Dileep Raj Death: ದಿಲೀಪ್‌ ರಾಜ್‌ ಹೀಗೆ ಹೋದ್ರೆ, ನಿನ್ನನ್ನು ನಂಬಿಕೊಂಡೋರ್‌ ಕಥೆ ಏನೋ!: ಸುಷ್ಮಾ ಭಾರದ್ವಾಜ್

Published : May 13, 2026, 11:06 AM IST
actor dileep raj

ಸಾರಾಂಶ

Kannada Actor Dileep Raj Death Reason: ನಟ ದಿಲೀಪ್‌ ರಾಜ್‌ ಅವರು ಹೃದಯಾಘಾತದಿಂದ ನಿಧನರಾಗಿದ್ದು, ಇವರ ಸಾವಿನ ಬಗ್ಗೆ ನಟಿ ಸುಷ್ಮಾ ಭಾರದ್ವಾಜ್‌ ಅವರು ಫೇಸ್‌ಬುಕ್‌ ಬರಹ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್‌ ರಾಜ್‌ ಅವರು ( Kannada Actor Dileep Raj Death ) ಇಂದು ( ಮೇ 13 ಬೆಳಗ್ಗೆ ) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರ ಬಗ್ಗೆ ನಟಿ ಸುಷ್ಮಾ ಭಾರದ್ವಾಜ್‌ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಸುಷ್ಮಾ ಭಾರದ್ವಾಜ್‌ ಹೇಳಿದ್ದೇನು?

ಬೇಜಾರಾಗ್ತಿದೆ. ಎದೆ ಮೇಲೆ ಸಾವಿರ ಕೇಜಿಯಷ್ಟು ಭಾರ ಕೂತಿದೆ. ಯಾಕೆ ಹೀಗೆ? ಯಾರು ನೀನು? ನೀನ್ ಹೀಗ್ ಹೊರಟ್ರೆ ನಿನ್ನೆ ನಂಬ್ಕೊಂಡ್ ಬದುಕ್ತಿದ್ದೋರ ಗತಿ ಏನು? Life is unfair ಸರಿ. ಜೀವನ ಯಾವತ್ತೂ ನಮ್ಹತ್ರ ಏನನ್ನೂ ಪ್ರಾಮಿಸ್ ಮಾಡಿಲ್ಲ. ಈ ಲೈಫ್ ಅಲ್ಲಿ symmetry ಹುಡುಕ್ತಿದ್ದಿದ್ದು ನಾವೇ. ಆದ್ರೂ life is unfair. ಹೋಗಿ ಬಾ ದಿಲೀಪ. ಮೊದಲೇ ಸಲ ವಿಜಯನಗರದಿಂದ ನಿನ್ನನ್ನು ಶೂಟಿಂಗ್ ಗಾಡಿಲಿ ಪಿಕ್ ಮಾಡಿದಾಗ ನಿನ್ ಮುಖದ್ ಮೇಲಿದ್ದ ಜಾಲಿ ನಗು ನಂಗಿನ್ನೂ ನೆನಪಿದೆ. 2001 ನೇ ಇಸವಿ ಇರ್ಬೇಕದು. ಅರ್ಧಸತ್ಯ ಸೀರಿಯಲ್ ಶೂಟಿಂಗು. ಆಮೇಲೆ ಅದೆಷ್ಟು ಶೂಟಿಂಗ್‌ಗೆ ರಾಮೋಜಿ ಫಿಲಂ ಸಿಟಿಗೆ ಹೋಗಿದ್ವೋ, ಅದೆಷ್ಟು ಸಲ ನಂಗೆ “ ಲೇ, ಪೇಮೆಂಟ್ ಎಲ್ಲ ಸರಿಯಾಗ್ ಮಾತಾಡೇ, ಸುಮ್ಸುನ್ನೆ ಕಮ್ಮಿಗೆಲ್ಲಾ ಒಪ್ಕೋಬೇಡ “ ಅಂತಿದ್ದೆ. ಅದೆಷ್ಟೋ ಸಲ ಅಣ್ಣನಾಗಿ ಜೊತೆಗ್ ನಿಂತಿದ್ದೀಯ, ಕಾಪಾಡಿದ್ದೀಯ..

ನಾ zee ಲಿದ್ದಾಗ ಕೆಲ್ಸ ಕೊಡ್ಸು ಅಂದಿದ್ದಾಗ ಕೆಲ್ಸ ಕೊಡ್ಸಕ್ ಆಗುತ್ತೋ ಇಲ್ವೋ ಒಟ್ನಲ್ಲಿ ಎಲ್ಲಾ ಕಡೆ ಇಂಟರ್ವ್ಯೂ ಅಂತೂ ಕೊಡಿಸ್ತೀನಿ ಅಂದಿದ್ದೆ. ನೀನು ಚಾನೆಲ್ ಕೆಲಸಕ್ ಸೇರಿದಾಗ ಮತ್ತದೇ ನಗು.. ಎಂಥೆಂಥ ತಿಕ್ಕಲುಗಳಿರ್ತಾವಲ್ಲ ಪ್ರಪಂಚದಲ್ಲಿ ಅಂತ. ಎಷ್ಟೋ ಜನ ಸಹಾಯ ತಗೊಂಡು ಮರೀತಾರೆ. but you were always so grateful.

ನಿನ್ ಸೀರಿಯಲ್‌ಗೆ ಬಂದು ಆಕ್ಟ್ ಮಾಡು ಅಂತಿದ್ದೆ. ಬರೀ ಅಂತಿದ್ದೆ. ಹೀರೋ ಆದಾಗಲೂ ಪ್ರೊಡ್ಯೂಸರ್ ಆದಾಗಲೂ ಎಷ್ಟೇ ಬೆಳೆದಾಗಲೂ ಯಾವದನ್ನೂ ತಲೆಗ್ ತಗೊಳ್ಳಿಲ್ಲ ನೀನು. ಆ ನಿಷ್ಕಲ್ಮಶ ನಗುನ ಬಿಟ್ಟುಕೊಡ್ಲಿಲ್ಲ ನೀನು. ಬೆಳಿಗ್ಗೆ ಬರೋ ಒಂದು ಮೆಸೇಜ್‌ನಲ್ಲಿ ಯಾರೋ ಒಬ್ರು ಇಲ್ಲವಾಗ್ತಾರೆ ಶಾಶ್ವತವಾಗಿ ಅಂದ್ರೆ ದಿಕ್ಕೆಡುತ್ತೆ.

ಮೊದಲನೇ ಸಲ ಸಿಕಾಗ್ಲೇ ನಿನ್ ಡಾನ್ಸ್ ಪ್ಯಾಶನ್ ಬಗ್ಗೆ, ವಿದ್ಯಾ ಬಗ್ಗೆ ಹೇಳಿದ್ದೆ ನೀನು. ಕನ್ನಡಿ ಹಾಗೆ ಬದುಕಿದ್ರಿ ನೀವಿಬ್ಬರೂ. ಅಷ್ಟು ಜೊತೆಗೆ. ಈಗವಳನ್ನ ನೆನೆಸಿಕೊಳ್ಳೋಕೂ ಧೈರ್ಯ ಇಲ್ಲ ನಂಗೆ. ಹೋಗಿ ಬಾ ದಿಲೀಪ. ಈ uncertain ಪ್ರಪಂಚದಲ್ಲಿ ನಾವೆಲ್ಲರೂ ಸರದಿಲಿ ಇರೋರೆ. ಇಷ್ಟ್ ಬೇಗ ಹೀಗೆ ಹೊರಟಿದ್ದಕ್ಕೆ ಮೇಲೆ ಬಂದು ಜಗಳ ಆಡ್ತೀನಿ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Gowri Shankara Serial: 3ನೇ ಬಾರಿಗೆ ಹೀರೋಯಿನ್ ಬದಲಾವಣೆ;‌ 894 ಎಪಿಸೋಡ್‌ಗೆ ಸೀರಿಯಲ್‌ ಬಿಟ್ಟ ನಟಿ ದಿವ್ಯಾ!
Bidadi Ai City: ಜೆಡಿಎಸ್‌ಗೆ ಸೇರಿದ್ಮೇಲೆ 9000 ಫಲವತ್ತಾದ ಎಕರೆ ಗುಳುಂ ವಿಷಯಕ್ಕೆ ಬಂದ ಬಿಗ್‌ ಬಾಸ್‌ ಜಾನ್ವಿ!