
ಹಿಟ್ಲರ್ ಕಲ್ಯಾಣ ಧಾರಾವಾಹಿ ಖ್ಯಾತಿಯ ನಟ ದಿಲೀಪ್ ರಾಜ್ ಅವರು ( Kannada Actor Dileep Raj Death ) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ( ಮೇ 13 ) ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಿಗ್ಗೆ ಎದೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಿಸಿದರೂ ಕೂಡ ಫಲಕಾರಿಯಾಗಿಲ್ಲ. ಇವರ ಬಗ್ಗೆ ನಟಿ ಶ್ವೇತಾ ಆರ್ ಪ್ರಸಾದ್ ಅವರು ಮಾತನಾಡಿದ್ದಾರೆ.
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅವರ ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ದಿಲೀಪ್ ರಾಜ್ ನಟಿಸಿದ್ದರು. ಈ ಸಿನಿಮಾದಲ್ಲಿ ಶ್ವೇತಾ ಆರ್ ಪ್ರಸಾದ್ ಕೂಡ ನಟಿಸಿದ್ದರು. ಈಗ ದಿಲೀಪ್ ರಾಜ್ ನಿಧನದ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ದಿಲೀಪ್ ರಾಜ್ ನಿಧನದ ಆಘಾತಕಾರಿ ಸುದ್ದಿಯನ್ನು ಕೇಳಿ ಎಚ್ಚರವಾಯಿತು. ಇದನ್ನು ಅರಗಿಸಿಕೊಳ್ಳುವುದು ಇನ್ನೂ ಕಷ್ಟವಾಗುತ್ತಿದೆ.
ನಮ್ಮ ನಡುವೆ ಕೇವಲ ಕೆಲವು ದೃಶ್ಯಗಳು ಮತ್ತು ಕೆಲವೇ ಮಾತುಕತೆಗಳು ನಡೆದಿದ್ದರೂ, ಪ್ರತಿ ಸಂಭಾಷಣೆಯೂ ಅವರ ಪತ್ನಿಯ ಬಗ್ಗೆ ಮತ್ತು ಅವರು ಒಬ್ಬರಿನ್ನೊಬ್ಬರು ಎಷ್ಟು ಪ್ರೀತಿಸುತ್ತಿದ್ದರು ಎಂಬುದರ ಬಗ್ಗೆಯೇ ಇರುತ್ತಿತ್ತು. ಅವರು ಒಬ್ಬ ಅದ್ಭುತ ತಂದೆಯಾಗಿದ್ದರು. ಈ ಊಹಿಸಲಾಗದ ಕಷ್ಟದ ಸಮಯದಲ್ಲಿ ದೇವರು ಅವರ ಕುಟುಂಬಕ್ಕೆ ಶಕ್ತಿ ಮತ್ತು ಧೈರ್ಯವನ್ನು ನೀಡಲಿ.
ನಾವು ಅವರನ್ನು ಒಬ್ಬ ಅದ್ಭುತ ನಟ ಎಂದು ಹೊಗಳಿದಾಗಲೆಲ್ಲಾ, ಅವರು ವಿನಮ್ರವಾಗಿ ನಗುತ್ತಾ, "ನನಗೆ ಇನ್ನೂ ಆ ದೊಡ್ಡ ಬ್ರೇಕ್ (ದೊಡ್ಡ ಯಶಸ್ಸು) ಸಿಕ್ಕಿಲ್ಲ," ಎನ್ನುತ್ತಿದ್ದರು.
ಅವರು ಯಾವುದಕ್ಕಾಗಿ ಕಾಯುತ್ತಿದ್ದರೋ ಮತ್ತು ಶ್ರಮಿಸುತ್ತಿದ್ದರೋ, ಆ ಕ್ಷಣವನ್ನು ನೋಡುವ ಮೊದಲೇ ಅವರು ನಮ್ಮನ್ನು ಅಗಲಿದ್ದು ನಮಗೆ ತೀವ್ರ ದುಃಖ ತಂದಿದೆ. ಜೀವನ ನಿಜಕ್ಕೂ ಅನಿಶ್ಚಿತ ಮತ್ತು ಕ್ಷಣಿಕ.
ನಟ, ನಿರ್ದೇಶಕ, ನಿರ್ಮಾಪಕ, ಕಂಠದಾನ ಕಲಾವಿದ ದಿಲೀಪ್ ರಾಜ್ ಅವರು ನಿಧನರಾಗಿದ್ದು, ಚಿತ್ರರಂಗಕ್ಕೆ ಒಂದೇ ಅಲ್ಲದೆ, ಸಾಮಾನ್ಯ ಜನರಿಗೆ ಕೂಡ ಶಾಕ್ ಆಗಿದೆ. ಪುನೀತ್ ರಾಜ್‌ಕುಮಾರ್ ಅವರು 46ನೇ ವಯಸ್ಸಿಗೆ ನಿಧನರಾದರು, 48ನೇ ವಯಸ್ಸಿಗೆ ದಿಲೀಪ್ ರಾಜ್ ನಿಧನರಾದರು. ಕನ್ನಡ ಕಿರುತೆರೆ, ಸಿನಿಮಾ ಕಲಾವಿದರು ದಿಲೀಪ್ ರಾಜ್ ಅವರ ಪಾರ್ಥಿವ ಶರೀರದ ದರ್ಶನ ಪಡೆಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.