'ಲಕ್ಷ್ಮೀ ಬಾರಮ್ಮ' ನಟಿ ಭೂಮಿಕಾ ರಮೇಶ್‌ ನನಗೆ ಸ್ನೇಹಿತೆಗಿಂತ ಜಾಸ್ತಿ: ಲವ್‌ ಗಾಸಿಪ್‌ ಬಗ್ಗೆ ಅಭಿನವ್‌ Open Talk!

ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ಲಕ್ಷ್ಮೀ ಪಾತ್ರಧಾರಿ ನಟಿ ಭೂಮಿಕಾ ರಮೇಶ್‌ ಅವರು ಅಭಿನವ್‌ ವಿಶ್ವನಾಥ್‌ ಅವರನ್ನು ಪ್ರೀತಿ ಮಾಡ್ತಿದ್ದಾರಾ ಎಂಬ ಪ್ರಶ್ನೆ ಎದ್ದಿತ್ತು, ಇದಕ್ಕೆ ಈ ಜೋಡಿಯೇ ಸ್ಪಷ್ಟ ಉತ್ತರ ನೀಡಿದೆ. 

actor abhinav vishwanathan speaks about love with actress bhoomika ramesh

ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ನಟಿ ಭೂಮಿಕಾ ರಮೇಶ್‌ ಅವರು ತೆಲುಗಿನಲ್ಲಿ ʼಮೇಘ ಸಂದೇಶಂʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್‌ನಲ್ಲಿ ನಟಿಸುತ್ತಿರುವ ನಟ ಅಭಿನವ್‌ ವಿಶ್ವನಾಥನ್‌ ಕೂಡ ʼನನ್ನರಸಿ ರಾಧೆʼ ಧಾರಾವಾಹಿಯಲ್ಲಿ ನಟಿಸಿ ಹೆಸರು ಮಾಡಿದವರೇ. ತೆಲುಗಿನ ʼಸೂಪರ್‌ ಸೀರಿಯಲ್‌ ಚಾಂಪಿಯನ್‌ಶಿಪ್‌ ಸೀಸನ್‌ 4’ ಶೋನಲ್ಲಿ ಇವರಿಬ್ಬರು ಲವ್‌ ಮಾಡ್ತಿದ್ದಾರಾ ಎಂಬ ಪ್ರಶ್ನೆ ಬಂದಿತ್ತು. ಅದಕ್ಕೆ ಇವರಿಬ್ಬರು ಉತ್ತರ ಕೊಟ್ಟಿದ್ದಾರೆ.

ಅಭಿನವ್‌ ವಿಶ್ವನಾಥನ್‌ ಏನಂದ್ರು? 
“ಭೂಮಿ ನನಗೆ ಒಳ್ಳೆಯ ಸ್ನೇಹಿತೆ. ಭೂಮಿ ತನ್ನ ಬಗ್ಗೆ ಯೋಚಿಸೋದಿಲ್ಲ, ಕೇರ್‌ ಮಾಡೋದಿಲ್ಲ. ಆದರೆ ಬೇರೆಯವರ ಬಗ್ಗೆ ಯೋಚಿಸ್ತಾಳೆ, ಕೇರ್‌ ಮಾಡ್ತಾಳೆ. ಈ ಗುಣ ನನಗೆ ತುಂಬ ಇಷ್ಟ. ನಾನು ಈ ಹಿಂದೆ ಕೆಲ ಧಾರಾವಾಹಿ ಮಾಡಿದ್ದೇನೆ, ಸಿನಿಮಾ ಕೆಲಸಗಳು ನಡೆಯುತ್ತಿವೆ. ಭೂಮಿ ರೀತಿ ವ್ಯಕ್ತಿಯನ್ನು ನಾನು ಈ ಹಿಂದೆ ಭೇಟಿ ಮಾಡಿಲ್ಲ. ಭೂಮಿ ನನಗೆ ಸ್ನೇಹಿತೆಗಿಂತ ಜಾಸ್ತಿ. ಭೂಮಿ ರೀತಿಯ ಸಹದ್ಯೋಗಿ ನನಗೆ ಸಿಕ್ಕೇ ಇರಲಿಲ್ಲ. ಹೀಗಾಗಿ ನಾನು ಅವಳನ್ನು ಗೌರವಿಸ್ತೀನಿ. ಯಾವಾಗಲೂ ಸ್ನೇಹಿತರಾಗಿ ಉಳಿದುಕೊಳ್ಳಬೇಕು ಅಂದರೆ ಮನಸ್ತಾಪ ಇರಬಾರದು, ಭೂಮಿಕಾ ನನಗೆ ಎಂದಿಗೂ ಸ್ನೇಹಿತೆ ಆಗಿರುತ್ತಾಳೆ” ಎಂದು ನಟ ಅಭಿನವ್‌ ವಿಶ್ವನಾಥನ್‌ ಹೇಳಿದ್ದಾರೆ.

Latest Videos

ಕನ್ನಡ ಕಿರುತೆರೆಯ ವಿಜಯ್, ರಾಮಚಾರಿ, ವೈಷ್ಣವ್, ರಾಮನ ರಿಯಲ್ ವಯಸ್ಸೆಷ್ಟು?

ಭೂಮಿಕಾ ರಮೇಶ್‌ ಏನಂದ್ರು?
“ಅಭಿನವ್‌ಗೆ ಸಾಕಷ್ಟು ಫ್ರೆಂಡ್ಸ್‌ ಇದ್ದಾರೆ, ಅವರು ತುಂಬ ಖುಷಿಯಾಗಿರ್ತಾರೆ. ನನಗೆ ಯಾರೂ ಫ್ರೆಂಡ್ಸ್‌ ಇಲ್ಲ.  ಸ್ನೇಹಿತರ ಜೊತೆ ಮಾತನಾಡುವಾಗ ಏನಾದರೂ ಮನಸ್ತಾಪ ಬಂದ್ರೆ, ಭಿನ್ನಾಭಿಪ್ರಾಯ ಬಂದರೆ ನಾಳೆಯಿಂದ ಮಾತಾಡೋದಿಲ್ಲ. ಆದರೆ ಅಭಿನವ್‌ ಅವರೇ ಮುಂದೆ ಬಂದು ಮೊದಲು ಕ್ಷಮೆ ಕೇಳ್ತಾರೆ. ಈ ಗುಣ ನನಗೆ ತುಂಬ ಇಷ್ಟ. ಈ ರೀತಿ ಸ್ನೇಹಿತ ನನಗೆ ಸಿಕ್ಕೇ ಇರಲಿಲ್ಲ” ಎಂದು ಭೂಮಿಕಾ ರಮೇಶ್‌ ಹೇಳಿದ್ದಾರೆ.ಆನಂತರದಲ್ಲಿ ನಿರೂಪಕರು ಅಭಿನವ್‌ ಹಾಗೂ ಭೂಮಿಕಾ ಸ್ನೇಹಿತರಾಗಿದ್ದರೆ ಖುಷಿ, ಕೊನೇ ತನಕ ಸಂಗಾತಿಯಾಗಿದ್ದರೆ ಇನ್ನೂ ಖುಷಿ ಎಂದು ಆಶಿಸಿದ್ದಾರೆ.

ಈ ಧಾರಾವಾಹಿಗೆ ಹೀರೋ ಅಗತ್ಯಾನೆ ಇಲ್ಲಾಯ್ತು… ಲಕ್ಷ್ಮೀ ಬಾರಮ್ಮ ವೈಷ್ಣವ್ ಪಾತ್ರದ ವಿರುದ್ಧ ವೀಕ್ಷಕರು ಕಿಡಿ

ಯಾಕೆ ಡೌಟ್‌ ಬಂದಿತ್ತು? 
ಅಂದಹಾಗೆ ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ನಟಿ ಭೂಮಿಕಾ ರಮೇಶ್‌ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದೂವರೆ  ಲಕ್ಷಕ್ಕೂ ಅಧಿಕ ಫಾಲೋವರ್ಸ್‌ ಇರುವರು. ಆದರೆ ಭೂಮಿಕಾ ಮಾತ್ರ ಇನ್‌ಸ್ಟಾದಲ್ಲಿ ಕೇವಲ ನಾಲ್ಕು ಜನರನ್ನು ಫಾಲೋ ಮಾಡ್ತಿದ್ದಾರೆ. ಅವರಲ್ಲಿ ಅಭಿನವ್‌ ಕೂಡ ಒಬ್ಬರು, ಉಳಿದವರು ಫ್ಯಾಮಿಲಿ ಸದಸ್ಯರು. ಇನ್ನು ತೆರೆ ಹಿಂದೆ ಇವರ ಬಾಂಧವ್ಯ, ಶೋನಲ್ಲಿಯೂ ಇವರ ಸ್ನೇಹ ನೋಡಿ ಅನೇಕರಿಗೆ ಡೌಟ್‌ ಬಂದಿತ್ತು. 

ಭೂಮಿಕಾ ರಮೇಶ್‌ ಅವರು ಬಾಲ ಕಲಾವಿದೆ, ನಾಲ್ಕನೇ ವಯಸ್ಸಿನಲ್ಲಿ ಡ್ಯಾನ್ಸ್‌ ಮಾಡುತ್ತಿದ್ದ ಅವರು ಸ್ಕೂಲ್‌ನಲ್ಲಿ ಓದುತ್ತಿರುವಾಗಲೇ ಡ್ಯಾನ್ಸ್‌ ಶೋಗಳಲ್ಲಿ ಭಾಗವಹಿಸುತ್ತಿದ್ದರು. ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ನಟಿಸುವ ಮೊದಲು ಅವರು ʼದೊರೆಸಾನಿʼ ಧಾರಾವಾಹಿಗೆ ಆಡಿಷನ್‌ ಕೊಟ್ಟು ರಿಜೆಕ್ಟ್‌ ಆಗಿದ್ದರು. ಅಭಿನವ್‌ ವಿಶ್ವನಾಥನ್‌ ಅವರು ಉತ್ತರ ಭಾರತದವರು. ಹಿಂದಿ ಮಾತನಾಡುವ ಅವರು ಬೆಂಗಳೂರಿಗೆ ಬಂದು ಕನ್ನಡ ಕಲಿತು, ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಎಂದರೆ ಹೆಮ್ಮೆ ಪಡೆಬೇಕು. ಕಲರ್ಸ್‌ ಕನ್ನಡ ವಾಹಿನಿಯ ʼನನ್ನರಸಿ ರಾಧೆʼ ಧಾರಾವಾಹಿಯಲ್ಲಿಯೂ ಅವರು ನಟಿಸಿದ್ದರು. ಆಮೇಲೆ ದಿವ್ಯಾ ಸುರೇಶ್‌ ಜೊತೆಗೆ ʼತ್ರಿಪುರ ಸುಂದರಿʼ ಸೀರಿಯಲ್‌ನಲ್ಲಿ ನಟಿಸಿದ್ದರು. 
 

click me!