
ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೋಲ್ಡನ್ ಗ್ಯಾಂಗ್ (Golden Gang) ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ಮೋಹಕ ತಾರೆ ರಮ್ಯಾ (Ramya) ಆಗಮಿಸಲಿದ್ದಾರೆ, ಎಂದು ಹಲವೆಡೆ ಸುದ್ದಿಯಾಗುತ್ತಿದೆ. ಸಿನಿಮಾ ಮತ್ತು ರಾಜಕೀಯದಿಂದ ದೂರವಿರುವ ರಮ್ಯಾ ತಮ್ಮ ಜರ್ನಿ ಮತ್ತು ಸಿನಿಮಾ ಬಗ್ಗೆ ಮಾತನಾಡಲು ವೇದಿಕೆಗೆ ಬರಲಿದ್ದಾರಾ?
ರಮ್ಯಾ ಕಮ್‌ಬ್ಯಾಕ್ ಮಾಡಬೇಕು ಎಂದು ಅಭಿಮಾನಿಗಳಿಗೆ ಮಾತ್ರವಲ್ಲ ಸಿನಿ ಸ್ನೇಹಿತರಿಗೂ ಆಸೆ ಇದೆ. ಹೀಗಾಗಿ ರಮ್ಯಾ ಬರಲಿ ಎಂದು ಎಲ್ಲರೂ ಡಿಮ್ಯಾಂಡ್ ಮಾಡುತ್ತಿದ್ದಾರೆ. ಕಾರ್ಯಕ್ರಮದ ಆರಂಭದ ದಿನವೇ ರಮ್ಯಾ ಅವರನ್ನು ಕರೆತರಲು ತಂಡ ಪ್ರಯತ್ನ ಮಾಡಿತ್ತು ಎನ್ನಲಾಗಿದೆ. ಆದರೆ ರಮ್ಯಾ ಯಾವ ರೀತಿ ಪ್ರತಿಕ್ರಿಯೆ ಕೊಟ್ಟಿದ್ದಾರೋ ಗೊತ್ತಿಲ್ಲ. ರಮ್ಯಾ ಕಾರ್ಯಕ್ರಮಕ್ಕೆ ಬಂದರೆ ಅವರ ಸಿನಿ ಜರ್ನಿಯ ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳು ರಿವೀಲ್ ಆಗುತ್ತವೆ ಎನ್ನುವ ಕುತೂಹಲ ಅಭಿಮಾನಿಗಳಿಗೆ.
ಕಳೆದ ಒಂದೆರಡು ವರ್ಷಗಳಿಂದ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ಹೊಸ ಕಲಾವಿದರ ಸಿನಿಮಾಗೆ ಪ್ರೋತ್ಸಾಹ ನೀಡುತ್ತಾರೆ. ಟೀಸರ್ (Teaser), ಟ್ರೈಲರ್ (Trailer) ಮತ್ತು ಪೋಸ್ಟರ್ ಅನ್ನು (Poster) ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುತ್ತಾರೆ. ಯಾವುದೇ ಸಿನಿಮಾ ನೋಡಿದ್ದರೂ, ಇದು ಚೆನ್ನಾಗಿದೆ ನೋಡಿ ಎಂದು ಸಲಹೆ ನೀಡುತ್ತಾರೆ. ಸ್ನೇಹಿತರು ಫೋಸ್ಟ್‌ಗೆ ತಮಾಷೆಯ ಕಾಮೆಂಟ್ (Comment) ಮಾಡುತ್ತಾರೆ. ರಮ್ಯಾ ಚಿತ್ರರಂಗದಿಂದ ದೂರ ಉಳಿದರೂ ಅವರ ಬಬ್ಲಿನೆಸ್ (Bubbliness) ಈಗಲೂ ಕಾಣುತ್ತದೆ. ರಮ್ಯಾ ಗುಡ್ ಬೈ ಹೇಳಿದ ನಂತರ ಅದೆಷ್ಟೋ ಮಂದಿ ಚಿತ್ರರಂಗಕ್ಕೆ ಕಾಲಿಟ್ಟರು. ಅವರಿಲ್ಲರಿಗೂ ರಮ್ಯಾ ಯಾರೆಂದು ಗೊತ್ತಿರುತ್ತದೆ. ಆದರೆ ರಮ್ಯಾಗೆ ಇವರು ಗೊತ್ತಾ, ಎಂದು ನೀವು ಪ್ರಶ್ನೆ ಮಾಡಬಹುದು. ಅದಕ್ಕೆ ನಟ್ಟಿಗರೇ (Netizens) ಹೌದು ಎನ್ನುತ್ತಾರೆ. ಈಗಷ್ಟೇ ಯಶಸ್ಸು ಕಾಣುತ್ತಿರುವ ಕಲಾವಿದರ ಫೋಸ್ಟ್‌ಗಳಿಗೂ ರಮ್ಯಾ ಪಾಸಿಟಿವ್ ಕಾಮೆಂಟ್ ಮಾಡುವುದನ್ನು ಯಾರು ಬೇಕಾದರೂ ಗಮನಿಸಬಹುದು. ಸಿನಿಮಾ ಮಾತ್ರವಲ್ಲ ಸೋಷಿಯಲ್ ಮೀಡಿಯಾ influencerಗಳ ಪೋಸ್ಟ್‌ಗೂ ರಮ್ಯಾ ಕಾಮೆಂಟ್ ಮಾಡಿ ಪ್ರೋತ್ಸಾಹ ನೀಡುತ್ತಾರೆ.
ರಮ್ಯಾ ಮತ್ತು ಗಣೇಶ್ ಒಟ್ಟಿಗೆ ಬೊಂಬಾಟ್ (Bombat) ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಅಷ್ಟಕ್ಕೆ ಅಷ್ಟೇ ಆದರೂ, ಹಾಡುಗಳು ಬೊಂಬಾಟ್ ಆಗಿದ್ದವು. ಅದಾದ ನಂತರ ಇವರನ್ನು ಒಂದು ದಿನವೂ ಒಟ್ಟಿಗೆ ನೋಡಿದ ಕ್ಷಣವೇ ಇಲ್ಲ. ಹೀಗಾಗಿ ರಮ್ಯಾ ಮತ್ತೆ ಈ ಶೋನಲ್ಲಿ ಕಾಣಿಸಿಕೊಂಡರೆ, 14 ವರ್ಷಗಳ ನಂತರ ಈ ಜೋಡಿಯನ್ನು ಅಭಿಮಾನಿಗಳು ಮತ್ತೆ ಕಿರುತೆರೆ ಮೇಲೆ ನೋಡಬಹುದು.
ರಮ್ಯಾ ಕೊನೆ ಸಿನಿಮಾ ಆ್ಯನಿನಿಮೇಶನ್‌ನ ನಾಗರಹಾವು (Nagarahavu). ಈ ಸಿನಿಮಾ ಬಳಿಕ ರಮ್ಯಾ ಚಿತ್ರರಂಗಕ್ಕೆ ಅಧಿಕೃತವಾಗಿ ಅಲ್ಲದಿದ್ದರೂ ಗುಡ್ ಬೈ ಹೇಳಿದರು. ಪ್ರಜ್ವಲ್ ದೇವರಾಜ್ (Prajwal Devaraj) ಜೊತೆ ದಿಲ್ ಕಾ ರಾ (Dil Ka Raja) ಸಿನಿಮಾದಲ್ಲಿ ನಟಿಸಿದ್ದರು, ಕಾರಣಾಂತರಗಳಿಂದ ಅಂದುಕೊಂಡ ಸಮಯಕ್ಕೆ ಸಿನಿಮಾ ಶೂಟಿಂಗ್ ಮುಗಿಯಲಿಲ್ಲ. ರಮ್ಯಾ ಮತ್ತೆ ಶೂಟಿಂಗ್ ಮಾಡುತ್ತಾರಾ ಇಲ್ಲವೋ ಗೊತ್ತಿಲ್ಲ. ಬಹುಶಃ ರಮ್ಯಾ ಕಮ್ ಬ್ಯಾಕ್ ಮಾಡಿದ್ದರೆ ನಿರ್ದೇಶಕ ಸೋಮನಾಥ್ (Director Somanath) ಮತ್ತೆ ಶೂಟಿಂಗ್ ಮಾಡುತ್ತಾರ ಇಲ್ಲವೂ, ಅದೂ ಗೊತ್ತಿಲ್ಲ. ರಮ್ಯಾ ಅವರು ಒಂದು ಸಲ ವೇದಿಕೆ ಮೇಲೆ ಬಂದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.