ಕೊರೋನಾ ಸೋಂಕು ತಗುಲಿದ್ದು ಹೇಗೆಂದು ಹೇಳಿದ Anupama Gowda!

By Suvarna News  |  First Published Jan 27, 2022, 3:00 PM IST

7 ದಿನ ಕ್ವಾರಂಟೈನ್‌ನಲ್ಲಿದ್ದು, ಕೊರೋನಾ ದಿನಗಳನ್ನು ಎದುರಿಸಿದ್ದು ಹೇಗೆ ಎಂದು ಅನುಪಮಾ ಗೌಡ ಹಂಚಿಕೊಂಡಿದ್ದಾರೆ. 


ಕನ್ನಡ ಕಿರುತೆರೆ ಮಾಧ್ಯಮದ ಜನಪ್ರಿಯ ನಟಿ ಕಮ್ ನಿರೂಪಕಿ ಅನುಪಮಾ ಗೌಡ ಅವರಿಗೆ ಕೆಲವು ದಿನಗಳ ಹಿಂದೆ ಕೊರೋನಾ ಸೊಂಕು ತಗುಲಿತ್ತು. 7 ದಿನಗಳ ಕಾಲ ಹೋಮ್ ಕ್ವಾರಂಟೈನ್‌ ಆಗಿದ್ದ ನಟಿ ಈಗ ಚೇತರಿಸಿಕೊಂಡು, ತಮ್ಮ ಕೋವಿಡ್‌ ದಿನಗಳ ಬಗ್ಗೆ ಯುಟ್ಯೂಬ್‌ನಲ್ಲಿ ವಿಡಿಯೋ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.

'ಕೋವಿಡ್‌ ಆಗಿ ಈಗ ಒಂದು ವಾರ ಆಗಿದೆ. ಅದಕ್ಕೂ ಮುನ್ನ ಆಗಿದ್ದ ಘಟನೆ ಬಗ್ಗೆ ಹೇಳಿಕೊಳ್ಳಬೇಕು, ನನ್ನಮ್ಮ ಸೂಪರ್ ಸ್ಟಾರ್ ಸ್ಪರ್ಧಿ ಸಮನ್ವಿ ರೋಡ್ ಆಕ್ಸಿಡೆಂಟ್‌ನಿಂದ ಕೊನೆಯುಸಿರೆಳೆದಿದ್ದು, ಇದೀಗ ನಮ್ಮೊಟ್ಟಿಗಿಲ್ಲ. ನಾನು ಅವರ ಕಾರ್ಯಕ್ಕೆ ಕೊನೆಯದಾಗಿ ಹೋಗಿದ್ದು. ಅದಕ್ಕಿಂತ ಮೊದಲು ಅಂದ್ರೆ  5 ದಿನಗಳ ಹಿಂದೆ ಎಪಿಸೋಡ್ ಚಿತ್ರೀಕರಣ ಮಾಡಿದ್ದೆ. ಬೇರೆ ಎಲ್ಲೂ ಹೋಗಿಲ್ಲ. ಹೆಚ್ಚಿನ ಸಮಯ ಚಿತ್ರೀಕರಣ, ಜಿಮ್ ಮತ್ತು ಮನೆಯಲ್ಲಿ ಕಳೆಯುವುದು. ಅಲ್ಲಿಂದ ಬಂದು ಮಾರನೇ ದಿನ ನಾನು ಓಡಲು ಶುರು ಮಾಡಿದೆ. ನಾನು ದಿನ  10 ಕಿಮೀ ಓಡುತ್ತೀನಿ. ಆದರೆ ಅವತ್ತು 3 ಕಿಮೀಗೆ ಸುಸ್ತು ಅನಿಸುತ್ತಿತ್ತು. ನನಗೆ Lower Body ಅಲ್ಲಾಡಿಸುವುದಕ್ಕೆ ಆಗಲಿಲ್ಲ. ಒಂದು ರೀತಿ ಸ್ವಾದೀನ ತಪ್ಪಿದಂತೆ ಆಗಿತ್ತು. ಮನೆ ಬಂದು ಸ್ನಾನ ಮಾಡಿ, ತಿಂಡಿ ತಿಂದು ಮಲಗಿಕೊಂಡೆ. ಕೆಲವು ಗಂಟೆಗಳಲ್ಲಿ ನನಗೆ ಚಳಿ ಜ್ವರ ಬಂತು. ನನಗೆ ಮೊದಲೇ ಮೈಗ್ರೇನ್ ಇದೆ. ತುಂಬಾನೇ ತಲೆ ನೋವು ಶುರುವಾಯ್ತು. ತಕ್ಷಣವೇ ವೈದ್ಯರನ್ನು ಸಂಪರ್ಕ ಮಾಡಿದೆ,' ಎಂದು ಅನುಪಮಾ ಗೌಡ ಮಾತನಾಡಿದ್ದಾರೆ. 

Tap to resize

Latest Videos

'ಈ ರೀತಿ ಲಕ್ಷಣಗಳು ಇರುವುದಕ್ಕೆ ನೀವು ಒಂದು ಸಲ ಕೋವಿಟ್‌ ಟೆಸ್ಟ್‌(Covid Test) ಮಾಡಿಸಬೇಕು ಅಂತ ಹೇಳಿದ್ರು. ನಾನು ಎದ್ದು ಟೆಸ್ಟ್‌ಗೆ ಹೋಗುವಷ್ಟು ಶಕ್ತಿ ಇರಲಿಲ್ಲ. ನನಗೆ ತಲೆಯಲ್ಲಿ ಇದ್ದಿದ್ದು ಒಂದೇ, ಮೂರು ದಿನ ಮುಂಚೆ ಅರ್ಧ ಗಂಟೆ ಸಮಯ ನನ್ನ ಗರ್ಭಿಣಿ ಸ್ನೇಹಿತೆಯೊಂದಿಗೆ ಕಳೆದಿದ್ದೆ. ಆಮೇಲೆ ಸಮನ್ವಿ ಕಾರ್ಯಕ್ಕೆ ಹೋದಾಗ ಸುಮಾರು ಅಮ್ಮಂದಿರನ್ನು ಭೇಟಿ ಮಾಡಿದ್ದೆ. ಅವರ ಮನೆಯಲ್ಲಿ ಮಕ್ಕಳಿದ್ದಾರೆ. ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿ ಮನೆಯಲ್ಲಿ ಟೆಸ್ಟ್‌ ಮಾಡುವ ಕಿಟ್ ತರೆಸಿಕೊಂಡು ಒಂದು ಡೋಲೋ ಸೇವಿಸಿದೆ. 15 ನಿಮಿಷಕ್ಕೆ ನಾನು ಪಾಸಿಟಿವ್ ಎಂದು ಗೊತ್ತಾಗಿತ್ತು, ಪಾಸಿಟಿವ್ ಅಂತ. ವೈದ್ಯರಿಗೆ ಕಾಲ್ ಮಾಡುವ ಮುನ್ನ ನಾನು ಯಾರನ್ನೆಲ್ಲಾ ಭೇಟಿ ಮಾಡಿದ್ನೋ ಅವರಿಗೆ ಮೊದಲು ಕಾಲ್ ಮಾಡಿ ಹೇಳಿದೆ. ನೀವು ಟೆಸ್ಟ್‌ ಮಾಡಿಸಿಕೊಳ್ಳಿ ಅಂತ. ಪ್ರತಿ ದಿನ ನನ್ನ ಸಂಪರ್ಕದಲ್ಲಿದ್ದವರಿಗೆ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದೆ. ನನ್ನ ತಲೆಯಲ್ಲಿ ಮಕ್ಕಳು ಮಾತ್ರ ಇದ್ದರು,' ಎಂದು ಅನುಪಮಾ ಹೇಳಿದ್ದಾರೆ. 

ನಿರೂಪಕಿ Anupama Gowda ವರ್ಕೌಟ್‌, ದಿನಚರಿ ಹೀಗಿರುತ್ತಂತೆ!

'ಆರ್‌ಟಿಪಿಸಿಆರ್‌ ಮಾಡಿದ ಮೇಲೂ ನನಗೆ ಪಾಸಿಟಿವ್ ಬಂತು. ವೈದ್ಯರು 7 ದಿನ ಕ್ವಾರಂಟೈನ್ ಆಗಲು ಸಲಹೆ ನೀಡಿ, ಮಾತ್ರೆ ಕೊಟ್ಟರು. ಎರಡನೇ ದಿನಕ್ಕೆ ನಾನು ಆರಾಮ್ ಆಗಿದ್ದೆ. ಮೂಗು ಬ್ಲಾಕ್ ಮತ್ತು ಗಂಟಲು ನೋವಿತ್ತು. ಈಗ ಅದು ಕೂಡ ಕಡಿಮೆ ಆಗಿದೆ. ಇದರಿಂದ ನಾನು ಶೂಟ್ ಮಾಡುವುದಕ್ಕೂ ಆಗಿರಲಿಲ್ಲ. ಡಾಕ್ಟರ್ ಹೇಳಿದ್ರು 10 ದಿನ ಕ್ವಾರಂಟೈನ್ ಮಾಡಿಕೊಳ್ಳಿ, ನೀವು ಮಕ್ಕಳನ್ನು ಭೇಟಿ ಮಾಡುತ್ತೀರಾ ಅಂದ್ರು, ಮತ್ತೆ ಮೂರು ದಿನ ಹೆಚ್ಚಾಗಿಯೇ ಮನೆಯಲ್ಲಿದ್ದೆ. ನಾನು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಂಡರೂ, ಕೂಡ ವರ್ಕೌಟ್ ಮಾಡಿ ಆರೋಗ್ಯಕರ ಆಹಾರ ಸೇವಿಸಿದರೂ ನನ್ನ ಸ್ಟ್ಯಾಮಿನ ಕಡಿಮೆ ಆಗಿತ್ತು. ವಾಕಿಂಗ್ ಮಾಡಿದರೂ ಸುಸ್ತಾಗುತ್ತೆ. ಅರ್ಥ ಗಂಟೆ ಮನೆಯಲ್ಲಿ ವಾಕಿಂಗ್ (Walking) ಮಾಡಿದೆ. ಮನೆಯಲ್ಲಿ ಸ್ವಲ್ಪ ಸಮಯ ಧ್ಯಾನ (Meditatio) ಮಾಡಿದೆ. ದಿನ ಬೆಳಗ್ಗೆ 4 ಗಂಟಗೆ ಎದ್ದೇಳುತ್ತಿದ್ದೆ. ಆದರೀಗ 4 ಗಂಟೆಗೆ ಮಲಗುತ್ತಿರುವೆ. ಸಂಗೀತ ಕೇಳುವುದಕ್ಕೆ ಶುರು ಮಾಡಿದೆ. ಕಾಮಿಡಿ ಸಿನಿಮಾಗಳು ನೋಡುತ್ತಿದ್ದೆ. ಆಮೇಲೆ ಚೇತರಿಸಿಕೊಂಡೆ. ಈ ಸಮಯದಲ್ಲಿ ತ್ವಚೆ ಹಾಳಾಗಿತ್ತು. ಅದಕ್ಕೆ 5ನೇ ದಿನದಿಂದ ಕೇರ್ ಮಾಡಲು ಶುರು ಮಾಡಿದೆ. ನನ್ನ ನಾಯಿ (Pet) ಸದಾ ನನ್ನ ಜೊತೆ ಇರುತ್ತಿತ್ತು,' ಎಂದಿದ್ದಾರೆ ಅನುಪಮಾ.

Anupama Periods Hack: ಪೀರಿಯಡ್ಸ್‌ ನೋವು ಕಡಿಮೆ ಮಾಡಿಕೊಳ್ಳಲು ನಟಿ ಕೊಟ್ಟ ಸಲಹೆ ಇದು!

ಈ ಸಮಯದಲ್ಲಿ ಅನುಪಮಾ ಅವರಿಗೆ ಆತ್ಮೀಯರು ವಿವಿಧ ಖಾದ್ಯಗಳನ್ನು (Dishes) ಕಳುಸಿಕೊಟ್ಟಿದ್ದಾರೆ. ಕೊರೋನಾದಿಂದ ಚೇತರಿಸಿಕೊಂಡು ನನ್ನಮ್ಮ ಸೂಪರ್ ಸ್ಟಾರ್ (Nannamma Super Star) ಕಾರ್ಯಕ್ರಮ ಶುರು ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದು, ಹೇರ್‌ ಕೇರ್ ಮತ್ತು ಸ್ಕಿನ್ ಕೇರ್ ಬಗ್ಗೆ ಮಾತನಾಡಿದ್ದಾರೆ. ಅನುಪಮಾ ಅವರ ಮಾತುಗಳನ್ನು ಕೇಳಿ ಅನೇಕರು ಕಾಮೆಂಟ್‌ನಲ್ಲಿ ತಮ್ಮ ತಮ್ಮ ಕೋವಿಡ್‌ ದಿನಗಳು (Covid Diaries) ಹೇಗಿತ್ತು ಎಂದು ಹಂಚಿಕೊಂಡಿದ್ದಾರೆ.

 

click me!