ಮದುವೆ ವಾರ್ಷಿಕೋತ್ಸವದ ದಿನವೇ ತಾಯಿಯಾಗಿ ಬಡ್ತಿ ಪಡೆದ ಶ್ರೀಮತಿ ಹರಿಪ್ರಿಯಾ ವಸಿಷ್ಠ ಸಿಂಹ!

Published : Jan 26, 2025, 10:34 PM ISTUpdated : Jan 27, 2025, 10:02 AM IST
ಮದುವೆ ವಾರ್ಷಿಕೋತ್ಸವದ ದಿನವೇ ತಾಯಿಯಾಗಿ ಬಡ್ತಿ ಪಡೆದ ಶ್ರೀಮತಿ ಹರಿಪ್ರಿಯಾ ವಸಿಷ್ಠ ಸಿಂಹ!

ಸಾರಾಂಶ

ಕನ್ನಡ ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಜೋಡಿಗೆ ಇಂದು ಮೊದಲನೇ ಮದುವೆಯ ವಾರ್ಷಿಕೋತ್ಸವದ ಸಂಭ್ರಮವಾಗಿತ್ತು. ಈ ಖುಷಿ ಇಂದು ದುಪ್ಪಟ್ಟಾಗಿದೆ.   

ಇತ್ತೀಚೆಗೆ ನಟಿ ಅದಿತಿ ಪ್ರಭುದೇವ, ನೇಹಾ ಗೌಡ ಅವರು ತಾಯಿಯಾಗಿದ್ದು, ತಾಯ್ತನದ ಸವಿ ಸವಿಯುತ್ತಿದ್ದಾರೆ. ಈಗ ಈ ಸಾಲಿಗೆ ಹರಿಪ್ರಿಯಾ ಎಂಟ್ರಿಯಾಗಿದೆ. ಅಂದಹಾಗೆ ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರಿಗೆ ಇಂದು ವಿಶೇಷ ದಿನವಾಗಿತ್ತು. ಈ ಜೋಡಿ ಮದುವೆಯಾಗಿ ಒಂದು ವರ್ಷ ತುಂಬಿದ ಸಂಭ್ರಮ ಒಂದುಕಡೆಯಾದರೆ, ಈಗ ಈ ಜೋಡಿ ಬದುಕಿಗೆ ಇನ್ನೊಂದು ಪುಟ್ಟ ಜೀವದ ಆಗಮನವಾಗಿದ್ದು, ಈ ಸಂಭ್ರಮ ಡಬಲ್‌ ಆಗಿದೆ. 

ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ರು..!
ಹೌದು,  2023ರ ಜನವರಿ 26ರಂದು ಹರಿಪ್ರಿಯಾ, ವಸಿಷ್ಠ ಸಿಂಹ ಅವರು ಮೈಸೂರಿನಲ್ಲಿ ಮದುವೆಯಾಗಿದ್ದರು. ಈಗ ಇದೇ ದಿನ ಹರಿಪ್ರಿಯಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇಂದು  ನಟಿ ಹರಿಪ್ರಿಯಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ವಸಿಷ್ಠ ಸಿಂಹ- ಹರಿಪ್ರಿಯಾ ಬಾಳಲ್ಲಿ ಈಗ ಪುತ್ರನ ಆಗಮನವಾಗಿದೆ.

BBK 11: ಒಳ್ಳೆಯತನದಲ್ಲಿ ಉಗ್ರಂ ಮಂಜು ಸೇರಾದ್ರೆ, ಕಿಚ್ಚ ಸುದೀಪ್‌ ಸವಾ ಸೇರು! ಗ್ರ್ಯಾಂಡ್‌ ಫಿನಾಲೆಯಲ್ಲಿ ಹೀಗೆ ಹೇಳೋದಾ?

ಮೈಸೂರಿನ ಆಶ್ರಮದಲ್ಲಿ ಮದುವೆ
ವಸಿಷ್ಠ ಸಿಂಹ ಅವರು ಪತ್ನಿ ಹರಿಪ್ರಿಯಾರ ಸೀಮಂತವನ್ನು ಅದ್ದೂರಿಯಾಗಿ ಮಾಡಿದ್ದರು. ಕನ್ನಡದ ಖ್ಯಾತ ನಟ, ನಟಿಯರು, ನಿರ್ದೇಶಕರು ಈ ಸೀಮಂತಕ್ಕೆ ಆಗಮಿಸಿ, ಈ ಜೋಡಿಗೆ ಶುಭ ಹಾರೈಸಿದ್ದರು. ವಿಭಿನ್ನವಾದ ಸ್ಟೈಲ್‌ನಲ್ಲಿ ಸಂಪ್ರದಾಯದ ಮಿಶ್ರಣದ ಜೊತೆಗೆ ಸೀಮಂತ ಆಗಿತ್ತು. ಇನ್ನು ಇವರ ಮನೆಯಲ್ಲಿ ಬೇಬಿ ಶವರ್‌ ಆಚರಿಸಲಾಗಿತ್ತು. ಈ ಫೋಟೋಗಳನ್ನು ಈ ಜೋಡಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ, ಅದಕ್ಕೂ ಮುನ್ನ ಈ ದಂಪತಿ ವಿಭಿನ್ನವಾಗಿ ಬೇಬಿ ಬಂಪ್‌ ಫೋಟೋಶೂಟ್‌ ಕೂಡ ಮಾಡಿಸಿಕೊಂಡಿದೆ. 

ಲವ್‌ ಮ್ಯಾರೇಜ್!‌ 
ಹರಿಪ್ರಿಯಾ, ವಸಿಷ್ಠ ಸಿಂಹ ಅವರು ವರ್ಷಗಳ ಕಾಲ ಪ್ರೀತಿಸಿದ್ದರು. ಇನ್ನು ದುಬೈನಲ್ಲಿ ಇವರಿಬ್ಬರು ಕೈ ಕೈ ಹಿಡಿದುಕೊಂಡು ಓಡಾಡುತ್ತಿದ್ದ ವಿಡಿಯೋ, ಡ್ಯಾನ್ಸ್‌ ಮಾಡುತ್ತಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಈ ಬಗ್ಗೆ ಗಾಸಿಪ್‌ ಹರಡಿದಾಗ ಈ ಜೋಡಿ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಆ ನಂತರ ಇವರಿಬ್ಬರು ಮನೆಯಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡು, ನಾವಿಬ್ಬರು ಮದುವೆ ಆಗುತ್ತಿರೋದು ಪಕ್ಕಾ ಎಂದು ತಿಳಿಸಿತ್ತು. ಆಮೇಲೆ ಈ ಜೋಡಿ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆಯಾಗಿತ್ತು. ಈ ಮದುವೆಗೆ ಸ್ಯಾಂಡಲ್‌ವುಡ್‌ ಗಣ್ಯರು, ಎರಡು ಕುಟುಂಬಸ್ಥರು ಆಗಮಿಸಿದ್ದರು. 

BBK 11: ಕಡ್ಡಿ ಮುರಿದಂತೆ ಬಿಗ್‌ ಬಾಸ್‌ ನೀಡಿದ ಬಂಪರ್‌ ಆಫರ್‌ ರಿಜೆಕ್ಟ್‌ ಮಾಡಿದ ಫಿನಾಲೆ ಸ್ಪರ್ಧಿಗಳು!

ಕೆಲಸದಲ್ಲಿಯೂ ಸಾಥ್!‌ 
ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರು ಮದುವೆಯಾದಮೇಲೆ ಬಾಲಿ ಮುಂತಾದ ಸ್ಥಳಗಳಿಗೆ ಪ್ರವಾಸ ತೆರಳಿದ್ದರು. ತಂದೆಯನ್ನು ಕಳೆದುಕೊಂಡಿರುವ ಹರಿಪ್ರಿಯಾ ಅವರು ಅಪ್ಪ ಇಲ್ಲ ಎನ್ನುವ ಕೊರತೆ ಬಾರದೆ ಇರಲಿ ಎಂದು ಅವರು ಎಲ್ಲಿಯೇ ಹೋದರೂ ಕೂಡ ಪತಿ ವಸಿಷ್ಠ ಅವರ ಕೈ ಹಿಡಿದುಕೊಂಡು ಹೋಗುತ್ತಾರೆ. ಇನ್ನು ಸಿನಿಮಾ ವಿಚಾರವಾಗಿ ಮಾತನಾಡಿರುವ ಹರಿಪ್ರಿಯಾ, “ಕೆಲಸದ ವಿಚಾರದಲ್ಲಿ ನನಗೆ ನನ್ನ ಪತಿ ವಸಿಷ್ಠ ತುಂಬ ಬೆಂಬಲ ಕೊಡ್ತಾರೆ. ಆದರೆ ಪರಸ್ಪರ ನಾವಿಬ್ಬರು ಕೆಲಸದ ವಿಚಾರವಾಗಿ ಮಧ್ಯ ಪ್ರವೇಶ ಮಾಡೋದಿಲ್ಲ. ನಾನು ಯಾವ ಸ್ಕ್ರಿಪ್ಟ್‌ ಆಯ್ಕೆ ಮಾಡಬೇಕು ಅಂತ ವಸಿಷ್ಠ‌ ಹೇಳೋದಿಲ್ಲ” ಎಂದು ಹೇಳಿದ್ದರು. 

ವಸಿಷ್ಠ ಸಿಂಹ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಕಳೆದ ಬಾರಿ ಅವರು ʼಲವ್‌ ಲೀʼ ಸಿನಿಮಾ ಮೂಲಕ ವೀಕ್ಷಕರ ಮುಂದೆ ಬಂದಿದ್ದರು. ಈಗ ಹರಿಪ್ರಿಯಾ ಅವರು ಮಗುವಿನ ವಿಚಾರಕ್ಕೆ ಒಂದಷ್ಟು ಸಮಯ ಬ್ರೇಕ್‌ ತಗೊಂಡು, ಆಮೇಲೆ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲೂಬಹುದು. ನೀವೂ ಈ ಜೋಡಿಗೆ ಶುಭಾಶಯ ತಿಳಿಸಿ, ಆಯ್ತಾ? 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!
ಮಂತ್ರಾಲಯದ ರಾಯರ ಪವಾಡದಿಂದಲೇ ಮದುವೆಯಾಯ್ತು: Suhana Syed ಎಂದೂ ಹೇಳಿರದ ರಿಯಲ್ ಕಥೆ