
ಕನ್ನಡ ಚಿತ್ರರಂಗದಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿ, 25ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅಮೃತಾ ನಾಯ್ಡು ತಾಯಿಯಾಗುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬೇಬಿ ಬಂಪ್ ಫೋಟೋ ಹಂಚಿಕೊಂಡು ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ಕಳೆದುಕೊಂಡ ಸಮನ್ವಿಯನ್ನು ನೆನಪಿಸಿಕೊಳ್ಳದ ದಿನವೇ ಇಲ್ಲ ಎನ್ನುತ್ತಾರೆ ಆಪ್ತರು....
ಅಮೃತಾ ಪೋಸ್ಟ್:
'ನನ್ನ ಜೀವನದಲ್ಲಿ ಒಂದು ದಿನ ಜೋರಾದ ಗುಡುಗು ಬಡಿದ ನಂತರ ನನ್ನ ಪ್ರಪಂಚ ನಲುಗಿತ್ತು. ನಾನು ಹಿಡಿದಿಟ್ಟುಕೊಳ್ಳಲು ಜೀವನದಲ್ಲಿ ಏನೂ ಇಲ್ಲಿ ಅನಿಸುತು. ನನಗೆ ಏನೂ ಯಾವುದೂ ಅರ್ಥವಾಗಲಿಲ್ಲ, ಉಸಿರಾಡುತ್ತಿದ್ದೇನೆ ಆದರೆ ಒಳಗೆ ಸತ್ತಿದ್ದೇನೆ ಎಂದು ಭಾವಿಸಿದೆ. ಆದರೆ ನನ್ನ ಜೀವನದ ಸ್ಪೆಷಲ್ ವ್ಯಕ್ತಿಗಳಿಂದ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದದಿಂದ ನನ್ನ ಜೀವನ ಹೀಗಿದೆ. ನೀವುಗಳು ನನ್ನೊಳಗೆ ಇನ್ನೊಂದು ಜೀವವಿದೆ ನನ್ನ ಜೀವನವನ್ನು ಮತ್ತೆ ಬದಲಾಯಿಸುತ್ತದೆ ಆ ಬೆಳಕನ್ನು ನೋಡುತ್ತೇನೆ ಎಂದು ನೆನಪಿಸುತ್ತಿದ್ದಿರಿ' ಎಂದು ಅಮೃತಾ ಬರೆದುಕೊಂಡಿದ್ದಾರೆ.
'ನನ್ನೊಳಗಿರುವ ಪುಟ್ಟ ಜೀವ ಕಾಣಿಸಿಕೊಳ್ಳುತ್ತಿದೆ, ಇದು ನನಗೆ ಪದೇ ಪದೇ ನೆನಪು ಮಾಡುತ್ತಿದೆ ಜೀವನ ನನ್ನ ಬಗ್ಗೆ ಮಾತ್ರವಲ್ಲ ಮಾಯದ ನೋವುಗಳು ಇರುತ್ತದೆ ಆದರೆ ಎಲ್ಲ ಭಾವನೆಗಳನ್ನು ನನ್ನ ಮೇಲೆ ಹಾಕಿಕೊಳ್ಳಬಾರದು ಎಂದು. ಕೆಲವು ವಿಷಯಗಳನ್ನು ಬದಲಾಯಿಸಲಾಗದಿದ್ದರೂ ಮತ್ತು ಈ ಜೀವಿತಾವಧಿಯಲ್ಲಿ ಆ ನೋವಿನಿಂದ ನೀವು ಎಂದಿಗೂ ಚೇತರಿಸಿಕೊಳ್ಳುವುದಿಲ್ಲ. ಈ ನೋವುಗಳು ಏನಿದ್ದರು ಅದು ನನಗೆ ಮಾತ್ರವಿರಬೇಕು ಈ ಪುಟ್ಟ ಜೀವಕ್ಕೆ ಏನೂ ಗೊತ್ತಾಗಬಾರದು ಅದು ಸದಾ ನನ್ನ ಸಂತೋಷದ ಕ್ಷಣಗಳನ್ನು ಮಾತ್ರ ನೋಡಬೇಕು' ಎಂದು ಅಮೃತಾ ಹೇಳಿದ್ದಾರೆ.
'ಈ ಪುಟ್ಟ ಜೀವ, ಜೀವನದಲ್ಲಿ ಅನುಭವಿಸಬೇಕಾದ ಸಂತೋಷದ ಕ್ಷಣಗಳನ್ನು ನಾನು ಇಂದು ಕ್ರಿಯೇಟ್ ಮಾಡಿರುವೆ. ಈ ಅದ್ಭುತ ಕ್ಷಣವನ್ನು ಕ್ಯಾಪ್ಚರ್ ಮಾಡಿರುವೆ, ಪ್ರಪಂಚ ಹೇಗಿರಲಿದೆ ಅನ್ನೋ ರಿಮೈಂಡರ್. ಇದು ನನ್ನ ಸಮನ್ವಿ ಆಗಿದ್ದರೆ ಸಮನ್ವಿ ಮತ್ತೆ ಬಂದ್ರೆ ಜೀವನ ಮತ್ತೆ ಫ್ರೆಶ್ ಆಗಿರುತ್ತದೆ ಇಲ್ಲದಿದ್ದೆರೆ ಹೊಸ ಫ್ರೆಶ್ ಶೇಡ್ ಸಿಗುತ್ತದೆ. ಈ ಕ್ಷಣವನ್ನು ಸಂಭ್ರಮಿಸುವುದನ್ನು ನಾನು ಮಿಸ್ ಮಾಡಿಕೊಳ್ಳುವುದಿಲ್ಲ. ನೀವೆಲ್ಲರೂ ನನ್ನ ಶಕ್ತಿಯಾಗಿ ನಿಲ್ಲಬೇಕು ಈ ಕ್ಷಣವನ್ನು ಬದುಕಲು ಸಹಾಯ ಮಾಡಬೇಕು' ಎಂದಿದ್ದಾರೆ ಅಮೃತಾ.
ನನ್ನಮ್ಮ ಸೂಪರ್ ಸ್ಟಾರ್:
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಅಮೃತಾ ನಾಯ್ಡು ಮತ್ತು ಪುತ್ರಿ ಸಮನ್ವಿ ಸ್ಪರ್ಧಿಸುತ್ತಿದ್ದರು. ಶೋ ಆರಂಭಿಸಿದ ನಂತರ ಅಮೃತಾ ತಾಯಿಯಾಗುತ್ತಿರುವ ವಿಚಾರ ತಿಳಿದು ಸಂಭ್ರಮಿಸಿದ್ದರು. ಮಗಳ ಜೊತೆ ಸ್ಟೇಜ್ ಮೇಲೆ ಆಟವಾಡಿ ಹೆಜ್ಜೆ ಹಾಕಿ ಜೀವನದಲ್ಲಿ ಮರೆಯಲಾಗದ ಕ್ಷಣಗಳನ್ನು ಕ್ರಿಯೇಟ್ ಮಾಡಿದ್ದರು. ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಎಲಿಮಿನೇಟ್ ಆಗಿದರು. ಇದಾದ ಕೆಲವೇ ವಾರಗಳಲ್ಲಿ ಕೊರೋನಾ ಲಾಕ್‌ಡೌನ್ ಶುರುವಾಯ್ತು.
ಒಂದು ದಿನ ಅಮೃತಾ ಮತ್ತು ಸಮನ್ವಿ ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿಯಲ್ಲಿ ಪ್ರಯಾಣ ಮಾಡುವಾಗ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತವಾಗಿತ್ತು. 6 ವರ್ಷದ ಸಮನ್ವಿ ಸ್ಥಳದಲ್ಲೇ ಮೃತಪಟ್ಟರು. ಈ ಘಟನೆ ಚಿತ್ರರಂಗಕ್ಕೆ ಮಾತ್ರವಲ್ಲ ಇಡೀ ಕರ್ನಾಟಕಕ್ಕೆ ದೊಡ್ಡ ಶಾಕ್ ಆಗಿತ್ತು. ನನ್ನಮ್ಮ ಸೂಪರ್ ಸ್ಟಾರ್ ಮೂಲಕ ಸಮನ್ವಿ ಕರ್ನಾಟಕ ಜನತೆಯ ಮನೆ ಮಗಳಾಗಿದ್ದಳು.
ಅಮೃತಾ ಈ ಸಮಯದಲ್ಲಿ ಗರ್ಭಿಣಿ ಆಗಿದ್ದ ಕಾರಣ ಕುಟುಂಬಸ್ಥರು ಮತ್ತು ಸ್ನೇಹಿತರು ಹೆಚ್ಚಿನ ಕಾಳಜಿ ವಹಿಸಿದರು. ಈ ಸಮಯದಲ್ಲಿ ರಾಜಕಾರಣಿಗಳು ಕೂಡ ಅಮೃತಾ ನಿವಾಸಕ್ಕೆ ಭೇಟಿ ಕೊಟ್ಟು ಸಂತಾಪ ಸೂಚಿಸಿದ್ದರು. ಖ್ಯಾತ ಹರಿಕಥೆ ದಾಸ ಗುರುರಾಜ ನಾಯ್ಡುರ ಮೊಮ್ಮಗಳು ಅಮೃತಾ ಮೇಲೆ ಕನ್ನಡ ವೀಕ್ಷಕರಿಗೆ ಅಪಾರ ಪ್ರೀತಿ.
ಅಮೃತಾ ಕುಟುಂಬಕ್ಕೆ ಒಳ್ಳೆಯದಾಗಲಿ. ಕಂದಮ್ಮ ಮತ್ತೆ ಸಂತೋಷ ತರಲಿ ಎಂದು ನಾವೆಲ್ಲರೂ ಆಶಿಸೋಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.