ನಿದ್ರೆಯಲ್ಲಿ ಜರ್ಕ್‌ ಅಥವಾ ಬೆಚ್ಚಿ ಬೀಳುವವರಿಗೆ ಪರಿಹಾರ ಕೊಟ್ಟ ಕಿರುತೆರೆ ನಟಿ ಕಾವ್ಯಾ ಶಾಸ್ತ್ರಿ

By Vaishnavi Chandrashekar  |  First Published Jun 13, 2024, 4:41 PM IST

ನಟಿಯಾಗಿ ಮಾತ್ರವಲ್ಲ ಜನರಿಗೆ ಅರಿವು ಮೂಡಿಸುವಂತ ಕೆಲಸ ಮಾಡುತ್ತಿರುವ ಕಾವ್ಯಾನೇ ಗ್ರೇಟ್ ಅಂತಿದ್ದಾರೆ ನೆಟ್ಟಿಗರು....


ಶುಭ ವಿವಾಹ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಕಾವ್ಯಾ ಶಾಸ್ತ್ರಿ  ಬಿಗ್ ಬಾಸ್ ಸೀಸನ್ 4ರಲ್ಲಿ ಸ್ಪರ್ಧಿಸಿ ಮನೆ ಮಗಳಾಗಿಬಿಟ್ಟರು. ಅದಾದ ಮೇಲೆ ಒಂದೊಂದೆ ಸೀರಿಯಲ್ ಹಾಗೂ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿಕೊಂಡು ಮನೋರಂಜಿಸುತ್ತಿದ್ದಾರೆ. ಇತ್ತೀಚಿನ ದಿನಗಳ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಕಾವ್ಯಾ ಶಾಸ್ತ್ರಿ ಆರೋಗ್ಯ, ಆಹಾರ ಮತ್ತು ಸಮಾಜದ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಿ ವಿಡಿಯೋ ಅಪ್ಲೋಡ್ ಮಾಡುತ್ತಾರೆ. ಅನೇಕರಲ್ಲಿ ಒಂದು ವಿಡಿಯೋ ಜನರ ಗಮನ ಸೆಳೆದಿದೆ, ಅದುವೇ ನಿದ್ರೆಯಲ್ಲಿ ಬೆಚ್ಚಿ ಬೀಳುವುದು. 

'ನಾವು ಸಾಧಾರಣವಾಗಿ ನಿದ್ರೆ ಮಾಡುವಾಗ ಎಲ್ಲಿಂದಲೂ ದಿಢೀರ್ ಅಂತ ಬಿದ್ದಹಾಗೆ, ಮರದಿಂದ ಬಿದ್ದ ಹಾಗೆ, ದಡದಡ ಅಂತ ಮೆಟ್ಟಿಲಿನಿಂದ ಉರುಳಿ ಬಿದ್ದ ಹಾಗೆ, ಮೇಲಿಂದ ಕುಸಿದು ಬಿದ್ದ ಹಾಗೆ....ಸಡಕ್ ಆಗಿ ಜರ್ಕ್‌ ಹೊಡೆಯುತ್ತಿವಿ ಅಥವಾ ಬೆಚ್ಚಿ ಬೀಳುತ್ತೀವಿ.  ಸಾಮಾನ್ಯವಾಗಿ ಎಲ್ಲರಿಗೂ ಈ ರೀತಿ ಆಗಿರುತ್ತದೆ..ನಿಮಗೂ ಆಗಿದ್ಯಾ?ಆದರೆ ಇದರ ಹಿಂದೆ ಒಂದು ಸೈನ್ಸ್ ಇದೆ. ಈ ರೀತಿ ಆಗುವುದಕ್ಕೆ ಹಿಪ್‌ನಿಕ್‌ ಜರ್ಕ್‌ ಎಂದು ಹೇಳುತ್ತಾರೆ. ಮಯೋ ಕ್ಲೋನ್ಸ್‌ ಅಂತ ನಮ್ಮ ದೇಹದಲ್ಲಿ ಇರುವ ಇನ್‌ ವಾಲಂಟರಿ ಮಸ್ಸೆಲ್ಸ್ ಈ ರೀತಿ ಜರ್ಕ್‌ ಹೊಡೆಯುತ್ತದೆ ಆಗ ನಿದ್ರೆಯಲ್ಲಿ ಇರುವಂತ ಮನುಷ್ಯ ಕೆಳಗೆ ಬಿದ್ದ ಹಾಗೆ ಅಥವಾ ಯಾರೂ ನೂಕಿದ ಹಾಗೆ ಅನುಭವ ಪಡೆಯುತ್ತಾರೆ. ಈ ರೀತಿ ಆಗುತ್ತಿರುವುದಕ್ಕೆ ಹೆದರಿಕೊಳ್ಳುವ ಅಗತ್ಯವಿಲ್ಲ ಆದರೆ ಇದಕ್ಕೊಂದು ಪರಿಹಾರವಿದೆ' ಎಂದು ಕಾವ್ಯಾ ಶಾಸ್ತ್ರಿ ಮಾತನಾಡಿದ್ದಾರೆ.

Latest Videos

undefined

ಮದುವೆ ಸಿಂಪಲ್‌ ಆಗಿದ್ರೂ ಜೀವನ ಗ್ರಾಂಡ್‌ ಆಗಿದೆ; 24ನೇ ವೆಡ್ಡಿಂಗ್ ಅನಿವರ್ಸರಿ ಖುಷಿಯಲ್ಲಿ ಶಾಲಿನಿ ಸತ್ಯನಾರಾಯಣ್

'ಮಲಗುವುದಕ್ಕೂ ಎರಡು ಗಂಟೆ ಮುನ್ನ ಸ್ಕ್ರೀನ್ ಟೈಂ ಕಟ್ ಮಾಡಿ ಅಂದ್ರೆ ಟಿವಿ ಅಥವಾ ಮೊಬೈಲ್ ಬಳಸಬೇಡಿ. ಕಾಫಿ, ಟೀ ಮತ್ತು ಮಧ್ಯಪಾನಗಳ ಸೇವನೆಯನ್ನು ಕಡಿಮೆ ಮಾಡಿ ಆರೋಗ್ಯಕ್ಕೆ ಒಳ್ಳೆಯ ಆಹಾರ ಸೇವಿಸಬೇಕು. ಸಂಜೆ 7 ಅಥವಾ 8ರ ಒಳಗೆ ಊಟ ಮುಗಿಸಿಕೊಳ್ಳಬೇಕು. ಮಲಗುವ 10 ನಿಮಿಷ ಮುನ್ನ ಪ್ರಾಣಾಯಾಮ ಮಾಡಿ ಮನಸ್ಸನ್ನು ಶುದ್ಧವಾಗಿ ಇಟ್ಟಿಕೊಳ್ಳಿ. ಮಲಗುವಾಗ ಚಂದದ ಮ್ಯೂಸಿಕ್ ಹಾಕಿಕೊಂಡು ಮಲಗಬೇಕು ಅದನ್ನು ಮೀರಿ ಜಾಸ್ತಿ ಒತ್ತಡವಾಗುತ್ತಿದೆ ಅಂದ್ರೆ ಹಕ್ಕಿಗಳ ಚಿಲಿಪಿಲಿ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಸಿಗುತ್ತದೆ ಅದನ್ನು ಕೇಳಿಸಿಕೊಂಡು ಮಲಗಬೇಕು. ಖಂಡಿತವಾಗಿಯೂ ನಿದ್ರೆಯಲ್ಲಿ ಬರುವ ಜರ್ಕ್‌ನ ನಡೆಯಬಹುದು' ಎಂದು ಕಾವ್ಯಾ ಶಾಸ್ತ್ರಿ ಹೇಳಿದ್ದಾರೆ. 


 

click me!