ಬಿಗ್ ಬಾಸ್ ಮನೆಯಲ್ಲಿ ಗಾಸಿಪ್ ಮಾಡ್ಬೇಕು ಇಲ್ಲ ಅಡುಗೆ ಮಾಡ್ಕೊಂಡು ತಿನ್ನಬೇಕು ನನಗೆ ಹಾಗೆ ಮಾಡೋಕೆ ಆಗಲ್ಲ ಎಂದ ನಟ ಮಯೂರ್ ಪಟೇಲ್...
ಮಣಿ, ಲವ್ ಸ್ಟೋರಿ, ಸ್ಟುಡೆಂಟ್, ಮುನಿಯಾ ಮತ್ತು ಸ್ಲಂ ಸೇರಿದಂತೆ ಹತ್ತು ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ನಟ ಮಯೂರ್ ಪಟೇಲ್ ಕನ್ನಡ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 2ರಲ್ಲಿ ಸ್ಪರ್ಧಿಸಿದ್ದರು. 7 ವಾರಗಳ ಕಾಲ ಮನೆಯಲ್ಲಿದ್ದು ಟಫ್ ಫೈಟ್ ಕೊಟ್ಟು ಹೊರ ಬಂದ ಮಯೂರ್ ಮತ್ತೊಮ್ಮೆ ಅವಕಾಶ ಸಿಕ್ಕರೆ ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.
'ಬಿಗ್ ಬಾಸ್‌ಗೆ ಯಾಕೆ ಹೋದೆ ಅನಿಸಿತ್ತು ಏಕೆಂದರೆ ಅದು ನನಗೆ ಸೂಟ್ ಆಗುತ್ತಿರಲಿಲ್ಲ. ಸೃಜನ್ ಲೋಕೇಶ್ ಮತ್ತು ಅಕುಲ್ ಬಾಲಾಜಿ ಇದ್ದ ಸೀಸನ್ 2ರಲ್ಲಿ ನಾನು ಸ್ಪರ್ಧಿಸಿದೆ. ಇದೆಲ್ಲಾ ನನಗಲ್ಲ ನಾನು ಯಾಕೆ ಹೋದೆ ಅನ್ನೋ ಯೋಚನೆ ಶುರುವಾಗಿತ್ತು. ನನಗೆ ಗಾಸಿಪ್ ಮಾಡಲು ಬರಲ್ಲ. ನನ್ನ ಹೆಂಡತಿ ಮೀಡಿಯಾದಲ್ಲಿ ಇದ್ದ ಕಾರಣ ಪ್ರತಿಯೊಂದು ವಿಚಾರದ ಬಗ್ಗೆ ತಿಳಿದುಕೊಳ್ಳುವ ಆಸ್ತಿ ಹೆಚ್ಚಿದೆ... ಅದು ಇದು ಹೀಗೆ ಹಾಗೆ ಅಂತ ನೋಡಿದಾಗ ನನಗೆ ಹೇಳುತ್ತಾಳೆ. ಹಿಂದಿ ಶೋನಲ್ಲಿ ಹೀಗೆ ಆಯ್ತು ಯಾರದ್ದೋ ಮಗಳ ಕಥೆ ಹೀಗೆ ಆಯ್ತು ಅಂತ ಹೇಳುತ್ತಾಳೆ ಆಗ ನಾನು ಹೌದಾ ಅಂದುಕೊಂಡು ಸುಮ್ಮನಾಗುತ್ತೀನಿ. ನಾನಾಗಿ ನಾನೇ ಕುಳಿತುಕೊಂಡು ಏನೂ ನೋಡುವುದಿಲ್ಲ. ನನ್ನ ವಿಚಾರ ಅಥವಾ ನನ್ನ ಆಪ್ತರ ಬಗ್ಗೆ ಇದ್ರೆ ಮಾತ್ರ ನಾನು ತಲೆ ಕೆಡಿಸಿಕೊಂಡು ಚರ್ಚೆ ಮಾಡುವುದು ಇಲ್ಲ ಅಲ್ಲಿಗೆ ಬಿಡುತ್ತೀನಿ. ಸುಮ್ಮನೆ ಗಾಸಿಪ್ ಮಾಡುವುದಿಲ್ಲ' ಎಂದು ಮಯೂರ್ ಖಾಸಗಿ ಸಂದರ್ಸನದಲ್ಲಿ ಮಾತನಾಡಿದ್ದಾರೆ.
ತಿನ್ಸ್‌ಬೇಕು, ಕುಡ್ಸ್ಬೇಕು ಒಂದಷ್ಟು ಮಜಾ ಮಾಡ್ಸ್ಬೇಕು, ಚಿತ್ರರಂಗದಲ್ಲಿ ಬಕೆಟ್ ಹಿಡಿಬೇಕು: ಮಯೂರ್ ಪಟೇಲ್
'ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೇಲೆ ಎಲ್ಲಿಗೆ ಬಂದೆ ಗುರು ನಾನು ಅನಿಸಿತ್ತು, ಇದೊಂದು ದೊಡ್ಡ ವೇದಿಕೆ ಒಳ್ಳೆ ಅವಕಾಶ ಕಲ್ಪಿಸಿ ಕೊಡುತ್ತದೆ ಆದರೆ ಅದು ನನಗಲ್ಲ. ಕ್ರೀಡೆ ಅಥವಾ ಮನೋರಂಜನೆ ಇದ್ರೆ ಮಾಡೋಣ ಆದರೆ ಅಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಮಾಡಲು ಏನೂ ಇಲ್ಲ ಬರೀ ಗಾಸಿಪ್ ಮಾಡು ಅಡುಗೆ ಮಾಡ್ಕೊಂಡು ತಿನ್ನು ಅಷ್ಟೆ. ಬಿಗ್ ಬಾಸ್ ಮನೆಯಲ್ಲಿ ಒಳ್ಳೆ ಲೈಫ್ ಸ್ಟೈಲ್ ಕಲಿಸಿಕೊಡುತ್ತದೆ ಅಲ್ಲಿ ಹೋದ ಮೇಲೆ ನನಗೆ ಒಳ್ಳೆ ಕ್ಲೆನ್ಸ್ ಕೂಡ ಆಯ್ತು. ಶೋ ತುಂಬಾ ಚೆನ್ನಾಗಿದೆ ಆದರೆ ನನಗಲ್ಲ. ಸುಮಾರು 7 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದೆ. ನಾನು ಸ್ಪರ್ಧಿಸುವಾಗ ಬಿಗ್ ಬಾಸ್ ಸ್ಟಾರ್ ಸುವರ್ಣದಲ್ಲಿ ನಡೆಯುತ್ತಿತ್ತು ಲೋನಾವಾದಲ್ಲಿ ಸೆಟ್ ಹಾಕಿದ್ದರು' ಎಂದು ಮಯೂರ್ ಹೇಳಿದ್ದಾರೆ.
ಇಲ್ಲಿಗೆ ಬಂದ್ರೆ ಸುಮ್ನೆ ಬಿಡಲ್ಲ! ನಟ ಮಯೂರ್ ಪಟೇಲ್‌ಗೆ ಜೀವ ಬೆದರಿಕೆ!
'ಶೋ ಲೀಡ್ ತ್ಯಾಗು ನನ್ನನ್ನು ಸಂಪರ್ಕ ಮಾಡಿದಾಗ ಬಿಗ್ ಬಾಸ್ ಬಗ್ಗೆ ಐಡಿಯಾ ಇರಲಿಲ್ಲ ಮನೋರಂಜನೆ ಇರುತ್ತೆ ಚೆನ್ನಾಗಿರುತ್ತೆ ಎಂದು ಹೇಳಿದ್ದರು ಸರಿ ಹೇಳುವೆ ಎಂದು ಸುಮ್ಮನಿದ್ದೆ. ಶೋ ಆರಂಭವಾಗಲು 3 ದಿನ ಇದ್ದಾಗ ಕರೆ ಮಾಡಿ ಕಲಾವಿದರು ಕಡಿಮೆ ಇದ್ದಾರೆ ನೀವು ಬರಬೇಕು ಎಂದು ಒತ್ತಾಯ ಮಾಡಿದ್ದು...ಆಗ ಅದು ನನ್ನ ಕಮ್ ಬ್ಯಾಕ್ ಆಗಿದ್ದ ಕಾರಣ ಒಪ್ಪಿಕೊಂಡೆ. ಬಿಗ್ ಬಾಸ್‌ಗೆ ನಮ್ಮ ಕಿಚ್ಚ ಸುದೀಪ್ ಅವರೇ ಕ್ಯಾಪ್ಟನ್ ಅಲ್ವಾ ಅದಿಕ್ಕೆ ಅವರಿಗೆ ಕರೆ ಮಾಡಿ ಕೇಳಿ ಆಫರ್ ಬಂದಿದೆ ಅಲ್ವಾ ಸ್ಪರ್ಧಿಸು ಒಳ್ಳೆ ವೇದಿಕೆ ಸುಮ್ಮನೆ ಕುಳಿತುಕೊಂಡರೆ ಯಾರಾದರೂ ನಿನಗೆ ಹೆಸರು ಕೊಡ್ತಾರಾ? ದುಡ್ಡು ಕೊಡ್ತಾರಾ? ಮನೆಯಲ್ಲಿದ್ದರೆ ದುಡ್ಡು ಹೋಗುತ್ತೆ ಬರಲ್ಲ ಅಂದ್ರು ಅದಿಕ್ಕೆ ಒಪ್ಪಿಕೊಂಡೆ. ಹೊರಗಡೆ ನಾನು ನೋಡಿರುವ ಅಕುಲ್ ಬಾಲಾಜಿನೇ ಬರೇ ಬಿಗ್ ಬಾಸ್ ಮನೆಯಲ್ಲಿದ್ದ ಅಕುಲ್ ಬೇರೆ ಅಷ್ಟು ವ್ಯತ್ಯಾಸದಲ್ಲಿ ಜೀವನ ಮಾಡುತ್ತಿದ್ದರು. ಅಕುಲ್ ಮಾತ್ರವಲ್ಲ ಸೃಜನ್ ಲೋಕೇಶ್ ಮತ್ತು ಆದೀ ಕೂಡ ಬೇರೆ ರೀತಿ ಬದುಕುತ್ತಿದ್ದರು. ಏನೋ ಲೆಕ್ಕಾಚಾರ ಮಾಡಿಕೊಂಡು ದಿನ ಸಾಗಿಸುತ್ತಾರೆ ಆದರೆ ನಾನು 7 ವಾರ ಯಾವ ತಂಡದಲ್ಲಿ ಇದ್ದೆ ಆ ತಂಡವನ್ನು ಗೆಲ್ಲಿಸಿರುವೆ. ಬಿಗ್ ಬಾಸ್ ಆಫರ್ ಮತ್ತೆ ಬಂದ್ರೆ ನಾನು ಹೋಗಲ್ಲ ಆ ಜಾಗ ನನಗಲ್ಲ' ಎಂದಿದ್ದಾರೆ ಮಯೂರ್.