ್ಟಿಗೇ ಇದ್ದಾಗಲೇ ಕೂಡಿ ಬಾಳಬೇಕು. ಇದು ಬರೀ ವೈಷ್ಣವ್ ಮನೆ ಅಂತ ಹೇಳಬೇಡಿ ಎನ್ನುತ್ತಾಳೆ ಲಕ್ಷ್ಮಿ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ಬಾರಮ್ಮಾ ಸೀರಿಯಲ್‌ನಲ್‌ನಲ್ಲಿ ಮುಗ್ಧ ಹುಡುಗಿ ಲಕ್ಷ್ಮಿ ತನ್ನ ಪ್ರಬುದ್ಧ ಮಾತನಿನಿಂದಲೇ ಮನೆಯ ಪ್ರತಿಯೊಬ್ಬ ಸದಸ್ಯರ ಮನವನ್ನೂ ಗೆಲ್ಲುತ್ತಿದ್ದು, ಇದೀಗ ವೈಷ್ಣವೇ ಅತ್ತೆ ಸುಪ್ರೀತಾಗೆ ಅಹಂಕಾರದಿಂದ ಹೇಗೆ ಹೊರಬರಬೇಕು ಎನ್ನುವುದನ್ನು ಸೂಕ್ಷ್ಮವಾಗಿ ಹೇಳಿದ್ದಾಳೆ. ಲಕ್ಷ್ಮಿ ಈ ಮಾತನ್ನು ಹೇಳುತ್ತಿದ್ದಂತೆಯೇ ಸುಪ್ರೀತಾಳಿಗೆ ಅಮ್ಮ ಹೇಳಿದ ಮಾತು ನೆನಪಾಗುತ್ತದೆ. ಅತ್ತಿಗೆ ಮನೆಗೆ ಬಂದಾಗ ಅಮ್ಮ ತನ್ನ ರೂಮನ್ನು ಬಿಟ್ಟುಕೊಟ್ಟಿದ್ದಕ್ಕೆ ಸುಪ್ರೀತಾ ಸಿಡಿಮಿಡಿಗೊಂಡು ಆ ಬಗ್ಗೆ ಅಮ್ಮನಲ್ಲಿ ದೂರಿರುತ್ತಾಳೆ. ಆಗ ಅವಳಮ್ಮ ಅವಳನ್ನು ಸಮಾಧಾನಪಡಿಸಿ, ಈಗ ಲಕ್ಷ್ಮಿ ಹೇಳಿದ್ದ ಮಾತನ್ನೇ ಹೇಳಿ ಸಮಾಧಾನ ಮಾಡಿರುತ್ತಾಳೆ. ಸೊಸೆ ಕಾವೇರಿಗೆ ಮಗಳ ರೂಮನ್ನು ಬಿಟ್ಟುಕೊಟ್ಟಿದ್ದು ಏಕೆ ಎಂದು ಅಮ್ಮ ಸಮಜಾಯಿಷಿ ನೀಡುತ್ತಾಳೆ. ನೋಡು ಕಾವೇರಿಗೆ ಕೊಟ್ಟದ್ದ ರೂಮು ಚಿಕ್ಕದ್ದಾಗಿತ್ತು. ಅಲ್ಲಿ ಸಂಸಾರಮಾಡುವುದು ಕಷ್ಟವಾಗಿತ್ತು. ನಿನ್ನ ರೂಮು ದೊಡ್ಡದಾಗಿ ಇದೆ. ಅಲ್ಲಿ ನೀನೊಬ್ಬಳೇ ಇರುತ್ತಿ. ಅದಕ್ಕಾಗಿ ಕೋಣೆ ಬದಲಾಯಿಸಲು ಆಗತ್ತಾ ಎಂದು ಕಾವೇರಿ ಕೇಳಿದಳು. ನಾನು ಅದಕ್ಕೆ ನಿನ್ನ ರೂಮು ಬಿಟ್ಟುಕೊಟ್ಟೆ ಎಂದಿರುತ್ತಾಳೆ ಸುಪ್ರೀತಾಗೆ ತಾಯಿ.
ಲಕ್ಷ್ಮೀ ಬಾರಮ್ಮ ಸೀರಿಯಲ್‌ನ ಕೀರ್ತಿ ಪಾತ್ರದಿಂದ ತನ್ವಿ ಔಟಾ?
ಮನೆಗೆ ಸೇರಿದ ಮೇಲೆ ಹೊರಗಿನವರು ಹೇಗಾಗುತ್ತಾರೆ:
ಇದರಿಂದ ಸಿಟ್ಟುಗೊಂಡ ಸುಪ್ರೀತಾ (Supreeta), ನಾನು ಚಿಕ್ಕವಯಸ್ಸಿನಿಂದಲೂ ಅದೇ ರೂಮಿನಲ್ಲಿ ಇದ್ದವಳು. ಈಗ ಯಾರೋ ಹೊರಗಿನವಳು ಬಂದು ಆ ರೂಮನ್ನು ಬಿಟ್ಟುಕೊಡು ಅಂದರೆ ನೀನು ಹೇಗೆ ಬಿಟ್ಟುಕೊಟ್ಟಿ ಎಂದು ರೇಗುತ್ತಾಳೆ. ಅತ್ತಿಗೆ ಅವಳ ಅಪ್ಪನ ದುಡ್ಡಿನಿಂದ ಕಟ್ಟಿದ ಮನೆಯಲ್ಲಿ ಹೇಗೆ ಬೇಕಾದ್ರೂ ಇರಲಿ, ಇದು ನನ್ನ ಅಪ್ಪ ಕಟ್ಟಿದ ಮನೆ ಎನ್ನುತ್ತಾಳೆ. ಆಗ ತಾಯಿ, ದುಡ್ಡು ಯಾರದ್ದು ಎನ್ನುವುದು ಮುಖ್ಯವಲ್ಲ. ಮನೆ ಎಂದ ಮೇಲೆ ಎಲ್ಲರೂ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎನ್ನುತ್ತಾಳೆ. ಲಕ್ಷ್ಮಿ ಕೂಡ ಇದೇ ರೀತಿಯ ಮಾತನಾಡಿದಾಗ ಸುಪ್ರೀತಾಳಿಗೆ ಹಿಂದಿನದ್ದು ನೆನಪಾಗಿ ಕಣ್ಣೀರು ಬರುತ್ತದೆ.
ಲಕ್ಷ್ಮಿಯ ಮಾತಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಪ್ಪ ಕಟ್ಟಿಸಿದ ಮನೆ, ಅಣ್ಣ ಕಟ್ಟಿಸಿದ ಮನೆ ಎಂದೆಲ್ಲಾ ಪ್ರತಿಯೊಂದು ಮನೆಯಲ್ಲಿ ಹೇಗೆಲ್ಲಾ ಗಲಾಟೆ ಆಗುತ್ತದೆ ಎನ್ನುವುದನ್ನು ವಿವರಿಸಿರೋ ನೆಟ್ಟಿಗರು, ಹಾಗೆ ಹೇಳುವವರಿಗೆ ಈ ಡೈಲಾಗ್ ಪಂಚಿಂಗ್ ಆಗಿದೆ. ಪ್ರತಿಯೊಬ್ಬರೂ ಲಕ್ಷ್ಮಿ ಹೇಳಿದ ಮಾತನ್ನು ಕೇಳಿ ಮನೆಯ ಬಗ್ಗೆ ಅರಿತುಕೊಳ್ಳಬೇಕಿದೆ ಎನ್ನುತ್ತಿದ್ದಾರೆ. ಅಂದಹಾಗೆ ಲಕ್ಷ್ಮಿ ಬಾರಮ್ಮ (Lakshmi Baramma) ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರತಿದಿನ ಬರುತ್ತಿದೆ. ಪ್ರೀತಿಸಿದ ಹುಡುಗಿ ಕೀರ್ತಿ ಮದುವೆಗೆ ಒಪ್ಪಿಲ್ಲ ಅಂತ ವೈಷ್ಣವ್ ಮನೆಯವರ ಖುಷಿಗೋಸ್ಕರ ಲಕ್ಷ್ಮೀಯನ್ನು ಮದುವೆಯಾದ. ಈಗ ಕೀರ್ತಿ ವೈಷ್ಣವ್ ನನಗೆ ಬೇಕು ಎನ್ನುತ್ತಿದ್ದಾಳೆ, ಈಗ ಏನಾಗಲಿದೆ ಎಂಬುದೇ ಈ ಧಾರಾವಾಹಿಯ ಕಥಾ ವಸ್ತು.
ಅಮ್ಮ- ಅಪ್ಪನೇ ಮಕ್ಕಳ ಸರಿ ಮಾಡಲ್ಲ ಅಂದ್ರೆ, ಹಾಸ್ಟೆಲ್‌ಗೆ ಆಗುತ್ತಾ? ಭಾಗ್ಯ ಹೇಳಿದ ಕಿವಿಮಾತು!