ಗಿಚ್ಚಿ ಗಿಲಿಗಿಲಿ ಶೋಗೆ ರೀಲ್ಸ್‌ ಮಾಡುವವರ ಎಂಟ್ರಿ ಆಗಿದೆ, ಶ್ರುತಿ ಅವರೇ ಆಫ್‌ ಸ್ಕ್ರೀನ್‌ ತರ್ಲೆ: ಸೃಜನ್ ಲೋಕೇಶ್

Published : Apr 07, 2022, 12:12 PM IST
ಗಿಚ್ಚಿ ಗಿಲಿಗಿಲಿ ಶೋಗೆ ರೀಲ್ಸ್‌ ಮಾಡುವವರ ಎಂಟ್ರಿ ಆಗಿದೆ, ಶ್ರುತಿ ಅವರೇ ಆಫ್‌ ಸ್ಕ್ರೀನ್‌ ತರ್ಲೆ: ಸೃಜನ್ ಲೋಕೇಶ್

ಸಾರಾಂಶ

ಆರಂಭವಾಗುತ್ತಿದೆ ಹೊಸ ಕಾಮಿಡಿ ಶೋ. ಗಿಚ್ಚಿ ಗಿಲಿಗಿಲಿಯಲ್ಲಿ ಬಗ್ಗೆ ಸೃಜನ್ ಲೋಕೇಶ್ ಮತ್ತು ಶ್ರುತಿ ಏನ್ ಹೇಳುತ್ತಾರೆ?

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ನನ್ನಮ್ಮ ಸೂಪರ್ ಸ್ಟಾರ್ (Nanamma Superstar) ರಿಯಾಲಿಟಿ ಶೋ ಮುಗಿದ ನಂತರ ಆರಂಭವಾಗುತ್ತಿದೆ ಹಾಸ್ಯ ಪ್ರದಾನ ಕಾರ್ಯಕ್ರಮ ಗಿಚ್ಚಿ ಗಿಲಿಗಿಲಿ. ತೀರ್ಪುಗಾರರ ಸ್ಥಾನಕ್ಕೆ ಸೃಜನ್ ಲೋಕೇಶ್ (Srujan Lokesh) ಮತ್ತು ಹಿರಿಯ ನಟಿ ಶ್ರುತಿ (Shruthi) ಕಾಣಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮ ತುಂಬಾನೇ ವಿಭಿನ್ನವಾಗಿ ಎನ್ನಬಹುದು ಏಕೆಂದರೆ ಇರದಲ್ಲಿ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ, ಬಾರ್ಬಿ ಡಾಲ್ ನಿವೇದಿತಾ ಗೌಡ (Niveditha Gowda), ಕ್ರಿಕೆಟರ್ ಅಯ್ಯಪ್ಪ, ನಟಿ ಹರಿಣಿ ಪತಿ ಶ್ರೀಕಾಂತ್ ಮತ್ತು ನ್ಯೂಸ್ ನಿರೂಪಕಿ ದಿವ್ಯಾ ವಸಂತ್ (Divya Vasanth) ಸ್ಪರ್ಧಿಸುತ್ತಿದ್ದಾರೆ. 

ಸೆಲೆಬ್ರಿಟಿಗಳ ಜೊತೆ ಸೋಷಿಯಲ್ ಮೀಡಿಯಾ ಸ್ಟಾರ್ಸ್‌:

'ಸೋಷಿಯಲ್ ಮೀಡಿಯಾದಿಂದ (Social Media) ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಏಕೆಂದರೆ ಜನರೊಂದಿಗೆ ಬೇಗ ಕನೆಕ್ಟ್ ಆಗುತ್ತಾರೆ ಅದು ನಮಗಿರುವ ಪ್ಲಸ್ ಪಾಯಿಂಟ್.ರೀಲ್ಸ್ ಅಥವಾ ಯೂಟ್ಯೂಬ್ ನೋಡಿದರೆ ತುಂಬಾನೇ ವೆರೈಟಿ ಕಾಣಿಸುತ್ತದೆ ಅವರಿಗೆ ಇರುವ ಟ್ಯಾಲೆಂಟ್ ನೋಡಿದರೆ ಸರ್ಪ್ರೈಸ್ ಆಗುತ್ತದೆ ಇದ್ಯಾಕೆ ನಮಗೆ ಹೊಳೆದಿಲ್ಲ ಅನೋಷ್ಟು ಕ್ರಿಯೇಟಿವ್ ಆಗಿದ್ದಾರೆ. ನಾವು ನಮ್ಮನ್ನು ಅಪ್‌ಗ್ರೇಡ್ ಮಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ ಇಲ್ಲ ಅಂದ್ರೆ ನಾವು ಹಿಂದೆ ಉಳಿದುಬಿಡ್ತೀವಿ' ಎಂದು ಸೃಜನ್ ಲೋಕೇಶ್ ಮಾತನಾಡಿದ್ದಾರೆ. 

ಕಿರುತೆರೆಯಲ್ಲಿ ನಿವೇದಿತಾ ಗೌಡ, ದಿವ್ಯ ವಸಂತಾ 'ಗಿಚ್ಚಿ ಗಿಲಿಗಿಲಿ'; ಪ್ರೇಕ್ಷಕರ ಅಸಮಾಧಾನ

'ನಾವು ಜಡ್ಜ್ ಆಗಿ ಯಾರನ್ನೂ ಜಡ್ಜ್ ಮಾಡೋಕೆ ಬಂದಿಲ್ಲ ಮಜಾ ಮಾಡೋಕೆ ಬಂದಿದ್ದೀವಿ ಸಪೋರ್ಟ್ ಮಾಡೋಕೆ ಬಂದಿದ್ದೀವಿ. ಈ ಶೋ ಕಂಟೆನ್ಟ್‌ ಕಾಮಿಡಿ ಆಗಿರುವುದರಿಂದ ಎಲ್ಲರನ್ನು ನಗಿಸುವುದೇ ಕೆಲಸ. ಮಜಾಭಾರತ ಆದ್ಮೇಲೆ ಆ ತರದ ಮತ್ತೊಂದು ಶೋ ಇದು ಆದರೆ ಇಲ್ಲಿ ಒಬ್ಬರು ಪ್ರೊಫೆಷನಲ್ ಆಗಿರುವವರು ನಾನ್ ಪ್ರೊಫೆಷನಲ್‌ಗೆ ಜೋಡಿ ಆಗುತ್ತಾರೆ. ಅದೇ ಒಂದು ಹೊಸತನ ಕೊಡಲಿದೆ. ಮಜಾಭಾರತದಲ್ಲಿ ಇದ್ದಾಗ ಇವೆರೆಲ್ಲಾ ಹೊಸಬರು ಆದರೀಗ ತುಂಬಾನೇ ಎಕ್ಸ್ಪೀರಿಯನ್ಸ್ ಕಲಾವಿದರು ಆಗ್ಬಿಟಿದ್ದಾರೆ. ಇದು ಸಖತ್ ತಮಾಷೆ ಕೊಡುವ ಕಾರ್ಯಕ್ರಮ ಆಗಲಿದೆ. ಟೈಟಲ್ ಬಂದು ರತ್ನನ್ ಪ್ರಪಂಚದ ಹಾಡು ತುಂಬಾ ಹಿಟ್ ಆಗಿದೆ ಈ ಟೈಟಲ್ ನೋಡಿದರೆ ಗೊತ್ತಾಗುತ್ತದೆ ಇದೊಂದು ಫನ್ ಇರುವ ಶೋ ಅಂತ' ಎಂದು ನಟಿ ಶ್ರುತಿ ಹೇಳಿದ್ದಾರೆ. 

ಸೃಜನ್ ಹ್ಯಾಟ್ರಿಕ್ ಶೋ:

'ಕಳೆದ ಶೋನಲ್ಲಿ ತಾರಮ್ಮ ಇದ್ದರು ಅವರ ಜೊತೆ ತರ್ಲೆ ಮಾಡಿದಂಗೆ ಇವರ ಜೊತೆನೂ ಮಾಡಬಹುದು ಅಷ್ಟು ಸ್ವಾತಂತ್ರ್ಯ ನನಗಿದೆ. ನಮ್ಮಲ್ಲಿ ಕಾಮಿಡಿ ಸೆನ್ಸ್ ಇಲ್ಲ ಅಂದ್ರೆ ಕಾಮಿಡಿ ಶೋನ ಎಂಜಾಯ್ ಮಾಡೋಕೆ ಆಗೋಲ್ಲ, ಶ್ರುತಿ ಅವರು ನನಗಿಂತ ಹತ್ತರಷ್ಟು ತರ್ಲೆ ಅನ್ನೋದು ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ನಾನು ಆನ್‌ಸ್ಕ್ರೀನ್ ತರಲೆ ಇರಬಹುದು ಶ್ರುತಿ ಅವರು ಆಫ್‌ಸ್ಕ್ರೀನ್ ದೊಡ್ಡ ತರ್ಲೆ. ಹೊಟ್ಟೆ ಪಾಡು ಕೆಲಸ ಕೊಡ್ತಿದ್ದಾರೆ ಕೆಲಸ ಮಾಡ್ತಿದ್ದೀವಿ. ಏನೆಂದರೆ ಮೂರು ಕಂಟಿನ್ಯೂ ಶೋ ಆಗಿದ್ದು ಒಂದು ರೀತಿ ಹ್ಯಾಟ್ರಿಕ್. ಮೂರು ಕೂಡ ಬೇರೆ ಬೇರೆ ಜಾನರ್ ಆಗಿದೆ ರಾಜ ರಾಣಿನೇ ಬೇರೆ, ನನ್ನಮ್ಮ ಸೂಪರ್ ಸ್ಟಾರ್ ಕೂಡ ಬೇರೆ, ಈಗ ಗಿಚ್ಚಿ ಗಿಲಿಗಿಲಿನೇ ಬೇರೆ. ಈ ಶೋನಲ್ಲಿ ಜನರಿಂದ ನನಗೆ ಕಲಿಯುವುದಕ್ಕೆ ತುಂಬಾನೇ ಇದೆ' ಎಂದಿದ್ದಾರೆ ಸೃಜನ್.

ನನ್ನಮ್ಮ ಸೂಪರ್‌ ಸ್ಟಾರ್ ವಿನ್ನರ್ ವಂಶಿಕಾ ಮತ್ತು ಯಶಸ್ವಿನಿ, ಕೈ ಸೇರಿದ ಮೊತ್ತ ಎಷ್ಟು ಗೊತ್ತಾ?

'ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ ಖಂಡಿತ ಟಿಪ್ಸ್ ಕೊಡ್ತೀನಿ ಏಕೆಂದರೆ ಮೊದಲ ಸಲ ಮಾಡುವಾಗ ಎಷ್ಟು ಆತಂಕ ಆಗುತ್ತದೆ ಅಂತ ನನಗೆ ಗೊತ್ತು.  ಎಲ್ಲಿ ಇಂಪ್ರೂವ್ ಮಾಡಿಕೊಳ್ಳಬಹುದು ಎಂದು ಪದೇ ಪದೇ ಹೇಳುತ್ತಿರುವೆ. ಮಜಾ ಟಾಕೀಸ್ ಯಾವಾಗ ಎಂದು ಜನರು ಕೇಳುತ್ತಿದ್ದಾರೆ ನಾವು ಶುರು ಮಾಡುತ್ತೀವಿ ಆದರೆ ಕನ್ನಡ ಚಿತ್ರರಂಗ ಇನ್ನೂ regularize ಆಗಬೇಕು ಹಿಂದೆ ಯಾವ ರೀತಿ ಸಿನಿಮಾ ರಿಲೀಸ್ ಆಗುತ್ತಿತ್ತು ಅದೇ ರೀತಿ ಆಗಬೇಕು. ಮಜಾ ಟಾಕೀಸ್ ಮಾಡುವುದು ಅಷ್ಟು ಸುಲಭವಲ್ಲ ಪ್ರತಿಯೊಬ್ಬರು ಒಂದೊಂದು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ವಾರಕ್ಕೆ ಒಂದು ದಿನ ಶೂಟಿಂಗ್ ಎರಡು ದಿನ ಪ್ರಸಾರ ಆದ್ರೂನೂ ಇಡೀ ವಾರ ತಯಾರಿ ಮಾಡಿಕೊಳ್ಳಬೇಕು. ನಾನು ರಾತ್ರಿ  3 ಗಂಟೆಗೆ ಎದ್ದು ಸ್ಕ್ರಿಪ್ಟ್‌ ಬರೆದ  ದಿನಗಳು ಇದೆ. ಎಲ್ಲಾ ಕೋವಿಡ್‌ ಎಫೆಕ್ಟ್‌ ಆಗುತ್ತೆ ಅದಿಕ್ಕೆ ನಿಧಾನಕ್ಕೆ ತೆಗೆದುಕೊಂಡು ಹೋಗುತ್ತಿದ್ದೀನಿ' ಎಂದು ಸೃಜನ್ ಹೇಳಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?