ತಾಯಿಯಾಗ್ತಿರೋ ಮಗಳು ಪದ್ಮಿನಿ ದೇವನಹಳ್ಳಿ; ʼಸೀತಾರಾಮʼ ನಟನ ಮನೆಯಲ್ಲಿ ಮೂವರು ಸೀರಿಯಲ್‌ ನಟರು!

Published : Mar 17, 2025, 11:04 AM ISTUpdated : Mar 17, 2025, 11:18 AM IST
ತಾಯಿಯಾಗ್ತಿರೋ ಮಗಳು ಪದ್ಮಿನಿ ದೇವನಹಳ್ಳಿ; ʼಸೀತಾರಾಮʼ ನಟನ ಮನೆಯಲ್ಲಿ ಮೂವರು ಸೀರಿಯಲ್‌ ನಟರು!

ಸಾರಾಂಶ

'ಸೀತಾರಾಮʼ ಧಾರಾವಾಹಿ ನಟ ಕಲಾಗಂಗೋತ್ರಿ ಮಂಜು ಅವರ ಮಗಳು ಪದ್ಮಿನಿ ದೇವನಹಳ್ಳಿ ಕೂಡ ನಟಿ. ಇವರೀಗ ಸೀಮಂತದ ಖುಷಿಯಲ್ಲಿದ್ದಾರೆ. 

ʼಸೀತಾರಾಮʼ ಧಾರಾವಾಹಿ ನಟ ಕಲಾಗಂಗೋತ್ರಿ ಮಂಜು ಅವರು ಮಗಳ ಸೀಮಂತದ ಖುಷಿಯಲ್ಲಿದ್ದಾರೆ. ಹೌದು, ʼಲಕ್ಷ್ಮೀ ನಿವಾಸʼ ಧಾರಾವಾಹಿ ನಟ ಅಜಯ್‌ ರಾಜ್‌ ಅವರು ತಂದೆಯಾಗುತ್ತಿರುವ ಖುಷಿಯಲ್ಲಿದ್ದಾರೆ. ಈ ಕಲಾವಿದರ ಕುಟುಂಬದಲ್ಲಿ ಹೊಸ ಸದಸ್ಯರ ಆಗಮನ ಆಗಲಿದೆ.

ಧಾರಾವಾಹಿಗಳಲ್ಲಿ ನಟನೆ!
ʼಸೀತಾರಾಮʼ ಧಾರಾವಾಹಿಯಲ್ಲಿ ತಾತನ ಪಾತ್ರ ಮಾಡ್ತಿರುವ ನಟ ಕಲಾಗಂಗೋತ್ರಿ ಮಂಜು ಅವರ ಮಗಳು ಪದ್ಮಿನಿ ದೇವನಹಳ್ಳಿ. ಪದ್ಮಿನಿ ಅವರು ಈ ಹಿಂದೆ ʼಮಹಾದೇವಿʼ, ʼಹಿಟ್ಲರ್‌ ಕಲ್ಯಾಣʼ ಧಾರಾವಾಹಿಗಳಲ್ಲಿ ನಟಿಸಿದ್ದರು. ಅಜಯ್‌ ರಾಜ್‌ ಅವರು ಸಾಕಷ್ಟು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಮೊದಲ ಮಗುವಿನ ನಿರೀಕ್ಷೆಯಲ್ಲಿ ಲಕ್ಷ್ಮೀ ನಿವಾಸ ನಟ ಅಜಯ್ ರಾಜ್ -ಪದ್ಮಿನಿ ದಂಪತಿ

ನಾಲ್ಕು ವರ್ಷಗಳ ಬಳಿಕ ಮಗು! 
2020ರಲ್ಲಿ ಅಜಯ್‌ ರಾಜ್‌ ಹಾಗೂ ಪದ್ಮಿನಿ ಅವರು ಮದುವೆಯಾಗಿದ್ದರು. ಬಹಳ ಖಾಸಗಿಯಾಗಿ ಈ ಮದುವೆ ನಡೆದಿತ್ತು. ಇದಕ್ಕೂ ಮುನ್ನ ವರ್ಷಗಳ ಹಿಂದೆ ಈ ಜೋಡಿ ನಿಶ್ಚಿತಾರ್ಥ ಕೂಡ ಆಗಿತ್ತು. ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಅಜಯ್‌ ರಾಜ್‌ ಅವರು ಪದ್ಮಿನಿ ಬೇಬಿ ಬಂಪ್‌ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು, ಮಗುವಿನ ನಿರೀಕ್ಷೆಯಲ್ಲಿ ಇರುವ ವಿಷಯವನ್ನು ಹಂಚಿಕೊಂಡಿದ್ದರು. 

ಸಿನಿಮಾಗಳಲ್ಲಿ ಅಜಯ್‌ ರಾಜ್‌ ನಟನೆ! 
ಅಜಯ್‌ ರಾಜ್‌ ಅವರು ಬಹಳ ಜನಪ್ರಿಯತೆ ಪಡೆದಿರುವ ʼಮುಕ್ತʼ ಧಾರಾವಾಹಿಯಲ್ಲಿ ನಟಿಸಿದ್ದರು. ಅದಾದ ಬಳಿಕ ಅವರು ತಮಿಳು, ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾದರು. ಅಜಯ್ ರಾಜ್ ಅವರು ನಟ ಯಶ್‌ರ ಒಳ್ಳೆಯ ಗೆಳೆಯ. ಅಜಯ್‌ ಅವರು ಕನ್ನಡದ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 'ಮುಂದಿನ ನಿಲ್ದಾಣ', 'ಮುಂದುವರೆದ ಅಧ್ಯಾಯ' ಸಿನಿಮಾಗಳಲ್ಲಿ ಅಜಯ್ ರಾಜ್ ಅವರು ನಟಿಸಿದ್ದರು. ಈಗ ಅವರು ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಹರೀಶ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಅಜಯ್ ರಾವ್ ಮತ್ತು ನಟಿ ಪದ್ಮಿನಿ !

ಪದ್ಮಿನಿ ನಟನೆ ಶುರು ಮಾಡಿದ್ದು ಹೇಗೆ? 
ಪದ್ಮಿನಿ ತಂದೆ ಕಲಾಗಂಗೋತ್ರಿ ಮಂಜು ಅವರು ಸದ್ಯ ʼಸೀತಾರಾಮʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ನಾಟಕಗಳನ್ನು ನಿರ್ದೇಶನ ಮಾಡಿ ಹೆಸರು ಮಾಡಿರುವ ಮಂಜು ಅವರು ʼಸಂಕೀರ್ತನʼ ಎನ್ನುವ ಚಿತ್ರಕ್ಕೂ ಡೈರೆಕ್ಟನ್‌ ಹೇಳುತ್ತಿದ್ದಾರೆ. ಮನೆಯಲ್ಲಿ ನಟನೆ, ನಿರ್ದೇಶನದ ವಾತಾವರಣ ಇದ್ದಿದ್ದಕ್ಕೆ ಪದ್ಮಿನಿಗೂ ನಟಿಸುವ ಆಸೆ ಉಂಟಾಗಿತ್ತು. ತಂದೆಯ ಸಹಾಯದಿಂದ ಪದ್ಮಿನಿ ಅವರು ಶ್ರುತಿ ನಾಯ್ಡುರನ್ನು ಸಂಪರ್ಕಿಸಿದರು. ಆಗ ಅವರಿಗೆ 'ಮಹಾದೇವಿ' ಧಾರಾವಾಹಿಯಲ್ಲಿ ಬಹು ಮುಖ್ಯವಾದ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಶಿಕ್ಷಣದ ವಿಷಯಕ್ಕೆ ಬಂದರೆ ಪದ್ಮಿನಿ ಅವರು ಮನಃಶಾಸ್ತ್ರದಲ್ಲಿ ಪದವಿ ಪಡೆದಿರುವರು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?