ಮುಗ್ಗರಿಸಿ ಬಿದ್ದ ನಿವೇದಿತಾ ಗೌಡ ಎರಡು ಹಲ್ಲು ಡಮಾರ್, ಗಂಡ ಅತ್ತೆ ಮಾವ ರಿಯಾಕ್ಷನ್ ಇದು!

By Suvarna News  |  First Published Apr 3, 2022, 2:25 PM IST

ಯುಟ್ಯೂಬ್‌ನಲ್ಲಿ ಹೊಸ ವಿಡಿಯೋ ಅಪ್ಲೋಡ್ ಮಾಡಿದ ನಿವೇದಿತಾ ಗೌಡ. ಮುಂದೆ ಎರಡು ಹಲ್ಲು ಇಲ್ಲದೆ ಹೇಗೆ ಕಾಣಿಸುತ್ತಾಳೆ ಬಾರ್ಬಿ ಡಾಲ್?


ಕನ್ನಡ ಕಿರುತೆರೆ ಬಾರ್ಬಿ ಡಾಲ್, ಚಂದನ್ ಶೆಟ್ಟಿ ಹೃದಯ ಕದ್ದ ಮುದ್ದು ಹುಡುಗಿ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟೀವ್ ಆಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ದಿನಕ್ಕೊಂದು ಫೋಟೋ, ವಿಡಿಯೋ ಅಪ್ಲೋಡ್ ಮಾಡುವೆ ಚೆಲುವೆ ಯುಟ್ಯೂಬ್‌ ಲೋಕಕ್ಕೂ ಕಾಲಿಟ್ಟಿದ್ದಾರೆ. ಏನೆಲ್ಲಾ ಟ್ರೆಂಡ್‌ನಲ್ಲಿ ಇರುತ್ತದೆ ಅದನ್ನು ಫಾಲೋ ಮಾಡುವ ನಿವಿ ಇದೀಗ ಇಡೀ ಫ್ಯಾಮಿಲಿ ಏಪ್ರಿಲ್ ಫೂಲ್ ಮಾಡಿದ್ದಾರೆ. ನಿವಿ ಮಾತು ನಂಬಿ ಎಲ್ಲರೂ ಶಾಕ್ ಆಗುತ್ತಾರೆ......

ಹೌದು! ನಿವೇದಿತಾ ಗೌಡ ಏಪ್ರಿಲ್ ಫೂಲ್ ಮಾಡಲು ಒಂದು ಐಡಿಯಾ ಮಾಡಿದ್ದಾರೆ. ತಮ್ಮ ಮನೆಯಲ್ಲಿರುವ ಸಾಕು ನಾಯಿ ಜೊತೆ ಆಟ ಆಡುವಾಗ ಮೆಟ್ಟಿಲಿನಿಂದ ಮುಗ್ಗರಿಸಿ ಬಿದ್ದು ಮುಂದಿರುವ ಎರಡು ಹಲ್ಲುಗಳಲ್ಲಿ ಮುರಿದುಕೊಂಡಿದ್ದಾರೆ ಎಂದು ಪತಿ ಚಂದನ್, ಅತ್ತೆ ಮಾವ ಮತ್ತು ತಾಯಿಗೆ ಕರೆ ಮಾಡಿ ಶಾಕ್ ಕೊಟ್ಟಿದ್ದಾರೆ. ನಿವಿ ಮಾತುಗಳನ್ನು ಕೇಳಿ ಮೊದಲು ಎಲ್ಲರೂ ಗಾಬರಿ ಆಗುತ್ತಾರೆ ಆನಂತರ ಪ್ರ್ಯಾಂಕ್ ಎಂದು ತಿಳಿದು ನಗುತ್ತಲೇ ಬೈಯುತ್ತಾರೆ. 

Tap to resize

Latest Videos

ನಿವೇದಿತಾ ಮೊದಲು ಚಂದನ್ ಶೆಟ್ಟಿಗೆ ಕರೆ ಮಾಡುತ್ತಾರೆ. ಮ್ಯೂಸಿಕ್ ಸ್ಟುಡಿಯೋದಲ್ಲಿ ಬ್ಯುಸಿಯಾಗಿದ್ದ ಚಂದನ್‌ ಕರೆ ಸ್ವೀಕರಿಸುತ್ತಾರೆ. ನಿವಿ ಮಾತುಗಳನ್ನು ಕೇಳಿ ಅರ್ಧಕ್ಕೆ ಕರೆ ಕಟ್ ಮಾಡಿ ಓಡಿ ಬಂದು ಚಂದನ್ ನಿವಿ ಪಕ್ಕ ಇರುವ ಯೂಟ್ಯೂಬ್‌ ಟೀಂನ ನೋಡಿ ಓ ಇದು prank ಹಾ ಏಪ್ರಿಲ್ ಫೂಲ್ ಹಾ ಎಂದು ಕೇಳಿ ನಗುತ್ತಲೇ ವಾಪಸ್ ಸ್ಟುಡಿಯೋಗೆ ಹೋಗುತ್ತಾರೆ. ಆನಂತರ ನಿವಿ ಮೈಸೂರಿನಲ್ಲಿರುವ ತಮ್ಮ ತಾಯಿಗೆ ಕರೆ ಮಾಡಿ ಫೂಲ್ ಮಾಡಲು ಮುಂದಾಗುತ್ತಾರೆ. ಗಾಬರಿಗೊಂಡ ತಾಯಿ ವಿಡಿಯೋ ಕಾಲ್ ಮಾಡಲು ಮನವಿ ಮಾಡುತ್ತಾರೆ. ಆರೋಗ್ಯ ಸಮಸ್ಯೆಯಿಂದ ನಿವಿ ತಾಯಿ ರೆಸ್ಟ್‌ ಮಾಡುತ್ತಿರುತ್ತಾರೆ ತಕ್ಷಣವೇ 'ಹೀಗೆಲ್ಲಾ ಹೇಳ್ಬೇಡಪ ನನಗೆ ಸುಸ್ತು ಆಗುತ್ತೆ ಭಯ ಆಗುತ್ತೆ' ಎಂದು ಹೇಳುತ್ತಾರೆ. ವಿಡಿಯೋ ಕಾಲ್‌ನ ನಿವಿ ಮುಖ ತೋರಿಸಿ ಸತ್ಯ ಹೇಳುತ್ತಾಳೆ. 'ಈ ರೀತಿ ಮತ್ತೆ ಹೇಳಬೇಡಪ್ಪ ನನಗೆ ಭಯ ಆಯ್ತು ನಿಜ ಸುಸ್ತು ಆಯ್ತು ನಾನು ಸತ್ತು ಹೋಗ್ತೀನಿ. ಪ್ಲೀಸ್ ಬಿಡ್ತು ಬಿಡ್ತು ಅಂತ ಮೂರು ಸಲ ಹೇಳಪ್ಪ' ಎಂದು ನಿವಿ ತಾಯಿ ಹೇಳುತ್ತಾರೆ.

ಅಪ್ಪ- ಅಮ್ಮ ಆಗ್ತಿದ್ದಾರೆ ಚಂದನ್‌ ಶೆಟ್ಟಿ - ನಿವೇದಿತಾ ಗೌಡ?

'ಅಯ್ಯೋ ಮಮ್ಮಿ ಇದು ನಾನು ಮಾಡಿದ ಪ್ರ್ಯಾಂಕ್ ನಿಜ ಅಲ್ಲ ಯೂಟ್ಯೂಬ್ ವಿಡಿಯೋದಲ್ಲಿ ರೆಕಾರ್ಡ್ ಆಗುತ್ತಿದೆ ಈ ರೀತಿ ಮಾತನಾಡಬೇಡ' ಎಂದಿದ್ದಾರೆ. ನನ್ನ ತಾಯಿ ಯಾವಾಗಲೂ ಹೀಗೆ ನನಗೆ ಸಣ್ಣ ಗಾಯ ಆದರೂ ಹೀಗೆ ರಿಯಾಕ್ಟ್ ಮಾಡುವುದು ಎನ್ನುತ್ತಾರೆ. ಆನಂತರ ಅತ್ತೆ ಮಾವಗೆ ಕರೆ ಮಾಡಿ ಅದೇ ವರ್ಸೆ ಹೇಳುತ್ತಾರೆ ಗಾಬರಿಗೊಂಡ ಅತ್ತೆ ಚಂದನ್ ಎಲ್ಲಿ ಹೋಗಿದ್ದಾನೆ ಹಲ್ಲಿಗೆ ಏನ್ ಆಗಿದೆ ಫುಲ್ ಮುರಿದಿದ್ಯಾ ಅಥವಾ ಸ್ವಲ್ಪ ನಾ? ಇರು ನಾನು ಡಾಕ್ಟರ್‌ಗೆ ಕಾಲ್ ಮಾಡ್ತೀನಿ  ಎಂದು ಹೇಳುತ್ತಾರೆ. ಅಯ್ಯೋ ಪ್ರ್ಯಾಂಕ್  complication ಆಗುತ್ತೆ ಅಂತ ನಿವಿ ವಿಡಿಯೋ ಕಾಲ್ ಮಾಡಿ ಮುಖ ತೋರಿಸುತ್ತಾರೆ. 'ಥು ನಿನ್ನ ಭಯ ಆಗ್ತು. ಈ ರೀತಿ ಮತ್ತೆ ಮಾಡಬೇಡ ಇಂದು ಅಮವಾಸೆ ನಿಜ ಆಗುತ್ತೆ' ಎಂದು ಅತ್ತೆ ಹೇಳುತ್ತಾರೆ.

 

click me!