ಕರ್ನಾಟಕದಲ್ಲಿ ಸ್ವಚ್ಛತೆ ಕಾಪಾಡಲು ಪ್ರಧಾನಿ ಮೋದಿಗೆ ಪತ್ರ ಬರೆದ 'ಜೊತೆ ಜೊತೆಯಲಿ' ನಟ ಅನಿರುದ್ಧ!

By Suvarna News  |  First Published May 27, 2022, 12:22 PM IST

ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಟ ಅನಿರುದ್ಧ ಪ್ರಧಾನಿಗೆ ಪತ್ರ ಬರೆದು ಬೆಂಗಳೂರು ಮತ್ತು ಕರ್ನಾಟಕದ ಕೆಲವೊಂದು ಸಮಸ್ಯೆಗಳನ್ನು ವಿವರಿಸಿದ್ದಾರೆ. 
 


'ಜೊತೆ ಜೊತೆಯಲಿ' ಧಾರಾವಾಹಿ ನಟ ಅನಿರುದ್ಧ (Aniruddha Jatkar) ನವೆಂಬರ್ 2020ರಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಯಾವೆಲ್ಲ ಏರಿಯಾಗಳಲ್ಲಿ ಕಸದ ಸಮಸ್ಯ ಇದೆ, ಜನರು ತೊಂದರೆ ಅನುಭವಿಸುತ್ತಿದ್ದಾರೆ ಪ್ರತಿಯೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಸಂಬಂಧ ಪಟ್ಟ ಬಿಬಿಎಂಪಿ (BBMP) ಅಧಿಕಾರಿಗಳಿಗೆ ಕರೆ ಮಾಡಿ ಕೆಲಸ ಮಾಡಿಸುತ್ತಿದ್ದಾರೆ. ಅನಿರುದ್ಧ ಕೆಲಸಗಳಿಗೆ ಸ್ಥಳೀಯರು ಮತ್ತು ಅಭಿಮಾನಿಗಳು ಸಾಥ್ ಕೊಡುತ್ತಿದ್ದಾರೆ. ಒಂದೊಂದೇ ಸಮಸ್ಯೆ ಬಗೆಹರಿಯುತ್ತಿದ್ದಂತೆ ಮತ್ತೊಂದು ಶುರುವಾಗುತ್ತಿದೆ ಹೀಗಾಗಿ ಅನಿರುದ್ಧ ಪ್ರಧಾನಿ (PM Modi) ಅವರಿಗೆ ಪತ್ರ ಬರೆದಿದ್ದಾರೆ. 

ಪತ್ರದಲ್ಲಿ ಏನಿದೆ:

Tap to resize

Latest Videos

'ಸ್ವಚ್ಛತೆ, ಗ್ರೀನರಿ, ಬ್ಯೂಟಿಫಿಕೇಶ್, ಸುರಕ್ಷತೆ ಮತ್ತು ಭದ್ರತೆ ಕಾಪಾಡಲು ನಮ್ಮಲ್ಲಿ ಒಬ್ಬರು ಸಚಿವರು ಇರಬೇಕು ಎಂದು ನಾನು ಈ ಪತ್ರದ ಮೂಲಕ ಪ್ರಧಾನಿ ಅವರಲ್ಲಿ ಮನವಿ ಮಾಡಿಕೊಳ್ಳುತ್ತಿರುವೆ. ನಮ್ಮ ಸುತ್ತಿರುವ ಸಮಸ್ಯೆಗಳನ್ನು ಆದಷ್ಟು ಬೇಗ ಗಮನ ಕೊಟ್ಟು ಪರಿಹಾರ ನೀಡಬೇಕೆಂದು ಮನವಿಗಾಗಿ ಈ ಪತ್ರ. ಘನತ್ಯಾಜ್ಯ ನಿರ್ವಹಣೆಯು (solid waste management) ಪರಿಸರ ಮತ್ತು ಅರಣ್ಯ ಸಚಿವಾಲಯದ ಒಂದು ಭಾಗವಾಗಿದೆ, ಇದರ ಜವಾಬ್ದಾರಿ ತೆಗೆದುಕೊಳ್ಳಬೇಕಿರುವ ಸರ್ಕಾರ ಹಿಂದುಳಿಯುತ್ತಿದೆ. 

ಯಲಚೇನಹಳ್ಳಿ ಮೈದಾನವನ್ನು ಶುಚಿ ಮಾಡಲು BBMP ಅಧಿಕಾರಿಗಳಲ್ಲಿ ಮನವಿ ಮಾಡಿದ ನಟ ಅನಿರುದ್ಧ್!

ನನ್ನ ಹೆಸರು ಅನಿರುದ್ಧ ಜಟ್ಕರ್. ನಾನು ಸಿನಿಮಾ ನಟ, ನಿರ್ದೇಶಕ, ಗಾಯಕ, ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತ. ಮೂಲತಃ ಬೆಂಗಳೂರಿನವರು. ಬೆಂಗಳೂರು (Bengaluru) ಮತ್ತು ಕರ್ನಾಟಕದ (Karnataka) ಅನೇಕ ಭಾಗಗಳಲ್ಲಿ  ಘನತ್ಯಾಜ್ಯ ನಿರ್ವಹಣೆಯ ವಿಷಾದನೀಯ ಸ್ಥಿತಿಯ ಬಗ್ಗೆ ನನ್ನ ದೂರು ದಾಖಲಿಸುತ್ತಿರುವೆ. ಈ ಸಮಸ್ಯೆಯನ್ನು ಪ್ರಜೆಯಾಗಿ ಪರಿಗಣಿಸಿದ ನಾನು ಸೋಷಿಯಲ್ ಮೀಡಿಯಾದಲ್ಲಿ solid waste managementಗಾಗಿ ಸ್ವಚ್ಛತೆಗಾಗಿ ನಾನು ಸಹಭಾಗಿ ಎಂದು ನವೆಂಬರ್ 7,2020ರಂದು ಆರಂಭಿಸಿದೆ. ನಮ್ಮ ಸಿಟಿ ರಸ್ತೆ ಮತ್ತು ಮೂಲೆಗಳನ್ನು ಬಿಡದೆ ಕಸ ಬಿದ್ದಿರುವ ಸ್ಥಳಗಳ ಫೋಟೋ ಮತ್ತು ವಿಡಿಯೋ ಹಂಚಿಕೊಳ್ಳುತ್ತಿರುವೆ. ಬಿಬಿಎಂಪಿ ಮತ್ತು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ತಕ್ಷಣವೇ ಬಿಬಿಎಂಪಿ ಬಗೆಹರಿಸಿದೆ. 

ಕ್ಯಾಂಪೇನ್‌ ಶುರು ಮಾಡಿದ ದಿನದಿಂದಲ್ಲೂ ನಾನು ಅನೇಕ ವಿಚಾರಗಳ ಬಗ್ಗೆ ಗಮನ ಹರಿಸಿರುವೆ. 
1) ನೇತಾಡುವ ತಂತಿಗಳು ಮತ್ತು ಕೇಬಲ್‌ಗಳು.
2) ಟ್ರ್ಯಾನ್ಸ್‌ಫಾರಮ್‌ಗಳಿಗೆ ಸರಿಯಾಗಿ ಕೇಚ್ ಹಾಕಿಲ್ಲ, ಕೆಲವೊಂದು ಬ್ಯುಸಿ ಫುಟ್‌ಪಾತ್‌ಗಳ ಮೇಲಿದೆ
3) ತಂತಿ/ಕೇಬಲ್/ ಸ್ಟೇಪಲ್/ಲಿಟ್/ಪೋಸ್ಟರ್‌ಗಳೊಂದಿಗೆ ಅಂಟಿಸಿದ ಮರಗಳು
4) choked lake
5) ಜಾನುವಾರುಗಳು ಬೀದಿಯಲ್ಲಿ ಓಡಾಡುತ್ತಿವೆ
6) ಮುರಿದ ಅಥವಾ ತುಕ್ಕು ಹಿಡಿದಿರುವ ಗ್ರಿಲ್‌ಗಳು ಡಿವೈಡರ್‌ಗಳ ಮೇಲಿದೆ.
7) ಕಾಲುದಾರಿಗಳ ಮೇಲೆ ಅತಿಕ್ರಮಣ
8) ಎಲೆಟ್ರಿಕ್ ಪೋಲ್/ ಗೋಡೆಗಳ ಮೇಲೆ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.

ಮೂಕ ಪ್ರಾಣಿಗಳಿಗೆ ದನಿಯಾದ ಅನಿರುದ್ಧ..  ಯಾರ ಪಾಪಕ್ಕೆ ಈ ಪ್ಲಾಸ್ಟಿಕ್?

ಈ ಮೇಲಿರುವ ಎಲ್ಲಾ ವಿಚಾರಗಳನ್ನು ಗಮನಿಸಿ ಫೋಟೋ ಮತ್ತು ವಿಡಿಯೋ ಹಂಚಿಕೊಂಡು ಸೌಂದರ್ಯಕ್ಕಾಗಿ ನಾನು ಸಹಭಾಗಿ ಮತ್ತು ಹಸಿರುಗಾಗಿ ನಾನು ಸಹಭಾಗಿ ಹೆಸರಿನಲ್ಲಿ ಸಮಾಜ ಸೇವೆ ಶುರು ಮಾಡಿದೆ. ಜನರೆಲ್ಲಾ ಕೈ ಜೋಡಿಸಿ ನನ್ನ ಜೊತೆ ಕನಕಪುರ ರಸ್ತೆಯಲ್ಲಿರುವ ಕುಪ್ಪಾರೆಡ್ಡಿ ಕರೆಯನ್ನು ಕ್ಲೀನ್ ಮಾಡಿದ್ದಾರೆ. ಈ ರೀತಿ ಅನೇಕ ವಿಚಾರಗಳಿದೆ ಅದಕ್ಕೆ ಶಾಶ್ವತ ಪರಿಹಾರ ಬೇಕೆಂದು ಮನವಿ ಮಾಡಿಕೊಳ್ಳುತ್ತಿರುವೆ.


 

click me!